ಎಲ್.ಟಿ.ಟಿ.ಇ.

(ಎಲ್ ಟಿ ಟಿ ಇ ಇಂದ ಪುನರ್ನಿರ್ದೇಶಿತ)

ಎಲ್.ಟಿ.ಟಿ.ಇ. ಅಥವಾ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಇಳಮ್ ಉತ್ತರ ಶ್ರೀ ಲಂಕಾದಲ್ಲಿ ಕಾರ್ಯಾಚರಣೆ ನಡೆಸುವ ಒಂದು ಉಗ್ರಗಾಮಿ ಸಂಘಟನೆ. ವೇಲುಪಿಳ್ಳೈ ಪ್ರಭಾಕರನ್ ಇಂದ ೧೯೭೬ರಲ್ಲಿ ಸ್ಥಾಪನೆಗೊಂಡ ಈ ಸಂಘಟನೆಯ ಮುಖ್ಯ ಗುರಿ ಲಂಕಾ ದ್ವೀಪದಲ್ಲಿ ತಮಿಳು ಜನರಿಗಾಗಿ ಒಂದು ಪ್ರತ್ಯೇಕ ದೇಶದ ಸ್ಥಾಪನೆ. ಈ ಗುರಿಗಾಗಿ ಶ್ರೀಲಂಕಾದ ಸೇನೆಯೊಂದಿಗೆ ಕದನದಲ್ಲಿ ತೊಡಗಿತ್ತು. ಅಲ್ಲದೆ ಅನೇಕ ವಿಧ್ವಂಸಕಾರಿ ಚಟುವಟಿಕೆಗಳಲ್ಲೂ ತೊಡಗಿತ್ತು. ೨೦೦೯ರಲ್ಲಿ ಈ ಅಂತಃಕಲಹವು ಸೇನೆಯ ವಿಜಯದೊಂದಿಗೆ ಮತ್ತು ಪ್ರಭಾಕರನ್ ಮೃತ್ಯುವೊಂದಿಗೆ ಕೊನೆಗೊಂಡಿತು. ಪ್ರಸಕ್ತವಾಗಿ ೩೨ ದೇಶಗಳು ಇದನ್ನು ಭಯೋತ್ಪಾದಕ ಸಂಘಟನೆಯೆಂದು ಗುರುತಿಸಿದೆ.

ಚಿತ್ರ:Tamil-tigers-flag.svg
ಸಂಘಟನೆಯ ಧ್ವಜ

'ಎಲ್ಟಿಟಿಇ' ಯ ಮೊದಲ ಹೋರಾಟದ ಅಭಿಯಾನ, ಶ್ರೀಲಂಕದ ನಿವಾಸಿ-ತಮಿಳರಿಗೆ ಸಮಾನ ಅಧಿಕಾರದ ಬೇಡಿಕೆಯಾಗಿತ್ತು, ಮತ್ತು ನ್ಯಾಯಯುತವಾಗಿತ್ತು

ಬದಲಾಯಿಸಿ

ಶ್ರೀಲಂಕದ ಉತ್ತರ ಮತ್ತು ಪೂರ್ವಭಾಗಗಳಲ್ಲಿ ನೆಲೆಸಿದ ಬಹುಸಂಖ್ಯಾತ ತಮಿಳರಿಗೆ ಸಮಾಜದ ಮುಖ್ಯವಾಹಿನಿಯ; ಎಲ್ಟಿಟಿಇ ಸಮಾನ ಅವಕಾಶಗಳನ್ನು ಕಲ್ಪಿಸುವ ತಾತ್ವಿಕ ನೆಲೆಗಟ್ಟಿನ ಹೋರಾಟ ನಡೆದಿತ್ತು. ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ, ಆರ್ಥಿಕ ಕ್ಷೇತ್ರದಲ್ಲಿ ಸಮಾನತೆಯ ಗುರಿಯನ್ನು ಹೊಂದಿದ, ಎಲ್ಟಿಟಿಇ 'ತಮಿಳು ಈಳಂ' ಎಂಬ ರಾಷ್ಟ್ರಸ್ಥಾಪನೆಯ ಆಸೆಯಿತ್ತು. ಈಅಭಿಯಾನಕ್ಕೆ ವಿಶ್ವಸಂಸ್ಥೆಯ ಮಾನ್ಯತೆಯೂ ಪ್ರಾಪ್ತವಾಗಿತ್ತು.

ಆದರೆ ಹಿಂಸಾತ್ಮಕ ಹೋರಾಟ, ಭಯೋತ್ಪಾದನೆಯ ಮಾರ್ಗ, ತಮಿಳು ಹೋರಾಟಗಾರರ ದಿಶೆಯನ್ನು ಸಡಿಲಗೊಳಿಸಿತು

ಬದಲಾಯಿಸಿ

೧೯೮೭ ರಲ್ಲಿ ಇಂತಹ ತಾತ್ವಿಕ ಗುರಿಯನ್ನು ಹೊಂದಿದ ಒಂದು ತಮಿಳು ಸಂಘಟನೆ, ಭಾರತೀಯ ಶಾಂತಿಪಾಲನಾಪಡೆಯ ಕಾರ್ಯಾಚರಣೆಯನ್ನು ವಿರೋಧಿಸಿ, ಮಹಾತ್ಮ-ಗಾಂಧಿಯವರ ಶಾಂತಿ- ಮಾರ್ಗದಲ್ಲಿ ಅಹಿಂಸಾತ್ಮಕ ಆಮರಣ ಉಪವಾಸ ಸತ್ಯಾಗ್ರಹವನ್ನು 'ಥಿಲೀಪಮ್,' ಎಂಬ ಕರ್ನಲ್ ಮಟ್ಟದ ಅಧಿಕಾರಿ ಪ್ರಾರಂಭಿಸಿದ್ದನು. ಆದರೆ ಅದು ವಿಫಲವಾಗಿ ಶ್ರೀಲಂಕಾ ಸರ್ಕಾರವನ್ನು ಆಕರ್ಷಿಸಲಿಲ್ಲ. ಹೀಗೆಯೇ ೧೯೮೭ ರ ಸೆಪ್ಟೆಂಬರ್ ೨೬ ರಂದು, ಅನ್ನವನ್ನು ತೊರೆದು ಮಾಡಿದ ಮತ್ತೊಂದು ಉಪವಾಸ ಸತ್ಯಾಗ್ರಹದ ಸಮಯದಲ್ಲಿ, ಧಿಲೀಪಮ್, ಸಹಸ್ರಾರು ಮಂದಿ ತಮಿಳರ ಎದುರಿಗೇ ಪ್ರಾಣಬಿಟ್ಟನು. ಈ ಪ್ರಕರಣ ಪರ್ಭಾಕರನ್ ಗೆ ಭಯೋತ್ಪಾದನೆಯಗುರಿಯೊಂದರಿಂದ ಮಾತ್ರ ಸಂಧಾನಗಳು ಸಾಧ್ಯವೆನ್ನುವ ನಂಬಿಕೆ ಬಲವಾಯಿತು. ಹಾಗಾಗಿ ಅವರು ನಡೆಸಿದ ಹತ್ಯಾಕಾಂಡಗಳಿಗೆ ಕೊನೆಮೊದಲಿಲ್ಲದಂತಾಯಿತು. ಸೆಂಟ್ರೆಲ್ ಬ್ಯಾಂಕ್ ಮೇಲೆ ದಾಳಿ, ಪಳ್ಳಿಯಗೊದೆಲ್ಲಾ ಹತ್ಯಾಕಾಂಡ, ದಹಿವಾಲಾ ರೈಲಿಗೆ ಬಾಂಬ್, ಭಾರತೀಯ ಶಾಂತಿಪಡೆಯ ಸೈನಿಕರಮೇಲೆ ದಾಳಿ, ಮುಂತಾದವು, ಸುಮಾರು ೨೫ ವರ್ಷಗಳಕಾಲ ಸತತವಾಗಿ ನಡೆದವು. ಸುಮಾರು ೭೦,೦೦೦ ಕ್ಕೂ ಹೆಚ್ಚು ಜನ ಜೀವಕಳೆದುಕೊಂಡರು. ಅಂತಹ ಜೀವತೆತ್ತ ಮಹನೀಯರಲ್ಲಿ ಮಾಜಿಪ್ರಧಾನಿ ರಾಜೀವ್ ಗಾಂಧಿ, ಶ್ರೀಲಂಕಾ ಅಧ್ಯಕ್ಷ, ರಣಸಿಂಘೆ, ಪ್ರೇಮದಾಸ, ವಿದೇಶಾಂಗಸಚಿವ, ಕದಿರ್ ಗಮರ್, ಮುಂತಾದವರು ಪ್ರಮುಖರು.

'ಎಲ್ಟಿಟಿ ನಾಯಕ ಪ್ರಭಾಕರನ್, ' ರವರ ಪೂರ್ವವೃತ್ತಾಂತಗಳು

ಬದಲಾಯಿಸಿ

ಸದಾ ಆತ್ಮವಿಶ್ವಾಸದ ಕಾಂತಿಯಿಂದ ಬೀಗುತ್ತಿದ್ದ ಯಾವಾಗಲೂ ಸೇನಾಕಮಾಂಡರ್ ಗಳು ಧರಿಸುವ ಉಡುಪನ್ನೇ ಬಳಸುತ್ತಿದ್ದರು. ಅಷ್ಟೇನು ಎತ್ತರವಿಲ್ಲದ ಅವರನ್ನು ಅವರ ಅನುಯಾಯಿಗಳು ಕರೆಯುತ್ತಿದ್ದದ್ದು, ಪಿರಪಾಹರನ್, ಪಿರಬಾಹರನ್, ಎಂದು ಆದರೆ, ತಮಿಳಿನಲ್ಲಿ ಅದು 'ಪಿರಪಾಕರನ್' ಎಂದು. ೧೯೫೪ ರ ವವೆಂಬರ್ ೨೬ ರಂದು, ಉತ್ತರ ಶ್ರೀಲಂಕದ ಜಾಫ್ನಾದಲ್ಲಿ ಪ್ರದೇಶದ ವೆಲ್ ವೆಟ್ಟಿತುರೈ ಎಂಬ ಗ್ರಾಮದ ಬಡ ಹಿಂದೂ ಪರಿವಾರದಲ್ಲಿ ಜನನ. ತಂದೆ, ತಿರುವೆಂಕದಂ ವೇಲು ಪಿಳ್ಳೈ, ತಾಯಿ, ವಳ್ಳಿಪುರಂ ಪಾರ್ವತಿದಂಪತಿಗಳಿಗೆ ಕಿರಿಯಮಗನಾಗಿ. ಪ್ರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾಹಿತಿಗಳು ಲಭ್ಯವಿಲ್ಲ. ೧೯೮೧ ರಲ್ಲ್ಲಿ ಅವರು ಚೆನ್ನೈ ಹತ್ತಿರದ ತಿರುಪ್ಪೂರ್ ನಲ್ಲಿ ಮತಿಮದನಿಯೆಂಬ ಹುಡುಗಿಯನ್ನು ವಿವಾಹವಾಗಿದ್ದರು. ಬಾಲಚಂದ್ರನ್, ಚಾರ್ಲ್ಸ್ ಆಂಟೊನಿ ಪುರ್ತ್ರರು, ಮತ್ತು ದ್ವಾರಕಾ ಪುತ್ರಿ. ಅವರ ಆಪ್ತ ಪ್ರಾಣಪ್ರಿಯ-ಗೆಳೆಯ ಆಂಟೋನಿಯ ಜ್ಞಾಪಕಾರ್ಥವಾಗಿ ತಮ್ಮ ಮಗನಹೆಸರನ್ನು ಅಂಟೋನಿಯೆಂದು ಇಟ್ಟಿದ್ದರು. ಆಂಟೋನಿ, ಯೂರೋಪ್ ನಲ್ಲಿ 'ವೈಮಾನಿಕ ಇಂಜಿನಿಯರಿಂಗ್ ಪದವಿ' ಪಡೆದುಬಂದಿದ್ದರು. ಎಲ್ ಟಿ ಟಿಇ ನ ವಿಮಾನಪಡೆಯ ಮುಖ್ಯಸ್ತನಾಗಿ ಕೆಲಸನಿರ್ವಹಿಸಿದ್ದರು. ಇನ್ನಿಬ್ಬರು ಮಕ್ಕಳೂ ಪ್ರಭಾಕರನ್ ಹತ್ತಿರವೇ ಕೆಲಸಮಾಡುತ್ತಿದ್ದರು. ಅವರ ಮೃತಶರೀರಗಳೂ ಪತ್ತೆಯಾಗಿವೆ.

ಪ್ರಭಾಕರ್ ರವರ ವ್ಯಕ್ತಿತ್ವ

ಬದಲಾಯಿಸಿ

'ಮುಂಗೋಪಿತನ,' ಹಾಗೂ 'ಹಟಾಮಾರಿತನಗಳು ' ಆತನ ದೌರ್ಬಲ್ಯಗಳಾಗಿದ್ದವು. ಭೌಗೋಳಿಕ ರಾಜಕೀಯತಂತ್ರಗಳಬಗ್ಗೆ ಅಷ್ಟು ಹೆಚ್ಚು ತಿಳಿದಿರಲಿಲ್ಲ. ಭಾರತವೂ ಸೇರಿದಂತೆ ವಿಶ್ವದ ೩೨ ರಾಷ್ಟ್ರಗಳು ಎಲ್ ಟಿ ಟಿ ಇ ಯನ್ನು ಭಯೋತ್ಪಾದಕ ಸಂಘಟನೆಯೆಂದು ಕರೆದರು.' ಇಂಟರ್ ಪೋಲ್,' ಭಯೋತ್ಪಾದನೆ, ಕೊಲೆ, ಸಂಘಟಿತ ಅಪರಾಧಗಳಿಗಾಗಿ ಬೇಕಾದವ್ಯಕ್ತಿಯೆಂದು ಘೋಷಿಸಿತು. ಬಂಧನ, ವಾರೆಂಟ್ ಗಳನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಹೊರಡಿಸಿದ್ದರು. ಹಾಗಾಗಿ ಅವರು ಸದಾ ತಲೆಮರೆಸಿಕೊಂಡು ಭೂ-ಗರ್ಭದಲ್ಲಿ ಅಡಗಿದ್ದರು. ಕಾಡಿನಲ್ಲೇ ಅಡಗಿದ್ದ ಅವರನ್ನೂ ಅವರ ಸಹಚರರನ್ನೂ, ಶ್ರೀಲಂಕದ ಸ-ಶಸ್ತ್ರ-ಸೆನಾಪಡೆಗಳು ೨೦೦೯ ರ ಮೇ, ೧೮ ರಂದು ಅಡ್ಡಹಾಕಿ, ಘರ್ಷಣೆಯಲ್ಲಿ ಗುಂಡಿಕ್ಕಿ ಕೊಂದರು. ಅವರ ಸಂಗಡಿಗರಲ್ಲಿ ಸಾವಿರಾರು ಜನ ತಮಿಳು ಉಗ್ರವಾದಿಗಳು ಮರಣಹೊಂದಿದರು. " ಪ್ರತ್ಯೇಕವಾದ ತಮಿಳು ರಾಷ್ಟ್ರದ ಕಲ್ಪನೆಯ ಸ್ವಪ್ನ" ವು, ನುಚ್ಚುನೂರಾಯಿತು.