ಎಲಿವೇಟರ್
ಎಲಿವೇಟರುಗಳು: ತೂಕದ ವಸ್ತುಗಳನ್ನು ಎತ್ತರಕ್ಕೂ ತಗ್ಗಿಗೂ ನಿರ್ಧರಿತ ಭೂಲಂಬ ಪಥದಲ್ಲಿ ಹೊತ್ತು ಸಾಗಿಸುವ ಯಂತ್ರಗಳು. ಎತ್ತಿಗೆ ಯಂತ್ರಗಳು (ನೋಡಿ- ಎತ್ತಿಗೆ-ಯಂತ್ರಗಳು) ಸಹ ತೂಕವಸ್ತುಗಳ ಸಾಗಾಣಿಕೆಗೋಸ್ಕರವೇ ಇರುವುವಾದರೂ ಅವು ವಸ್ತುಗಳನ್ನು ಹಿಡಿದುಕೊಂಡು ಅಥವಾ ನೇತಾಡಿಸುತ್ತ ಸ್ಥಾನಾಂತರಿಸುತ್ತವೆ. ಎಲಿವೇಟರುಗಳ ಚಲನೆ ವಿಚ್ಛಿನ್ನ-ಏಕಪ್ರಕಾರ ಚಲನೆಯಿಂದ ಗುರಿ ತಲಪುವುದಿಲ್ಲ. ಕಚೇರಿ, ಕಾರ್ಖಾನೆ, ಭೂತಳಗಣಿ, ಮಹಾಸೌಧ ಮುಂತಾದ ಎಡೆಗಳಲ್ಲಿ ಜನರನ್ನು ಒಂದು ಅಂತಸ್ತಿನಿಂದ ಇನ್ನೊಂದು ಅಂತಸ್ತಿಗೆ ಒಯ್ಯುವ ಉತ್ಥಾನ ಯಂತ್ರಗಳು (ಲಿಫ್ಟ್ ಗಳು) ಸಹ ಎಲಿವೇಟರುಗಳೇ. ಆದರೆ ಇಲ್ಲಿ ಚಲನೆ ಏಕಪ್ರಕಾರವಾಗಿದೆ. ಪ್ರ.ಶ.ಪು. 236ರಲ್ಲಿ ರೋಮನ್ ಚಕ್ರಾಧಿಪತ್ಯದಲ್ಲಿ ಎಲಿವೇಟರಿನ ಬಳಕೆ ಇದ್ದುದಕ್ಕೆ ದಾಖಲೆ ಇದೆ. ಅಂದು ಬಳಸಿದ್ದು ಮನುಷ್ಯನ ಸ್ನಾಯು ಶಕ್ತಿ; ಇಂದು ಅದರ ಹಲವಾರು ಪಟ್ಟು ಶಕ್ತಿಯನ್ನು ವಿದ್ಯುಚ್ಛಕ್ತಿ ಒದಗಿಸುತ್ತಿದೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: