ಎಸ್. ಅರುಂಧತಿ
ಸ್ವಾತಂತ್ರ್ಯಯೋಧರಾಗಿದ್ದು, ನಂತರ ಮುಂಬಯಿ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ ಶ್ರೀ ಮಂಜುನಾಥ ಕರ್ಕಿಯವರ ಮೊಮ್ಮಗಳಾದ ಶ್ರೀಮತಿ ಅರುಂಧತಿಯವರು ಹೊನ್ನಾವರ ಪಟ್ಟಣದಲ್ಲಿ ಜನಿಸಿದರು. ಇವರ ಜನ್ಮದಿನಾಂಕ ೨೯ ಜೂನ್ ೧೯೫೬. ಇವರ ತಾಯಿ ಸರೋಜಿನಿ ; ತಂದೆ ಸದಾಶಿವ ಭಟ್ಟ. ಸದಾಶಿವ ಭಟ್ಟರು ಮೈಸೂರು ಆಡಳಿತ ಸೇವೆಯಲ್ಲಿ ಸಹಾಯಕ ಕಮಿಶನರ ಎಂದು ಸೇವೆ ಸಲ್ಲಿಸುತ್ತಿದ್ದರು.
ಅರುಂಧತಿಯವರು ಹೊನ್ನಾವರದಲ್ಲಿ ಕಲಾವಿಭಾಗದಲ್ಲಿ ಸ್ನಾತಕ ಪದವಿ ಪಡೆದ ಬಳಿಕ ಕಂದಾಯ ಇಲಾಖೆಯಲ್ಲಿ ಉದ್ಯೋಗವನ್ನು ಪಡೆದರು. ಕೆಲಕಾಲದವರೆಗೆ ಸೇವೆ ಸಲ್ಲಿಸಿದ ಬಳಿಕ ಶ್ರೀ ವ್ಯಾಸ ದೇಶಪಾಂಡೆಯವರೊಡನೆ ಇವರ ವಿವಾಹವಾಯಿತು.
ಸಾಹಿತ್ಯ
ಬದಲಾಯಿಸಿಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಸಾಹಿತ್ಯರಚನೆಯನ್ನು ಪ್ರಾರಂಭಿಸಿದ ಅರುಂಧತಿಯವರ ಅನೇಕ ಕತೆ, ಮಿನಿಕತೆ, ಕವನ ಇವೆಲ್ಲ ಕರ್ಮವೀರ, ಸಂಯುಕ್ತ ಕರ್ನಾಟಕ, ಲಂಕೇಶ ಪತ್ರಿಕೆ ಹಾಗೂ ಹೊನ್ನಾವರದ ನಾಗರಿಕ, ಲೋಕಧ್ವನಿ, ಕರಾವಳಿ ಮುಂಜಾವು ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕವನ ಸಂಕಲನ
ಬದಲಾಯಿಸಿ- ಉಳಿದ ತಂತು (ರಾಘವೇಂದ್ರ ಪ್ರಕಾಶನ, ಅಂಕೋಲಾ: ೨೦೦೬)
- ಹರಿಯುತ್ತಿರಲಿ ನದಿ (ರಾಘವೇಂದ್ರ ಪ್ರಕಾಶನ, ಅಂಕೋಲಾ: ೨೦೦೭)
ಮಕ್ಕಳ ನಾಟಕ
ಬದಲಾಯಿಸಿ- ಚಿಂವ್ ಚಿಂವ್ ಚಿಟ್ಟಾಣಿ (ರಾಘವೇಂದ್ರ ಪ್ರಕಾಶನ, ಅಂಕೋಲಾ: ೨೦೦೮)
ಕೌಟುಂಬಿಕ
ಬದಲಾಯಿಸಿಶ್ರೀಮತಿ ಅರುಂಧತಿ ಹಾಗೂ ಶ್ರೀ ವ್ಯಾಸ ದೇಶಪಾಂಡೆ ಇವರಿಗೆ ಒಬ್ಬಳೇ ಮಗಳು: ಶ್ರೀದೇವಿ. ದೇಶಪಾಂಡೆ ದಂಪತಿಗಳು ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ.