ಎಸ್ ಎಚ್ ಕಪಾಡಿಯಾ
ಎಸ್ ಎಚ್ ಕಪಾಡಿಯರವರು ೧೯೪೭, ಮುಂಬಯಿಯಲ್ಲಿ ಜನಿಸದರು.ಇವರು ಸರ್ಕಾರಿ ಕಾನೂನು ಕಾಲೇಜಿನಲ್ಲಿ ತಮ್ಮ ಪದವಿಯನ್ನು ಮುಗಿಸಿದರು. ಆ ಕಾಲೇಜು ಏಷ್ಯಾದ ಅತ್ಯಂತ ಹಳೆಯ ಕಾನೂನು ಕಾಲೇಜು.[೧]
ಎಸ್ ಎಚ್ ಕಪಾಡಿಯಾ
ಬದಲಾಯಿಸಿಕಪಾಡಿಯವರ ವೃತ್ತಿ ಜೀವನ
ಬದಲಾಯಿಸಿಕಪಾಡಿಯಅವರು ನಾಲ್ಕನೆ ತರಗತಿಯ ಉದ್ಯೋಗಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅವರು ನಂತರ ಮುಂಬಯಿನ ವಕೀಲರ ಕಚೇರಿಯಲ್ಲಿ ಕಾನೂನು ಗುಮಾಸ್ತರಾಗಿದ್ದರು. ಗಗ್ರಾತ್ ಆಂಡ್ ಕಂ, ಎಂಬ ಕಾನೂನು ಸಂಸ್ಥೆಯಲ್ಲಿ ಗುಮಾಸ್ತರಾಗಿ ಸೇರಿದರು ಮತ್ತು ನಂತರ ಅತ್ಯಂತ ಗೌರವಾನ್ವಿತ ಫೈರ್ ಬ್ಯ್ರಾಂಡ್ ಕಾರ್ಮಿಕರ ವಕೀಲರಾದ ಫೆರೋಜ್ ದಮಾನಿಯ ರವರ ಜೊತೆ ಕೆಲಸ ಮಾಡುತ್ತಿದ್ದರು. ಅವರು ನಂತರ ೧೯೭೮ರ ಸೆಪ್ಟಂಬರ್ ೧೦ರಂದು ಮುಂಬಯಿ ಹೈಕೋರ್ಟಿನಲ್ಲಿ ವಕೀಲರಾಗಿ ಸೇರಿದರು.
ಕಪಾಡಿಯರವರನ್ನು ಹೆಚ್ಚುವರಿ ನ್ಯಾಯಾಧೀಶರಾಗಿ ಅಕ್ಟೋಬರ್ ೮, ೧೯೯೧ರಂದು ಬಾಂಬೆ ಹೈಕೋರ್ಟಿನಲ್ಲಿ ನೇಮಕ ಮಾಡಲಾಯಿತು. ನಂತರ ಮಾರ್ಚ ೨೩, ೧೯೯೭ರಂದು ಅವರನ್ನು ಶಾಶ್ವತ ನ್ಯಾಯಾಧೀಶರಾಗಿ ನೇಮಕ ಗೊಂಡರು. ಆಗಸ್ಟ್ ೫, ೨೦೦೩ರಂದು ಕಪಾಡಿಯ ರವರು ಉತ್ತರಾಖಂಡದ ಹೈಕೋರ್ಟಿನಲ್ಲಿ ಮುಖ್ಯ ನ್ಯಾಯಾಧೀಶರಾದರು. ಡಿಸೆಂಬರ್ ೨೦೦೩, ೧೮ರಂದು ಅವರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡರು. ಮೇ ೨೦೧೦, ೧೨ರಂದು ಅವರನ್ನು ಭಾರತದ ಮುಖ್ಯ ನ್ಯಾಯಾಧೀಶರಾಗಿ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರವರು ಪ್ರಮಾಣವಚನ ಸ್ವೀಕರಿಸಿದರು. ಕಪಾಡಿಯರವರು ಸೆಪ್ಟಂಬರ್ ೨೯, ೨೦೧೨ರಲ್ಲಿ ತಮ್ಮ ಅಧಿಕಾರಕ್ಕೆ ರಾಜೀನಾಮೆ ನೀಡಿದರು.
ಕಪಾಡಿಯವರ ವೈಯಕ್ತಿಕ ಜೀವನ
ಬದಲಾಯಿಸಿಕಪಾಡಿಯರವರ ಪತ್ನಿ ಶೆನಾರ್ಸ್. ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಅವರ ಮಗ ಒಬ್ಬ ಚಾರ್ಟರ್ಡ ಅಕೌಂಟೆಂಟಾಗಿ ಕೆಲಸ ಮಾದುತ್ತಿದ್ದಾರೆ. ಕಪಾಡಿಯರವರು ಅರ್ಥಶಾಸ್ತ್ರ, ಸಾರ್ವಜನಿಕ ಹಣಕಾಸು, ಸೈದ್ಧಾಂತಿಕ ಭೌತಶಾಸ್ತ್ರ ಮತ್ತು ಹಿಂದೂ ಮತ್ತು ಬೌದ್ಧ ತತ್ವಗಳಿಗೆ ಆಸಕ್ತಿ ನೀಡುತ್ತಿದ್ದರು. ಅವರು ಮುಂಬಯಿಯಲ್ಲಿ ಜನವರಿ ೪, ೨೦೧೬ರ ರಂದು ನಿಧನರಾದರು.