ಎಮ್.ವೀರರಾಘವಚಾರಿಯರ್

ಭಾರತೀಯ ಪತ್ರಕರ್ತ್

ಮುದುಂಬೈ ವೀರರಾಘವಚಾರಿಯರ್ (೧೮೫೭-೧೯೦೬) ಮದ್ರಾಸ್ ರಾಜ್ಯದ ಒಬ್ಬ ಭಾರತೀಯ ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಶಿಕ್ಷಕರು. ಇವರು ದಿ ಹಿಂದೂ ವೃತ್ತಪತ್ರಿಕೆಯ ಸಂಸ್ಥಾಪಕರು. ೧೮೯೮ ರಿಂದ ೧೯೦೪ ರ ವ್ಯಾಪ್ರ್ತಿಯಲ್ಲಿ ದಿ ಹಿಂದೂ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.ಮುತ್ತಯ್ಯ, ಎಸ್ (೨೦೦೪). ಮದ್ರಾಸ್ ರೀಡಿಸ್ಕವರ್ಡ್. ಈಸ್ಟ್ ವೆಸ್ಟ್ ಬೂಕ್ಸ್ (ಮದ್ರಾಸ್) ಪ್ರೈವೇಟ್ ಲಿಮಿಟೆಡ್. ISBN ೮೧-೮೮೬೬೧-೨೪-೪.

ವೀರರಾಘವಚಾರಿಯರ್ ರವರು ಚೆಂಗಲ್ ಪೇಟೆಯ ಬಳಿಯಲ್ಲಿರುವ ವಡಕಪಟ್ಟು ಗ್ರಾಮದ ವೈಷ್ಣವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರು ಮದ್ರಾಸಿನಲ್ಲಿ ಶಾಲಾ ಶಿಕ್ಷಣ ಹಾಗು ಪದವಿ ಶಿಕ್ಷಣ ಹೊಂದಿದ್ದರು. ಪದವಿ ಪಡೆದ ಪಚಿಯಪ್ಪ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿಕೊಂಡರು. ಈ ಸಂದರ್ಭದಲ್ಲಿ, ಅವರು ಸಹ ಬೋಧಕ, ಜಿ ಸುಬ್ರಮಣ್ಯ ಅಯ್ಯರ್ ಇವರ ಜತೆ ಗೆಳೆತನ ಬೆಳಸಿಕೊಂಡರು.

ದಿ ಹಿಂದೂ ವ್ಯವಸ್ಥಾಪನೆ

ಬದಲಾಯಿಸಿ

೧೮೭೮ರಲ್ಲಿ ೨೧ ವರ್ಷದ ವೀರರಾಘವಚಾರಿಯರ್ ತಮ್ಮ ಐದು ಸ್ನೇಹಿತರಾದ ಜಿ.ಸುಬ್ರಹ್ಮಣ್ಯ ಅಯ್ಯರ್, ಟಿ.ಟಿ.ರಂಗಾಚಾರಿಯರ್, ಪಿ.ವಿ.ರಂಗಾಚರಿಯರ್, ಡಿ.ಕೇಶವ ರಾವ್ ಪಂತುಲು, ಹಾಗು ಎನ್.ಸುಬ್ಬರಾವ್ ಪಂತುಲು ಜತೆ ಸೇರಿ ದಿ ಹಿಂದೂ ದಿನಪತ್ರಿಕೆಯನ್ನು ಪ್ರಾರಂಭಿಸಿದರು. ಈ ಆರು ಜನ ಇತಿಹಾಸದಲ್ಲಿ ದಿ ಟ್ರಿಪ್ಲಿಕೇನ್ ಸಿಕ್ಸ್ ಎಂದು ಜನಪ್ರಿಯರಾದರು.

ದಿ ಹಿಂದೂ ಜತೆ

ಬದಲಾಯಿಸಿ

ಸುಬ್ರಹ್ಮಣ್ಯ ಅಯ್ಯರ್ ಹಾಗು ವೀರರಾಘವಚಾರಿಯರ್ ಮಧ್ಯೆ ಅಸಮಾಧಾನಗಳು ಸೃಷ್ಟಿಯಾಗಿ ಅಯ್ಯರ್ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವದೇಶಿಮಿತ್ರಮ್ ಪತ್ರಿಕೆಯ ಸಂಪಾದಕರಾದರು. ಒಬ್ಬಂಟಿಯಾಗಿ ಪತ್ರಿಕೆಯನ್ನು ನಡೆಸುತ್ತಾ ಬಹಳ ಸೋಲನ್ನು ಕಂಡರು. ೧೯೦೧ರಲ್ಲಿ ಪತ್ರಿಕೆಯನ್ನು ಹಿಂದೂ ಜಾಯಿಂಟ್ ಸ್ಟಾಕ್ ಕಂಪನಿಯಗಿ ಪರಿವರ್ತಿಸಲು ಪ್ರಯತ್ನಿಸಿದರು. ಇದರಿಂದ ಪತ್ರಿಕೆಗೆ ನಷ್ಟವಾದರಿಂದ ಪತ್ರಿಕೆಯನ್ನು ಏಪ್ರಿಲ್ ೧೯೦೫ರಲ್ಲಿ ಕಸ್ತೂರಿ ರಂಗ ಐಯ್ಯಂಗಾರ್ ಇವರಿಗೆ ಮಾರಿದರು.

೧೯೦೬ರಲ್ಲಿ ೪೭ ವರ್ಷದ ವೀರರಾಘವಚಾರಿಯರ್ ಸಾವನ್ನಪ್ಪಿದರು.

ಉಲ್ಲೇಖಗಳು

ಬದಲಾಯಿಸಿ

[[]]