ವಿಕಿಪೀಡಿಯ:ಐನೆಟ್‌ ಅನುವಾದಕ ಸಮುದಾಯ

(ಐನೆಟ್‌ ಅನುವಾದಕ ಸಮುದಾಯ ಇಂದ ಪುನರ್ನಿರ್ದೇಶಿತ)

ಇದು ಐನೆಟ್‌ಫ್ರೇಮ್ ಸಂಸ್ಥೆಯಲ್ಲಿ ವಿಕಿಪೀಡಿಯಾ ಲೇಖನಗಳನ್ನು ಇಂಗ್ಲಿಷ್‌ ಇಂದ ಕನ್ನಡಕ್ಕೆ ಅನುವಾದ ಮಾಡುವವರ ಸಮುದಾಯ.


ಅನುವಾದ ಮಾಡುತ್ತಿರುವಾಗ ಅನುವಾದ ಮಾಡುವವರಿಗೆ ಉಂಟಾದ ಸಂಶಯಗಳು/ಜಿಜ್ಞಾಸೆಗಳನ್ನು ಇಲ್ಲಿ ತಿಳಿಸಲಾಗಿದೆ. ಏಕೆಂದರೆ

1. ಲೇಖನದ ಶೀರ್ಷಿಕೆಯನ್ನು ಕನ್ನಡದಲ್ಲಿ ಅನುವಾದ ಮಾಡಿದ ನಂತರ ಆವರಣದಲ್ಲಿ ಮೂಲ ಇಂಗ್ಲಿಷ್‌ ಶಿರೋನಾಮೆಯನ್ನು ಉಳಿಸಿಕೊಳ್ಳುವುದು ಸೂಕ್ತವೆನಿಸುತ್ತದೆ.

2. ಇಂಗ್ಲಿಷ್‌ನಲ್ಲಿ UK, USA ಇತ್ಯಾದಿಗಳನ್ನು ಕನ್ನಡದಲ್ಲಿ 'ಯುಕೆ', 'ಯುಎಸ್‌ಎ' ಎಂದು ನಮೂದಿಸುವ ಬದಲಿಗೆ ಕ್ರಮವಾಗಿ 'ಯುನೈಟೆಡ್‌ ಕಿಂಗ್ಡಮ್‌', 'ಅಮೆರಿಕಾ ಸಂಯುಕ್ತ ಸಂಸ್ಥಾನ' ಎಂದು ನಮೂದಿಸುವುದು ಸೂಕ್ತವೆನಿಸುತ್ತದೆ. ಇದೇ ರೀತಿ, ಇಂಗ್ಲಿಷ್‌ ಮೂಲದಲ್ಲಿ $ ಎಂಬುದನ್ನು ಸಂದರ್ಭಕ್ಕೆ ತಕ್ಕಂತೆ ಅಮೆರಿಕನ್‌ ಡಾಲರ್‌, ಆಸ್ಟ್ರೇಲಿಯನ್‌ ಡಾಲರ್‌ ಎಂದು ನಮೂದಿಸಬಹುದು.

3. ಅನುವಾದ ಮಾಡುವಾಗ ಕಟ್ಟುನಿಟ್ಟಾಗಿ ಪಾಲಿಸಬೇಕಾದ ನಿಯಮಾವಳಿಗಳನ್ನು ನಮಗೆ ತಿಳಿಸಲಾಗಿತ್ತು. ಉದಾಹರಣೆಗೆ, ಈ ಕಾರ್ಯದ ಆರಂಭದಲ್ಲಿ Microsoft, Operating System, Windows ನಂತಹ ಹೆಸರುಗಳನ್ನು ಇಂಗ್ಲಿಷ್‌ ಫಾಂಟ್‌ಗಳಲ್ಲೇ ಉಳಿಸಿಕೊಳ್ಳಬೇಕು ಎಂದಿತ್ತು. ಇತ್ತೀಚೆಗೆ ನಿಯಮಾವಳಿಗಳಲ್ಲಿ ಕೆಲವು ಮಾರ್ಪಾಡು/ಸುಧಾರಣೆಗಳನ್ನು ತಂದ ನಂತರ, ಈ ಹೆಸರುಗಳನ್ನು ಕನ್ನಡ ಫಾಂಟಿನಲ್ಲಿ ನಮೂದಿಸಲು ಅನುಮತಿಯಿದೆ.

4. ಕೆಲವು ಲೇಖನಗಳಲ್ಲಿ ಜರ್ಮನ್‌, ಫ್ರೆಂಚ್‌, ಇಟ್ಯಾಲಿಯನ್‌, ಸ್ಪ್ಯಾನಿಷ್‌ ಸೇರಿದಂತೆ ಹಲವು ಯುರೋಪಿಯನ್‌ ಭಾಷಾ ಪದಗಳು/ಪದಪುಂಜಗಳು, ವಾಕ್ಯಗಳುಂಟು. ಇಂಗ್ಲಿಷ್‌ ಭಾಷೆ ಬಹುಶಃ ಎಲ್ಲ ಅನುವಾದಕರೂ ತಿಳಿದಿರುವುದರಿಂದ ಅಗತ್ಯವಿದ್ದಲ್ಲಿ ಅನುವಾದ/ಲಿಪ್ಯಂತರ ಮಾಡಬಹುದು. ಆದರೆ, ಫ್ರೆಂಚ್‌ ಹೊರತುಪಡಿಸಿ, ಉಳಿದ ಯುರೋಪಿಯನ್‌ ಭಾಷೆಗಳು ಉಚ್ಚಾರಣಾನುರೂಪ ಭಾಷೆಗಳಾಗಿರುವ ಕಾರಣ, ಖಚಿತವಾಗಿ ಗೊತ್ತಿದ್ದಲ್ಲಿ ಮಾತ್ರ ಲಿಪ್ಯಂತರ ಮಾಡತಕ್ಕದ್ದು, ಇಲ್ಲದಿದ್ದಲ್ಲಿ ಈ ಭಾಷೆಗಳ ಫಾಂಟುಗಳನ್ನು ಹಾಗೇ ಬಿಟ್ಟುಬಿಡುವುದು ಉತ್ತಮ.

4. ಎಚ್‌ಟಿಎಮ್‌ಎಲ್‌ ಟ್ಯಾಗ್‌ಗಳಲ್ಲಿ ಹಲವೆಡೆ ಇಂಗ್ಲಿಷ್‌ ಭಾಷೆಯಲ್ಲಿ ಪುಸ್ತಕಳ ಶೀರ್ಷಿಕೆ ಉಲ್ಲೇಖಿತವಾಗಿದ್ದು, ಇದನ್ನು ಲಿಪ್ಯಂತರ ಮಾಡತಕ್ಕದ್ದು ಎಂಬುದು ಸುಸ್ಪಷ್ಟವಾಗಿದೆ. ಆದರೆ ಇಂಗ್ಲಿಷ್‌ನಲ್ಲಿ ವಾರ್ತಾ ಪತ್ರಿಕೆಯಲ್ಲಿ ನೀಡಿದಂತಹ ಮುಖ್ಯಾಂಶಗಳನ್ನು ಇಲ್ಲಿ ನೀಡಿದಲ್ಲಿ, ಇದನ್ನೂ ಸಹ ಲಿಪ್ಯಂತರ ಮಾಡಲೇಬೇಕೇ? ಅಥವಾ ಅನುವಾದ ಮಾಡಬಹುದೇ? ಅಥವಾ ಇಂಗ್ಲಿಷಿನಲ್ಲಿಯೇ ಉಳಿದುಕೊಳ್ಳಲು ಬಿಡುವುದೇ? ಏಕೆಂದರೆ ಕೆಲವು ಅನುವಾದಿತ ಪುಟಗಳಲ್ಲಿ ಇಂತಹ ಎಚ್‌ಟಿಎಂಎಲ್‌ ಕೊಂಡಿಗಳ ವಿಭಾಗವು ಇಂಗ್ಲಿಷ್‌ ಭಾಷೆಯಲ್ಲೇ ಇವೆ.