ಡಾ.ಎಸ್.ಎನ್.ಹೆಗಡೆ ಅವರ ಪರಿಚಯ

ಬದಲಾಯಿಸಿ

ಡಾ.ಎಸ್.ಎನ್.ಹೆಗಡೆ[] ಅವರು ಹುಟ್ಟಿದ್ದು ೦೯-೦೧-೧೯೫೦ರಲ್ಲಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೋಕಿನ ಗುಡ್ಡೇಕಣ ಗ್ರಾಮದಲ್ಲಿ. ತಂದೆ ನಾರಾಯಣ ಹೆಗಡೆ, ತಾಯಿ ಗಣಪಮ್ಮ. ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಬಿ.ಎಸ್ಸಿ, ಎಂ.ಎಸ್ಸಿ ಮತ್ತು ಪಿಎಚ್.ಡಿ ಪದವಿ ಪಡೆದು ಅಲ್ಲಿಯೇ ಸ್ನಾತಕೋತ್ತರ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿ, ಜನವರಿ ೩೧, ೨೦೧೨ರಂದು ನಿವೃತ್ತರಾಗಿ, ಪ್ರಸ್ತುತ ೨೦೧೩-೧೪ನೇ ಸಾಲಿನಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಪರೀಕ್ಷಾ ನಿಯಂತ್ರಣ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜೀವನ/ಸಾಧನೆ

ಬದಲಾಯಿಸಿ

ಡಾ.ಎಸ್.ಎನ್.ಹೆಗಡೆ ಅವರು ಕಳೆದ ೩೦ ವರ್ಷಗಳಿಂದ ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ವಿಜ್ಞಾನವನ್ನು ಜನಪ್ರಿಯ ಗೊಳಿಸುವಲ್ಲಿ ಇವರ ಕೊಡುಗೆ ಅಪಾರ. ಮೂವತ್ತೆರಡು ವರ್ಷಗಳಿಗಿಂತ ಹೆಚ್ಚಿನ ಬೋಧನಾನುಭವ ಹಾಗೂ ಮೂವತ್ತೇಳು ವರ್ಷಗಳಿಗಿಂತ ಅಧಿಕ ಸಂಶೋಧನ[] ಅನುಭವ ಇವರಿಗಿದೆ. ಹದಿನೈದು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ.[] ಪ್ರಾಣಿಗಳ ವರ್ತನೆಗೆ ಸಂಬಂಧಿಸಿದಂತೆ ಇವರು ಪ್ರತಿಪಾದಿಸಿದ ಬಿಗ್ಗರ್ ಈಸ್ ಬೆಟರ್ ಎಂಬ ನಿಯಮವು ಅಂತರರಾಷ್ಟ್ರೀಯ ಮನ್ನಣೆ ಪಡೆದಿದೆ.

ಪ್ರಕಟಿತ ಸಾಹಿತ್ಯ

ಬದಲಾಯಿಸಿ

ಮೈಸೂರು ವಿಶ್ವ ವಿದ್ಯಾನಿಲಯ ಹೊರತಂದ ಕನ್ನಡ ವಿಷಯ ವಿಶ್ವಕೋಶ, ಪ್ರಾಣಿ ವಿಜ್ಞಾನದಲ್ಲಿ ಇದುವರೆಗೆ ಇಪ್ಪತ್ತು ಜನಪ್ರಿಯ ವಿಜ್ಞಾನದ ಕೃತಿಗಳನ್ನು ರಚಿಸಿದ್ದಾರೆ. ಮೈಸೂರು ವಿಶ್ವ ವಿದ್ಯಾನಿಲಯದ ವಿಜ್ಞಾನ ಕರ್ಣಾಟಕದ ಸಂಪಾದಕರಾಗಿ, ಕನ್ನಡ ವಿಶ್ವಕೋಶದ ೧೩ ಮತ್ತು ೧೪ನೇ ಸಂಪುಟಗಳ ಗೌರವ ಸಮಾಲೋಚಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ೧೨೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

ಪ್ರಕಟಿತ ಕೃತಿಗಳು

ಬದಲಾಯಿಸಿ
ಕ್ರಮ ಸಂಖ್ಯೆ ಕೃತಿಯ ಹೆಸರು ವರ್ಷ ಪ್ರಕಾಶನ ಊರು
ವಂಶದಿಂದ ವಂಶಕ್ಕೆ ೧೯೯೮ ಮಾನವ ಸಂಪನ್ಮೂಲ ಕೇಂದ್ರ ಮೈಸೂರು
ಹಾವುಗಳು-ಜೀವನ ಕ್ರಮ ಮತ್ತು ಉಪಯೋಗ ೧೯೯೯ ವಿಜಯಲಕ್ಷ್ಮೀ ಪ್ರಕಾಶನ ಮೈಸೂರು
ಜೀವಿಗಳ ವರ್ತನೆ ೨೦೦೦ ಮಹರ್ಷಿ ಪ್ರಕಾಶನ ಮೈಸೂರು
ಅನುವಂಶೀಯತೆಯ ಅಧ್ಯಯನ ಒಂದು ಶತಮಾನ ೨೦೦೦ ವಿಜಯಲಕ್ಷ್ಮೀ ಪ್ರಕಾಶನ ಮೈಸೂರು
ಜೈವಿಕ ತಂತ್ರಜ್ಞಾನ ೨೦೦೦ ವಿಜಯಲಕ್ಷ್ಮೀ ಪ್ರಕಾಶನ ಮೈಸೂರು
ನಿರ್ಲಿಂಗಿ, ಏಕಲಿಂಗಿ ಹಾಗೂ ದ್ವಿಲಿಂಗಿಗಳು ೨೦೦೧ (ಎರಡನೇ ಮುದ್ರಣ)-ಮಹರ್ಷಿ ಪ್ರಕಾಶನ ಮೈಸೂರು
ಜೀವವಿಜ್ಞಾನದ ಕೆಲವು ಅನ್ವೇಷಣೆಗಳು ೨೦೦೨ ವಿಜಯಲಕ್ಷ್ಮೀ ಪ್ರಕಾಶನ ಮೈಸೂರು
ಕಡಲಕಿನಾರೆಯ ಜೀವ ವೈವಿಧ್ಯ ೨೦೦೨ ವಿಜಯಲಕ್ಷ್ಮೀ ಪ್ರಕಾಶನ ಮೈಸೂರು
ಜೀವ ಪ್ರಪಂಚದ ಕೆಲವು ವಿಸ್ಮಯಗಳು ೨೦೦೨ ಚೇತನ ಪುಸ್ತಕಾಲಯ ಮೈಸೂರು
೧೦ ತದ್ರೂಪಿಗಳು ೨೦೦೨ ನಾಗಾರ್ಜುನ ಎಂಟರ್ ಪ್ರೈಸಸ್ ದಾವಣಗೆರೆ
೧೧ ಕೀಟಗಳಲ್ಲಿ ಸಮಾಜ ಜೀವನ ೨೦೦೨ ಮಹರ್ಷಿ ಪ್ರಕಾಶನ ಮೈಸೂರು
೧೨ ನಾಗರಹಾವೇ, ಹಾವೂಳು ಹೂವೇ ೨೦೦೪ ದಾಮಿನಿ ಸಾಹಿತ್ಯ ಪ್ರಕಾಶನ ಬೆಂಗಳೂರು
೧೩ ವಿನಾಶದ ಹಾದಿಯಲ್ಲಿರುವ ಸರೀಸೃಪ-ಮೊಸಳೆ ೨೦೦೫ ವಿಜಯಲಕ್ಷ್ಮೀ ಪ್ರಕಾಶನ ಮೈಸೂರು
೧೪ ಸರೀಸೃಪ ಪ್ರಪಂಚ ೨೦೦೫ ತಾರಾ ಪ್ರಿಂಟಿಂಗ್ ಅಂಡ್ ಪಬ್ಲಿಕೇಷರ್ಸ್ ಮೈಸೂರು
೧೫ ಪಕ್ಷಿಗಳ ಜೀವನ ೨೦೦೭ ಮಹಿಮ ಪ್ರಕಾಶನ ಮೈಸೂರು
೧೬ ಕುಲಾಂತರಿಗಳು ೨೦೦೮ ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
೧೭ ಜಿ.ಟಿ.ನಾರಾಯಣರಾವ್ ೨೦೦೯ ಚೇತನ ಬುಕ್ ಹೌಸ್ ಮೈಸೂರು
೧೮ ವಿಕಾಸವಾದದ ಪ್ರವಾದಿ, ಚಾರ್ಲ್ಸ್ ಡಾರ್ವಿನ್ ೨೦೦೯ ವಿಸ್ಮಯ ಪ್ರಕಾಶನ ಮೈಸೂರು
೧೯ ಆಧುನಿಕ ತಳಿವಿಜ್ಞಾನ ೨೦೦೯ ಪ್ರಸಾರಾಂಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು
೨೦ ಕರ್ನಾಟಕ ಪ್ರಾಣಿ ಸಂಪತ್ತು ೨೦೧೧ ಪ್ರಸಾರಾಂಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು
೨೧ ಆಲ್ಪ್ರಡ್ ರಸೆಲ್ ವ್ಯಾಲ್ಲೇಸ್ ; ಡಾರ್ವಿನ್ನನ ನೆರಳು ೨೦೧೩ ಮಹಿಮ ಪ್ರಕಾಶನ ಮೈಸೂರು
ರಾಜಾರಾಮಣ್ಣ ೨೦೧೩ ಹೇಮಂತ ಸಾಹಿತ್ಯ ಬೆಂಗಳೂರು
೨೩ ವಿಜ್ಞಾನ ದಿಗ್ಗಜರು(ವಿಜ್ಞಾನಿಗಳ ಜೀವನ ಚರಿತ್ರೆ) ೨೦೧೩ ಭಾಗೀರಥಿ ಪ್ರಕಾಶನ ಮೈಸೂರು
೨೪ ಮಂಥನ ೨೦೧೩ ಭಾಗೀರಥೀ ಪ್ರಕಾಶನ ಮೈಸೂರು

ಸಂಪಾದಿತ ಕೃತಿ

ಬದಲಾಯಿಸಿ
  • ಕನ್ನಡ ವಿಷಯ ವಿಶ್ವಕೋಶ-ಪ್ರಾಣಿ ವಿಜ್ಞಾನ - ೨೦೦೬ - ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು (೧೨೦೦ಪುಟಗಳ ಎ-೪ ಗಾತ್ರದ ಈ ಸಂಪುಟವನ್ನು ಕೇವಲ ಹತ್ತು ತಿಂಗಳಲ್ಲಿ ಸಂಪಾದಿಸಲಾಗಿದೆ)

ಪ್ರಶಸ್ತಿ/ಪುರಸ್ಕಾರ

ಬದಲಾಯಿಸಿ
  1. ಪ್ಯಾಲಸ್ಟೀನಿಯನ್ ಸ್ಟೂಡೆಂಟ್ಸ್ ಯೂನಿಯನ್ ನ ಬೆಸ್ಟ್ ಟೀಚರ್ಸ್ ಪ್ರಶಸ್ತಿ,
  2. ನ್ಯಾಷನಲ್ ಜಿಯೋಗ್ರಫಿಕ್ ಸೊಸೈಟಿಯ ಗೌರವ ಸದಸ್ಯತ್ವ,
  3. ಸೊಸೈಟಿ ಆಫ್ ಲೈಫ್ ಸೈನ್ಸ್ ನ ಫೇಲೋಶಿಫ್,
  4. ಸರ್.ಸಿ.ವಿ.ರಾಮನ್ ವಿಜ್ಞಾನ ಸಾಹಿತ್ಯ ಪ್ರಶಸ್ತಿ.
  5. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿ.
  6. ಪ್ರಾಣಿ ವಿಜ್ಞಾನದ ಕೊಡುಗೆಗಾಗಿ ಜೂವಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾದಿಂದ ಸನ್ಮಾನ

ಕೃತಿ ನೆರವು

ಬದಲಾಯಿಸಿ
  • ಆಲ್ಪ್ರಡ್ ರಸೆಲ್ ವ್ಯಾಲ್ಲೇಸ್ ;ಡಾರ್ವಿನ್ನನ ನೆರಳು - ಡಾ.ಎಸ್.ಎನ್.ಹೆಗಡೆ

ಉಲ್ಲೇಖಗಳು

ಬದಲಾಯಿಸಿ
  1. ww.kannadaprabha.com/districts/uttara-kannada/ಪ್ರತಿಧ್ವನಿಸಿದ-ಜಿಲ್ಲೆ-ವಿಭಜನೆ-ಸೊಲ್ಲು/184673.html
  2. http://www.justkannada.in/just-mysore-news-mysore-2/[ಶಾಶ್ವತವಾಗಿ ಮಡಿದ ಕೊಂಡಿ]
  3. ಸಂಖ್ಯಾಶಾಸ್ತ್ರ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ[ಶಾಶ್ವತವಾಗಿ ಮಡಿದ ಕೊಂಡಿ], ಕನ್ನಡಪ್ರಭ, ೦೩ ಜುಲೈ ೨೦೧೩