ಗುರು, ಶ್ರೀ. ಮಹಾಬಲ ಎನ್. ಸುವರ್ಣ:-ಜನನ- ೧೯೨೭, ನಿಧನ- ೨೦೧೩, ಫೆಬ್ರವರಿ,೧೫

ಚಿತ್ರ:Gif25Guru-M N Suvarna-wr.jpg
'ಗುರು,ಶ್ರೀ. ಎಂ.ಎನ್.ಸುವರ್ಣ'

ದಕ್ಷಿಣಕನ್ನಡದ ತುಳುಕನ್ನಡಿಗರು ಬೇರೆ ಎಲ್ಲರಂತೆ ಮುಂಬಯಿ ಮಹಾನಗರಕ್ಕೆ ಉದ್ಯೋಗಾವಕಾಶಕ್ಕಾಗಿ ಬಂದವರು. ಹೀಗೆ ವಲಸೆ ಬಂದ ಅವರು, ತಮ್ಮ ಹೋಟೆಲ್ ಉದ್ಯಮ ಮತ್ತಿತರ ಜೀವನ ನಿರ್ವಹಣೆಯ ಕೆಲಸಗಳಲ್ಲಿ ದೊಡ್ಡ ಹೆಸರು ಮಾಡಿದರು. ಇನ್ನು ಕೆಲವರು ಈ ಕಾರ್ಯಗಳ ಜೊತೆ ಜೊತೆಗೆ ತಮ್ಮ ಪರಿಶ್ರಮ, ಸಾಹಸ ಪ್ರವೃತ್ತಿಯಿಂದ ಮುಂದೆ ಸಾಗಿ, ಕಲೆ, ನೃತ್ಯ, ನಾಟಕ, ಸಂಗೀತ, ಮೊದಲಾದ ಸಾಂಸ್ಕೃತಿಕ ರಂಗಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅಂತಹ ಪ್ರಮುಖರಲ್ಲಿ' ಗುರು, ಶ್ರೀ. ಮಹಾಬಲ ಎನ್. ಸುವರ್ಣ'ರೂ ಸೇರಿದ್ದಾರೆ.

ವಿದ್ಯಾಭ್ಯಾಸ ಹಾಗೂ ನೃತ್ಯಾಭ್ಯಾಸ

ಬದಲಾಯಿಸಿ

ಮೂಲತಃ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಒಡೆಯರ ಬೆಟ್ಟುವಿನ ನಾರಾಯಣ ಸಿ. ಕುಂದರ್ ಮತ್ತು ಪಲಿಮಾರಿನ ಸೇಸಿ ನಾರಾಯಣ ಕುಂದರ್ ರ ಪುತ್ರರಾಗಿ, ಮಹಾಬಲ ಸುವರ್ಣ, ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವನ್ನು 'ಹೆಜಮಾಡಿ'ಯಲ್ಲಿ ಮುಗಿಸಿ, ಬಳಿಕ ಬೊಂಬಾಯಿಗೆ ಬಂದ ಅವರು, 'ಮೊಗವೀರರಾತ್ರಿ ಶಾಲೆ'ಯಲ್ಲಿ ಎಸ್.ಎಸ್.ಸಿ. 'ಜೈಹಿಂದ್ ಕಾಲೇಜ್' ನಲ್ಲಿ ಕಲಾವಿಭಾಗದಲ್ಲಿ ಪದವಿ ಗಳಿಸಿದರು. ೫ ದಶಕಗಳಿಗಿಂತ ಹೆಚ್ಚು ಸಮಯ ಭರತನಾಟ್ಯ ಕೃಷಿಯಲ್ಲಿ, ಸಾಧನೆ ಮಾಡಿದ್ದಾರೆ. ಬಾಲ್ಯದಲ್ಲಿಯೇ ಮಹಾಬಲಸುವರ್ಣ, ಚಂದ್ರಶೇಖರ ಪಿಳ್ಳೆ, ಮೊದಲಾದವರುಗಳಿಂದ 'ಭರತನಾಟ್ಯ' ಕಲಿತು, ನೃತ್ಯ ವಿಶಾರದ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮುಂದೆ ಮಾರ್ಷಲ್ ಆರ್ಟ್ಸ್, ಕತ್ತೀವರಸೆ, ತಾಲೀಮ್, ಬೆಂಕಿ ಆಟ, ಸಾರಿಗೆ ನಡಿಗೆ, ಪಾಟಿ ಆಟ, ಜ್ಯೂಡೋದಲ್ಲಿ ನೈಪುಣ್ಯತೆಗಳಿಸಿದರು. ಗೋವ, ಮದ್ರಾಸ್, ದೆಹಲಿ, ಗುಜರಾತ್, ಕೆನಡಾ, ಲಂಡನ್, ದುಬೈ, ಜರ್ಮನಿ, ಸಿಂಗಪುರಗಳಲ್ಲಿ ತಮ್ಮ ನೃತ್ಯಕಾರ್ಯಕ್ರಮಗಳನ್ನು ಕೊಟ್ಟು ಕರ್ನಾಟಕದ ಹಿರಿಮೆಯನ್ನು ವಿಶ್ವದಾದ್ಯಂತ ಪಸರಿಸಿದ್ದಾರೆ.

ಚಿತ್ರ:Guru,MNS.jpg
'ಗುರು,ಶ್ರೀ.ಎಂ.ಎನ್.ಸುವರ್ಣರು ಗೌರವಿಸಲ್ಪಟ್ಟರು'

'ಅರುಣೋದಯ ಕಲಾನಿಕೇತನ ನೃತ್ಯ ಶಾಲೆ'

ಬದಲಾಯಿಸಿ

ಸನ್ ಅವರು ೧೯೫೮ರಲ್ಲಿ ಮುಂಬಯಿನಲ್ಲಿ, 'ಅರುಣೋದಯ ಕಲಾನಿಕೇತನ'ವೆಂಬ ನೃತ್ಯ ಶಾಲೆಯನ್ನು ತೆರೆದರು. ಈ ಸಂಸ್ಥೆ, ೧೯೬೨ ರಲ್ಲಿ ನೊಂದಣಿಗೊಂಡಿತು. ಸುಮಾರು ೧೦೦ ಜನಕ್ಕೂ ಹೆಚ್ಚು ನೃತ್ಯ ವಿದ್ಯಾರ್ಥಿಗಳಿಗೆ, ಉಚಿತವಾಗಿ ಭರತನಾಟ್ಯವಿದ್ಯೆಯನ್ನು ಧಾರೆಯೆರೆದು, ಪ್ರೋತ್ಸಾಹಿಸಿದ್ದಾರೆ.

ನೃತ್ಯರೂಪಕಗಳು

ಬದಲಾಯಿಸಿ
  • 'ಮರಾಠಿಯ ರಾಬಾಂಶ',
  • 'ಸಮಯ ಕಾಲಚಕ್ರಂ',
  • 'ಕಾಳಿಂಗ ನರ್ತನ',
  • 'ನಾರಾಯಣೀಯಂ',
  • 'ಅಯ್ಯಪ್ಪವತಾರ',
  • 'ಶರಣ ಕುಮಾರ'
  • 'ತಾಂಡವಲಾಸ್ಯ',
  • 'ತೂಕಮಂಗಲಂ',
  • 'ಕಿನ್ನರಜೋಗಿ',
  • 'ದೇವಿ ನಮಃ',
  • 'ಕೃಷ್ಣ ಲೀಲ'
  • 'ಶಕುಂತಲಾ',
  • 'ಅಷ್ಟ ಲಕ್ಷ್ಮಿ',
  • 'ನವಸಂಧಿ',
  • 'ದ್ರೌಪದಿ',
  • 'ಅಭಂಗ',
  • 'ತಮಿಳಿನ ಅಯ್ಯಪ್ಪವತಾರಂ', ದೇಶ-ವಿದೇಶಗಳಲ್ಲಿ ಪ್ರದರ್ಶನಗೊಂಡು ಸಭಿಕರ ಮೆಚ್ಚುಗೆ ಗಳಿಸಿವೆ.

ಪರಿವಾರ

ಬದಲಾಯಿಸಿ

ಗುರು, ಶ್ರೀ. ಎಮ್.ಎನ್.ಸುವರ್ಣ []

  • ಸನ್. ೧೯೫೨ರಲ್ಲಿ ಸುಶೀಲಾ,ರವರನ್ನು ವಿವಾಹವಾದರು. ಅವರೊಬ್ಬ ಸಿತಾರ್ ವಾದಕಿ. ಈ ದಂಪತಿಗಳಿಗೆ ೫ ಜನ ಗಂಡುಮಕ್ಕಳು ಮತ್ತು ಒಬ್ಬ ಮಗಳು.

ಸುವರ್ಣರ ಕೌಟುಂಬಿಕ ಪರಿಚಯ

ಬದಲಾಯಿಸಿ
  • ಹಿರಿಯ ಮಗ ಕೃಷ್ಣಕುಮಾರ್, ಅಂಗವಿಕಲ. ಕಲಾಮಂಟಪಗಳನ್ನು ಬಹಳ ಆಕರ್ಷಕವಾಗಿ ತಯಾರಿಸುತ್ತಾರೆ. ಈತ ಟೆಲಿಫೋನ್‌ ಬೂತ್‌ ನಡೆಸುತ್ತಿದ್ದಾನೆ.
  • ಎರಡನೆಯ ಮಗ, ಅರುಣ್ ಕುಮಾರ್, ಆರ್ಕಿಟೆಕ್ಟ್. ವ್ಯಾಸಂಗದಲ್ಲಿ ಚಿನ್ನದ ಪದಕ ಪಡೆದು ತೇರ್ಗಡೆಯಾಗಿದ್ದ. ಅರುಣ್‌ಕುಮಾರ್‌, ದಿಲ್ಲಿಯ ಅಕ್ಷರಧಾಮ ಮಂದಿರದ ಪ್ರಧಾನ ವಾಸ್ತುಶಿಲ್ಪಿಗಳಲ್ಲೊಬ್ಬ. ಅಮೆರಿಕ, ಅಫ್ರಿಕಾ ಎಂದು ಪ್ರವಾಸ ಮಾಡುತ್ತಾ ಇರುತ್ತಾರೆ. ಪುಣೆ ನಗರದಲ್ಲಿ ನಿರ್ಮಾಣವಾಗುತ್ತಿರುವ 'ಲಾವಾಸಾ ಯೋಜನೆಯ ಪ್ರಧಾನ ಆರ್ಕಿಟೆಕ್ಟ್' ಕೂಡಾ ಆಗಿದ್ದಾರೆ. ಈತ ವಯಲಿನ್‌, ಹಾರ್ಮೋನಿಯಂ ನುಡಿಸುತ್ತಾನೆ.
  • ಮೂರನೆಯ ಮಗ ಕವಿರಾಜ ಸುವರ್ಣ, ಮೃದಂಗಾ, ಕೊಳಲು ನುಡಿಸುತ್ತಾರೆ. ಸಂಗೀತ ಸೇವೆಗಾಗಿ 'ವರ್ಲ್ಡ್ ಟೂರ್‌' ಮಾಡುತ್ತಾರೆ.
  • ಈತನ ಹೆಂಡತಿ ವೈಶಾಲಿ ಸಂಗೀತ ವಿಶಾರದೆ, ಹಿಂದೂಸ್ತಾನಿ ಗಾಯಕಿ, ಹಾರ್ಮೋನಿಯಮ್‌ ನುಡಿಸುತ್ತಾಳೆ.
  • ನಾಲ್ಕನೆಯ ಮಗ ಮಹೇಶ ಕುಮಾರ್,ಇಂಜಿನಿಯರ್‌ ಕಲಿಯುತ್ತಿದ್ದನು. 'ಕನ್ ಸ್ಟ್ರಕ್ಷನ್ ಉದ್ಯಮ' ನಡೆಸುತ್ತಿದ್ದಾನೆ. ಈಗ ಕಟಪಾಡಿ, ಕೇರಳದಲ್ಲಿ ಪೂಜಾರಾಧಾನೆಯ ವಿಧಿಗಳನ್ನು ಕಲಿತು 'ಶಾಂತಿ' ಆಗಿದ್ದಾನೆ.
  • ಕೊನೆಯ ಮಗ ರವಿಕಿರಣ್‌, 'ಫೈಜರ್‌ ಕಂಪೆನಿ'ಯಲ್ಲಿ ಒಳ್ಳೆಯ ಕೆಲಸದಲ್ಲಿದ್ದಾರೆ. ಸಣ್ಣ ಪ್ರಾಯದಲ್ಲಿ ಷಣ್ಮುಖಾನಂದ ಸಭಾಗೃಹದಲ್ಲಿ ನಡೆಯುತ್ತಿದ್ದ ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದ. ಒಳ್ಳೆಯ ಪುಟ್‌ಬಾಲ್‌ ಆಟಗಾರ. ವಯಲಿನ್‌ ನುಡಿಸುತ್ತಾನೆ.
  • ಮಗಳು,ಮೀನಾಕ್ಷಿ ರಾಜು ಶ್ರೀಯಾನ್, ಒಳ್ಳೆಯ ನೃತ್ಯಪಟು.

ಸುವರ್ಣರ ಜೀವನದ ಗುರಿ

ಬದಲಾಯಿಸಿ

ಸುವರ್ಣರು, ಮೂಕಾಂಬಿಕೆ ದೇವಿಯ ಪರಮ ಭಕ್ತರು. ಹೆಣ್ಣು ಮಗುವನ್ನು ಕರುಣಿಸಲು ದೇವಿಯಲ್ಲಿ ಅನನ್ಯ ಭಕ್ತಿಯಿಂದ ಪ್ರಾರ್ಥಿಸಿದ್ದರು. ಅದರ ಫಲವೋ ಎಂಬಂತೆ ಅವರಿಗೆ ಹೆಣ್ಣು ಮಗಳು ಮೀನಾಕ್ಷಿ ಹುಟ್ಟಿದ್ದಳು. ಈಕೆ ಭರತನಾಟ್ಯ ಕಲಾಪ್ರವೀಣೆ, ನೃತ್ಯವಿಶಾರದೆ. ಈಕೆ ದೇಶ ವಿದೇಶ ಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡುತ್ತಿದ್ದಾಳೆ. ಜತೆಗೆ ಮಕ್ಕಳಿಗೆ ಭರತನಾಟ್ಯ, ಸಂಗೀತ ಕಲಿಸುತ್ತಿದ್ದಾಳೆ. ಸುವರ್ಣರು ತಮ್ಮ ಭರತನಾಟ್ಯ ವಿದ್ಯೆಯನ್ನು ಸಂಪೂರ್ಣವಾಗಿ ಆಕೆಗೆ ಧಾರೆಎರೆದು, ನೃತ್ಯ ವ್ಯವಸಾಯವನ್ನು ಮುಂದುವರಿಸುವ ಹೊಣೆಗಾರಿಕೆಯನ್ನೂ ಸಂಪೂರ್ಣವಾಗಿ ವಹಿಸಿ ಕೊಟ್ಟಿದ್ದಾರೆ.ಕೋಟಕ್‌ ಮಹೇಂದ್ರ ಬ್ಯಾಂಕಿನ ಅಧಿಕಾರಿ, ಸಂಘಟಕ ರಾಜು, ಆಕೆಯ ಪತಿ. ಮೀನಾಕ್ಷಿಗೆ ಎರಡು ಮಕ್ಕಳು.

ಪ್ರಶಸ್ತಿ ಸನ್ಮಾನಗಳು

ಬದಲಾಯಿಸಿ
  • ಗ್ಲೋಬಲ್ ಮ್ಯಾನ್ ಪ್ರಶಸ್ತಿ,
  • ಕರ್ನಾಟಕ ಸರಕಾರದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
  • ವಿಶ್ವಮಾನವ ಪ್ರಶಸ್ತಿ,
  • ರಷ್ಯಾದ ನರ್ತಕ ಪ್ರಶಸ್ತಿ,
  • ರುಕ್ಮಿಣಿದೇವಿ ಅರುಂಡೇಲ್ ಪ್ರಶಸ್ತಿ,
  • ಮಹಾರಾಷ್ಟ್ರ ಟೈಮ್ಸ್ ಅವಾರ್ಡ,
  • ಸಾಧನ ಶಿಖರ ಪ್ರಶಸ್ತಿ,
  • ಮೊಗವೀರ ಮಹಾಜನ ಸೇವಾ ಪ್ರಶಸ್ತಿ,
  • ವೀರೆಂದ್ರ ಹೆಗ್ಗಡೆ,
  • ಕರ್ನಾಟಕ ಮುಖ್ಯಮಂತ್ರಿ, ಶ್ರೀಕೃಷ್ಣ,
  • ಉಡುಪಿ ಕೃಷ್ಣ ಮಠ,
  • ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಸನ್ಮಾನ,

ಹೀಗೆ ಸಾರ್ಥಕ ಜೀವನ ನಡೆಸಿ ಹಲವಾರು ಉದಯೋನ್ಮುಖ ನೃತ್ಯಾಂಗನೆಯರಿಗೆ/ನೃತ್ಯ ಪಟುಗಳಿಗೆ ವಿದ್ಯಾದಾನ ಮಾಡಿದ ಗುರು, ಎಮ್.ಎನ್.ಸುವರ್ಣರು.[] ಸನ್ ೨೦೧೩ ರ ಫೆಬ್ರವರಿ, ೧೫ ರಂದು ನಿಧನರಾದರು.

ಸನ್. ೨೦೧೨ ರ, ಉದಯವಾಣಿ ದೈನಿಕದಲ್ಲಿ ಎಮ್.ಎನ್.ಎಸ್.ರವರ ವ್ಯಕ್ತಿ ಸಂಗತಿ

ಬದಲಾಯಿಸಿ

'ವ್ಯಕ್ತಿ ಸಂಗತಿ'[permanent dead link] [೧] ಶ್ರಿಯಾನ್, ವಿವರಿಸುತ್ತಾರೆ.[permanent dead link] ಶಂಕರ ಶೆಟ್ಟಿ ವಿವರಿಸುತ್ತಾರೆ.'[permanent dead link]

ಉಲ್ಲೇಖಗಳು

ಬದಲಾಯಿಸಿ