Ephydridae
Hydrellia griseola
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಉಪಗಣ:
Section:
Subsection:
ಮೇಲ್ಕುಟುಂಬ:
ಕುಟುಂಬ:
Ephydridae
Subfamilies and tribes

Discomyzinae

Ephydrinae

Gymnomyzinae

Hydrelliinae

Ilytheinae

ಎಫಿಡ್ರ ನೊಣ ಸಂದಿಪದಿಗಳ ವಂಶದ ಡಿಪ್ಟಿರ ಗಣದ ಎಫಿಡ್ರಿಡೆ ಕುಟುಂಬದ ನೊಣ. ರಚನೆಯಲ್ಲಿ ಡ್ರೊಸಾಫಿಲಿಡೆ ಕುಟುಂಬವನ್ನು ಹೋಲುತ್ತದೆ. ದೇಹದ ಉದ್ದ 1/16 ರಿಂದ 3/8 ಅಂಗುಲ. ಉಪ್ಪುನೀರಿನಲ್ಲಿ ಮೊಟ್ಟೆಯಿಡುತ್ತದೆ. ಅಲ್ಲೇ ಮೊಟ್ಟೆಯೊಡದು ಲಾರ್ವ ಹೊರಬಂದು ಕೋಶಾವಸ್ಥೆ ತಲುಪುತ್ತದೆ[]. ಆಗ ಅಲೆಗಳ ಹೊಡೆತದಿಂದಾಗಿ ಕೋಶ ದಡ ಮುಟ್ಟುತ್ತದೆ. ಇವನ್ನು ಆಯ್ದು ಒಣಗಿಸಿ ರೆಡ್ ಇಂಡಿಯನರು ಆಹಾರವಾಗಿ ಬಳಸುತ್ತಾರೆ. ಮೆಕ್ಸಿಕೋದ ಸುತ್ತಮುತ್ತ ಈ ನೊಣ ಅಧಿಕ ಪ್ರಮಾಣದಲ್ಲಿ ವಾಸಿಸುತ್ತದೆ. ನೊಣದ ಬಣ್ಣ ಕಪ್ಪು ಅಥವಾ ಕಂದುಗೆಂಪು. ಬಾಯಿ ಬಹಳ ಅಗಲ. ಕೆನ್ನೆಗಳು ಉಬ್ಬಿವೆ. ತಲೆಯ ತಳಭಾಗದಲ್ಲಿ ಬಾಯ ಒಳಾಂಗಗಳು ಆವರಿಸಿವೆ. ಪ್ಸಿಲೋಪಪೆಟ್ರೊಲೈ ಎಂಬ ನೊಣದ ಲಾರ್ವಗಳು ಕಲ್ಲೆಣ್ಣೆ ಬಾವಿಗಳಲ್ಲಿ ವಾಸಿಸುತ್ತವೆ. ಇವು ಎಣ್ಣೆಬಾವಿಗೆ ಬೀಳುವ ಇತರ ಕೀಟಗಳನ್ನು ತಿಂದು ಬದುಕುತ್ತವೆ. ಕ್ಯಾಲಿಫೋರ್ನಿಯದ ವಿವಿಧ ತೈಲಪ್ರದೇಶಗಳಲ್ಲಿ ಇವು ಹೆಚ್ಚಾಗಿವೆ. (ಕೆ.ಎಂ.ವಿ.)

ಉಲ್ಲೇಖನಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2013-10-16. Retrieved 2016-10-21.