ಏಳಿಗೆಯು ಸಮೃದ್ಧಿ, ವರ್ಧಿಸುವಿಕೆ, ಒಳ್ಳೆ ಯೋಗ ಅಥವಾ ಯಶಸ್ವಿ ಸಾಮಾಜಿಕ ಸ್ಥಾನಮಾನದ ಸ್ಥಿತಿ. ಏಳಿಗೆಯು ಹಲವುವೇಳೆ ಸಂಪತ್ತನ್ನು ಒಳಗೊಳ್ಳುತ್ತದೆ ಆದರೆ ಸಂತೋಷ ಹಾಗೂ ಆರೋಗ್ಯದಂತಹ ವಿವಿಧ ಪ್ರಮಾಣಗಳಲ್ಲಿ ಸಂಪತ್ತಿನಿಂದ ಸ್ವತಂತ್ರವಾಗಿರಬಹುದ ಇತರ ಅಂಶಗಳನ್ನೂ ಒಳಗೊಳ್ಳುತ್ತದೆ.

ಏಳಿಗೆಯ ಆರ್ಥಿಕ ಕಲ್ಪನೆಗಳು ಹಲವುವೇಳೆ ಆರೋಗ್ಯ, ಸುಖ, ಅಥವಾ ಏಳಿಗೆಯ ಆಧ್ಯಾತ್ಮಿಕ ಕಲ್ಪನೆಗಳೊಂದಿಗೆ ಸ್ಪರ್ಧಿಸುತ್ತವೆ ಅಥವಾ ಪರಸ್ಪರವಾಗಿ ನಕಾರಾತ್ಮಕವಾಗಿ ಕಾರ್ಯನಡೆಸುತ್ತವೆ. ಉದಾಹರಣೆಗೆ, ದೀರ್ಘ ಸಮಯದವರೆಗೆ ಕೆಲಸ ಮಾಡುವುದು ಆರ್ಥಿಕ ಏಳಿಗೆಯ ಕೆಲವು ಪರಿಮಾಣಗಳ ಹೆಚ್ಚಳಕ್ಕೆ ಕಾರಣವಾಗಬಹುದು, ಆದರೆ ಇದರ ವೆಚ್ಚವೆಂದರೆ ಅಲ್ಪಾವಧಿಯ ಕೆಲಸದ ಸಮಯದ ಆದ್ಯತೆಗಳಿಂದ ಜನರನ್ನು ದೂರ ಓಡಿಸಿಬಿಡುತ್ತದೆ.[] ಬೌದ್ಧ ಧರ್ಮದಲ್ಲಿ, ಏಳಿಗೆಯನ್ನು ಸಮಷ್ಟಿಸ್ವಾಮ್ಯವಾದ ಮತ್ತು ಆಧ್ಯಾತ್ಮಿಕತೆ ಮೇಲಿನ ಪ್ರಾಧಾನ್ಯದೊಂದಿಗೆ ಕಾಣಲಾಗುತ್ತದೆ. ಈ ದೃಷ್ಟಿಕೋನವು ಏಳಿಗೆಯ ಬಂಡವಾಳಶಾಹಿ ಕಲ್ಪನೆಗಳೊಂದಿಗೆ ವಿರೋಧಾತ್ಮಕವಾಗಿರಬಹುದು, ದುರಾಸೆಯೊಂದಿಗೆ ಅವುಗಳ ಸಂಬಂಧದ ಕಾರಣ. ಆದಾಯದಲ್ಲಿನ ಹೆಚ್ಚಳವು ಸಂತೋಷದಲ್ಲಿ ಶಾಶ್ವತ ಹೆಚ್ಚಳವಾಗಿ ಪರಿಣಮಿಸುವುದಿಲ್ಲ ಎಂದು ಸಾಮಾಜಿಕ ಸಮೀಕ್ಷೆಗಳಿಂದ ಪಡೆದ ದತ್ತವು ತೋರಿಸುತ್ತದೆ; ಸುಖಸಂಬಂಧಿ ಹೊಂದುಕೊಳ್ಳುವಿಕೆ ಮತ್ತು ಸಾಮಾಜಿಕ ಹೋಲಿಕೆ, ಹಾಗೂ ಈ ಅಂಶಗಳನ್ನು ನಿರೀಕ್ಷಿಸುವಲ್ಲಿನ ವೈಫಲ್ಯದ ಕಾರಣ, ಜನರು ಕುಟುಂಬ ಜೀವನ ಹಾಗೂ ಆರೋಗ್ಯದಂತಹ ಆರ್ಥಿಕೇತರ ಗುರಿಗಳಿಗೆ ಸಾಕಷ್ಟು ಶಕ್ತಿಯನ್ನು ನಿಯೋಜಿಸದೇ ಇರುವುದು ಇದಕ್ಕೆ ಪ್ರಸ್ತಾಪಿಸಲಾದ ಒಂದು ವಿವರಣೆಯಾಗಿದೆ.

ಆರ್ಥಿಕ ಬೆಳವಣಿಗೆಯು ಹಲವುವೇಳೆ ಆರ್ಥಿಕ ಏಳಿಗೆಗೆ ಅಗತ್ಯವೆಂದು ಕಾಣಲಾಗುತ್ತದೆ, ಮತ್ತು ನಿಜಕ್ಕೂ ಏಳಿಗೆಯ ಪರಿಮಾಣವಾಗಿ ಬಳಸಲ್ಪಡುವ ಅಂಶಗಳಲ್ಲಿ ಒಂದಾಗಿದೆ. ರಾಕಿ ಮೌಂಟನ್ ಸಂಸ್ಥೆಯು ಒಂದು ಪರ್ಯಾಯ ದೃಷ್ಟಿಕೋನವನ್ನು ಮುಂದಿಟ್ಟಿದೆ, ಏನೆಂದರೆ ಏಳಿಗೆಗೆ ಬೆಳವಣಿಗೆ ಅಗತ್ಯವಿಲ್ಲ, ಬದಲಾಗಿ ಸಮುದಾಯಗಳ ಎದುರಿಗೆ ಇರುವ ಅನೇಕ ಸಮಸ್ಯೆಗಳು ವಾಸ್ತವವಾಗಿ ಬೆಳವಣಿಗೆಯ ಪರಿಣಾಮವಾಗಿವೆ, ಮತ್ತು ಸುಸ್ಥಿರ ಅಭಿವೃದ್ಧಿಗೆ ಏಳಿಗೆಗೆ ಬೆಳವಣಿಗೆ ಅವಶ್ಯಕವಾಗಿದೆ ಎಂಬ ಕಲ್ಪನೆಯನ್ನು ತ್ಯಜಿಸುವುದು ಅಗತ್ಯವಾಗುತ್ತದೆ. ಆರ್ಥಿಕ ಬೆಳವಣಿಗೆಯು ಮಾನವ ಏಳಿಗೆಗೆ ಅಗತ್ಯವಿದೆಯೇ ಅಥವಾ ಅದಕ್ಕೆ ವಿರುದ್ಧವಾಗಿದೆಯೇ ಎಂಬ ವಾಗ್ವಾದ ಕನಿಷ್ಠಪಕ್ಷ ೧೯೮೭ರಿಂದ ಸಕ್ರಿಯವಾಗಿದೆ, ಮತ್ತು ಇದು ಎರಡು ವಿರುದ್ಧ ವಿಶ್ವದೃಷ್ಟಿಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪುಷ್ಟಿಕೊಡುತ್ತದೆ.

ಆರ್ಥಿಕ ಏಳಿಗೆ, ಆರೋಗ್ಯ ಮತ್ತು ಸುಖದಂತಹ ಏಳಿಗೆಯ ಅನೇಕ ವಿಶಿಷ್ಟ ಕಲ್ಪನೆಗಳು ಪರಸ್ಪರವಾಗಿ ಸಂಬಂಧಿಸಿವೆ ಅಥವಾ ಒಂದರೆ ಮೇಲೆ ಇನ್ನೊಂದು ಕಾರಣ ಪರಿಣಾಮಗಳನ್ನೂ ಹೊಂದಿವೆ. ಆರ್ಥಿಕ ಏಳಿಗೆ ಮತ್ತು ಆರೋಗ್ಯ ಎರಡೂ ಪರಸ್ಪರ ಸಕಾರಾತ್ಮಕ ಸಂಬಂಧ ಹೊಂದಿವೆ ಎಂಬುದು ಸುಸ್ಥಾಪಿತವಾಗಿದೆ, ಆದರೆ ಆರೋಗ್ಯವು ಎಷ್ಟರ ಮಟ್ಟಿಗೆ ಆರ್ಥಿಕ ಏಳಿಗೆ ಮೇಲೆ ಕಾರಣ ಪರಿಣಾಮ ಹೊಂದಿದೆ ಎಂಬುದು ಸ್ಪಷ್ಟವಾಗಿಲ್ಲ.

ಉಲ್ಲೇಖಗಳು

ಬದಲಾಯಿಸಿ
  1. Cowling, Keith (July 2006). "Prosperity, Depression and Modern Capitalism". Kyklos. 59 (3): 369–381. doi:10.1111/j.1467-6435.2006.00337.x. Archived from the original on 5 ಜನವರಿ 2013. Retrieved 10 February 2009.


"https://kn.wikipedia.org/w/index.php?title=ಏಳಿಗೆ&oldid=1053881" ಇಂದ ಪಡೆಯಲ್ಪಟ್ಟಿದೆ