(೧೯೦೦-೧೯೭೬)

ಐ ವಿಂಡ್ ಜಾನ್ಸನ್

ಸ್ವೀಡನ್ ದೇಶದ 'ಐ ವಿಂಡ್ ಜಾನ್ಸನ್' 'Olof Edvin Verner jonsson), Eyvind Johnson, ವಾಡಿಕೆಯ ಹೆಸರು. ೧೯೭೪ ರ ನೋಬೆಲ್ ಸಾಹಿತ್ಯ ಪ್ರಶಸ್ತಿ ಯನ್ನು ಅದೇ ದೇಶದ 'ಹ್ಯಾರಿ ಮಾರ್ಟಿ ಸನ್ ರವರೊಂದಿಗೆ ಹಂಚಿಕೊಂಡರು. ಅವರು ಬರೆದ ಸುಪ್ರಸಿದ್ಧ ಕಾದಂಬರಿಗಳೆಂದರೆ,

  • 'ಹಿಯರ್ ಈಸ್ ಯುವರ್ ಲೈಫ್', ೧೯೩೫)
  • 'ರಿಟರ್ನ್ ಟು ಇಥಾಕಾ,' (೧೯೪೬),
  • 'ದ ಡೇಸ್ ಆಫ್ ಹಿಸ್ ಗ್ರೇ'ಸ್, (೧೯೬೦)

'ಐ ವಿಂಡ್ ಜಾನ್ಸನ್' ಬಡತನದ ಬಾಲ್ಯಾವಸ್ಥೆಯಲ್ಲಿ ಬೆಳೆದರು. ವಿದ್ಯಾಭ್ಯಾಸದ ಕೊರತೆ ಅವರನ್ನು ಸದಾ ಕಾಡುತ್ತಿತ್ತು. ಸರಿಯಾದ ಉದ್ಯೋಗ ಸಿಗಲಿಲ್ಲ. 'ದೈಹಿಕ ಶ್ರಮದ ಉದ್ಯೋಗ ಜೀವನ' ಅವರಿಗೆ ಹಿತವಿರಲಿಲ್ಲ.

ಇಂತಹ ಹಿನ್ನೆಲೆಯಲ್ಲಿ ವಾತಾವರಣದಲ್ಲಿ ಬೆಳೆದ 'ಜಾನ್ಸನ್' ರವರು, ತಮ್ಮ ಸಾಹಿತ್ಯ ರಚನೆಯಲ್ಲಿ ಮಾತ್ರ ಹೊಸದಿಕ್ಕುಗಳನ್ನು ಕಂಡುಹಿಡಿದು ಎಲ್ಲರಿಗೂ ತೋರಿಸಿಕೊಟ್ಟರು. 'ಜಾನ್ಸನ್' ಒಬ್ಬ ಯಶಸ್ವೀ ಲೇಖಕನಾಗಿ ಸಮಾಜದಲ್ಲಿ ಮಾನ್ಯತೆ ಪಡೆದರು.'ಐ ವಿಂಡ್ ಜಾನ್ಸನ್' ಮತ್ತು, ಹ್ಯಾರಿ ಮಾರ್ಟಿನ್ ಸನ್ ರಿಬ್ಬರೂ ನೋಬೆಲ್ ಪ್ರಶಸ್ತಿ ಸಮಿತಿಯ ಸದಸ್ಯರಾಗಿದ್ದರು. ಅವರಿಬ್ಬರಿಗೂ ನೋಬೆಲ್ ಪ್ರಶಸ್ತಿ ದೊರೆತದ್ದು ವ್ಯಾಪಕ ಅಸಮಧಾನಕ್ಕೆ ಕಾರಣವಾಗಿತ್ತು.ತೀವ್ರವಾದ 'ಅಸಮಧಾನದ ಕಿಡಿ'ಗಳನ್ನು ಅವರು ಸಹಿಸಬೇಕಾಯಿತು. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಪ್ರಖ್ಯಾತ ಲೇಖರಾಗಿ ಎಲ್ಲರ ನಾಲಗೆಯಮೇಲೆ ರಾರಾಜಿಸುತ್ತಿದ್ದ ಕಾದಂಬರಿಗಾರರನ್ನು ಹಿಂದಕ್ಕೆ ಹಾಕಿ,'ಐವಿಂಡ್ ಜಾನ್ಸನ್'ಮತ್ತು 'ಹ್ಯಾರಿ'ಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

  • 'ಗ್ರಹಾಂ ಗ್ರೀನ್',
  • 'ಸಾಲ್ ಬೆಲೋ',
  • 'ವ್ಲಾಡಿಮೀರ್ ನೊಬೊಕೊವ್', ರಂತಹ ಮೇಧಾವಿಗಳೆಂದು ಸುಮಾರುಕಾಲ ಸುದ್ದಿಯಲ್ಲಿದ್ದ ಪರಿಣತರನ್ನು ಕಡೆಗಣಿಸಿ ಇವರಿಬ್ಬರಿಗೂ ಪ್ರಶಸ್ತಿಯನ್ನು ವಿತರಿಸಲಾಗಿತ್ತು.