ಎಮ್.ಎಮ್,ಎಮ್,ಹೈಸ್ಕೂಲ್, ಹೊಳಲ್ಕೆರೆ
'ಮಲ್ಲಾಡಿಹಳ್ಳಿ ಮಾದಣ್ಣನವರ ಮುನಿಸಿಪಲ್ ಹೈಸ್ಕೂಲ್' ಇರುವುದು ಹೊಳಲ್ಕೆರೆಯಲ್ಲಿ. ಉತ್ತಮವಾದ ಸ್ವಂತಕಟ್ಟಡವಿದೆ. ಆಟದ ವಿಶಾಲ ಅಂಗಳವಿದೆ. ೬೦ ರ ದಶಕದಲ್ಲಿ, ಅಲ್ಲಿಗೆ ಬಂದ ಉಪಾಧ್ಯಾಯರ ವೇತನ ಬಹಳ ತಡವಾಗಿ ಸಂದಾಯವಾಗುತ್ತಿತ್ತು. ಆದರೂ ವಿದ್ಯಾರ್ಥಿಗಳ ಸ್ವಂತ ಪರಿಶ್ರಮ ಹಾಗೂ ಹಲವು ಶಿಕ್ಷಕರ ಯೋಗದಾನದಿಂದಾಗಿ, ಸನ್, ೧೯೬೧-೬೨ ರ ಸಾಲಿನಲ್ಲಿ ಆ ಶಾಲೆಯಲ್ಲಿ ಅಭ್ಯಾಸಮಾಡುತ್ತಿದ್ದ ಎಚ್.ಆರ್,ಚಂದ್ರಶೇಖರ ನೆಂಬ ವಿದ್ಯಾರ್ಥಿ, 'ಎಸ್.ಎಸ್.ಎಲ್.ಸಿ ಪರೀಕ್ಷೆ'ಯಲ್ಲಿ 'ರಾಜ್ಯಕ್ಕೇ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಚಿನ್ನದ ಪದಕವನ್ನುಗಳಿಸಿದನು'. ಮುಂದೆ ಈತನು, ಬೆಂಗಳೂರಿನ 'ನ್ಯಾಷನಲ್ ಕಾಲೇಜ್ ನಲ್ಲಿ 'ಪಿ.ಯು.ಸಿ'; 'ಬಿ.ಎಸ್.ಸಿ'. ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ 'ಚಿನ್ನದ ಪದಕ'ವನ್ನು ಗಳಿಸಿದನು. ಎಮ್.ಎಸ್.ಸಿ. ಪದವಿಯನ್ನು ಕಾನ್ಪುರ್ ಐ.ಐ.ಟಿ.ಯಲ್ಲಿ ಗಳಿಸಿ, ಅಲ್ಲಿಂದ 'ಅಮೆರಿಕದ ಇಂಡಿಯಾನ ರಾಜ್ಯದ. ಪರ್ಡ್ಯೂ ವಿಶ್ವವಿದ್ಯಾಲಯ'ದಲ್ಲಿ 'ಪಿ.ಎಚ್,ಡಿ ಪದವಿ'ಯನ್ನು ಹಾಸಿಲ್ ಮಾಡಿದನು. ಆಲ್ಲಿಂದ ಪಶ್ಚಿಮ ಜರ್ಮನಿಯ, ಮ್ಯಾಕ್ಸ್ ಪ್ಲಾಂಕ್ ವಿದ್ಯಾ ಸಂಸ್ಥಾನ ದಲ್ಲಿ 'ಪೋಸ್ಟ್ ಡಾಕ್ಟೊರಲ್ ಪದವಿ'ಗಳಿಸಿ, ಮುಂದೆ 'ಅಮೆರಿಕದ ಯು,ಎಮ್,ಸಿ, ವಿಶ್ವವಿದ್ಯಾಲಯ'ದಲ್ಲಿ 'ಬೌತಶಾಸ್ತ್ರ ಪ್ರಭಾಗದಲ್ಲಿ ಪ್ರಾಧ್ಯಾಪಕ'ರಾಗಿ ನಿಯುಕ್ತಿಗೊಂಡನು. ಹಾಗೆಯೇ ಮುಂದುವರೆದು, ಅದೇ ವಿಶ್ವವಿದ್ಯಾಲಯದ ಅದೇ ಪ್ರಭಾಗದ 'ಮುಖ್ಯಸ್ಥ'ನಾಗಿ ನಿಯುಕ್ತನಾಗಿ ದುಡಿದು, ನಿವೃತ್ತನಾದನು.