ಐ.ಎನ್.ಎಸ್ ವಿಕ್ರಾಂತ್ (ಆರ್೧೧)


ಮೊದಲು ಹೆಚ್.ಎಮ್.ಎಸ್ ಹರ್ಕ್ಯುಲಸ್ (ಆರ್ ೪೯) ಎಂದು ಕರೆಯಲ್ಪಡುತ್ತಿದ್ದ ಐ.ಎನ್.ಎಸ್ ವಿಕ್ರಾಂತ್ (ಸಂಸ್ಕೃತ: विक्रान्‍त) ನೌಕೆಯು ಬ್ರಿಟಿಷ್ ನೌಕಾಸೇನೆಮೆಜೆಸ್ಟಿಕ್ ವರ್ಗದ ನೌಕೆಯಾಗಿತ್ತು. ಪ್ರಸ್ತುತ ಇದು ಭಾರತೀಯ ನೌಕಾಸೇನೆಯ ವಿಮಾನಧಾರಕ ನೌಕೆಯಾಗಿದೆ.


ಐ.ಎನ್.ಎಸ್ ವಿಕ್ರಾಂತ್
ವೃತ್ತಿಜೀವನ (ಯು.ಕೆ) Royal Navy Ensign
ಹೆಸರು: ಹೆಚ್.ಎಮ್.ಎಸ್ ಹರ್ಕ್ಯುಲಸ್ (ಆರ್ ೪೯)
ನಿರ್ಮಾತೃ: ವಿಕ್ಕರ್ಸ್-ಆರ್ಮ್'ಸ್ಟ್ರಾಂಗ್/ಹಾರ್ಲೆಂಡ್ ಮತ್ತು ವೊಲ್ಫ್
ನಿರ್ಮಾಣಾರಂಭ: ೧೨ ನವೆಂಬರ್, ೧೯೪೩
ಬಿಡುಗಡೆ: ೨೨ ಸಪ್ಟಂಬರ್, ೧೯೪೫
ಮರುನಾಮಕರಣ: ಹೆಚ್.ಎಮ್.ಎಸ್ ಹರ್ಕ್ಯುಲಸ್ (ಆರ್೪೯)
ವಿಧಿ: ಮರುಜೋಡಣೆ ಹಾಗೂ ಆಧುನೀಕೃತಗೊಳಿಸಿ ಭಾರತಕ್ಕೆ ಮಾರಾಟ ಮಾಡಲಾಯಿತು
ವೃತ್ತಿಜೀವನ (ಭಾರತ) Indian Navy Ensign
ಹೆಸರು: ಐ.ಎನ್.ಎಸ್ ವಿಕ್ರಾಂತ್ (ಆರ್೧೧)
ನಿರ್ಮಾತೃ: ವಿಕ್ಕರ್ಸ್-ಆರ್ಮ್'ಸ್ಟ್ರಾಂಗ್/ಹಾರ್ಲೆಂಡ್ ಮತ್ತು ವೊಲ್ಫ್
ಕಾರ್ಯಾರಂಭ: ಮಾರ್ಚ್ ೪, ೧೯೬೧
ಕಾರ್ಯಸಮಾಪ್ತಿ: ಜನವರಿ ೩೧, ೧೯೯೭
ವಿಧಿ: ಸೇವೆಯಿಂದ ನಿವೃತ್ತಿಗೊಳಿಸಿ, ಮುಂಬಯಿಯಲ್ಲಿ ತೇಲುವ ವಸ್ತು ಸಂಗ್ರಹಾಲಯದಂತೆ ಸಂರಕ್ಷಿಸಲಾಗಿದೆ.
ಸಾಮಾನ್ಯ ವಿವರಗಳು
ನಮೂನೆ: ಮೆಜೆಸ್ಟಿಕ್ ವರ್ಗದ ವಿಮಾನಧಾರಕ ನೌಕೆ
ಉದ್ದ: 192 m (630 ft) waterline, 213.3 metres (700 ft) extreme
ಬೀಮ್: 24.4 m (80 ft) waterline, 39 metres (128 ft) extreme
ನೋದನ: 2 Parsons geared steam turbines 40,000 hp (30 MW), 4 Admiralty three-drum boilers
ಪೂರಕ: ಸಾಮನ್ಯವಾಗಿ ೧,೦೭೫,
ಯುದ್ಧ ಸಮಯದಲ್ಲಿ ೧,೩೪೦
ಹೊತ್ತೊಯ್ಯುವ ವಿಮಾನಗಳು: ಸೀ ಕಿಂಗ್ ಎಮ್.ಕೆ ೪೨ಬಿ and ಎಮ್.ಕೆ ೪೨ಸಿ
ಹೆಚ್.ಎ.ಎಲ್ ಚೇತಕ್
ಸೀ ಹ್ಯಾರಿಯರ್ ಎಫ್.ಆರ್.ಎಸ್.೫೧

ವಿಶ್ವದ ಹಳೆಯ ಯುದ್ಧವಿಮಾನ ವಾಹಕ ನೌಕೆ

ಬದಲಾಯಿಸಿ

-*ವಿಶ್ವದ ಅತ್ಯಂತ ಹಳೆಯ ಯುದ್ಧವಿಮಾನ ವಾಹಕ ನೌಕೆ ಐಎನ್‌ಎಸ್ ವಿರಾಟ್‌ ಮಾರ್ಚ್‌ 6 ರಂದು ಭಾರತೀಯ ನೌಕಾಪಡೆಯ ಸೇವೆಯಿಂದ ನಿವೃತ್ತಿಯಾಗಲಿದೆ. ಅತ್ಯಂತ ದೀರ್ಘಕಾಲ ಸೇವೆಯಲ್ಲಿದ್ದ ಯುದ್ಧನೌಕೆ ಎಂಬ ಗಿನ್ನೆಸ್‌ ದಾಖಲೆ ಈ ನೌಕೆ ಹೆಸರಿನಲ್ಲಿದೆ.

  • ಬ್ರಿಟನ್ ನಿರ್ಮಿತ ಈ ನೌಕೆ ಈವರೆಗೆ 56 ವರ್ಷ ಸೇವೆ ಸಲ್ಲಿಸಿದೆ. ಮೊದಲಿಗೆ ಬ್ರಿಟನ್‌ನ ನೌಕಾ ಪಡೆ ‘ರಾಯಲ್‌ ನೇವಿ’ಯಲ್ಲಿ ಸೇವೆಯಲ್ಲಿದ್ದ ಈ ನೌಕೆಯನ್ನು ಆಗ ಎಚ್‌ಎಂಎಸ್‌ ಹರ್ಮಿಸ್ ಎಂದು ಕರೆಯಲಾಗುತ್ತಿತ್ತು. ಭಾರತೀಯ ನೌಕಾಪಡೆ ಇದನ್ನು ಖರೀದಿಸಿದ ನಂತರ ‘ಐಎನ್‌ಎಸ್ ವಿರಾಟ್’ ಎಂದು ಮರುನಾಮಕರಣ ಮಾಡಲಾಗಿತ್ತು.

ವಿದಾಯ ಕಾರ್ಯಕ್ರಮ==

  • ಮುಂಬೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಅವರ ಅಧ್ಯಕ್ಷತೆಯಲ್ಲಿ ನೌಕಾಪಡೆಯ ಸಿಬ್ಬಂದಿ ನೌಕೆಗೆ ವಿದಾಯ ಹೇಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬ್ರಿಟನ್‌ ರಾಯಲ್‌ ನೇವಿಯ 20 ಅಧಿಕಾರಿಗಳು ಭಾಗವಹಿಸಲಿದ್ದಾರೆ.
  • ರಾಜಕುಮಾರನ ಹೆಸರು: 1975ರಲ್ಲಿ ಬ್ರಿಟನ್ ರಾಜಕುಮಾರ ಚಾರ್ಲ್ಸ್‌, ಈ ನೌಕೆಯಲ್ಲೇ ತಮ್ಮ ಸೇನಾ ಪೈಲಟ್‌ ವೃತ್ತಿಯನ್ನು ಆರಂಭಿಸಿದ್ದರು. ಈ ನೆನಪಿಗಾಗಿ ನೌಕೆಯ ಒಂದು ಕೊಠಡಿಗೆ ರಾಜಕುಮಾರನ ಹೆಸರನ್ನು ಇಡಲಾಗಿದೆ.

ಒಟ್ಟು 56 ವರ್ಷ ಸೇವೆ.

ಮಾರ್ಚ್‌ 6ರಂದು ನಿವೃತ್ತಿ

ಬದಲಾಯಿಸಿ
  • ಮಾರ್ಚ್‌ 6ರಂದು ಮುಂಬೈನಲ್ಲಿ ಸೇವೆಯಿಂದ ನಿವೃತ್ತಿ.
  • ಬ್ರಿಟನ್‌ನ ರಾಯಲ್ ನೇವಿಯ 20 ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿ.

ದೀರ್ಘ ಪಯಣ 1944: ನೌಕೆಯ ನಿರ್ಮಾಣಕ್ಕೆ ಚಾಲನೆ 1959: ರಾಯಲ್ ನೇವಿಗೆ ಸೇರ್ಪಡೆ 1986: ರಾಯಲ್ ನೇವಿಯಿಂದ ನೌಕೆ ಖರೀದಿಸಿದ ಭಾರತ 1987: ಭಾರತೀಯ ನೌಕಾಪಡೆಯ ಸೇವೆಗೆ ನಿಯೋಜನೆ 1989: ಶ್ರೀಲಂಕಾ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಭಾಗಿ 1999: ಕಾರ್ಗಿಲ್ ಯುದ್ಧ– ಆಪರೇಷನ್ ವಿಜಯ್‌ನಲ್ಲಿ ಭಾಗಿ 2017, ಮಾರ್ಚ್ 6: ಸೇವೆಯಿಂದ ನಿವೃತ್ತಿಯಾಗಲಿದೆ.

  • ವಿಶೇಷತೆ
  • ವಿಶ್ವದ ಹಳೆಯ ಯುದ್ಧನೌಕೆ
  • 29 ವರ್ಷ ಭಾರತದ ಸೇವೆಯಲ್ಲಿ
  • ಬ್ರಿಟನ್‌ ಮತ್ತು ಭಾರತದ ನೌಕಾ ಪಡೆಯಲ್ಲಿದ್ದಾಗ ನಾಲ್ಕು ಪ್ರಮುಖ ಯುದ್ಧ ಮತ್ತು ಕಾರ್ಯಾಚರಣೆಗಳಲ್ಲಿ ನೌಕೆ ಬಳಕೆ.
  • 27ವರ್ಷ ಬ್ರಿಟನ್ ಸೇವೆಯಲ್ಲಿ.
  • ನಿವೃತ್ತಿ ನಂತರ ನೌಕೆಯ ಮಂದಿನ ಕತೆ ಏನು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ[]

ಉಲ್ಲೇಖ

ಬದಲಾಯಿಸಿ