ಪುರಾಣ ಮತ್ತು ಶಾಸ್ತ್ರಗಳಲ್ಲಿ ಇದೊಂದು ಗಣನೀಯ ಸಂಖ್ಯೆಯಾಗಿದೆ. ಜಾನಪದದಲ್ಲಿ ಇದು ಪ್ರೇರಣೆಯ ಅಂಕಿ. ಪೃಥು ಮಹಾರಾಜನು ಈ ಭೂಮಿಯನ್ನು ಏಳು ಭಾಗಗಳಾಗಿ ವಿಂಗಡಿಸಿದನಂತೆ. ಏಳು ವರ್ಷ, ಏಳು ದಿನ, ಏಳು ತಿಂಗಳು, ಏಳು ಬಣ್ಣ, ಏಳು ಸಮುದ್ರ, ಸಪ್ತ ಋಷಿಗಳು, ಸಪ್ತ ಮಾತೃಕೆಯರು, ಸಪ್ತಪದಿ, ಸಪ್ತಸ್ವರ, ಏಳುಮಲೆ, ಎಪ್ಪತ್ತೇಳು ಮಲೆ, ಏಳು ಕುಂಡಲವಾಡ, ಏಳೇಳು ಜನ್ಮ, ಏಳು ಹಳ್ಳಿ, ಏಳು ಬ್ರಾಹ್ಮಣರು, ಏಳುಮಕ್ಕಳ ತಾಯಿ, ಏಳುಜನ ಅಣ್ಣತಮ್ಮಂದಿರು, ಏಳುವನ, ಏಳುಮಲ್ಲಿಗೆ ತೂಕದ ರಾಜಕುಮಾರಿ ಹೀಗೆ ಏಳು ಎಂಬ ಸಂಖ್ಯೆ ಮಹತ್ತರವಾದುದಾಗಿದೆ.

ಜನಪದರ ದೃಷ್ಠಿಯಲ್ಲಿ ಏಳು

ಬದಲಾಯಿಸಿ

ಜನಪದರ ದೃಷ್ಠಿಯಲ್ಲಿ ಕಷ್ಟ-ಸುಖಗಳು ಬದುಕಿನ ಏಳು-ಬೀಳುಗಳಿದ್ದ ಹಾಗೆ. ಏಳು ಎಂಬ ಸಂಖ್ಯೆ ಅಪಶಕುನಕಾರಿ ಸಂಖ್ಯೆ. ಏಳೇಳು ಜನ್ಮದ ಕಷ್ಟ, ಏಳು ವನವಾಸ, ಏಳು ರಾಹುವಿನ ಸಂಖ್ಯೆ, ಏಳು ಎಂಬ ಪದವನ್ನು ಮನೆಯೊಳಗೆ ಉಚ್ಚರಿಸ ಬಾರದು. ಅದನ್ನು ಉಚ್ಚರಿಸಲೇ ಬೇಕಾಗಿ ಬಂದಾಗ "ಹೆಚ್ಚಲಿ" ಎಂಬ ಪದ ಪ್ರಯೋಗ ಮಾಡುತ್ತಾರೆ. ಇದು ಅವರ ದೃಷ್ಠಿಯಲ್ಲಿ ದ್ವೇಷದ-ದೋಷದ ಸಂಖ್ಯೆ. ಮೂರು ಮತ್ತು ಏಳನ್ನು ಒಂದುಗೂಡಿಸ ಬಾರದು. ಹಾಗೆ ಅವೆರಡನ್ನು ಒಂದುಗೂಡಿಸಿದರೆ ಸರ್ಪದೋಷ ಉಂಟಾಗುತ್ತದೆ ಎಂದು ನಂಬುತ್ತಾರೆ.

ಏಳರ ವಿಶೇಷತೆಗಳು

ಬದಲಾಯಿಸಿ
  • ೧.ಏಳು ಬಗೆಯ ಮೂಲ ವಸ್ತುಗಳು- ರಕ್ತ, ಮಾಂಸ, ರಸ, ಕೊಬ್ಬು, ಮೂಳೆ, ಮಜ್ಜೆ ಮತ್ತು ವೀರ್ಯ.
  • ೨.ಏಳು ನಾಡಿಗಳು- ಇಡಾ, ಪಿಂಗಳ, ಸುಷುಮ್ನಾ, ಮುಷಾ, ಅಲಂಬುಷಾ, ಅಸ್ತಿ ಜಿಹ್ವಾ ಮತ್ತು ಗಾಂಧಾರಿ.
  • ೩.ಏಳು ಜನ ಚಿರಂಜೀವಿಗಳು- ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ಕೃಪ, ಪರಶುರಾಮ, ವಿಭೀಷಣ.
  • ೪.ಏಳು ಜೀವನದ ಅವಸ್ಥೆಗಳು- ಅಜ್ಞಾನ, ಆವರಣ, ವಿಕ್ಷೇಪ, ಪರೋಕ್ಷಜ್ಞಾನ, ಅಪರೋಕ್ಷಜ್ಞಾನ, ಅನರ್ಥ, ನಿವೃತ್ತಿ ಮತ್ತು ಆನಂದ ಪ್ರಾಪ್ತಿ.
  • ೫.ಏಳು ಪಾತಾಳಗಳು- ಅತಳ, ವಿತಳ, ಸುತಳ, ನಿತಳ, ತಳಾತಳ, ರಸಾತಳ ಮತ್ತು ಮಹಾತಳ.
  • ೬.ಏಳು ಬಣ್ಣಗಳು- ಕಪ್ಪು, ಬಿಳಿ, ಕೆಂಪು, ಹಸಿರು, ಹಳದಿ, ನೀಲ ಮತ್ತು ನೇರಳೆ.
  • ೭.ಏಳು ವರ್ಗಗಳು- ರಾಜ, ಮಂತ್ರಿ, ರಾಜ್ಯ, ಕೋಟೆ, ಖಜಾನೆ, ಸೈನ್ಯ ಮತ್ತು ಬಂಧುಮಿತ್ರರ ಸಾಮರ್ಥ್ಯ.
  • ೮.ಏಳು ಕಾಡುಗಳು- ಅದಿತಿ, ಕಾಮ್ಯಕ, ವ್ಯಾಸ, ಫಲ್ಕೀ, ಸೂರ್ಯ, ಚಂದ್ರ ಮತ್ತು ಸೀತಾ.
  • ೯.ಏಳು ಪರ್ವತಗಳು- ಹಿಮವಂತ, ನಿಷಧ, ವಿಂಧ್ಯ, ಮಾಲ್ಯವಂತ, ಪಾರಿಯಾತ್ರ, ಗಂಧಮಾಧನ ಮತ್ತು ಹೇಮಕೂಟ.
  • ೧೦.ಏಳು ನದಿಗಳು- ಕಾವೇರಿ, ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ ಮತ್ತು ಸಿಂಧು.
  • ೧೧.ಏಳು ಸಮುದ್ರಗಳು- ಲವಣ, ಇಕ್ಷು, ಸುರಾ, ಸರ್ಪಿಸ್, ದಧಿ, ಕ್ಷೀರ ಮತ್ತು ಶುದ್ದೋದಕ.
  • ೧೨.ಏಳು ಸ್ವರಗಳು- ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ದೈವತ ಮತ್ತು ನಿಷಾದ.
  • ೧೩.ಏಳು ದ್ವೀಪಗಳು- ಜಂಬೂ, ಪ್ಲಕ್ಷ, ಪುಷ್ಕರ, ಕ್ರೌಂಚ, ಶಾಕ, ಶಾಲ್ಮಲ ಮತ್ತು ಕುಶದ್ವೀಪ.
  • ೧೪.ಏಳು ಬಗೆಯ ಗುಣಗಳು - ಧೈರ್ಯ, ಸೈರಣೆ, ಮನೋನಿಗ್ರಹ, ಶುಭ್ರತೆ, ಅನುಕಂಪ, ಮೃದುಮಾತು ಮತ್ತು ಅಹಿಂಸೆ.
  • ೧೫.ಏಳು ನಿರ್ವಹಣ ಕೆಲಸಗಳು- ಕಲಿತನ, ಚತುರತೆ, ಧೈರ್ಯ, ವ್ಯವಹಾರ ಕುಶಲತೆ, ಧೀಮಂತಿಕೆ, ಉದಾರ ಮನ ಮತ್ತು ಅಧಿಕಾರ ನಿರ್ವಹಣೆ.
  • ೧೬.ಏಳು ವಿಧದ ವಿಕಾರಗಳು- ಹಗಲಿನಚಂದ್ರ,ಪ್ರಾಯವಿಲ್ಲದಹೆಣ್ಣು,ತಾವರೆಯಿಲ್ಲದಕೊಳ,ವಿದ್ಯೆಯಿಲ್ಲದವರು,ದುರಾಸೆಯರಾಜ,ಧರ್ಮಿಷ್ಠನಾದಬಡವ ಮತ್ತು ಕ್ರೂರಸೇವಕ.
  • ೧೭.ಏಳು ದೋಷಗಳು- ಸೋಮಾರಿತನ, ದುರಹಂಕಾರ, ಅಜ್ಞಾನ, ಸ್ವೇಚ್ಚಾಚಾರ, ಗರ್ವ,ದುರಭಿಮಾನ ಮತ್ತು ಸ್ವಾರ್ಥಪರತೆ.
  • ೧೮.ಏಳು ದುರಾಚಾರಗಳು- ಶಿಕಾರಿ, ಜೂಜು, ಲಂಪಟತನ, ಕುಡಿತ, ದುಂದುವೆಚ್ಚ, ಒರಟುನುಡಿ ಮತ್ತು ಕಠೋರತನ/ಕ್ರೂರತೆ.
  • ೧೯.ಏಳು ವಿಶ್ವದ ಅದ್ಭುತಗಳು- ಚೀನಾದ ಗೋಡೆ, ತಾಜ್ಮಹಲ್, ಗೀಜಾದ ಪಿರಮಿಡ್, ಪೀಸಾದ ವಾಲುಗೋಪುರ, ನ್ಯೂಯಾರ್ಕನ ಲಿಬರ್ಟಿಪ್ರತಿಮೆ, ರೋಂನ ಬಯಲುಸಭಾಂಗಣ ಮತ್ತು ಬ್ರೆಜಿಲ್ ಡಿ ಜನೈರೊದ ಏಸುಕ್ರಿಸ್ತ ಪ್ರತಿಮೆ.

ಉಪಸಂಹಾರ

ಬದಲಾಯಿಸಿ

ಏಳು ಎಂಬ ಸಂಖ್ಯೆ ನಂಬಿದವರಿಗೆ ಒಳ್ಳೆಯದು ಆಗಿದೆ, ಕೆಟ್ಟದ್ದು ಆಗಿದೆ ಎನ್ನುತ್ತಾರೆ ಬಲ್ಲವರು. ಏಳು ದಳದ ಕಮಲ, ಏಳು ಕಂಬದ ಹಟ್ಟಿ ಮನೆ, ಏಳು ಕೊಪ್ಪರಿಗೆ, ಏಳು ಮಹಡಿ, ಏಳು ಜನ ಪತ್ನೀಯರು, ಏಳು ಎಡೆಯ ಸರ್ಪ ಹೀಗೆ ಏಳರ ಬಗ್ಗೆ ಅಪಾರ ವಿಶೇಷತೆಗಳಿವೆ. ಅಲ್ಲದೆ ಏಳನೇ ತಿಂಗಳಿನಲ್ಲಿ ಹುಟ್ಟಿದವರು ಸಮಾಜದ ನಾಯಕರಾಗುವರಂತೆ. ಸರ್ಪದೇವತೆಯಾ ದ ಆದಿಶೇಷನು ಏಳನೇ ಗರ್ಭದಲ್ಲಿ ಹುಟ್ಟಿದವನೆಂದು ಪುರಾಣಗಳು ಹೇಳಿವೆ. ಏಳನೆ ಇಸವಿ, ಏಳನೇ ತಿಂಗಳು, ಏಳುಗಂಟೆಗೆ ಹುಟ್ಟಿದವರಿಗೆ ಈ ಸಂಖ್ಯೆ ಯ ಗುಣ ಪ್ರಭಾವ ದೊಡ್ಡದು. ಕೆಲವರಿಗೆ ಏಳು ಅದೃಷ್ಟದ ಸಂಖ್ಯೆ ಯಾಗಿದೆ. ಏಳನ್ನು ಭಯವಿಲ್ಲದೆ ಪ್ರಯೋಗಿಸಿದವರು '೭'೦ ಕ್ಲಾಕ್ ಬ್ಲೇಡಿನವರು ಮಾತ್ರ. ಏಳು ಎಂಬುದು ಜಾಗೃತಿ/ಎಚ್ಚರದ ಸ್ಥಿತಿ.

ಗ್ರಂಥ ಸಹಾಯ

ಬದಲಾಯಿಸಿ
  • ಕನ್ನಡ ಜಾನಪದ ವಿಶ್ವಕೋಶ - ಸಂ-೧,ಸಂ.ಡಾ.ಚಂದ್ರಶೇಖರ ಕಂಬಾರ.