ಎಸ್. ಎಂ. ಶ್ರೀನಾಗೇಶ್
(ಎಸ್. ಎಂ ಶ್ರೀನಾಗೇಶ್ ಇಂದ ಪುನರ್ನಿರ್ದೇಶಿತ)
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಜನರಲ್ ಸತ್ಯವಂತ ಮಲ್ಲಣ್ಣ ಶ್ರೀನಾಗೇಶ್ (೧೧ ಮೇ ೧೯೦೩ - ೧೯೭೭ ಡಿಸೆಂಬರ್ ೨೭), ಸ್ವತಂತ್ರ ಭಾರತದ ಮೂರನೆಯ ಸೇನಾ ಮುಖ್ಯಸ್ಥರಾಗಿ ೭ ಮೇ ೧೯೫೭ ರಿಂದ ೧೪ ಮೇ ೧೯೫೫ರ ವರೆಗೆ ಕಾರ್ಯ ನಿರ್ವಹಿಸಿದರು. ನಿವ್ರುತ್ತಿಯ ನಂತರ ಅಸ್ಸಾಂ, ಆಂಧ್ರ ಪ್ರದೇಶ ಮತ್ತು ಮೈಸೂರು ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.
ಹೈದರಾಬಾದ್ ನಿಝಾಮರ ವೈದ್ಯರಾದ ಮಲ್ಲಣ್ಣ ಶ್ರೀನಾಗೇಶ್ ರ ಮಗನಾಗಿ ಜನಿಸಿದ ೧೧ ಮೇ ೧೯೦೩ರಂದು ಕೊಲ್ಹಾಪುರದಲ್ಲಿ ಜನಿಸಿದ ಸತ್ಯವಂತರು, ಮಹಾರಾಷ್ಟ್ರ, ಕೇಂಬ್ರಿಜ್ ಮುಂತಾದೆಡೆ ಓದಿ, ಡೆಹ್ರಾಡೂನ್ ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಮತ್ತು ಇಂಗ್ಲೆಂಡ್ ನ ಸ್ಯಾಂಡ್ ಹರ್ಸ್ಟ್ ನಲ್ಲಿ ಸೇನಾ ತರಬೇತಿ ಪಡೆದರು. ೨ ಮಹಾಯುದ್ಧದಲ್ಲಿ ಜಪಾನ್ ಮತ್ತು ಬರ್ಮಾದಲ್ಲಿ ಹೋರಾಡಿದ ಸತ್ಯವಂತರು ೧೯೪೭ರ ಭಾರತ-ಪಾಕಿಸ್ತಾನ್ ಯುದ್ಧದಲ್ಲಿ ಕಾಶ್ಮೀರದಲ್ಲಿ ಪಾಕ್ ನೊಡನೆ ಸೆಣಸಾಡಿದರು. ೧೯೫೫ರಲ್ಲಿ ಸೇನೆಯ ಮುಖ್ಯಸ್ಥರಾಗಿ ನೇಮಕಗೊಂಡು ೧೯೫೭ರವರೆಗೆ ಸೇವೆ ಸಲ್ಲಿಸಿದರು.
- ಅಸ್ಸಾಂನ ರಾಜ್ಯಪಾಲರಾಗಿ ೧೯೫೯-೬೦ ಮತ್ತು ೧೯೬೧-೬೨ ವರೆಗೆ,
- ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ೧೯೬೨-೬೪ರವರೆಗೆ ಮತ್ತು
- ಮೈಸೂರು ರಾಜ್ಯಪಾಲರಾಗಿ ೧೯೬೪-೬೫ವರೆಗೆ ಕಾರ್ಯ ನಿರ್ವಹಿಸಿದರು.