ಎಮ್.ಎಸ್.ಶೀಲಾ
ಎಮ್.ಎಸ್.ಶೀಲಾ ಕರ್ನಾಟಕ ಸಂಗೀತದ ಜನಪ್ರಿಯ ಗಾಯಕಿ. ಇವರು ಶಾಸ್ತ್ರೀಯ ಶೈಲಿ, ಲಘು ಸಂಗೀತ ಹಾಗೂ ಭಕ್ತಿಗೀತೆಗಳ ಗಾಯನದಲ್ಲಿ ಸಮಾನವಾಗಿ ಪ್ರಭುತ್ವ ಸಾಧಿಸಿದ್ದಾರೆ.ಇವರು ದೂರದರ್ಶನ ಹಾಗೂ ಆಕಾಶವಾಣಿ ಎರಡರಲ್ಲೂ ಶಾಸ್ತ್ರೀಯ ಗಾಯನ ಮತ್ತು ಲಘು ಸಂಗೀತ ಎರಡೂ ವಿಭಾಗಗಳಲ್ಲೂ ಉಚ್ಚ ದರ್ಜೆಯ ಕಲಾವಿದರಾಗಿದ್ದಾರೆ.[೧]
ಎಮ್.ಎಸ್.ಶೀಲಾ | |
---|---|
ಮೂಲಸ್ಥಳ | ಭಾರತ |
ಸಂಗೀತ ಶೈಲಿ | Indian classical music |
ವೃತ್ತಿ | ಶಾಸ್ತ್ರೀಯ ಸಂಗೀತ ಗಾಯಕಿ |
ಅಧೀಕೃತ ಜಾಲತಾಣ | http://www.mssheela.com |
ಬಾಲ್ಯ ಮತ್ತು ಶಿಕ್ಷಣ
ಬದಲಾಯಿಸಿಇವರು ಸಂಗೀತ ಹಿನ್ನಲೆಯ ಕುಟುಂಬದಿಂದ ಬಂದವರಾಗಿದ್ದು, ಖ್ಯಾತ ಗುರು ಆರ್. ಕೆ. ಶ್ರೀಕಂಠನ್ರವರ ಶಿಷ್ಯೆಯಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಸಾಧನೆ ಮತ್ತು ಪ್ರಶಸ್ತಿಗಳು
ಬದಲಾಯಿಸಿದೂರದರ್ಶನ ಹಾಗೂ ಆಕಾಶವಾಣಿಗಳಲ್ಲಿ ನಿಯಮಿತವಾಗಿ ಕಛೇರಿಗಳನ್ನು ನೀಡುತ್ತಿರುವುದರ ಜೊತೆಗೆ ದೇಶ -ವಿದೇಶಗಳ ಹಲವಾರು ನಗರಗಳಲ್ಲೂ ಕಛೇರಿಗಳನ್ನು ನೀಡಿ ಜನಪ್ರಿಯರಾಗಿದ್ದಾರೆ.ಲಘು ಸಂಗೀತ ಪ್ರಕಾರದಲ್ಲಿ ಇವರು ಹಾಡಿದ ಲಲಿತಾ ಸಹಸ್ತ್ರನಾಮ,ಶಾರದಾ ಸುಪ್ರಭಾತ,ಸೌಂದರ್ಯ ಲಹರಿ ಮನೆಮಾತಾಗಿದೆ.[೧]
ಇವರ ಸಂಗೀತ ಸಾಧನೆಯನ್ನು ಗಮನಿಸಿ ಕರ್ನಾಟಕ ಸರಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಹಲವಾರು ಸಂಘಸಂಸ್ಥೆಗಳೂ ಇವರನ್ನು ಗೌರವಿಸಿದ್ದು,ಶೃಂಗೇರಿ ಶಾರದಾ ಪೀಠದ ಆಸ್ಥಾನ ವಿದುಷಿಯಾಗಿ ಗೌರವಿಸಲ್ಪಟ್ಟಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "Ganakalashree M S Sheela". Archived from the original on 2013-10-16. Retrieved 2013-11-27.