ಎಸ್.ನರೇಂದ್ರಕುಮಾರ್
ಡಾ.ಎಸ್.ನರೇಂದ್ರಕುಮಾರ್ ಕವಿ, ವಿಚಾರ ಸಾಹಿತಿ. ಸಾಹಿತ್ಯ ವಿಮರ್ಶೆ, ದಲಿತ ಚಳುವಳಿ ಹಾಗೂ ಸಾಂಸ್ಕೃತಿಕ ಅಧ್ಯಯನ, ಅಂಬೇಡ್ಕರ್ ಅಧ್ಯಯನ ಮತ್ತು ಬರಹದಲ್ಲಿ ತೊಡಗಿಸಿಕೊಳ್ಳುವುದು ಅವರ ಆಸಕ್ತಿಯ ವಿಷಯಗಳು.
ಜನನ, ಜೀವನ
ಬದಲಾಯಿಸಿಎಸ್.ನರೇಂದ್ರಕುಮಾರ್ ಹುಟ್ಟಿದ್ದು ಮಲ್ಲಿಗಹಳ್ಳಿ, ಯಳಂದೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆಯಲ್ಲಿ ೨೨-೧೨-೧೯೭೩ ರಂದು. ತಂದೆ ಶ್ರೀನಿವಾಸಮೂರ್ತಿ, ತಾಯಿ ಮಾಲತಿ. ಪ್ರಸ್ತುತ ಇವರು ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜನಾಧಿಕಾರಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಕಟಿತ ಕೃತಿಗಳು
ಬದಲಾಯಿಸಿಸಂಶೋಧನಾ ವಿಷಯ
ಬದಲಾಯಿಸಿ- "ದೇವನೂರು, ನಾಗವಾರ, ಕುಂವೀ ಅವರ ಕಥೆಗಳು ಒಂದು ಅಧ್ಯಯನ" -ಮಾರ್ಗದರ್ಶಕರು :ಪ್ರೊ.ಎಂ.ಎಸ್.ಶೇಖರ್.
ಅಂಬೇಡ್ಕರ್ ಕೃತಿಗಳು
ಬದಲಾಯಿಸಿ- ಹೊಸ ಸಮಾಜ ಮತ್ತು ಅಂಬೇಡ್ಕರ್ - ೨೦೦೨ (ಅಂಬೇಡ್ಕರ್ ಚಿಂತನೆಗಳನ್ನು ಕುರಿತ ವಿಮರ್ಶಾ ಲೇಖನಗಳು)
- ನಿಜದ ನೆಲೆ - ೨೦೦೫ (ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಲೇಖನಗಳು)
- ಬೋಧಿನೆಲದ ಮಾತು ೨೦೦೯ (ಸಾಹಿತ್ಯ, ವೈಚಾರಿಕ, ಸಾಂಸ್ಕೃತಿಕ, ಸಮಕಾಳೀನ ವಿಚಾರಗಳನ್ನು ಕುರಿತ ಲೇಖನಗಳು)
- ದಸಂಸ ಹೋರಾಟದ ಪಯಣ _ ೨೦೧೧ ( ಮೈಸೂರು ಜಿಲ್ಲೆಯ ದಸಂಸಯು ೨೦೦೫ರಿಂದ ೨೦೧೦ರವರೆಗೆ ನಡೆಸಿದ ಹೋರಾಟದ ಹೆಜ್ಜೆ ಗುರುತುಗಳು)
- ಮೂರುಬೊಗಸೆ ನೀರು ೨೦೧೨ (ಅಂಬೇಡ್ಕರ್ ಪ್ರಜ್ಞೆಯಲ್ಲಿ ದೇವನೂರು ಮಹಾದೇವ, ಕಾಳೇಗೌಡ ನಾಗವಾರ ಹಾಗೂ ಕುಂ.ವೀರಭದ್ರಪ್ಪ ನವರ ಕಥೆಗಳ ಅಧ್ಯಯನ)
ಸಂಪಾದಿತ ಕೃತಿಗಳು
ಬದಲಾಯಿಸಿ- ಅಂಬೇಡ್ಕರ್ ಅಂತರಂಗ ೨೦೦೨ (ಅಂಬೇಡ್ಕರ್ ಅವರ ಹಾಗೂ ಅಂಬೇಡ್ಕರ್ ಬಗೆಗೆ ಬಂದಿರುವ ಲೇಖನಗಳ ಸಂಗ್ರಹ)
- ಅಂಬೇಡ್ಕರ್ ಸೂಕ್ತಿಗಳು ೨೦೦೨ ( ಅಂಬೇಡ್ಕರ್ ಚಿಂತನೆಗಳ ಸಂಕ್ಷಿಪ್ರ ಸಂಗ್ರಹ)
- ಬತ್ತಲಾರದ ಬದುಕು ೨೦೦೭ ( ಕೊರಚ ಸಮುದಾಯದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಛಾಯಚಿತ್ರಗಳ ಸಂಗ್ರಹ)
- ಮರಳಿ ಮನೆಗೆ ೨೦೦೬ (ಬುದ್ಧನ ಬಗೆಗೆ ಬಂದಿರುವ ಲೇಖನಗಳು ಕವನಗಳು ಹಾಗೂ ಬೌದ್ಧ ಭಿಕ್ಕುಗಳು ಮತ್ತು ಉಪಾಸಕರನ್ನು ಸಂದರ್ಶಿಸಿದ ಬರಹಗಳ ಸಂಗ್ರಹ)
ಸಹ ಸಂಪಾದಿತ ಕೃತಿಗಳು
ಬದಲಾಯಿಸಿ- ನೋವು ಹೆತ್ತ ಪ್ರೀತಿ ೨೦೦೩ ( ಅರವಿಂದ ಮಾಲಗತ್ತಿ ಅವರ ಆತ್ಮಕಥೆ 'ಗೌರ್ಮೆಂಟ್ ಬ್ರಾಹ್ಮಣ' ಕುರಿತ ಬರಹಗಳ ಸಂಗ್ರಹ)
- ಅಭಿಮೂಖಿ ೨೦೦೫ (ಅಂಬೇಡ್ಕರ್ ಅವರ ತತ್ವ್ತ ಹಾಗೂ ಚಿಂತನೆಗಳನ್ನು ಅಂತರ್ಗತವಾಗಿಸಿಕೊಂಡ ಲೇಖನಗಳ ಸಂಗ್ರಹ)
- ಅರಿವಿನ ಕುರುಹು ೨೦೦೬ (೨೦೦೧-೦೨ನೇ ಸಾಲಿನಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮಂಡಿಸಿದ ಪ್ರಬಂಧಗಳ ಸಂಕಲನ)
- ಬಹುಶ್ರುತತೆ ೨೦೧೧ (ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮಂಡಿಸಲಾದ ಪ್ರಬಂಧಗಳು ಹಾಗೂ ವಿಶೇಷ ಉಪನ್ಯಾಸಗಳ ಸಂಗ್ರಹ)
- ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ ೨೦೧೨ ( ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಪ್ರಜಾವಾಣಿ ಪ್ರಕಟಿಸಿದ ದಲಿತಪ್ರಜ್ಞೆಯ ವಿಶೇಷ ಲೇಖನಗಳ ಸಂಗ್ರಹ)
ಕಿರು ರೋಪಕ
ಬದಲಾಯಿಸಿ- ಬುದ್ಧನ ಪ್ರೇಮಯಾತ್ರೆ
ಜೀವನ ಚರಿತ್ರೆ
ಬದಲಾಯಿಸಿ- ಮಹಾಚೇತನ (ಡಾ.ಬಿ.ಆರ್.ಅಂಬೇಡ್ಕರ್ ಕುರಿತದ್ದು) ೨೦೦೫
ನವಸಾಕ್ಷರರಿಗಾಗಿ ಬರೆದ ಬರಹಗಳು
ಬದಲಾಯಿಸಿ- ಯಾರಿಗೂ ಯಾರಿಲ್ಲ (ಕಿರುಕಥೆ) ೨೦೦೫
- ವಿಚಾರವಾದಿ ಡಾ.ಕೋವೂರ್ (ವ್ಯಕ್ತಿಚಿತ್ರ) ೨೦೦೬)
- ಗೌತಮಬುದ್ಧ ಹೇಳಿದ ಕಥೆಗಳು ೨೦೦೮-೦೯
ನಿರ್ವಹಿಸಿರುವ/ನಿರ್ವಹಿಸುತ್ತಿರುವ ಜವಾಬ್ದಾರಿಗಳು
ಬದಲಾಯಿಸಿ- ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ವೇದಿಕೆಯ ಪ್ರಧಾನ ಸಂಚಾಲಕ -೨೦೦೧-೨೦೦೩
- ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಕೇಂದ್ರದಲ್ಲಿ ಅಂಬೇಡ್ಕರ್ ಅಧ್ಯಯನ ಮಂಡಳಿ ಅಧ್ಯಕ್ಷ - ೨೦೧೦-೨೦೧೨
- ಅಂಬೇಡ್ಕರ್ ಅಧ್ಯಯನ ಪರೀಕ್ಷಾ ಮಂಡಳಿ ಅಧ್ಯಕ್ಷ - ೨೦೧೪
- ಸಕಾಲ ಮಾಸ ಪತ್ರಿಕೆಯ ಸಲಹಾ ಮಂಡಳಿ ಸದಸ್ಯ - ೨೦೦೭
- ಅಂಬೇಡ್ಕರ್ ಕಾರವಾನ್ ದ್ವಿಭಾಷಾ ಮಾಸ ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯ - ೨೦೧೪
- ಪ್ರಸ್ತುತ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜನಾಧಿಕಾರಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿ, ಗೌರವ ಮತ್ತು ಪುರಸ್ಕಾರ
ಬದಲಾಯಿಸಿ- 'ಬೋಧಿ ನೆಲದ ಮಾತು' ಕೃತಿಗೆ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕ (ರಿ) ಗದಗ ಇವರಿಂದ ೨೦೦೯ನೇ ಸಾಲಿನ ದಲಿತ ಸಾಹಿತ್ಯ ಸಂಕೀರ್ಣ ಪ್ರಕಾರದಲ್ಲಿ ಪುಸ್ತಕ ಪ್ರಶಸ್ತಿ.
- ಚಾಮರಾಜ ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ಸಮಗ್ರ ಸಾಹಿತ್ಯ ಸೇವೆಯನ್ನು ಗುರ್ತಿಸಿ ೨೦೧೩ ಮಾರ್ಚ್ ೧೬-೧೭ರಂದು ಅಭಿನಂದಿಸಲಾಗಿದೆ.
ವಿಶೇಷತೆಗಳು
ಬದಲಾಯಿಸಿ- ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಕೇಂದ್ರದ ಆವರಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಹಕಾರದೊಂದಿಗೆ "ಶಿಲೆಗಳಲ್ಲಿ ಮಾನವೀಯತೆ ಮತ್ತು ಸಮಾನತೆ ಪರಿಕಲ್ಪನೆ"ಯ ಬೋಧಿಶಿಲ್ಪವನ ಸ್ಥಾಪನೆ -೨೦೧೪
ಉಲ್ಲೇಖಗಳು
ಬದಲಾಯಿಸಿಬಾಹ್ಯಕೊಂಡಿಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2016-03-06. Retrieved 2015-06-21.
- ↑ "ಆರ್ಕೈವ್ ನಕಲು". Archived from the original on 2016-03-06. Retrieved 2015-06-21.
- ↑ ಶುಕ್ರವಾರದ ಕರ್ನಾಟಕದ ಜಿಲ್ಲಾ ಸುದ್ದಿಗಳ ಸಂಗ್ರಹ Read more at: http://kannada.oneindia.com/news/karnataka/karnataka-district-news-quick-look-for-friday-june-19-094646.html
- ↑ http://kannada.oneindia.com/news/karnataka/karnataka-district-news-quick-look-for-friday-june-19-094646.html
- ↑ ಉರಿವ ಪದಗಳ ಸ್ಮರಿಸಿದ ಕ್ಷಣಗಳು
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2015-06-21.
- ↑ ಗೌಡಾ ಬೇಡೆಂದ ಮಹಾನ್ ವ್ಯಕ್ತಿ ದೇವನೂರ
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2015-06-21.