ಎಲಿಜ಼ಬೆತ್ ಎಗರ್ಟನ್
ಬ್ರಿಡ್ಜ್‌ವಾಟರ್‌ನ ಕೌಂಟೆಸ್‌ರಾದ ಎಲಿಜ಼ಬೆತ್ ಎಗರ್ಟನ್[೧] ಆಂಗ್ಲಭಾಷೆಯ ಬರಹಗಾರ್ತಿ. ಇವರು ೧೬೨೬ರಲ್ಲಿ ಜನಿಸಿದರು. ಇವರ ಮುತ್ತಾತ ವಿಲಿಯಮ್ ಕ್ಯಾವೆಂಡಿಶ್[೨](ಹಾರ್ಡ್‌ವಿಕ್‌ನ ಬೆಸ್), ಅಜ್ಜ ಸಾರ್ ಚಾರ್ಲ್ಸ್ ಕ್ಯಾವೆಂಡಿಶ್, ತಂದೆ ವಿಲಿಯಮ್ ಕ್ಯಾವೆಂಡಿಶ್(ನ್ಯೂಕಾಸಲ್‌ನ ಮೊದಲನೆಯ ಡ್ಯೂಕ್), ತಾಯಿ ಎಲಿಜ಼ಬೆತ್ ಬ್ಯಾಸ್ಸೆಟ್, ಮತ್ತು ಚಿಕ್ಕಪ್ಪ ಚಾರ್ಲ್ಸ್ ಕ್ಯಾವೆಂಡಿಶ್.
ಬಾಲ್ಯ
ಬದಲಾಯಿಸಿಎಲಿಜ಼ಬೆತ್ ಎಗರ್ಟನ್‌ರವರ ಬಾಲ್ಯ ಸವಲತ್ತಿನದ್ದು. ಒಳ್ಳೆಯ ಶಿಕ್ಷಣವನ್ನು ಪಡೆದವರು. ಇವರ ತಂದೆ, ನ್ಯೂಕಾಸಲ್‌ನ ಡ್ಯೂಕ್‌ರಾದ ವಿಲಿಯಮ್ ಕ್ಯಾವೆಂಡಿಶ್‌ರವರು ಎಲಿಜ಼ಬೆತ್‌ರವರ ಸಾಹಿತ್ಯದ ಆಸಕ್ತಿಯನ್ನು ಚಿಕ್ಕಂದಿನಿಂದಲೇ ಪ್ರೋತ್ಸಾಹಿಸಿದರು. ಎಲಿಜ಼ಬೆತ್‌ರವರ ಕೃತಿಗಳ ಕೆಲವು ಹಸ್ತಪ್ರತಿಗಳು ಆಧುನಿಕ ಅವೃತ್ತಿಗಳ ಮೂಲಕ ದೊರೆಯುತ್ತವೆ. ೧೫ನೇ ವಯಸ್ಸಿನಲ್ಲಿ ಜಾನ್ ಎಗರ್ಟನ್ (ಲಾರ್ಡ್ ಬ್ರಾಕ್ಲೀ)ರವರೊಂದಿಗೆ ವಿವಾಹವಾದರು. ಎಲಿಜ಼ಬೆತ್‌ರವರ ತಾಯಿ ಎಲಿಜ಼ಬೆತ್ ಬ್ಯಾಸ್ಸೆಟ್ ೧೬೪೨ನಲ್ಲಿ ನಿಧನರಾದನಂತರ ಅವರ ತಂದೆ ಮಾರ್ಗರೆಟ್ ಕ್ಯಾವೆಂಡಿಶ್ ಎಂಬ ಖ್ಯಾತ ಬರಹಗಾರ್ತಿಯೊಬ್ಬರನ್ನು ಮದುವೆಯಾದರು.
ಜೀವನ
ಬದಲಾಯಿಸಿಆಂಗ್ಲ ಅಂತರ್ಯುದ್ಧದ ಸಮಯದಲ್ಲಿ ವಿಲಿಯಮ್ ಕ್ಯಾವೆಂಡಿಶ್‌ರವರು ತಮ್ಮ ಗಂಡು ಮಕ್ಕಳೊಂದಿಗೆ ಫ಼್ರಾನ್ಸ್‌ಗೆ ಸ್ಥಳಾಂತಿಸಿದರೆ, ಎಲಿಜ಼ಬೆತ್ ಮತ್ತು ಅವರ ಸಹೋದರಿಯರಾದ ಜೇನ್ ಮತ್ತು ಫ಼್ರಾನ್ಸೆಸ್ ೧೬೪೫ವರೆಗೆ ನೊಟ್ಟಿಂಗ್‌ಹಮ್‌ನಲ್ಲಿಯೇ ಉಳಿದುಕೊಂಡು, ನಂತರ ಎಲಿಜ಼ಬೆತ್‌ರವರ ಪತಿಯ ಮನೆಯಲ್ಲಿ ಯುದ್ಧದಿಂದ ತಕ್ಕಮಟ್ಟಿಗೆ ಸುರಕ್ಷಿತವಾಗುಳಿದುಕೊಂಡರು.
ಸಾಹಿತ್ಯ
ಬದಲಾಯಿಸಿಎಲಿಜ಼ಬೆತ್ ಎಗರ್ಟನ್‌ರವರ ಪ್ರಪ್ರಥಮ ಹಸ್ತಪ್ರತಿ ಕವಿತೆಗಳ ಮತ್ತು ನಾಟಕಗಳ ಸಂಕಲನವಾದ "ಪೋಯಮ್ಸ್, ಸಾಂಗ್ಸ್, ಎ ಪ್ಯಾಸ್ಟೋರಲ್ ಆಂಡ್ ಎ ಪ್ಲೇ, ಬಯ್ ದ ರೈಟ್ ಹಾನರೆಬಲ್ ಜೇನ್ ಕ್ಯಾವೆಂಡಿಶ್ ಆಂಡ್ ಲೇಡಿ ಎಲಿಜ಼ಬೆತ್ ಬ್ರಾಕ್ಲೀ"ಯನ್ನು ಈ ಅವಧಿಯಿಂದ ಆರಿಸಲಾಗಿದೆ. ಎಲಿಜ಼ಬೆತ್ ಎಗರ್ಟನ್‌ರವರ ಸಂಪಾದಿತ ಹಸ್ತಪ್ರತಿಗಳು ಬಹು ಅಧಿಕಾರದ ಸಮಸ್ಯೆಗಳನ್ನು ಹೊರತಂದವು. ದೃಷ್ಟಿಕೋನಗಳು ಮತ್ತು ಪ್ರಕಾರಗಳ ಪುನರ್ರಚನೆಗಳಲ್ಲಿ ಬರುವ ವ್ಯತ್ಯಾಸಗಳನ್ನು ಕುರಿತು ಒಂದು ಹಸ್ತಪ್ರತಿಯನ್ನೇ ಇವರು ಬರೆದಿದ್ದಾರೆ. ಇವರ ಕೊನೆಯ ಹಸ್ತಪ್ರತಿ ಸಂಗ್ರಹವಾದ "ಲೂಸ್ ಪೇಪರ್ಸ್"ನಲ್ಲಿ ಪ್ರಾರ್ಥನೆಗಳು, ಪ್ರಭಂದಗಳು, ತಮ್ಮ ಮಕ್ಕಳ ಅನಾರೋಗ್ಯ ಮತ್ತು ಸಾವಿಗೆ ಪ್ರತಿಕ್ರಿಯಿಸುವಂತೆ ಕೆಲವು ಪ್ರಭಂದಗಳು, ಗರ್ಭಧಾರಣೆ ಮತ್ತು ಪ್ರಸವವನ್ನು ಕುರಿತು ಕೆಲವು ಪ್ರಭಂದಗಳನ್ನು ಬರೆದಿದ್ದಾರೆ. ಇವರು ವಿವಾಹ ಮತ್ತು ವಿದವೆತನವನ್ನು ಕುರಿತು ಬರೆದ ಪ್ರಭಂದ ೧೭ನೆ ಶತಮಾನದಲ್ಲಿದ್ದ ಯೋಚನೆಗಳಿಗಿಂತ ಮುಂಚಿತವಾಗಿತ್ತು.[೩] ಎಲಿಜ಼ಬೆತ್ ಎಗರ್ಟನ್‌ರವರ ಹಸ್ತಪ್ರತಿಗಳು ಈಗಲೂ ನೊಟ್ಟಿಂಗ್‌ಹಮ್ ವಿಶ್ವವಿದ್ಯಾಲಯದ ಗ್ರಂಥಾಲಯದ ಪೋರ್ಟ್ಲಾಂಡ್ ಸಂಗ್ರಹದಲ್ಲಿ(ಪತ್ರಗಳು), ಬೋಡ್ಲಿಯನ್ ಮತ್ತು ಬೈನೆಕ್ ಗ್ರಂಥಾಲಯಗಳಲ್ಲಿ(ಕವಿತೆಗಳು ಮತ್ತು ಹಾಡುಗಳು), ಬ್ರಿಟೀಷ್ ಮತ್ತು ಹಂಟಿಂಗ್ಟನ್ ಗ್ರಂಥಾಲಯಗಳಲ್ಲಿ("ಲೂಸ್ ಪೇಪರ್ಸ್") ದೊರೆಯುತ್ತವೆ.
ಪುಸ್ತಕಗಳು
ಬದಲಾಯಿಸಿಸಬಾರ್ಡಿನೇಷನ್ ಆಂಡ್ ಔತರ್ಷಿಪ್ ಇನ್ ಆರ್ಲಿ ಮಾಡರ್ನ್ ಇಂಗ್ಲೆಂಡ್ದ ಕನ್ಸೀಲ್ಡ್ ಫ಼್ಯಾನ್ಸೀಸ್(೧೬೪೪-೪೫)[೪] ಎಂಬ ನಾಟಕವನ್ನು ಲೇಡಿ ಜೇನ್ ಛೇನ್ ಕ್ಯಾವೆಂಡಿಶ್(ಎಲಿಜ಼ಬೆತ್‌ರವರ ಅಕ್ಕ) ಮತ್ತು ಲೇಡಿ ಎಲಿಜ಼ಬೆತ್ ಬ್ರಾಕ್ಲೀ ಅವರು ಬರೆದಿದ್ದಾರೆ.
ಮರಣ
ಬದಲಾಯಿಸಿಎಲಿಜ಼ಬೆತ್ ಎಗರ್ಟನ್‌ರವರು ೩೭ನೇ ವಯಸ್ಸಿ,ನಲ್ಲಿ, ೧೪ ಜೂನ್ ೧೬೬೩ರಂದು ತಮ್ಮ ೧೦ನೇ ಮಗುವಿನ ಜನನದ ಸಮಯದಲ್ಲಿ ಪ್ರಾಣತ್ಯಜಿಸಿ ನಿಧನರಾದರು.
ಹರ್ಟ್‌ಫ಼ರ್ಡ್‌ಶೈರ್‌ನಲ್ಲಿರುವ ಲಿಟ್ಟಲ್ ಗ್ಯಾಡ್ಡೆಸ್ಡೆನ್‌ನಲ್ಲಿ ಅವರ ಸಮಾಧಿ ಮಾಡಲಾಯಿತು.