ಎಸ್. ಶಿಶಿರಂಜನ್ (ಶಿಶಿರ)

ಎಸ್. ಶಿಶಿರಂಜನ್ (ಶಿಶಿರ) ಕಳೆದ ಇಪ್ಪತ್ತು ವರ್ಷಗಳಿಂದ ರಂಗಭೂಮಿ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಮತ್ತು ಕಳೆದ ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಾಹಿತಿಯಾಗಿ, ಸಹನಿರ್ದೇಶಕನಾಗಿ, ತಾಂತ್ರಿಕ ನಿರ್ದೇಶಕನಾಗಿ ಸೃಜನಾತ್ಮಕ ನಿರಂತರ ಚಟುವಟಿಕೆ. 2021ರಿಂದ ಮೈಸೂರಿನ ಪ್ರತಿಷ್ಟಿತ ಎನ್.ಐ.ಇ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ[]

ಎಸ್. ಶಿಶಿರಂಜನ್ (ಶಿಶಿರ)
ಕವಿ, ಸಾಹಿತಿ, ನಿರ್ದೇಶಕ, ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯ
Born05-03-1989
Educationಕನ್ನಡ ಎಂ.ಎ. (ಕ.ಮು.ವಿ.ವಿ) , ಪಿಜಿೆಡಿಎಂಸಿಜೆ (ಕ.ಮು.ವಿ.ವಿ.) ಬಿ.ಬಿ.ಎಮ್. (ಶ್ರೀ ಲಕ್ಷಿö್ಮÃಹಯಗ್ರೀವ ವಿದ್ಯಾಸಂಸ್ಥೆ), (ಮೈಸೂರು ವಿಶ್ವವಿದ್ಯಾನಿಲಯ). ಡಿ.ಎಫ್.ಡಿ. (ಏಂಓಈIಆA, ಬೆಂಗಳೂರು)
Organization‘ಸ್ವಜನ್ಯ ಕಲಾವೇದಿಕೆ’ಯ ಸಂಸ್ಥಾಪಕ ಅಧ್ಯಕ್ಷ
Known forಕವಿ, ಸಾಹಿತಿ, ನಿರ್ದೇಶಕ, ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯ
Television“ನೋಡು ಬಾ ನಮ್ಮೂರ” ಕಾರ್ಯಕ್ರಮ ಮುಖೇನ ಸಾಹಿತಿಯಾಗಿ ಕಿರುತೆರೆ ಪ್ರವೇಶ. ಹತ್ತಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ.
Parents
  • ಶಂಕರನಾರಾಯಣ (father)
  • ಲಲಿತ (mother)

ರಂಗಭೂಮಿ :

‘ಜನಮನ’ ತಂಡದ ಕಾಲೇಜು ರಂಗಶಿಬಿರ (೨೦೦೫) ದ ಮೂಲಕ ರಂಗಭೂಮಿ ಕ್ಷೇತ್ರಕ್ಕೆ ಪಾದಾರ್ಪಣೆ. ‘ಶಾಂತಿ’, ‘ರಾಜಕೀಯ’, ‘ಹೆಲ್ಮೆಟ್’, ‘ಸಿ.ಈ.ಟಿ.’ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಪ್ರಹಸನ, ಬೀದಿ ನಾಟಕಗಳ ರಚನೆ ಮತ್ತು ಪ್ರಯೋಗ.  ಹಲವು ನಾಟಕಗಳಲ್ಲಿ ಪಾತ್ರ ನಿರ್ವಹಣೆ ಮತ್ತು ನಿರ್ದೇಶನ. ‘ಧರ್ಮ’ ಮತ್ತು ‘ಇದೆಂಥಾ ದೇಶಪ್ರೇಮ ರೀ?!’   ಸಿದ್ದರಂಗಭೂಮಿ ನಾಟಕಗಳ ರಚನೆ ಮತ್ತು ನಿರ್ದೇಶನ.

ಯುವ ದಸರಾ ಸೇರಿದಂತೆ ಹಲವು ರಾಜ್ಯ ಮತ್ತು ಜಿಲ್ಲಾ ಮಟ್ಟದ ವೇದಿಕೆಗಳಲ್ಲಿ ಪ್ರತಿಭಾ ಪ್ರದರ್ಶನ.

ಸಾಹಿತ್ಯ ಕ್ಷೇತ್ರ :

ಸಂವೇದನೆ (ಕವನ ಸಂಕಲನ), ಇದೆಂಥಾ ದೇಶಪ್ರೇಮ ರೀ?! (ನಾಟಕ), ಅವ್ವ (ಹನಿಗವಿತೆಗಳು), ಲಂಕೇಶನ ತಲೆಗಳು (ಖಂಡಕಾವ್ಯ), ಋಣಸಂದಾಯವಾಗಲಿ ಒಂದಿಷ್ಟು (ಕವನ ಸಂಕಲನ) ಹಾಗೂ ನವಭಾರತ ಜನನಿಯ ತನುಜಾತೆ (ಕವನ ಸಂಕಲನ) ಕೃತಿಗಳು ಪ್ರಕಟಗೊಂಡಿವೆ ಹಾಗೂ ‘ಮರಳಿ ಬಾ ಮನಸೇ’ (ಭಾವಗೀತೆಗಳ ಧ್ವನಿಸುರಳಿ) ಲೋಕಾರ್ಪಣೆಗೊಂಡಿದೆ. ‘ಜಯ ಹೇ’ ಹಾಗೂ ‘ಏನ್ಮಾಡನೆ’ ದೃಶ್ಯಗೀತೆಗಳ ರಚನೆ ಮತ್ತು ನಿರ್ಮಾಣ.

ಶಿಶಿರ ಅವರ ಕವಿತೆಗಳು ತಮಿಳು ಹಾಗೂ ತೆಲುಗು ಭಾಷೆಗಳಿಗೆ ಭಾಷಾಂತರಗೊಂಡಿವೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ದಸರಾ ಕವಿಗೋಷ್ಠಿ ಕವಿಗೋಷ್ಠಿಗಳಲ್ಲಿ ಕವನವಾಚನ.

ಸಿನಿಮಾ ಮತ್ತು ಕಿರುತೆರೆ :

ವಿ. ನಾಗೇಂದ್ರಪ್ರಸಾದ್, ಕೇಸರಿ ಹರವು, ಮತ್ತು ಗಿರೀಶ್ ಕಾಸರವಳ್ಳಿಯಂತಹ ದೈತ್ಯ ಪ್ರತಿಭೆಗಳ ಬಳಿ ಸಿನಿಮಾ ನಿರ್ದೇಶನದ ಶಿಷ್ಯವೃತ್ತಿ. ‘ಐeಚಿve & ಐive’, ‘ಅhoiಛಿe is ಙouಡಿs’    ಕಿರುಚಿತ್ರಗಳ ನಿರ್ದೇಶನ ಸೇರಿದಂತೆ, ಇಪ್ಪತ್ತಕ್ಕೂ ಹೆಚ್ಚು ಕಿರು ಚಿತ್ರ ನಿರ್ಮಾಣದಲ್ಲಿ ಸೃಜನಾತ್ಮಕ ಚಟುವಟಿಕೆ “ನೋಡು ಬಾ ನಮ್ಮೂರ” ಕಾರ್ಯಕ್ರಮ ಮುಖೇನ ಸಾಹಿತಿಯಾಗಿ ಕಿರುತೆರೆ ಪ್ರವೇಶ. ಹತ್ತಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ.

ಇತರೆ :

'ಸ್ವಜನ್ಯ ಕಲಾವೇದಿಕೆ’ಯ ಸಂಸ್ಥಾಪಕ ಅಧ್ಯಕ್ಷರಾಗಿ ಕಳೆದ ಒಂದೂವರೆ ದಶಕದಿಂದ ಐವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳ ಆಯೋಜನೆ. ದೇಶಪ್ರೇಮ ಜಾಗೃತಿ ಸಮಾವೇಶ, ಕಾವ್ಯಯಾನ ಕಾರ್ಯಕ್ರಮಗಳು ಸೇರಿದಂತೆ ಹತ್ತಾರು ಸಮಾವೇಶಗಳು ನಿರ್ವಹಿಸಲಾಗಿದೆ. ಮೂವತ್ತಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ನೃತ್ಯ, ಪ್ರಹಸನ, ಮೂಕಾಭಿನಯ, ನಾಟಕ ತರಬೇತಿ ಮತ್ತು ನಿರ್ದೇಶನ.

ಪ್ರಶಸ್ತಿ / ಗೌರವಗಳು :

  • ಸಂವೇದನೆ (ಕವನ ಸಂಕಲನ) ಕೃತಿಗೆ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಕೊಡಮಾಡುವ 2012ನೇ ಸಾಲಿನ ಕೆ.ವಿ. ರತ್ನಮ್ಮ ರಾಜ್ಯದತ್ತಿ ಪ್ರಶಸ್ತಿ.
  • 2015ನೇ ಸಾಲಿನ “ಸ್ಪಂದನ ಶ್ರೀ” ಪ್ರಶಸ್ತಿ.
  • ನಾಡಿನ ಹೆಸರಾಂತ ರಂಗತoಡ ಅಪ್ರವರಂಭೆ ಯಿಂದ 2013ನೇ ಸಾಲಿನಲ್ಲಿ ರಂಗಭೂಮಿಯ ಸಾಧನೆಗಾಗಿ ರಂಗ ಪ್ರತಿಭಾ ಪುರಸ್ಕಾರ.
  • ವಿಶ್ವರಂಗಭೂಮಿ ದಿನಾಚರಣೆ – 2012 (ಮಡಿಕೇರಿ) ಉದ್ಘಾಟನಾ ಗೌರವ.
  • ‘ಶಾಂತಿ’ ಕಿರು ನಾಟಕಕ್ಕೆ ರಾಜ್ಯಮಟ್ಟದ ಕಾಲೇಜು ಕಿರುನಾಟಕ ಸ್ಪರ್ಧೆ – 2006ರ ಪ್ರಥಮ ಬಹುಮಾನ.
  • ೨೦೨೦ನೇ ಸಾಲಿನ ‘ಕನ್ನಡ ವಿಕಾಸ ರತ್ನ’ ಪ್ರಶಸ್ತಿ
  • ೨೦೨೩ನೇ ಸಾಲಿನ ‘ಯುವಚೇತನ’ ರಾಜ್ಯ ಪ್ರಶಸ್ತಿ
  • ಸೇರಿದಂತೆ ಇಪ್ಪತ್ತೊoದಕ್ಕೂ ಹೆಚ್ಚು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.
  • ಕನ್ನಡ ಕಲಾರತ್ನ’ ಪ್ರಶಸ್ತಿ - ನಗರದ ಪ್ರದರ್ಶಕ ಕಲೆಗಳ ಸಂಸ್ಥೆ ಮತ್ತು ಸಂಶೋಧನ ಕೇಂದ್ರವಾದ 'ನಾಟ್ಯ' ಎನ್ನುವ ಸಂಸ್ಥೆ ನೀಡುವ  2024ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ

ಪ್ರಕಟಿತ ಪುಸ್ತಕಗಳು :

  • ಲಂಕೇಶನ ತಲೆಗಳು(ಖಂಡಕಾವ್ಯ)
  • ಅವ್ವ (ಹನಿಗವಿತೆಗಳು)
  • ಸಂವೇದನೆ (ಕವನ ಸಂಕಲನ)
  • ಇದೆಂಥಾ ದೇಶಪ್ರೇಮ ರೀ?! (ನಾಟಕ)
  • ನವಭಾರತ ಜನನಿಯ ತನುಜಾತೆ (ಕವನ ಸಂಕಲನ)

ಉಲ್ಲೇಖಗಳು :

  • ಲಂಕೇಶನ ತಲೆಗಳು , ಅವ್ವ - [೧]
  • ಸಂವೇದನೆ(ಕವನ ಸಂಕಲನ), ಇದೆಂಥಾ ದೇಶಪ್ರೇಮ ರೀ?! (ನಾಟಕ), ಅವ್ವ(ಹನಿಗವಿತೆಗಳು), ಲಂಕೇಶನ ತಲೆಗಳು(ಖಂಡಕಾವ್ಯ). [೨]
  • *ಇದೆಂಥಾ ದೇಶಪ್ರೇಮ ರೀ???!!! (ನಾಟಕ) [೩]
  • ಯುವ ಕವಿ ಎಸ್.ಶಿಶಿರಂಜನಗೆ ‘ಕನ್ನಡ ಕಲಾರತ್ನ’ ಪ್ರಶಸ್ತಿ [೪]
  • ರಂಜನೆಯ ಸಂವೇದನೆ [೫]
  • ಸಂವೇದನೆ(ಕವನ ಸಂಕಲನ) [೬]
  • ನವಭಾರತ ಜನನಿಯ ತನುಜಾತೆ; ಗಮನ ಸೆಳೆಯುವ ಶಿಶಿರ ಅವರ ಕವಿತೆಗಳು [೭]
  • ಇದೆಂಥಾ ದೇಶಪ್ರೇಮ ರೀ? [೮]
  1. Spelling Correction