ಐಯ್ಯಂಗಾರ್ ಅಂದರೆ ಯಾರು?

ಶ್ರೀ ವೈಷ್ಣವನಾದವನು ಐದು ಅಂಗಗಳವನು. ಆದುದರಿಂದ ಅವನು ಐಯ್ಯಂಗಾರ್.

ಐದು ಅಂಗಗಳು ಅಂದರೆ ?

೧. ಐದು ಬಗೆ ೨. ಐದು ದಾರಿ ೩. ಐದು ಸಂಸ್ಕಾರಗಳು ೪. ಐದು ಜಿಜ್ಞಾಸೆ ೫.ಐದು ಕಾಲಗಳನ್ನು ಅನುಸರಿಸುವವನು

೧. ಐದು ಬಗೆ

1. ಪರ, ವ್ಯೂಹ, ವಿಭವ, ಅಂತರ್ಯಾಮಿ ಮತ್ತು ಅರ್ಚಾ.

೨. ಐದು ದಾರಿಗಳು

ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಭಕ್ತಿಯೋಗ ಮತ್ತು ಪ್ರಪತ್ತಿಯೋಗ

೩.ಐದು ಸಂಸ್ಕಾರಗಳು

ತಾಪ, ಪುಂಡ್ರ, ನಾಮ, ಮಂತ್ರ ಮತ್ತು ಕರ್ಮ(ಯಾಗ)

೪. ಐದು ಜಿಜ್ಞಾಸೆ (ಅರ್ಥ ಪಂಚಕ)

೧. ಭಗವಂತನ ಸ್ವರೂಪ ಎಂತಹುದು ? ೨. ನಾನು (ನನ್ನ ಜೀವನ) ಸ್ವರೂಪ ಏನು? ೩. ಜೀವನು ಭಗವಂತನನ್ನು ಪಡೆಯುವ ಮಾರ್ಗ ಯಾವುದು? ೪. ಆ ಮಾರ್ಗದಲ್ಲಿ ಹೋದರೆ ಭಗವಂತನನ್ನು ಹೊಂದಿ ಅನುಭವಿಸುವ ಫಲ ಎಂತಹುದು? ೫. ಆ ದಾರಿಯಲ್ಲಿ ಬರುವ ಶತ್ರುಗಳ(ಅಡ್ಡಿ) ಸ್ವರೂಪ ಎಂತಹುದು ?

೫. ಐದು ಕಾಲಗಳು

೧. ಪ್ರಾತಃಕಾಲ (ಅಭಿಗಮನ) ೨. ಸಂಗುವಕಾಲ (ಉಪಾದಾನ) ೩. ಮಧ್ಯಾನ್ಹ ಕಾಲ (ಇಜ್ಯಾ--ಪೂಜಾ) ೪. ಅಪರಾಹ್ನ ಕಾಲ (ಪಿತೃ ಕಾರ್ಯ ಅಥವಾ ಅಧ್ಯಯನ) ಮುಂದುವರೆದುದು: ೪. ಅಪರಾಹ್ನ ಕಾಲ (ಅಧ್ಯಯನ- ಅಧ್ಯಾಪನ) ೫. ಸಾಯಂಕಾಲ (ವಿಶ್ರಾಂತಿ ಯೋಗ)