ಎರಾಸ್ಮಸ್ ಡಾರ್ವಿನ್

ಇಂಗ್ಲೆಂಡಿನ ಶರೀರವಿಜ್ಞಾನಿಯಾಗಿದ್ದ ಎರಾಸ್ಮಸ್ ಡಾರ್ವಿನ್‌ರವರು ೧೭೩೧ರ ಡಿಸೆಂಬರ್ ೧೨ರಂದು ನಾಟಿಂಗ್‌ಹ್ಯಾಮ್‌ಷೈರಿನ ಎಲ್ಸ್‌ಟನ್‌ನಲ್ಲಿ ಜನಿಸಿದರು. ವೈದ್ಯರಾಗಿ ಡಾರ್ವಿನ್‌ರವರು ಶ್ರೀಮಂತರಾದರು. ಜೊತೆಗೆ ಅವರು ಅನೇಕ ಸಂಶೋಧನೆಗಳನ್ನೂ ಮಾಡಿದ್ದಾರೆ. ಕೋಚ್‌ಗಳ ತೂಗುವಿಕೆ ಮತ್ತು ಚುಕ್ಕಾಣಿ ಯಾಂತ್ರಿಕ ವ್ಯವಸ್ಥೆಯ (suspension and steering mechanisms) ವಿನ್ಯಾಸ ಸೇರಿದಂತೆ ಅನೇಕ ಸಂಶೋಧನೆಗಳನ್ನು ಅವರ ಡೈರಿಯಲ್ಲಿ ನಮೂದಿಸಿದ್ದರು. ಅವು ಯಾವವೂ ವಾಸ್ತವ ಸ್ಥಿತಿಯನ್ನು ತಲುಪಲಿಲ್ಲ ಮತ್ತು ಯಾವ ಅವರ ವಿನ್ಯಾಸಗಳಿಗೂ ಅವರು ಪೇಟೆಂಟ್ ಗಳಿಸಲಿಲ್ಲ. ೧೭೭೯ರಲ್ಲಿ ಅವರ ಡೈರಿಯಲ್ಲಿ ಸರಳವಾದ ವಿನ್ಯಾಸದ ಹೈಡ್ರೋಜನ್-ಆಕ್ಸಿಜನ್ ರಾಕೆಟ್ ಎಂಜಿನ್ನಿನ ರೇಖಾಚಿತ್ರವನ್ನು ರಚಿಸಿದ್ದರು. ಅವರ ಅಸ್ತಿತ್ವದ ಯಾಂತ್ರಿಕ ವ್ಯವಸ್ಥೆ ಅಸ್ತಿತ್ವಕ್ಕೆ ಬರಲು ೧೦೦ವರುಷ ಹಿಡಿಯಿತು. ಅದಲ್ಲದೆ ಅವರು ಜೋಸಯ್ಯ ವೆಡ್ಗ್‌ವುಡ್‌ರವರಿಗೆ ಕ್ಷಿತಿಜೀಯ ಗಾಳಿಗಿರಣಿಯ (horizontal windmill) ವಿನ್ಯಾಸವನ್ನು ತಯಾರಿಸಿದರು. ಜೊತೆಗೆ ಅವರು ೧೭೬೬ರಲ್ಲಿ ಪಲ್ಟಿ ಹೊಡೆಯದ ಭಾರವನ್ನು ಒಯ್ಯುವ ವಾಹನ (carriage), ೧೭೯೯ರಲ್ಲಿ ಮಾತನಾಡುವ ಯಂತ್ರ (speaking machine), ಒಂದು ಕೃತಕ ಪಕ್ಷಿ, ೧೭೭೮ರಲ್ಲಿ ನಕಲಿ ಪ್ರತಿಗಳನ್ನು ತೆಗೆಯುವ ಯಂತ್ರ (copying machine), ಹವಾಗುಣವನ್ನು ಪರೀಕ್ಷಿಸುವ ಅನೇಕ ರೀತಿಯ ಯಂತ್ರಗಳು ಮುಂತಾದ ಸಾಧನಗಳು, ಉಪಕರಣಗಳ ವಿನ್ಯಾಸವನ್ನು ತಯಾರಿಸಿದ್ದರು.[] ವಿಕಾಸ ಸಿದ್ಧಾಂತಕ್ಕೆ ಚಾಲನೆ ನೀಡುವಂಥಃ ಅನೇಕ ಕವನಗಳನ್ನು ಡಾರ್ವಿನ್‌ರವರು ರಚಿಸಿದ್ದರು.’ದ ಲೊವ್ಸ್ ಆಫ್ ದ ಪ್ಲಾಂಟ್ಸ್’, ’ದ ಬಟಾನಿಕ್ ಗಾರ್ಡನ್’, ’ದ ಟೆಂಪಲ್ ಆಫ್ ನೇಚರ್’ ಮತ್ತು ’ದ ಆರಿಜಿನ್ ಆಫ್ ಸೊಸೈಟಿ’ ಎಂಬ ಕವನಗಳು ಅವರ ವಿಜ್ಞಾನ-ಕಾವ್ಯದಲ್ಲಿ ಸೇರಿವೆ. ಡಾರ್ವಿನ್‌ರವರು ೧೭೯೪ ಮತ್ತು ೧೭೯೬ರ ನಡುವೆ ’ಝೂನೋಮಿಯಾ’ (Zoonomia) ಎಂಬ ವಿಜ್ಞಾನ ಪುಸ್ತಕವನ್ನು ಬರೆದಿದ್ದರು. ಅದು ರೋಗವಿಜ್ಞಾನದ (pathology) ವ್ಯವಸ್ಥೆಯ ಬಗ್ಗೆ ಬೆಳಕು ಬೀರುತ್ತದೆ. ಮುಂದೆ ಎರಾಸ್ಮಸ್ ಡಾರ್ವಿನ್‌ರವರ ಪುಸ್ತಕಗಳನ್ನು ಓದಿದ ಅವರ ಮೊಮ್ಮಗ ಮತ್ತು ಪ್ರಸಿದ್ಧ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್‌ರವರು (೧೮೦೯-೧೮೮೨) ವಿಮರ್ಶೆಯನ್ನೂ ಬರೆದಿದ್ದಾರೆ.[] ಸ್ವೀಡ್ನನಿನ ಸಸ್ಯವಿಜ್ಞಾನಿ ಕರೋಲಸ್ ಲಿನಾಯನ್‌ರವರು ಲ್ಯಾಟಿನ್ ಭಾಷೆಯಲ್ಲಿ ಬರೆದಿದ್ದ ಕೃತಿಗಳನ್ನು ಡಾರ್ವಿನ್‌ರವರು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದರು. ಅವರ ಆ ಕೆಲಸಕ್ಕೆ ೭ವರುಷ ಹಿಡಿಯಿತು ಎನ್ನಲಾಗಿದೆ. ೧೭೮೩ ಮತ್ತು ೧೭೮೫ರ ನಡುವೆ ಪ್ರಕಟವಾದ ’ಎ ಸಿಸ್ಟಮ್ ಆಫ್ ವೆಜಿಟೆಬಲ್ಸ್’ ಮತ್ತು ೧೭೮೭ರಲ್ಲಿ ಪ್ರಕಟವಾದ ’ದ ಫ್ಯಾಮಿಲೀಸ್ ಆಫ್ ಪ್ಲಾಂಟ್ಸ್’ ಆ ಆಂಗ್ಲ ಪುಸ್ತಕಗಳಾಗಿವೆ. ಡಾರ್ವಿನ್‌ರವರು ಬರ್ಮಿಂಗ್ ಹ್ಯಾಮ್ ನಲ್ಲಿ ಸ್ಥಾಪಿಸಲಾದ ’ಲೂನಾರ್ ಸೊಸೈಟಿ’ಯ ಸಂಸ್ಥಾಪಕ ಸದಸ್ಯರಾಗಿದ್ದರು. ಮ್ಯಾಥ್ಯೂ ಬೌಲ್ಟನ್, ಜೇಮ್ಸ್ ವಾಟ್, ಜೋಸಯ್ಯ ವೆಡ್ಜ್‌ವುಡ್ ಮತ್ತು ಜೋಸೆಫ್ ಪ್ರೀಸ್ಟ್‌ಲೀ ಎಂಬ ಪ್ರಸಿದ್ಧ ವಿಜ್ಞಾನಿಗಳು ಸದಸ್ಯರಾಗಿದ್ದ ಲೂನಾರ್ ಸೊಸೈಟಿ ೧೭೬೫ರಲ್ಲಿ ಆರಂಭವಾಗಿ ೧೮೧೩ರವರೆಗೂ ಅಸ್ತಿತ್ವದಲ್ಲಿದ್ದಿತು. ಡಾರ್ವಿನ್‌ರವರು ೧೮೦೨ರ ಏಪ್ರಿಲ್ ೧೮ರಂದು ಡೆರ್ಬಿಯ ಬ್ರೆಡ್‌ಸಾಲ್‌ನಲ್ಲಿ ನಿಧನರಾದರು.

ಎರಾಸ್ಮಸ್ ಡಾರ್ವಿನ್
Born
ಎರಾಸ್ಮಸ್ ಡಾರ್ವಿನ್

೧೭೩೧ ಡಿಸೆಂಬರ್ ೧೨
ಇಂಗ್ಲೆಂಡ್
Nationalityಇಂಗ್ಲೆಂಡ್

ಉಲ್ಲೇಖಗಳು

ಬದಲಾಯಿಸಿ