ಐಪೋಮಿಯ: ಕನ್ವಾಲ್ವುಲೇಸಿ ಕುಟುಂಬಕ್ಕೆ ಸೇರಿದ ಒಂದು ದೊಡ್ಡ ಸಸ್ಯಜಾತಿ. ಬಹುಪಾಲು ಉಷ್ಣ ಮತ್ತು ಸಮಶೀತೋಷ್ಣ ವಲಯಗಳ ಮೂಲವಾಸಿಗಳು. ಈ ಜಾತಿಯಲ್ಲಿ ಏಕಋತುವಿನ ಸಸ್ಯಗಳಿಂದ ಹಿಡಿದು ಬಹುವಾರ್ಷಿಕ ಸಸ್ಯಗಳವರೆಗೆ ಮೂಲಿಕೆ, ಬಳ್ಳಿ, ಪೊದೆ ಮತ್ತು ಮರದಂತಿರುವ ಸಸಿಗಳು ಸೇರಿವೆ. ಅವುಗಳಲ್ಲಿ ಸುಂದರವಾಗಿ ಹೂ ಬಿಡುವ ಕೆಲವು ಬಳ್ಳಿಗಳು ತೋಟಗಾರಿಕೆಯಲ್ಲಿ ಪ್ರಾಮುಖ್ಯ ಪಡೆದಿವೆ.

ಸಸ್ಯ ವಿವರಣೆ

ಬದಲಾಯಿಸಿ

ಈ ಬಳ್ಳಿಗಳ ಕಾಂಡದಲ್ಲಿ ಅಂಟಾದ ದ್ರವವಿರುತ್ತದೆ. ಈ ಸಸ್ಯಗಳು ತಮ್ಮ ಕಾಂಡಗಳ ಸಹಾಯದಿಂದ ಹಬ್ಬುತ್ತವೆ. ಎಲೆಗಳಿಗೆ ತೊಟ್ಟುಂಟು. ಜೋಡಣೆ ಪರ್ಯಾಯವಾಗಿ. ಆಕಾರ ಹೃದಯ ಅಥವಾ ಕರನೆಯಂತೆ. ಅಂಚು ನಯ ಅಥವಾ ಗರಗಸದಂತೆ ಮುಳ್ಳುಮುಳ್ಳು. ತುದಿ ಸಾಮಾನ್ಯವಾಗಿ ಮೊನಚು ಅಥವಾ ಲಂಬಾಗ್ರ. ಹೂ ಒಂಟಿಯಾಗಿಯೂ ಗೊಂಚಲಾಗಿಯೂ ಇರುತ್ತದೆ. ಆಕಾರ ಆಲಿಕೆಯಂತೆ ಅಥವಾ ಗಂಟೆಯಂತೆ. ಪ್ರಭೇದಗಳನ್ನನುಸರಿಸಿ ಹೂವಿನ ಬಣ್ಣ. ಪುಷ್ಪಪತ್ರ ಸಮೂಹ ಆಳವಾಗಿ ಭಾಗವಾಗಿರುತ್ತದೆ. ಕೂಡುಹೂದಳ ಐದು ಭಾಗವಾಗಿದೆ. ಕೇಸರಗಳು 5:2 ರಿಂದ 4 ಕೋಶದ ಅಂಡಾಶಯವಿದೆ. ಶಲಾಕಾಗ್ರ ಸ್ಪಷ್ಟಗೊಂಚಲು ಮಾದರಿಯದು. ಪರಾಗಸ್ಪರ್ಶ ಹಕ್ಕಿಗಳಿಂದ ಅಥವಾ ಗಾಳಿಯಿಂದ ಆಗುತ್ತದೆ. ಹಣ್ಣು ಸಂಪುಟ (ಕ್ಯಾಪ್ಸುಲ್) ಮಾದರಿಯದು.

ಪ್ರಭೇದಗಳು

ಬದಲಾಯಿಸಿ

ಐಪೋಮಿಯ ಜಾತಿಯಲ್ಲಿ ಸುಮಾರು 400 ಪ್ರಭೇದಗಳಿವೆ. ಅವುಗಳಲ್ಲಿ 50 ಪ್ರಭೇದಗಳು ಭಾರತದಲ್ಲಿ ಬೆಳೆಯುತ್ತವೆ. ಕೆಲವು ಪ್ರಭೇದಗಳನ್ನು ಈಚೆಗೆ ಕ್ವಾಮೊಕ್ಲಿಟ್, ಮಿನಾ, ಮೆರಿಮಿಯ ಮುಂತಾದ ಅನ್ಯಜಾತಿಗಳಿಗೆ ಸೇರಿಸಲಾಗಿದೆ. ತೋಟಗಾರಿಕೆಯಲ್ಲಿ ಪ್ರಾಮುಖ್ಯ ಪಡೆದಿರುವ ಹನ್ನೊಂದು ಪ್ರಭೇದಗಳನ್ನು ಇಲ್ಲಿ ಪರಿಶೀಲಿಸಬಹುದು.

ಐಪೋಮಿಯ ಟ್ರೈ ಕಲರ್

ಬದಲಾಯಿಸಿ

ಈ ಪ್ರಭೇದದ ಹೂ ನಸುಗೆಂಪು, ಕೆಂಪು ಮತ್ತು ನೀಲಿ ಬಣ್ಣಗಳಿಂದ ಕೂಡಿದೆ. ಇದು ಮೆಕ್ಸಿಕೋ ದೇಶದ ಮೂಲವಾಸಿ. ಈಗ ಉಷ್ಣವಲಯದ ಎಲ್ಲ ಭಾಗಗಳಿಗೂ ವ್ಯಾಪಿಸಿದೆ. ಬಹುವಾರ್ಷಿಕವಾದ ಈ ಬಳ್ಳಿ ಅತಿಯಾಗಿ ಬೆಳೆದು ವಿಸ್ತಾರವಾಗಿ ಹಬ್ಬುತ್ತದೆ. ಕೊಳವೆಯಾಕಾರದ ಕಾಂಡದಲ್ಲಿ ಅಲ್ಲಲ್ಲಿ ಕಡುಗೆಂಪು ಬಣ್ಣವಿದೆ. ಎಲೆ ದಟ್ಟ ಹಸಿರು. ಈ ಪ್ರಭೇದದ ಸಸ್ಯಗಳು ಸೆಪ್ಟೆಂಬರ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಹೂ ಬಿಡುತ್ತವೆ. ಹೂಗೊಂಚಲು ತುದಿಯಲ್ಲಿದ್ದು ಪ್ರತಿ ಹೂಗೊಂಚಲಿನಲ್ಲಿ 3 ರಿಂದ 4 ಹೂಗಳಿರುತ್ತವೆ. ಈ ಸಸ್ಯ ಬಹುವಾರ್ಷಿಕವಾದರೂ ಪ್ರತಿವರ್ಷ ಕಳೆಗುಂದುವುದ ರಿಂದ, ಇದನ್ನು ವಾರ್ಷಿಕವಾಗಿ ಬೆಳೆಸುವುದು ರೂಢಿಯಲ್ಲಿದೆ. ಇದನ್ನು ಬೀಜಗಳಿಂದ ವೃದ್ಧಿ ಮಾಡಬಹುದು. ಇದರ ಬೇಸಾಯಕ್ಕೆ ಭೂಮಿ ಅಷ್ಟು ಫಲವತ್ತಾಗಿರಬೇಕಾಗಿಲ್ಲ.

ಐಪೋಮಿಯ ಕ್ವಾಮೊಕ್ಲಿಟ್

ಬದಲಾಯಿಸಿ

ಈ ಪ್ರಭೇದಕ್ಕೆ ಸೈಪ್ರೆಸ್ ವೈನ್, ಇಂಡಿಯನ್ ಪಿಂಕ್ ಎಂಬ ಸಾಮಾನ್ಯ ಹೆಸರುಗಳು ಬಳಕೆಯಲ್ಲಿವೆ. ಇದು ಏಕ ಋತುವಿನ ಹಬ್ಬುಬಳ್ಳಿ. ಕಾಂಡ ಸಣ್ಣದಾಗಿ ಸುಮಾರು 20' ಎತ್ತರ ಹಬ್ಬುತ್ತದೆ. ಎಲೆಗೆ ಚಿಕ್ಕ ತೊಟ್ಟಿರುತ್ತದೆ ಅಥವಾ ತೊಟ್ಟಿಲ್ಲದೆ ಇದ್ದು ಗರಿ ರೂಪದಲ್ಲಿ ಭಾಗಿತವಾಗಿರುತ್ತದೆ. ಹೂಗೊಂಚಲಿನಲ್ಲಿ ಹಲವು ಹೂಗಳಿರುತ್ತವೆ. ಗೊಂಚಲ ತೊಟ್ಟು ಹೂವಿನ ತೊಟ್ಟಿಗಿಂತ ಉದ್ದ. ಹೂ 1" ರಿಂದ 1 1/2 “ ಉದ್ದ. ಬಣ್ಣ ಕೇಸರಿ. ಆಕಾರ ತಟ್ಟೆಯಂತೆ. ಈ ಸಸ್ಯ ಮಳೆಗಾಲದಲ್ಲಿ ಹೂ ಬಿಡುತ್ತದೆ. ಡಿಸೆಂಬರ್ ತಿಂಗಳಲ್ಲಿ ಫಲ ಕೊಡುತ್ತದೆ. ಇದು ಅಮೆರಿಕದ ಉಷ್ಣಪ್ರದೇಶದ ಮೂಲವಾಸಿ. ಈಗ ಇದು ಉಷ್ಣವಲಯದ ಎಲ್ಲ ಭಾಗಗಳಿಗೆ ವ್ಯಾಪಿಸಿದೆ. ಇದನ್ನು ಬೀಜಗಳಿಂದ ವೃದ್ಧಿ ಮಾಡಬಹುದು. ಆಯುರ್ವೇದೀಯ ಔಷಧವಾಗಿ ಈ ಸಸ್ಯ ಪ್ರಾಮುಖ್ಯ ಪಡೆದಿದೆ.

ಐಪೋಮಿಯ ಹಾರ್ಸ್‌ಫಾಲಿಯೆ

ಬದಲಾಯಿಸಿ
Ipomoea horsfalliae
 
Scientific classification  
Unrecognized taxon (fix): Ipomoea
ಪ್ರಜಾತಿ:
I. horsfalliae
Binomial name
Ipomoea horsfalliae

ಇದು ಎತ್ತರವಾಗಿ ಬೆಳೆಯುವ ಬಹುವಾರ್ಷಿಕ ಬಳ್ಳಿ; ಎಲೆ ಹಸ್ತಾಕಾರ. ಒಂದು ಎಲೆಯಲ್ಲಿ 5 ರಿಂದ 7 ಕಿರು ಎಲೆಗಳು ಇರುತ್ತವೆ; ಕಿರು ಎಲೆ ಭರ್ಜಿಯಾಕಾರ, ಕದಿರಿನಾಕಾರ. ಗಾತ್ರದಲ್ಲಿ ದಪ್ಪ. ಅಂಚು ನಯ. ತುದಿ ಲಂಬಾಗ್ರ. ಹೂಗೊಂಚಲು ಮಧ್ಯಾರಂಭಿ. ಹೂಗೊಂಚಲಿನ ತೊಟ್ಟು, ಹೂ ತೊಟ್ಟಿನಷ್ಟೆ ಉದ್ದ ಅಥವಾ ಹೂತೊಟ್ಟಿಗಿಂತ ಸ್ವಲ್ಪ ಉದ್ದ. ಸಮವಾಗಿರುವ 5 ಪುಷ್ಪಪತ್ರಗಳೂ 5 ಕೂಡು ಹೂದಳಗಳೂ ಇವೆ. ಬಣ್ಣ ಗುಲಾಬಿ. ಭಾರತ ದೇಶದಲ್ಲಿ ಈ ಸಸ್ಯ ಚೆನ್ನಾಗಿ ಫಲ ಕೊಡುತ್ತಿಲ್ಲ. ಈಗ ಉಷ್ಣವಲಯದ ಎಲ್ಲ ಭಾಗಗಳಲ್ಲೂ ಇದರ ಬೇಸಾಯವಿದೆ. ಈ ಸಸ್ಯವನ್ನು ಬೇರುತುಂಡುಗಳಿಂದ ವೃದ್ಧಿ ಮಾಡಬಹುದಾದರೂ ಗಿಡ ಬೇಗ ಅಂಟದು.

ಐಪೋಮಿಯ ಲಿಯರಿಯೈ

ಬದಲಾಯಿಸಿ
Ipomoea indica
 
Blue morning glory
Scientific classification  
Unrecognized taxon (fix): Ipomoea
ಪ್ರಜಾತಿ:
I. indica
Binomial name
Ipomoea indica
Synonyms

ಐಪೋಮಿಯ ಇಂಡಿಕ ಎಂದು ಹೆಸರುಳ್ಳ ಈ ಸಸ್ಯ ಪ್ರಭೇದಕ್ಕ ಶ್ರೀಲಂಕ ದೇಶದಲ್ಲಿ ಸಸ್ಯಗಳನ್ನು ಸಂಗ್ರಹಣೆ ಮಾಡಿದ ಲಿಯರ್ ಮಹಾಶಯನ ಗೌರವಾರ್ಥವಾಗಿ ಈ ಹೆಸರು ಇಡಲಾಗಿದೆ. ಶೀಘ್ರವಾಗಿ ಮತ್ತು ಎತ್ತರವಾಗಿ ಬೆಳೆಯುವ ಈ ಸಸ್ಯದ ಬುಡ ಗಟ್ಟಿಯಾಗಿದೆ. ತುದಿ ನವುರಾದ ರೋಮಗಳಿಂದ ಕೂಡಿದೆ. ಉದ್ದವಾದ ತೊಟ್ಟಿರುವ ಎಲೆ ಕರನೆಯಾಕಾರದ್ದು. ಅಂಚು ನಯ, ಕೆಲವು ಸಾರಿ 3 ರಿಂದ 5 ಭಾಗವಾಗಿರುತ್ತದೆ. ತುದಿ ಮೊನಚು; ಬುಡದಲ್ಲಿನ ನಾಭಿ ಆಳವಾಗಿರುತ್ತದೆ. ಮೇಲು ಮತ್ತು ತಳಭಾಗಗಳಲ್ಲಿ ನಯವಾದ ರೋಮಗಳಿವೆ. ಹೂಗೊಂಚಲಿನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಹೂಗಳಿವೆ. ಅವುಗಳ ಬಣ್ಣ ಊದಾ ಮತ್ತು ನೀಲಿ ಮಿಶ್ರಣದ್ದು. ಕೂಡು ಹೂದಳದ ಮೇಲೆ 5 ನಸುಗೆಂಪು ಗೆರೆಗಳು ಇರುತ್ತವೆ. ಈ ಸಸ್ಯ ಆಗಸ್ಟ್‌ ತಿಂಗಳಿಂದ ಡಿಸೆಂಬರ್ ತಿಂಗಳವರೆಗೆ ಹೂ ಬಿಡುತ್ತದೆ. ಇದು ದಕ್ಷಿಣ ಅಮೆರಿಕದ ಮೂಲವಾಸಿ. ಈಗ ಉಷ್ಣ ಮತ್ತು ಸಮಶೀತೋಷ್ಣವಲಯಗಳಲ್ಲಿ ವ್ಯಾಪಿಸಿದೆ. ಈ ಸಸ್ಯವನ್ನು ಬೀಜಗಳಿಂದ ವೃದ್ಧಿ ಮಾಡಬಹುದು. ಮಳೆಗಾಲದ ಪ್ರಾರಂಭ ಬೀಜ ಬಿತ್ತಲು ಯೋಗ್ಯವಾದ ಕಾಲ.

ಐಪೋಮಿಯ ಕಾರ್ನಿಯ

ಬದಲಾಯಿಸಿ
Ipomoea carnea
 
Scientific classification  
Unrecognized taxon (fix): Ipomoea
ಪ್ರಜಾತಿ:
I. carnea
Binomial name
Ipomoea carnea
Jacq., 1760
Synonyms
  • Convolvulus batatilla Kunth, 1819
  • Ipomoea fistulosa Mart. ex Choisy, 1845
  • Batatas crassicaulis Benth., 1845
  • Ipomoea gossypioides Parodi, 1877
  • Ipomoea texana J.M.Coult., 1890
  • Ipomoea fruticosa Kuntze, 1891
  • Ipomoea fistulosa v. nicaraguensis Donnell Smith, 1894
  • Ipomoea fistulosa f. albiflora Chodat & Hassl., 1905
  • Ipomoea crassicaulis (Bentham) B. L. Robinson, 1916
  • Ipomoea crassicaulis v. goodellii O.Deg., 1936

ಈ ಪ್ರಭೇದದ ಹೂ ಮಾಂಸದ ಬಣ್ಣದ್ದಾದುದರಿಂದ ಇದಕ್ಕೆ ಈ ಹೆಸರು. ಕಾಂಡ ದಪ್ಪ ಬಹುವಾಗಿ ಕವಲೊಡೆದು ವಿಶಾಲವಾಗಿ ಹರಡಿಕೊಂಡಿರುತ್ತದೆ. ಕಾಂಡದಲ್ಲಿ ಅಂಟಾದ ದ್ರಾವಣವಿದೆ. ಈ ಸಸ್ಯ ಚಳಿಗಾಲವನ್ನು ಬಿಟ್ಟು ಉಳಿದ ಎಲ್ಲ ಕಾಲಗಳಲ್ಲೂ ಹೂ ಬಿಡುತ್ತದೆ. ಇದು ದಕ್ಷಿಣ ಅಮೆರಿಕದ ಮೂಲವಾಸಿ. ಇದನ್ನು ಬಳ್ಳಿ ತುಂಡುಗಳಿಂದ ವೃದ್ಧಿಮಾಡಬಹುದು. ಎಲೆಗಳು ಜಾನುವಾರುಗಳಿಗೆ ವಿಷಕರವಾದದ್ದು.

ಐಪೋಮಿಯ ವಿಟಿಪೋಲಿಯ

ಬದಲಾಯಿಸಿ

ಇದರ ಎಲೆ ದ್ರಾಕ್ಷಿ ಎಲೆಯಂತೆ ಇರುವುದರಿಂದ ಇದಕ್ಕೆ ಈ ಹೆಸರು. ವಿಶಾಲವಾಗಿ ಬೆಳೆದು ಸದಾ ಹಸಿರಾಗಿರುವ ಬಹುವಾರ್ಷಿಕ ಬಳ್ಳಿಯಿದು. ಈ ಸಸ್ಯ ಅಕ್ಟೋಬರ್ ತಿಂಗಳಿಂದ ಮಾರ್ಚಿ ತಿಂಗಳವರೆಗೆ ಹೂ ಬಿಡುತ್ತದೆ. ಹೂವಿನ ಬಣ್ಣ ಗಂಧಕದ ಹಳದಿ. ಹಣ್ಣು ನಾಲ್ಕು ಬೀಜವಿರುವ ಸಂಪುಟದ ಮಾದರಿಯದು. ಬಳ್ಳಿ ತುಂಡುಗಳಿಂದ ಸುಲಭವಾಗಿ ಈ ಸಸ್ಯವನ್ನು ವೃದ್ಧಿಮಾಡಬಹುದು. ಎಲೆಗಳಿಗೆ ಉತ್ತಮ ಔಷಧಿ ಗುಣಗಳಿವೆ.

ಐಪೋಮಿಯ ಕಾಕ್ಸಿನಿಯ

ಬದಲಾಯಿಸಿ
Red morning glory
 
Scientific classification  
Unrecognized taxon (fix): Ipomoea
ಪ್ರಜಾತಿ:
I. coccinea
Binomial name
Ipomoea coccinea
L., 1753

ಕಡುಗೆಂಪು ಬಣ್ಣದಿಂದ ಕೂಡಿರುವುದರಿಂದ ಈ ಹೆಸರು. ಇದು ದುರ್ಬಲ ಕಾಂಡದ ವಾರ್ಷಿಕ ಬಳ್ಳಿ. ಈ ಸಸ್ಯ ಮಳೆಗಾಲದಲ್ಲಿ ಹೂಬಿಟ್ಟು ಅಕ್ಟೋಬರ್, ನವೆಂಬರ್ ತಿಂಗಳುಗಳಲ್ಲಿ ಹಣ್ಣು ಕೊಡುತ್ತದೆ. ಇದು ಮೆಕ್ಸಿಕೋ ಮತ್ತು ಅರಿಜೋóನ ದೇಶಗಳ ಮೂಲವಾಸಿ. ಈಗ ಭಾರತದ ಎಲ್ಲ ಭಾಗಗಳಲ್ಲೂ ಬೇಸಾಯದಲ್ಲಿದೆ. ಇದನ್ನು ಬೀಜಗಳಿಂದ ಸುಲಭವಾಗಿ ವೃದ್ಧಿಮಾಡಬಹುದು. ಈ ಸಸ್ಯ ಔಷಧಿಯ ಪ್ರಾಮುಖ್ಯ ಪಡೆದಿದೆ.

ಐಪೋಮಿಯ ಲೊಬೇಟ

ಬದಲಾಯಿಸಿ
Ipomoea lobata
 
I. lobata, Dresden Botanical Garden
Scientific classification  
Unrecognized taxon (fix): Ipomoea
ಪ್ರಜಾತಿ:
I. lobata
Binomial name
Ipomoea lobata
(Cerv.) Thell.
Synonyms
  • Ipomoea versicolor Meisn.
  • Mina lobata Cerv.
  • Quamoclit lobata

ಎಲೆಗಳು ಭಾಗಿತವಾಗಿರುವುದರಿಂದ ಇದಕ್ಕೆ ಈ ಹೆಸರು. ಇದು ಕುಳ್ಳಾಗಿ, ಶೀಘ್ರವಾಗಿ ಬೆಳೆಯುವ ವಾರ್ಷಿಕ ಬಳ್ಳಿ. ಹೂಗಳ ಬಣ್ಣ ಕಡುಗೆಂಪು ಅಥವಾ ಕಿತ್ತಲೆ. ಅರಳಿದ ಅನಂತರ ಇವು ಹಳದಿ ಬಣ್ಣಕ್ಕೆ ತಿರುಗುತ್ತವೆ. ಈ ಸಸ್ಯ ಸೆಪ್ಟೆಂಬರ್ ತಿಂಗಳಿಂದ ಡಿಸೆಂಬರ್ ತಿಂಗಳವರೆಗೆ ಹೂ ಬಿಡುತ್ತದೆ. ಇದು ಮೆಕ್ಸಿಕೋ ದೇಶದ ಮೂಲವಾಸಿ. ಈಗ ಇದರ ಬೇಸಾಯ ಉಷ್ಣವಲಯದ ಎಲ್ಲ ಭಾಗಗಳಲ್ಲೂ ಇದೆ.

ಐಪೋಮಿಯ ಪರ್ಪ್ಯುರಿಯ

ಬದಲಾಯಿಸಿ
Ipomoea purpurea
 
Scientific classification  
Unrecognized taxon (fix): Ipomoea
ಪ್ರಜಾತಿ:
I. purpurea
Binomial name
Ipomoea purpurea

ಹೂವಿನ ಬಣ್ಣ ಕೆನ್ನೀಲಿಯಾದ್ದರಿಂದ ಸಸ್ಯಕ್ಕೆ ಈ ಹೆಸರು. ಇದು ವಾರ್ಷಿಕ ಸಸ್ಯ. ಬಳ್ಳಿಯ ಮೇಲೆ ನಯವಾದ ರೋಮಗಳಿವೆ. ಹೂವಿನದು ಆಲಿಕೆಯಾಕಾರ. ಬಣ್ಣ ಬಿಳುಪಿನಿಂದ ಕೆನ್ನೀಲಿವರೆಗೆ; ಮಳೆಗಾಲದಲ್ಲಿ ಹೂ ಬಿಟ್ಟು ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಹಣ್ಣು ಕೊಡುತ್ತದೆ. ಇದು ಅಮೆರಿಕದ ಉಷ್ಣಪ್ರದೇಶಗಳ ಮೂಲವಾಸಿ; ಭಾರತದಲ್ಲಿ ಅಷ್ಟೇ ಚೆನ್ನಾಗಿ ಬೆಳೆಯುತ್ತದೆ. ಬೀಜಗಳಿಂದ ಸುಲಭವಾಗಿ ವೃದ್ಧಿಮಾಡಬಹುದು. ಆಫ್ರಿಕಾದಲ್ಲಿ ಇದನ್ನು ಔಷಧಿಗಳಿಗಾಗಿ ಉಪಯೋಗಿಸುತ್ತಾರೆ.

ಐಪೋಮಿಯ ಸಿನ್ಯುಯೇಟ

ಬದಲಾಯಿಸಿ

ಈ ಬಳ್ಳಿ ವಿಶಾಲವಾಗಿ ಬೆಳೆಯುತ್ತದೆ. ಮೈಮೇಲೆ ಹಳದಿ ಬಣ್ಣದ ರೋಮಗಳಿವೆ. ಎಲೆ ಹಸ್ತಾಕಾರದ್ದು. ಹೂಗೊಂಚಲಿಗೆ ಉದ್ದವಾದ ತೊಟ್ಟು ಇದ್ದು ತುದಿಯಲ್ಲಿ ಎರಡು ಹೂಗಳಿರುತ್ತವೆ. ಹೂವಿನ ಆಕಾರ ಗಂಟೆಯಂತೆ. ಬಣ್ಣ ಬಿಳಿ.

ಆರ್ಥಿಕ ಪ್ರಾಮುಖ್ಯ

ಬದಲಾಯಿಸಿ

ಈ ಜಾತಿಯ ಒಂದು ಪ್ರಭೇದವಾದ ಐಪೋಮಿಯ ಬಟಾಟಸ್ ಎಂಬುದೇ ಗೆಣಸಿನ ಸಸ್ಯ. ಇದು ಮಾನವನ ಆಹಾರ ಹಾಗೂ ತರಕಾರಿಯ ರೂಪದಲ್ಲೂ ಇತರ ವಿಧಗಳಲ್ಲೂ ಬಳಕೆಯಲ್ಲಿದೆ. ಐಪೋಮಿಯ ಪರ್ಗ ಮತ್ತು ಐಪೋಮಿಯ ಟರ್ಪೆಥಂ ಎಂಬ ಪ್ರಭೇದಗಳಿಂದ ಜಲಾಪ ಎಂಬ ಭೇದಿ ಔಷಧಿಯನ್ನು ತಯಾರಿಸುತ್ತಾರೆ. ಹಿಂದೆ ವಿವರಿಸಿರುವ ಹಲವು ಪ್ರಭೇದಗಳನ್ನು ಅವುಗಳ ಅಲಂಕಾರದ ಹೂಗಳಿಗಾಗಿ ಉದ್ಯಾನಗಳಲ್ಲೂ ಮನೆಗಳ ಮುಂದೆಯೂ ಬೆಳೆಸುತ್ತಾರೆ. ಮರಳು ದಿಣ್ಣೆಗಳು ಕುಸಿಯದಂತೆ ತಡೆಯಲು ಐಪೋಮಿಯ ಪ್ರೆಸ್ ಕ್ಯಾಪ್ರೆ ಎಂಬ ಪ್ರಭೇದವನ್ನು ಬೆಳೆಸುವರು.

ಉಲ್ಲೇಖಗಳು

ಬದಲಾಯಿಸಿ


"https://kn.wikipedia.org/w/index.php?title=ಐಪೋಮಿಯ&oldid=1249758" ಇಂದ ಪಡೆಯಲ್ಪಟ್ಟಿದೆ