ಎಮಿಲಿಯ ಲೆನಿಯರ್

ಆಂಗ್ಲ ಕವಿಯಿತ್ರಿ

ಎಮಿಲಿಯ ಲೆನಿಯರ್ ಎಲಿಜಬೆಥನ್ ಕಾಲದ ಪ್ರಮುಖ ಸ್ತ್ರೀವಾದಿ ಬರಹಗಾರ್ತಿ. 'ಸ್ಯಾಲ್ವ್ ಡ್ಯುಯೆಸ್ ರೆಕ್ಸ್ ಜುಡೇರಿಯಮ್" ಎಂಬ ಶೀರ್ಷಿಕೆ ಅಡಿಯಲ್ಲಿ ಇವರು ಹಲವಾರು ಧಾರ್ಮಿಕ ವಿಷಯಗಳಿಗೆ ಸಂಬಂದಿಸಿದಂತ ಪದ್ಯಗಳನ್ನು ಬರೆದಿದ್ದಾರೆ.

ಎಮಿಲಿಯ ಲೆನಿಯರ್
Born
Aemilia Bassano

೧೫೬೯
Died೧೬೪೫
MovementEnglish Renaissance
ParentMargret Johnson

ಬಾಲ್ಯ ಮತ್ತು ಶಿಕ್ಷಣ

ಬದಲಾಯಿಸಿ

ಎಮಿಲಿಯ ಲೆನಿಯರ್ ೧೫೬೯ ರಲ್ಲಿ ಬಿಶಾಪ್ಗೆಟ್ ನಲ್ಲಿ ಇಟಾಲಿಯನ್ ಕೋರ್ಟ್ ಸಂಗೀತಗಾರನ ಮಗಳಾಗಿ ಜನಿಸಿದಳು. ಲೆನಿಯರ್ ಧಾರ್ಮಿಕ ಸಿದ್ಧಾಂತ,ಶ್ರೇಷ್ಟ ಸಾಹಿತ್ಯ,,ಮತ್ತು ಸಮಕಾಲೀನ ಪದ್ಯ್ಗಗಳ ಬಗೆಗಿನ ಶಿಕ್ಷಣವನ್ನು ಪದಡೆದಳು.ಮೇರಿ ಸಿಡ್ನಿ ಮತ್ತು ಮುಂತಾದ ಕೌಂಟೆಸ್ ಆಫ್ ಪೆಮ್ ಬ್ರೋಕ್ ಎಂಬ ಬರಹಗಾರರು ಅವಳ ಜೀವನದಲ್ಲಿ ಮಹತ್ತರವಾದ ಪ್ರಭಾವವನ್ನು ಬೀರಿದರು.೧೬ನೇ ಶತಮಾನದ ಆರಂಭದಲ್ಲಿ ಮಾರ್ಗರೇಟಳನ್ನು ಭೇಟೀ ಮಾಡಿದ ನಂತರ ಅವಳು ತನ್ನ ಮೊದಲ ಪದ್ಯ "ಡಿಸ್ಕ್ರಿಪ್ಶನ್ ಆಫ್ ಕೂಕ್ ಹಾಮ್" ಅನ್ನು ಬರೆಯಲು ಪ್ರೇರಿತಳಾದರೂ. ಅವಳು ಬರೆದಂತಹ ಧಾರ್ಮಿಕ ಪದ್ಯಗಳು ಮೇರಿ ಸಿಡ್ನಿಯವರಿಂದ ಪ್ರಭಾವಿತವಾಗಿದ್ದ್ದವು.

ಬರಹಗಳು

ಬದಲಾಯಿಸಿ

ಅಮೆಲಿಯ ಲೆನಿಯರ್ ಅವಳ ಪದ್ಯಗಳನ್ನು ೩ ವಿಷಯಗಳಿಗೆ ಸಂಬದಿಸಿದಂತೆ ರಚನೆ ಮಾದಿದ್ದಾಳೆ.ಅವು ಮುಖ್ಯವಾಗಿ ಮಹಿಳೆಯರ ಬಗ್ಗೆ ,ಅಧಿಕಾರದ ಬಗ್ಗೆ ಮತ್ತು ಪುರುಷ ಪ್ರಧಾನ ಸಮಾಜದ ದಬ್ಬಾಳಿಕೆಯಿಂದ ಮಹಿಳೆಯರಿಗೆ ಬಿಡುಗಡೆ, ಈ ವಿಷಯಗಳ ಕುರಿತಾದ ಅವಳ ಧೋರಣೆಯನ್ನು ತನ್ನ "ಕಲೆಕ್ಷನ್ ಆಫ್ ಪೊಎಮ್ಸ್" ನಲ್ಲಿ ವ್ಯಕ್ತಪಡಿಸಿದ್ದಾಳೆ ಈ ಒಂದು ವಾಲ್ಯೂಮ್ "ದ ಪ್ಯಾಶನ್ ಆಫ್ ಕ್ರಿಸ್ಟ್", "ಈವ್ಸ್ ಅಪಾಲಜಿ ಇನ್ ಡಿಫೆನ್ಸ್ ಆಫ್ ವಿಮೆನ್", "ದ ಟಿಯರ್ಸ್ ಆಫ್ ದ ಡಾಟರ್ ಆಫ್ ಜೆರುಸಲೆಮ್", ಪದ್ಯಗಳನ್ನು ಒಳಗೊಂಡಿದೆ .ಈ ಪದ್ಯಗಳು ಮಹಿಳೆಯರ ಯೋಗ್ಯತೆಯನ್ನು ಹೊಗಳುತ್ತವೆ. ಪದ್ಯದ ಟೈಟಲ್ ಯೇಸು ಕ್ರಿಸ್ತ ಶಿಲುಬೆಗೆ ಏರಿಸಿದ ಸಮಯದಲ್ಲಿ ಅನುಭವಿಸಿದ ನೋವು ಮತ್ತು ಈವಳನ್ನು ದೋಷದಿಂದ ಮುಕ್ತಗೊಳಿಸುವ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ.ಈ ಪದ್ಯ ಪ್ರಾರಂಭಿಕ ಟೀಕಾಕಾರರಲ್ಲಿ ಹೆಚ್ಚು ವಿಮರ್ಶೆಗೆ ಒಳಗಾಗಿದ್ದಂತ ವಿಷಯವಾಗಿತ್ತು.ಈ ವಿಷಯದ ಬಗ್ಗೆ ಲೆನಿಯರ್ ಗಿಂತ ಮೊದಲು ಕ್ರಿಸ್ತನ ಕಾಲದಲ್ಲಿ ಪಾಂಟಿಯಸ್ ಪಿಲಾಟ್ ಎಂಬುವವಳು ಮಾತನಾಡಿದ್ದಳು ಪಿಲಾಟ್ ರೋಮ್ ನ ರಾಜ ಪಾಂಟಿಯಸ್ ಪೈಲೆಟ್ ನ ಹೆಂಡತಿಯಾಗಿದ್ದಳು ಒಂದು ದಿನ ಸಭೆಯಲ್ಲಿ ಯೆಸುವನ್ನು ಶಿಲುಬೆಗೆ ಯೇರಿಸುವ ಬಗ್ಗೆ ಮಾತಾನಾಡುತ್ತಿರುವಾಗ ಪಿಲಾತ್ ಕಾಗದ ದ ಮೂಲಕ ಒಂದು ಸಂದೇಶವನ್ನು ಅನಾಮಧೇಯ ಹೆಸರಿನ ಮೂಲಕ ಕಳುಹಿಸಿದಳು. ಅದರಲ್ಲಿ ಈ ರೀತಿ ಇತ್ತು "ಯೇಸು ದೇವರ ಪುತ್ರ ಅವನು ಯಾವುದೆ ತಪ್ಪನ್ನು ಮಾದಿಲ್ಲ ಅವನನ್ನು ಗಲ್ಲಿಗೆ ಏರಿಸಬೇಡಿ ಗಲ್ಲಿಗೆ ಏರಿಸಿದರೆ ಈವ್ ಮಾಡಿದ ತಪ್ಪಿಗಿಂತ ದೊಡ್ಡ ತಪ್ಪನ್ನು ನೀವು ಮಾಡಿದಂತಾಗುತ್ತೆ ಎಂಬ ಸಂದೇಶವನ್ನು ಕಳುಹಿಸಿದ್ದಳು" ಅದರೆ ಅನಾಮದೇಯವಾಗಿ ಪತ್ರದ ಸಂದೇಶವನ್ನು ಪರಿಗಣಿಸದೆ ಯೇಸುವನ್ನು ಶಿಲುಬೆಗೆ ಏರಿಸಿದರು. ಪಿಲಾತ್ ಎಸು ಕ್ರಿಸ್ತನ ರಹಸ್ಯ ಅನುಯಾಯಿಯಾಗಿದ್ದಳು. ಆದರೆ ಅದನ್ನು ಬಹಿರಂಗವಾಗಿ ವ್ಯಕ್ತ ಪಡಿಸುವ ದೈರ್ಯ ಅವಳಿಗೆ ಇರದೆ ಈ ರೀತಿ ಮಾಡಿದ್ದಳು.

ಈವಳ ಕ್ಷಮಾಪಣೆ

ಬದಲಾಯಿಸಿ

ಪದ್ಯದ ಸಾರಾಂಶ : ಎಮಿಲಿಯ ಲೆನಿಯರ್ ರವರು ಈವಳ ಕ್ಷಮಾಪಣೆ ಎಂಬ ಪದ್ಯವನ್ನು ಬೈಬಲಿನ ಆದಿ ಬಾಗ ದಲ್ಲಿ ಇರುವ ಈವ್ ಫಾರ್ ಬಿಡನ್ ಹಣ್ಣನ್ನು ಸೇವಿಸಿ ದೇವರ ಆಗ್ನೆಯನ್ನು ಮೀರಿದ ಕತೆ ಯನ್ನು ಸ್ತ್ರೀವಾದಿ ದೃಷ್ಟೀ ಕೋನದಿಂದ ನೋಡಿ ಬರೆದ ಪದ್ಯವಾಗಿದೆ ಈ ಪದ್ಯದಲ್ಲಿ ಎಮಿಲಿಯ ಲೆನಿಯರ್ ಈವ್ ನ ಪರವಾಗಿ ಬಚ್ಚಿಟ್ಟಿದ್ದ ಸತ್ಯವನ್ನು ತೆರೆದಿಡುತ್ತಾಳೆ. ಈವ್ ತಪ್ಪನ್ನು ಮಾಡಿದವಳಲ್ಲ , ಆದರೆ ಅವಳು ಆಡಮ್ ಗೆ ದೇವರು ಕೊಟ್ಟ ಬಹುಮಾನ , ಆಡಮ್ ನಷ್ಟು ಅಧಿಕಾರವನ್ನು ಹೊಂದಿರಲಿಲ್ಲ ಆಡಮ್ ಅನ್ನು ಸಂತೋಷ ಪಡಿಸುವುದೊಂದೇ ಅವಳ ಮುಖ್ಯ ಕರ್ತವ್ಯವಾಗಿತ್ತು. ಆಡಮ್ ಭೂಮಿಗೆ ಒಡೆಯ ಆದರೆ ಈವ್ ಅವಳ ಸೃಷ್ಟಿ ಕಾರ್ಯದಲ್ಲಿಯೂ ತಾರತಮ್ಯಕ್ಕೆ ಒಳಗಾಗುತ್ತಾಳೆ. ಎಲ್ಲ ವಿಷಯದಲ್ಲಿಯೂ ಅವಳು ಆಡಮ್ ಗೆ ಅಸಮಾನವಾದ ಸ್ಥಾನವನ್ನು ಹೊಂದಿದ್ದಾಳೆ. ಈವ್ ಮೃದುವಾದ ಹೃದಯವನ್ನು ಹೊಂದಿರುವವಳು ಮತ್ತು ಏನೂ ಅರಿಯದ ಅಮಾಯಕಳು ಎಂದು ಹೇಳುತ್ತಾರೆ. ಆದರೆ ಆಡಮ್ ನೊಂದಿಗೆ ಅವಳಿಗಿದ್ದ ಅಸಮಾನತೆಯ ಭಾವನೆ ಮತ್ತು ಹಣ್ಣನ್ನು ತಿಂದರೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬ ನಿಜಾಂಶ ಅರಿಯದೆ ಹೋದಳು ಆದರೆ ಅದಕ್ಕೆ ಕಾರಣ ಆಡಮ್ ಅವಳಿಗೆ ಫಾರ್ಬಿಡನ್ ಆಕ್ಟ್ ಬಗ್ಗೆ ಹೇಳದೆ ಇದ್ದದ್ದು, ಇದರಿಂದ ಅವಳು ಸೈತಾನನ ಮಾತನ್ನು ಕೇಳಿ ಹಣ್ಣನ್ನು ತಿನ್ನಬೇಕಾಯಿತು. ಸೈತಾನ್ ಅವಳಿಗೆ ದೇವರಿಗೆ ಸನಮಾನವಾದ ತಿಳುವಳಿಕೆಯನ್ನು ಹಣ್ಣನ್ನು ತಿನ್ನುವ ಮೂಲಕ ಪಡೆಯಬಹುದು ಎಂದು ಪ್ರೇರಣೆ ಮಾಡುವ ಮೂಲಕ ಹಣ್ಣನ್ನು ತಿನ್ನಲು ಮನವೊಲಿಸುತ್ತಾನೆ.ಆಡಮ್ ಫಾರ್ಬಿಡನ್ ಆಕ್ಟ್ ನ ವಿಷಯ ತಿಳಿದಿದ್ದೂ ಸಹ ಅವನು ದೇವರಷ್ಟೆ ಅಧಿಕಾರವನ್ನು ಪಡೆಯುವ ಉದ್ದೇಶದಿಂದ ಹಣ್ಣನ್ನು ತಿನ್ನುತ್ತಾನೆ ಅವನಿಗೆ ನೀಡಿದ ಜವಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲನಾಗುತ್ತಾನೆ. ಆದರೆ ಹಣ್ಣನ್ನು ತಿಂದ ಅಪರಾಧ ಮಾತ್ರ ಈವ್ ನ ಮೇಲೆ ಬಂದಿದೆ.ಅವನು ಈವಳ ಹೆಜ್ಜೆಯನ್ನು ಅನುಸರಿಸಿ ತನ್ನ ಸ್ವಾರ್ಥವನ್ನು ಪೂರೈಸಿಕೊಳ್ಳುತ್ತಾನೆ. ಈ ಒಂದು ನಿಜವಾಗಿಯೂ ತಪ್ಪನ್ನು ಮಾಡಿದವರನ್ನು ಸಾಭೀತು ಪಡಿಸುವ ಪ್ರಯತ್ನವನ್ನು ಈವ್ ಆಡಮ್ ನ ಮೇಲಿನ ಪ್ರೀತಿಯಿಂದ ಅವಳು ತಿನ್ನುತ್ತಾಳೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಪುರುಷ ಪ್ರಧಾನ ಸಮಾಜ ಆದಿ ಕಾಲದಿಂದಲೂ ಹೆಣ್ಣಿನ ಶೋಷಣೆ ಮಾಡಿರುವುದನ್ನು ಹಾಗೂ ಈವ್ ಮೇಲಿನ ದೋಷಾರೋಪಣೆಯನ್ನು ಹೋಗಲಾಡಿಸುವ ಪ್ರಯತ್ನವನ್ನು ಈ ಪದ್ಯದ ಮೂಲಕ ಮಾಡಿದ್ದಾರೆ. ಕೊನೆಯಲ್ಲಿ ಲೆನಿಯರ್ ಪುರುಷ ಪ್ರದಾನ ಸಮಾಜದ ಬಗ್ಗೆ ಕೋಪವನ್ನು ವ್ಯಕ್ತಪಡಿಸುತ್ತಾಳೆ ಇಂದಿಗೂ ಸಹ ಮಹಿಳೆಯನ್ನು ತನ್ನ ಗುಲಾಮಳಂತೆ ನಡೆಸಿಕೊಳ್ಳುತ್ತಿದ್ದಾರೆ ಪುರುಷರು ನಿರಂಕುಷರಂತೆ ವರ್ತಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಧಾರ್ಮಿಕ ವಿಧಿ ವಿಧಾನಗಳು ಮಹಿಳೆಯರು ಗುಲಾಮರಾಗಿರುವುದಕ್ಕೆ ಸಹಕಾರವನ್ನು ಮಾಡುತ್ತವೆ ಎಂದು ಹೇಳಿದ್ದಾರೆ. ಜನರು ಆಡಮ್ ನ ಬೂಟಾಟಿಕೆ ಯನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಮತ್ತು ಮಹಿಳೆಯನ್ನು ಪುರುಷರಿಗೆ ಸಮ ಎಂದು ನೋಡಲು ಅವರು ಇಷ್ಟ ಪಡುವುದಿಲ್ಲ ಎಂದು ಹೇಳುತ್ತಾರೆ. ಮತ್ತು ಅವಳು ಮಹಿಳೆಯರಿಗೆ ಮೊದಲನೆ ಸ್ಥಾನವನ್ನು ಕೊಡದಿದ್ದರು ಎರಡನೆ ಸ್ಥಾನವನ್ನಾದರು ಕೊಡಿ ಎಂದು ಕೋರಿಕೊಳ್ಳುತ್ತಾಳೆ.