ಎಸ್. ರಘು
ಎಸ್. ರಘು (ಜನನ ೨ ಮೇ ೧೯೬೯) ಒಬ್ಬ ಭಾರತೀಯ ರಾಜಕಾರಣಿ [೧]. ಅವರು ಸಿವಿ ರಾಮನ್ ನಗರಕ್ಕೆ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದಾರೆ. ಎಸ್. ರಘು ಅವರು ಭಾರತೀಯ ಜನತಾ ಪಾರ್ಟಿಯ ಸದಸ್ಯರಾಗಿದ್ದಾರೆ [೨][೩][೪].
ಶಿಕ್ಷಣ
ಬದಲಾಯಿಸಿ೧೯೯೦ರಲ್ಲಿ ಬೆಂಗಳೂರಿನ ಆಚಾರ್ಯ ಪಟ ಶಾಲೆಯಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮುಗಿಸಿದರು. ನಂತರ ೧೯೯೫ ರಲ್ಲಿ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರ್ ಪದವಿಯನ್ನು ಪಡೆದರು [೫].
ರಾಜಕೀಯ ಜೀವನ
ಬದಲಾಯಿಸಿಎಸ್. ರಘು ಅವರು ರಾಜಕೀಯ ವೃತ್ತಿಜೀವನವನ್ನು ೧೯೯೬ ರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಯಿಂದ ಪುರಸಭೆಯ ಕಾರ್ಪೊರೇಟರ್ ಆಗಿ ಆರಂಭಿಸಿದರು. ಎಸ್.ಸಿ. / ಎಸ್.ಟಿ ವಿಭಾಗದ ಅಡಿಯಲ್ಲಿ ಮೀಸಲಾಗಿರುವ ಸಿ ವಿ ರಾಮನ್ ನಗರದಲ್ಲಿ ಅವರು ಎರಡು ಬಾರಿ ಗೆದ್ದಿದ್ದಾರೆ. ಹಿಂದೆ ಅವರು ಶಾಂತಿನಗರ ಕ್ಷೇತ್ರವನ್ನು ಪ್ರತಿನಿಧಿಸಿದರು.
ಸಮಾಜ ಸೇವೆ
ಬದಲಾಯಿಸಿಹೊಸ ಸಿ ವಿ ರಾಮನ್ ನಗರದ ಲೋಕಸಭಾ ಕ್ಷೇತ್ರದಿಂದ ಮರುಚುನಾವಣೆಗೆ ಸಂಚಾರ, ಕಸ ವಿಲೇವಾರಿ, ಕಗ್ಗದಾಸಪುರ ಸರೋವರದ ಪುನರುಜ್ಜೀವನ ಮತ್ತು ಮಧುಮೇಹಕ್ಕೆ ಆಸ್ಪತ್ರೆ ನಿರ್ಮಾಣದಂತಹ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದೆ. ಎಸ್. ರಘು ಅವರು ಕಗ್ಗದಾಸಪುರ ಸರೋವರದ ಪುನರುಜ್ಜೀವನಕ್ಕಾಗಿ ತನ್ನ ಅಭಿವೃದ್ಧಿ ನಿಧಿಯಿಂದ ೪ ಕೋಟಿ ರೂಪಾಯಿಗಳನ್ನು ನೀಡಿದರು. ರಾಜ್ಯ ವಿಧಾನಸಭೆ ಸಚಿವಾಲಯದ ಮಾಹಿತಿಯೊಂದಿಗೆ ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿಯಲ್ಲಿ ಎಂಎಲ್ಎ ಎಸ್. ರಘು ನಾಲ್ಕು ವರ್ಷಗಳಲ್ಲಿ ಕೇವಲ ೭೦ ದಿನಗಳ ಕಾಲ ವಿಧಾನಸಭೆಗೆ ಹಾಜರಾಗಿದ್ದರು ಎಂದು ಹೇಳಲಾಗಿದೆ. ಕಗ್ಗದಾಸಪುರ ಸರೋವರದ ಮೇಲೆ ೩೦ ಅಡಿ ಕಾಲುದಾರಿಯ ನಿರ್ಮಾಣವನ್ನು ಪ್ರತಿಭಟಿಸುತ್ತಿರುವ ನಿವಾಸಿಗಳು ಸಿ ವಿ ರಾಮನ್ ನಗರ ಕ್ಷೇತ್ರದ ಎಂಎಲ್ಎಗೆ ದೂರು ನೀಡಿದರು. ಆದರೆ ಎಸ್. ರಘು ಅವರು ಕರೆಗಳನ್ನು ತೆಗೆದುಕೊಳ್ಳಲು ವಿಫಲರಾಗಿ ಅವರನ್ನು ನಿರಾಶೆಗೊಳಿಸಿದರು.
ಉಲ್ಲೇಖಗಳು
ಬದಲಾಯಿಸಿ- ↑ https://en.wikipedia.org/wiki/S._Raghu#cite_note-Oneindia_1970-1
- ↑ https://www.thenewsminute.com/karnataka/bengaluru-bjp-mla-raghu-allegedly-runs-vaccination-camp-diverting-govt-stocks-149862
- ↑ https://www.deccanherald.com/india/karnataka/bengaluru/bjp-mla-to-head-house-panel-on-bill-aimed-at-restructuring-civic-body-877368.html
- ↑ https://www.deccanherald.com/india/karnataka/bengaluru/mayor-take-bjps-hat-trick-hopeful-667756.html
- ↑ https://www.oneindia.com/politicians/s-raghu-72307.html