ಎರಡನೆಯ ಜೂಬ
ಎರಡನೆಯ ಜೂಬ (ಜೂಬ II) : (ಕ್ರಿ.ಪೂ.ಸು. 50-ಕ್ರಿ.ಶ. 24). ಉತ್ತರ ಆಫ್ರಿಕದ ರಾಜರಲ್ಲೊಬ್ಬ ಒಂದನೆಯ ಜೂಬನ ಮಗ. ಸೀಜರ್ ಉತ್ತರ ಆಫ್ರಿಕದಲ್ಲಿ ಪಡೆದ ಜಯದ (ಕ್ರಿ.ಪೂ. 46) ಕುರುಹಾಗಿ, ಆಗ ಶಿಶುವಾಗಿದ್ದ ಜೂಬನನ್ನು ಅವನು ರೋಮಿಗೆ ಕೊಂಡೊಯ್ದ. ಇಟಲಿಯಲ್ಲಿ ಇವನಿಗೆ ಶಿಕ್ಷಣ ದೊರೆಯಿತು. ರೋಮನ್ ಚಕ್ರವರ್ತಿ ಆಗಸ್ಟಸನ ಸ್ನೇಹವೂ ಒದಗಿತು. ಕ್ರಿ.ಪೂ. 29ರಲ್ಲಿ ಈತನನ್ನು ನ್ಯುಮಿಡೀಯದ ರಾಜನನ್ನಾಗಿ ಮಾಡಲಾಯಿತು. ಅನಂತರ ಇವನು ಮಾರಿಟೇನೀಯಕ್ಕೆ ವರ್ಗವಾದ (25). ಇವನು ಅದನ್ನು ತನ್ನ ಅಂತ್ಯಕಾಲದವರೆಗೂ ಆಳಿದ.
ಈತ ಮಾರ್ಕ್ ಆಂಟೊನಿ ಮತ್ತು ಕ್ಲೀಯೊಪಾಟ್ರಳ ಮಗಳಾದ ಕ್ಲೀಯೊ ಪಾಟ್ರ ಸಿಲೀನೀಯನ್ನು ಮದುವೆಯಾಗಿದ್ದ. ಅವಳು ಇವನ ಮೇಲೆ ಹೆಚ್ಚು ಪ್ರಭಾವ ಬೀರಿದಳು. ಇವನು ಇತಿಹಾಸ, ಭೂಗೋಳಶಾಸ್ತ್ರ, ವ್ಯಾಕರಣ, ರಂಗಭೂಮಿ ಮುಂತಾದ ಅನೇಕ ವಿಷಯಗಳನ್ನು ಕುರಿತು ಗ್ರೀಕ್ ಭಾಷೆಸೃಷ್ಟಿಸುಯಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾನೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: