ಐರನ್ ಮ್ಯಾನ್ ೨
ಐರನ್ ಮ್ಯಾನ್ ೨ ಅದೇ ಹೆಸರಿನ ಮಾರ್ವಲ್ ಕಾಮಿಕ್ಸ್ ಪಾತ್ರದ ಮೇಲೆ ಆಧಾರಿತವಾದ ೨೦೧೦ರ ಒಂದು ಅಮೇರಿಕಾದ ಸೂಪರ್‌ಹೀರೊ ಚಿತ್ರ. ಅದು ೨೦೦೮ರ ಐರನ್ ಮ್ಯಾನ್ ಚಿತ್ರದ ಮುಂದಿನ ಪ್ರಕರಣ ಮತ್ತು ಮಾರ್ವಲ್ ಸಿನಮಾ ಪ್ರಪಂಚದ ಭಾಗವಾಗಿ ಬಿಡುಗಡೆಮಾಡಲಾದ ಮೂರನೇ ಚಲನಚಿತ್ರ. ಜಾನ್ ಫ಼ಾವ್ರೊ ನಿರ್ದೇಶಿಸಿದ ಮತ್ತು ಜಸ್ಟಿನ್ ಥರೂ ಬರೆದ ಈ ಚಿತ್ರದ ತಾರಾಗಣದಲ್ಲಿ ರಾಬರ್ಟ್ ಡೌನಿ ಜೂನಿಯರ್, ಗ್ವಿನೆತ್ ಪ್ಯಾಲ್‍ಟ್ರೌ, ಡಾನ್ ಚೀಡಲ್, ಸ್ಕಾರ್ಲಿಟ್ ಜೋಹ್ಯಾನ್ಸನ್, ಸ್ಯಾಮ್ ರಾಕ್‍ವೆಲ್, ಮಿಕಿ ರೋರ್ಕ್, ಮತ್ತು ಸ್ಯಾಮುವಲ್ ಎಲ್. ಜ್ಯಾಕ್‍ಸನ್ ಇದ್ದಾರೆ.