ಎಮಿಲ್ ಅಬ್ಡರ್‌ಹೆಲ್ಡನ್

ಎಮಿಲ್ ಅಬ್ಡರ್‌ಹೆಲ್ಡನ್ ಸ್ವಿಡ್ಜರ್‌ಲೆಂಡಿನ ಒಬ್ಬ ರಸಾಯನಶಾಸ್ತ್ರಜ್ಞ, ಮನಶ್ಶಾಸ್ತ್ರಜ್ಞ (೧೮೭೭-೧೯೫೦). ಹಾಲೆ ಎಂಬಲ್ಲಿ ಶರೀರಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸಮಾಡಿದ.[೧] ಪ್ರೊಟೀನ್‌ಗಳ ರಚನೆ, ಪಾಲಿಪೆಪ್ಟೈಡ್‌ಗಳ ವಿಶ್ಲೇಷಣೆ, ಮದ್ಯಸಾರೀಯ ವಸ್ತುಗಳ ಹುಳಿಗಟ್ಟುವಿಕೆಯ ಕ್ರಮ-ಇವುಗಳ ಬಗ್ಗೆ ಗಮನಾರ್ಹ ವಿಚಾರಗಳನ್ನು ತಿಳಿಸಿದ್ದಾನೆ. ಇವನ ಮುಖ್ಯ ಆವಿಷ್ಕಾರಗಳನ್ನು ೧೯೯೦ರ ದಶಕದ ಕೊನೆಯ ವರ್ಷಗಳಲ್ಲಿ ತಿರಸ್ಕರಿಸಲಾಯಿತು.

ಎಮಿಲ್ ಅಬ್ಡರ್‌ಹೆಲ್ಡನ್

ಅಬ್ಡರ್‌ಹೆಲ್ಡನ್ ಗರ್ಭಾವಸ್ಥೆಯ ಒಂದು ರಕ್ತಪರೀಕ್ಷೆ, ಮೂತ್ರದಲ್ಲಿ ಸಿಸ್ಟೈನ್‍ನ ಪರೀಕ್ಷೆಗೆ ಪರಿಚಿತನಾಗಿದ್ದಾನೆ. ಅದರ ಆರಂಭದ ಕೆಲವು ವರ್ಷಗಳ ನಂತರ ಗರ್ಭಧಾರಣೆಯ ಪರೀಕ್ಷೆಯು ವಿಶ್ವಾಸಾರ್ಹವಲ್ಲವೆಂದು ನಿರ್ಧಾರಿತವಾಯಿತು.[೨]

ಉಲ್ಲೇಖಗಳು ಬದಲಾಯಿಸಿ

  1. Chambers Biographical Dictionary, ISBN 0-550-18022-2, page 2
  2. Van Slyke, Donald D.; Vinograd-Villchur, Mariam; Losee, J.R. (1915). "The Abderhalden Reaction" (PDF). Journal of Biological Chemistry. 23 (1): 377–406. doi:10.1016/S0021-9258(18)87625-6. Archived from the original (PDF) on 2007-09-29. Retrieved 2023-01-15. (experimental evidence of the unreliability of the Abderhalden pregnancy test)

ಹೊರಗಿನ ಕೊಂಡಿಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: