ಐಎಸ್ಓ-9000
ಐಎಸ್ಒ ೯೦೦೦ ಎನ್ನುವುದು ಉತ್ತನ್ನಗಳ ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಳಲ್ಲೊಂದು[೧]. ಸಂಸ್ಥೆಗಳು ತಮ್ಮ ಉತ್ಪನ್ನಗಳ ಗುಣಮಟ್ಟ ಗ್ರಾಹಕರ, ಶಾಸನಗಳ ಮಾನದಂಡಗಳಿಗೆ ಅನುಗುಣವಾಗಿರುವಂತೆ ನೋಡಿಕೊಳ್ಳಲು ಇದು ಸಹಕರಿಸುತ್ತದೆ.
ಇತಿಹಾಸ
ಬದಲಾಯಿಸಿಐಎಸ್ಒ ೯೦೦೧ವನ್ನು ೧೯೮೭ರಲ್ಲಿ ಸ್ಥಾಪಿಸಲಾಯಿತು.ಇದು ಬಿ.ಎಸ್.ಐ([೨])ನ ೫೭೫೦ ಸರಣಿಯ ಮಾನದಂಡಗಳ ಮೇಲೆ ಆಧಾರಿತವಾಗಿದೆ.
ಐಎಸ್ಒ ೯೦೦೦ ಸರಣಿಯ ಗುಣಮಟ್ಟ ನಿರ್ವಹಣಾ ನಿಯಮಗಳು
ಬದಲಾಯಿಸಿಐ.ಎಸ್.ಓ ೯೦೦೦ ಸರಣಿ ಎಂಟು ನಿರ್ವಹಣಾ ನಿಯಮಗಳನ್ನು ಒಳಗೊಂಡಿದೆ. ಅವೆಂದರೆ
- ಗ್ರಾಹಕ ಕೇಂದ್ರಿತ- ಸಂಸ್ಥೆಗಳು ಗ್ರಾಹಕರ ಇಂದಿನ ಮತ್ತು ಭವಿಷ್ಯದ ಅಗತ್ಯತೆಗಳನ್ನು ಮನಗಂಡು ಅವುಗಳನ್ನು ಪೂರೈಸುವತ್ತ ಗಮನಹರಿಸಬೇಕು.
- ನಾಯಕತ್ವ - ನಾಯಕರು ಸಂಸ್ಥೆಯ ಧ್ಯೇಯ ಮತ್ತು ದಿಕ್ಕುಗಳನ್ನು ನಿರ್ಧರಿಸುತ್ತಾರೆ. ಸಂಸ್ಥೆಯಲ್ಲಿ ಕೆಲಸ ಮಾಡುವವರು ಸಂಸ್ಥೆಯ ಧ್ಯೇಯಕ್ಕನುಗುಣವಾಗಿ ಕೆಲಸ ಮಾಡುವಂತಹ ಉತ್ತಮ ವಾತಾವರಣವನ್ನು ನಿರ್ಮಿಸಬೇಕಾದ್ದು ನಾಯಕರ ಕರ್ತವ್ಯ.
- ಜನರ ಭಾಗವಹಿಸುವಿಕೆ -ಸಂಸ್ಥೆಯ ಎಲ್ಲಾ ಸ್ಥರಗಳ ಜನರು ಭಾಗವಹಿಸುವಿಕೆ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ
- ಪ್ರಕ್ರಿಯೆ - ಸಂಬಂಧಪಟ್ಟ ಸಂಪನ್ಮೂಲ ಮತ್ತು ಚಟುವಟಿಕೆಗಳನ್ನು ಒಂದು ವ್ಯವಸ್ಥಿತ ಪ್ರಕ್ರಿಯೆಯಾಗಿ ನಿರ್ವಹಿಸಿದಾಗ ನಿರೀಕ್ಷಿತ ಉದ್ದೇಶವನ್ನು ಈಡೇರಿಸಲು ಸಾಧ್ಯವಾಗುತ್ತದೆ
- ನಿರ್ವಹಣಾ ವ್ಯವಸ್ಥೆ - ಪರಸ್ಪರ ಸಂಬಂಧಿತ ಚಟುವಟಿಕೆಗಳನ್ನು ಗುರುತಿಸಿ , ಅರ್ಥೈಸುವುದರಿಂದ ಉದ್ದೇಶಿತ ಧ್ಯೇಯಗಳನ್ನು ಸಾಧಿಸೋ ಸಾಮರ್ಥ್ಯವನ್ನು ಉತ್ತಮಪಡಿಸಬಹುದು.
- ನಿರಂತರ ಉನ್ನತೀಕರಣ - ಸಂಸ್ಠೆಯ ಸಾಮರ್ಥ್ಯವನ್ನು ನಿರಂತರವಾಗಿ ಉತ್ತಮಪಡಿಸಿಕೊಳ್ಳುತ್ತಾ ಸಾಗುವುದು ಸಂಸ್ಥೆಯ ಧ್ಯೇಯಗಳಲ್ಲೊಂದಾಗಿರಬೇಕು
- ವಾಸ್ತವಿಕೆ ನೆಲೆಗಟ್ಟಿನ ಮೇಲೆ ನಿರ್ಧಾರ ಕೈಗೊಳ್ಳುವಿಕೆ - ಉತ್ತಮ ನಿರ್ಧಾರಗಳು ಲಭ್ಯ ಮಾಹಿತಿಯ ವ್ಯವಸ್ಠಿತ ಅವಲೋಕನದಿಂದ ಸಾಧ್ಯವಾಗುತ್ತದೆ.
- ಪರಸ್ಪರ ಲಾಭಕರ ಮಾರಾಟಗಾರರ ಸಂಬಂಧ - ಒಂದು ಸಂಸ್ಥೆ ಮತ್ತು ಅದಕ್ಕೆ ಮೂಲವಸ್ತುಗಳನ್ನು ಸರಬರಾಜು ಮಾಡುವ ಸರಬರಾಜುದಾರದ ಸಂಬಂಧ ಪರಸ್ಪರ ಲಾಭಯುತವಾಗಿರಬೇಕು
ಐಎಸ್ಒ ೯೦೦೧ರಲ್ಲಿರುವ ಅಂಶಗಳು
ಬದಲಾಯಿಸಿ- ಪುಟ ೪ - ಮುನ್ನುಡಿ
- ಪುಟ ೫-೧೦ - ಪರಿಚಯ
- ಪುಟ ೧೧-೧೪ - ಅಗತ್ಯತೆಗಳು
- ವಿಭಾಗ ೧ - ವ್ಯಾಪ್ತಿ
- ವಿಭಾಗ ೨ - ಪ್ರಮಾಣಕ ಉಲ್ಲೇಖ(normative reference)
- ವಿಭಾಗ ೩ - ನಿಯಮಗಳು ಮತ್ತು ವ್ಯಾಖ್ಯಾನಗಳು(ಐಎಸ್ಒ ೯೦೦೦ರಲ್ಲಿಲ್ಲದ ಐಎಸ್ಒ ೯೦೦೧ರಲ್ಲಿ ಹೊಸದಾಗಿ ಸೇರ್ಪಡೆಯಾದವುಗಳು)
- ವಿಭಾಗ ೪ - ಗುಣಮಟ್ಟ ನಿರ್ವಹಣಾ ವ್ಯವಸ್ಥೆ
- ವಿಭಾಗ ೫ - ನಿರ್ವಹಣಾ ಜವಾಬ್ದಾರಿ
- ವಿಭಾಗ ೬ - ಸಂಪನ್ಮೂಲ ನಿರ್ವಹಣೆ
- ವಿಭಾಗ ೭ - ಉತ್ಪನ್ನ ಪರಿವರ್ತನೆ
- ವಿಭಾಗ ೮ - ಅಳತೆ, ವಿಶ್ಲೇಷಣೆ ಮತ್ತು ನಿರ್ವಹಣೆ
- ಪುಟ ೧೫ - ಇತರ ಮಾನದಂಡಗಳೊಂದಿಗೆ ಹೋಲಿಕೆ
- ಪುಟ ೨೩ - ಗ್ರಂಥಸೂಚಿ
ಐಎಸ್ಒ ೯೦೦೧ ಮಾನದಂಡ ಬೆಳೆದುಬಂದ ರೀತಿ
ಬದಲಾಯಿಸಿ೧೯೮೭ರ ಆವೃತ್ತಿ
ಬದಲಾಯಿಸಿಐ.ಎಸ್.ಓ ೧೯೮೭ ರ ರಚನೆ U.K ಯ BS 5750 ಮಾನದಂಡದಂತೆಯೇ ಇತ್ತು
೧೯೯೪ ರ ಆವೃತ್ತಿ
ಬದಲಾಯಿಸಿ1994ರ ಆವೃತ್ತಿಯಲ್ಲಿ ಮುಂಜಾಗೃತ ಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಯಿತು
೨೦೦೦ರ ಆವೃತ್ತಿ
ಬದಲಾಯಿಸಿ೨೦೦ರ ಆವೃತ್ತಿಯ ಮೂಲಕ ಹಿಂದಿನ ಮೂರೂ ಆವೃತ್ತಿಗಳನ್ನು ಬದಲಾಯಿಸಲಾಯಿತು.
೨೦೦೮ರ ಆವೃತ್ತಿ
ಬದಲಾಯಿಸಿಇದರಲ್ಲಿ ೨೦೦ರ ಆವೃತ್ತಿಗೆ ಕೆಲ ಬದವಾವಣೆಗಳನ್ನು ಮತ್ತು ಹೊಸ ಸೇರ್ಪಡೆಗಳನ್ನು ಜೋಡಿಸಲಾಯಿತು
೨೦೧೫ರ ಆವೃತ್ತಿ
ಬದಲಾಯಿಸಿಅತ್ಯಂತ ನವೀನ ಆವೃತ್ತಿ