ಎಲ್ ನಿನ್ಯೊ (ಎಲ್ ನೀನೊ) ಒಂದು ವಾಯುಗುಣ ಚಕ್ರವಾಗಿದೆ. ಇದು ಹವಾಮಾನ ಮಾದರಿಗಳ ಮೇಲೆ ಜಾಗತಿಕ ಪರಿಣಾಮವನ್ನು ಹೊಂದಿರುತ್ತದೆ.

ಪಶ್ಚಿಮ ಉಷ್ಣವಲಯದ ಪೆಸಿಫ಼ಿಕ್ ಮಹಾಸಾಗರದಲ್ಲಿನ ಬಿಸಿ ನೀರು ಭೂಮಧ್ಯರೇಖೆಯ ಉದ್ದಕ್ಕೆ ದಕ್ಷಿಣ ಅಮೇರಿಕಾದ ಕರಾವಳಿಯತ್ತ ಪೂರ್ವದ ಕಡೆಗೆ ಸ್ಥಳಾಂತರವಾದಾಗ ಈ ಚಕ್ರವು ಆರಂಭವಾಗುತ್ತದೆ. ಸಾಮಾನ್ಯವಾಗಿ, ಈ ಬಿಸಿ ನೀರು ಇಂಡೊನೇಷ್ಯಾ ಹಾಗೂ ಫಿಲಿಪೀನ್ಸ್‌ನ ಹತ್ತಿರ ಒಟ್ಟು ಸೇರುತ್ತದೆ.[೧]

ಎಲ್ ನಿನ್ಯೊಗಳ ನಡುವಿನ ಅಂತರಸಂಪಾದಿಸಿ

ಎಲ್ ನಿನ್ಯೊಗಳು ಪ್ರತಿ ಮೂರರಿಂದ ಐದು ವರ್ಷಗಳಿಗೊಮ್ಮೆ ಸಂಭವಿಸುತ್ತವೆ. ಆದರೆ ಪ್ರತಿ ಎರಡು ವರ್ಷದಷ್ಟು ಅಡಿಗಡಿಗೆ ಆಗಬಹುದು ಅಥವಾ ಪ್ರತಿ ಏಳು ವರ್ಷದಷ್ಟು ಅಪರೂಪವಾಗಿ ಆಗಬಹುದು. ಸಾಮಾನ್ಯವಾಗಿ, ಎಲ್ ನಿನ್ಯೊಗಳು ಲಾ ನಿನ್ಯಾಗಳಿಗಿಂತ ಹೆಚ್ಚು ಆಗಾಗ್ಗೆ ಸಂಭವಿಸುತ್ತವೆ. ಪ್ರತಿ ಘಟನೆಯು ಸಾಮಾನ್ಯವಾಗಿ ಒಂಭತ್ತರಿಂದ ೧೨ ತಿಂಗಳವರೆಗೆ ಇರುತ್ತದೆ.

ಎಲ್ ನಿನ್ಯೊದ ಪರಿಣಾಮಗಳುಸಂಪಾದಿಸಿ

ಎಲ್ ನಿನ್ಯೊ ಇಂಡೊನೇಷ್ಯಾ ಹಾಗೂ ಈಶಾನ್ಯ ದಕ್ಷಿಣ ಅಮೇರಿಕಾ ಸೇರಿದಂತೆ ಇತರ ಪ್ರದೇಶಗಳಲ್ಲಿನ ಮಳೆ ಅಥವಾ ಹಿಮಪಾತದ ಮೇಲೆ ಪ್ರಭಾವ ಬೀರುತ್ತದೆ. ಈ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಒಣ ಹವೆ ಇರುತ್ತದೆ. ಆಸ್ಟ್ರೇಲಿಯಾ ಹಾಗೂ ಆಗ್ನೇಯ ಏಷ್ಯಾದಲ್ಲಿ ಉಷ್ಣಾಂಶ ಸರಾಸರಿಗಿಂತ ಹೆಚ್ಚು ಬಿಸಿಯಾಗಿರುತ್ತದೆ. ಎಲ್ ನಿನ್ಯೊದಿಂದ ಉಂಟಾದ ಬರ ಪರಿಸ್ಥಿತಿಯು ವ್ಯಾಪಕವಾಗಿರಬಹುದು, ಮತ್ತು ದಕ್ಷಿಣ ಆಫ಼್ರಿಕಾ, ಭಾರತ, ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್‍ನ ದ್ವೀಪಗಳು ಹಾಗೂ ಕೆನಡಾದ ಪ್ರಿಯರಿಗಳ ಮೇಲೆ ಪರಿಣಾಮ ಬೀರಬಹುದು.

ಉಲ್ಲೇಖಗಳುಸಂಪಾದಿಸಿ