ಎನ್. ನಾರಾಯಣನ್ ಬಾಲಸುಬ್ರಮಣಿಯನ್
ಡಾ. ಎನ್. ನಾರಾಯಣನ್ ಬಾಲಸುಬ್ರಮಣಿಯನ್,(೧೦,ಜನವರಿ,೧೯೩೫-೨೪ ಫೆಬ್ರವರಿ,೨೦೧೯) [೧] ಮುಂಬಯಿಯ ಟೆಕ್ಸ್ ಟೈಲ್ ವಿಜ್ಞಾನಿ, ತಂತ್ರಶಾಸ್ತ್ರಜ್ಞರಲ್ಲೊಬ್ಬರು. 'ಮುಂಬಯಿ ಟೆಕ್ಸ್ ಟೈಲ್ಸ್ ರಿಸರ್ಚ್ ಅಸೋಸಿಯೇಷನ್' (BTRA) ನಲ್ಲಿ ಉಪ-ನಿರ್ದೇಶಕರಾಗಿ ಕೆಲಸಮಾಡುತ್ತಿದ್ದು ಈಗ ವಿಶ್ರಾಂತರಾಗಿದ್ದಾರೆ. ಬಾಲಸುಬ್ರಮಣಿಯವರು ವೃತ್ತಿಪರರಾಗಿದ್ದ ಸಮಯದಲ್ಲಿ ಟೆಕ್ಸ್ ಟೈಲ್ಸ್ ವಲಯಯದ ಹಲವಾರು ಶಾಖೆಗಳಲ್ಲಿ ಕಾರ್ಯನಡೆಸುವ ಯಂತ್ರಗಳ ಬಗ್ಗೆ, ಮತ್ತು ಕಾರ್ಯ ವಿಧಾನಗಳನ್ನು ಉತ್ತಮಪಡಿಸುವ ಬಗ್ಗೆ ನೂರಾರು ಸಂಶೋಧನೆ ನಡೆಸಿ, ಅವುಗಳ ಫಲಿತಾಂಶವನ್ನು 'ವಿಶ್ವದ ಪ್ರತಿಷ್ಠಿತ ಸಂಶೋದನಾ ನಿಯತಕಾಲಿಕೆ'ಗಳಲ್ಲಿ ಪ್ರಕಟಿಸಿದ್ದಾರೆ.[೨]
ಡಾ.ಎನ್.ನಾರಾಯಣನ್ ಬಾಲಸುಬ್ರಮಣಿಯನ್ | |
---|---|
Born | ನಾರಾಯಣ ೧೦,ಜನವರಿ,೧೯೩೫ ಮದ್ರಾಸ್, |
Died | ೨೪, ಫೆಬ್ರವರಿ,೨೦೧೯ |
Other names | ಭಾರತೀಯ |
Occupation(s) | ೧೯೫೫ ರಲ್ಲಿ 'ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ(ಟೆಕ್),ಟೆಕ್ಸ್ ಟೈಲ್ ಟೆಕ್ನೊಲೊಜಿಯಲ್ಲಿ ಪದವಿ' |
Known for | ಸಂಶೋಧಕ, ಮುಂಬಯಿ ಟೆಕ್ಸ್ ಟೈಲ್ ರಿಸರ್ಚ್ ಅಸೋಸಿಯೇಷನ್, ಮುಂಬಯಿ. ಪ್ರಸ್ತುತದಲ್ಲಿ ವಿಶ್ರಾಂತರಾಗಿದ್ದಾರೆ. |
Website | www |
ಜನನ, ವಿದ್ಯಾಭ್ಯಾಸ
ಬದಲಾಯಿಸಿನಾರಾಯಣ್, ಮದ್ರಾಸಿನ 'ಲಕ್ಷ್ಮಿಪುರಮ್' ಜಿಲ್ಲೆಯ 'ರಾಯಪೇಟ್ಟೈ' ನಲ್ಲಿ 'ಎನ್.ನಾರಾಯಣನ್' ಮತ್ತು 'ಸೌಂದರಂಬಾಳ್' ದಂಪತಿಗಳ ಪರಿವಾರದಲ್ಲಿ ೧೦ ಜನವರಿ, ೧೯೩೫ ರಲ್ಲಿ ಜನಿಸಿದರು. ತಂದೆ, 'ಮದ್ರಾಸ್ ಕಾರ್ಪೊರೇಷನ್ ನ ಲೋಕಲ್ ಫಂಡ್ ಆಡಿಟ್ ಆಯೋಜಿತ ಶಾಲೆ'ಯಲ್ಲಿ ಸಹಾಯಕ ಪರೀಕ್ಷರಾಗಿ ಕೆಲಸಮಾಡುತ್ತಿದ್ದರು. ಬಾಲಸುಬ್ರಮಣಿಯನ್ :
- 'ಮೈಲಾಪೊರ್ ನ, ಪಿ.ಎಸ್. ಹೈಸ್ಕೂಲ್' ನಲ್ಲಿ ವಿದ್ಯಾಭ್ಯಾಸ ಆರಂಬಿಸಿ ತರಗತಿಗೇ ಪ್ರಥಮರಾಗಿ ಉತ್ತೀರ್ಣಹೊಂದಿದರು.
- 'ಇಂಟರ್ಮೀಡಿಯೇಟ್' ಮತ್ತು 'ಬಿಎಸ್ಸಿ (ಫಿಸಿಕ್ಸ್) ಪದವಿ'ಗಳನ್ನು ಮದ್ರಾಸಿನ ಸರಕಾರಿ ಆರ್ಟ್ಸ್ ಕಾಲೇಜಿನಲ್ಲಿ ಪ್ರಥಮದರ್ಜೆಯಲ್ಲಿ ಮುಗಿಸಿದರು.
- 'ಬಿಎಸ್ಸಿ.ಟೆಕ್ ಟೆಕ್ಸ್ ಟೈಲ್ ಲ್ಟೆಕ್ನೊಲೊಜಿ ಪರೀಕ್ಷೆ'ಯನ್ನು 'ಎ.ಸಿ.ಕಾಲೇಜ್ ಆಫ್ ಟೆಕ್ನೊಲೊಜಿ,ಗಿಂಡಿ', ಯಲ್ಲಿ ಕಾಲೇಜಿಗೇ ಎರಡನೆಯವರಾಗಿ ತೇರ್ಗಡೆಯಾದರು.
- 'ಮಧುರೈ ಮೀನಾಕ್ಷಿ ಮಿಲ್ಸ್' ನಲ್ಲಿ ಸ್ವಲ್ಪಸಮಯ ಸೂಪರ್ವೈಸರ್ ಆಗಿ ಕೆಲಸಮಾಡಿದರು.
ಮುಂಬಯಿಯ ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿಯಲ್ಲಿ ಪಾದಾರ್ಪಣೆ
ಬದಲಾಯಿಸಿ, ನಾರಾಯಣನ್ ಬಾಲಸುಬ್ರಮಣಿಯನ್[೩], ಮದ್ರಾಸ್ ನಿಂದ, ಮುಂಬಯಿಗೆ ಬಂದು,೧೯೬೫ ರಲ್ಲಿ 'ಮಾಟುಂಗಾದ ಏಡೆನ್ವಾಲ ರಸ್ತೆಯಲ್ಲಿದ್ದ ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ'ಯಲ್ಲಿ ವೃತ್ತಿಜೀವನ ಆರಂಭಿಸಿ, ೬ ವರ್ಷ ಕೆಲಸಮಾಡಿದರು. ಅಲ್ಲಿ ಹಲವಾರು 'ಸಂಶೋಧನಾ ಪ್ರಾಜೆಕ್ಟ್' ಗಳಲ್ಲಿ ಕೆಲಸಮಾಡಿದ ಬಾಲಸುಬ್ರಮಣಿಯನ್,'ಕಾಮನ್ವೆಲ್ತ್ ಸ್ಕಾಲರ್ಶಿಪ್' ವತಿಯಿಂದ ಇಂಗ್ಲೆಂಡಿನ 'ಲೀಡ್ಸ್ ವಿಶ್ವವಿದ್ಯಾಲಯ'ಯಕ್ಕೆ ಹೋಗಿ,'ಪಿ.ಎಚ್.ಡಿ' ಗಳಿಸಿದರು. ಅಲ್ಲಿ ಪದವಿಗಳಿಸಿದ ಬಳಿಕ,ಮುಂಬಯಿನಲ್ಲಿ ಆಗತಾನೇ ಶುರುವಾಗಿದ್ದ 'ಮುಂಬಯಿ ಟೆಕ್ಸ್ ಟೈಲ್ ರಿಸರ್ಚ್ ಅಸೋಸಿಯೇಷನ್'(BTRA) ನಲ್ಲಿ 'ರಿಸರ್ಚ್ ಅಧಿಕಾರಿ'ಯಾಗಿ ಸೇರಿ, ಕಾರ್ಯನಿರ್ವಹಿಸಿದರು. ಲ್ಯಾಬೊರೇಟೊರಿ ಕಾಲಕಾಲಕ್ಕೆ ಹಲವಾರು ಹೊಸಹೊಸ ಸಂಶೋಧನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಹಂತ ಹಂತವಾಗಿ ಮೇಲಕ್ಕೆ ಬೆಳೆಯಿತು.
- 'ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ (Technological Laboratory,(TL),ಎಂಬ ಹೆಸರಿನಲ್ಲಿ ಪ್ರಾರಂಭವಾಯಿತು.
- 'ಸಿ.ಟಿ.ಆರ್.ಎಲ್ ಲ್ಯಾಬೊರೇಟೊರಿ' (Cotton Technological Research Laboratory (CTRL), ನಂತರ,
- 'ಸೆಂಟ್ರೆಲ್ ಇನ್ಸ್ ಸ್ಟಿಟ್ಯೂಟ್ ಫಾರ್ ರಿಸರ್ಚ್ ಆನ್ ಕಾಟನ್ ಟೆಕ್ನೊಲಜಿ'(Central Institute for Research on Cotton Technology (CIRCOT) [೪]
ಮದುವೆ
ಬದಲಾಯಿಸಿ'ಬಾಲಸುಬ್ರಮಣಿಯನ್', ೧೯೬೨ ರಲ್ಲಿ ಜಮುನ ಅವರನ್ನು ಮದುವೆಯಾದರು. [೫] ಲೀಡ್ಸ್ ನಲ್ಲಿ ವ್ಯಾಸಂಗಮಾಡುತ್ತಿದ್ದಾಗ ಅವರ ಪತ್ನಿಯವರೂ ಜೊತೆಯಲ್ಲಿದ್ದರು. ಈ ದಂಪತಿಗಳಿಗೆ ಬದ್ರಿನಾರಾಯಣ್ ಮತ್ತು ರಘುನಾಥ್ ಎಂಬ ಇಬ್ಬರು ಗಂಡು ಮಕ್ಕಳು. ಇಂಗ್ಲೆಂಡಿನಿಂದ ಬಂದಮೇಲೆ ಅವರು ೧೯೬೫ ರಲ್ಲಿ ಮುಂಬಯಿನಗರದ ಬಿ.ಟಿ.ಆರ್.ಎ, (BTRA) ಗೆ ಸೇರಿ, ಹಲವಾರು ಹುದ್ದೆಗಳಲ್ಲಿ ಕೆಲಸಮಾಡಿ ೩೦ ವರ್ಷಗಳ ಸೇವೆಯನಂತರ, ೧೯೯೫ ರಲ್ಲಿ ನಿವೃತ್ತರಾದರು. ಆ ವೇಳೆಯಲ್ಲಿ ಬಾಲಸುಬ್ರಮಣಿಯವರು ಮಾಡಿದ ಕಾರ್ಯಗಳು :
- 'ಆರ್ ಅಂಡ್ ಡಿ, ಮತ್ತು ಟೆಕ್ನಿಕಲ್ ಕನ್ಸಲ್ಟೆನ್ಸಿ ಇನ್ ಟೆಕ್ಸ್ ಟೈಲ್ಸ್ ಮತ್ತು ನಾನ್ ಒವೆನ್ಸ್',
- '೮ ಎಮ್.ಟೆಕ್ಸ್ ಟ್, ವಿದ್ಯಾರ್ಥಿಗಳಿಗೆ, ಮತ್ತು ೪-೫ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ'ಮಾಡಿದರು.
- ಪ್ರತಿವರ್ಷವೂ ಬಿ.ಟಿ.ಆರ್.ಎ,(BTRA) ಎಸ್.ಟಿ.ಆರ್.ಎ (SITRA) ಹಾಗೂ (ATIRA)ಎ.ಟಿ.ಐ.ಆರ್.ಎ., ಅನುಸಂಧಾನ ಸಂಸ್ಥೆಗಳು ಜಂಟಿಯಾಗಿ ಆಯೋಜಿಸುತ್ತಿದ್ದ ಕಮ್ಮಟದಲ್ಲಿ 'ಡಾ.ಬಾಲಸುಬ್ರಮಣಿಯನ್' ರವರ ಒಂದು 'ಶೋಧಪತ್ರದ ಪ್ರಸ್ತುತಿ', ಇದ್ದೇ ಇರುತ್ತಿತ್ತು.[೬]
ನಿವೃತ್ತಿಯ ಬಳಿಕ
ಬದಲಾಯಿಸಿ- 'ಮುಂಬಯಿನ ಹೆಸರಾಂತ ಟೆಕ್ಸ್ ಟೈಲ್ ಮಿಲ್ ಗಳಿಗೆ ಟೆಕ್ನಿಕಲ್ ಕನ್ಸಲ್ಟೆನ್ಸಿ ಸೇವೆ', ಹಾಗೂ 'ಭಾರತದ ನಾನ್ ಓವೆನ್ ಘಟಕಗಳಿಗೆ ಮಾರ್ಗದರ್ಶನ'
- 'ಟೆಕ್ಸ್ ಟೈಲ್ ವಿಜ್ಞಾನಕ್ಕೆ ಸಂಬಂಧಿಸಿದ ಪ್ರತಿಷ್ಠಿತ ಜರ್ನಲ್ಸ್' ಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದಾರೆ. ಜರ್ನಲ್ ಗಳಿಗೆ ಲೇಖನಗಳನ್ನು ಪ್ರಕಟಿಸುವ ಮೊದಲು ರೆಫ್ರಿಯಾಗಿ ಸಹಾಯಮಾಡುತ್ತಿದ್ದಾರೆ.
ವಿದ್ಯಾರ್ಹತೆಗಳು ಹಾಗೂ ನಿರ್ವಹಿಸಿದ ಪದವಿಗಳು
ಬದಲಾಯಿಸಿ- ೧೯೫೩ 'ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ',
- ೧೯೫೫ ರಲ್ಲಿ 'ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ(ಟೆಕ್), ಟೆಕ್ಸ್ ಟೈಲ್ ಟೆಕ್ನೊಲೊಜಿಯಲ್ಲಿ ಪದವಿ',
- ೧೯೬೧ ರಲ್ಲಿ 'ಮುಂಬಯಿ ವಿಶ್ವವಿದ್ಯಾಲಯದಿಂದ ಡಾ.ಆರ್.ಎಲ್.ಎನ್.ಅಯ್ಯಂಗಾರ್ ಮಾರ್ಗದರ್ಶನದಲ್ಲಿ ಎಮ್ಮೆಸ್ಸಿ ಪದವಿ (ಟೆಕ್ಸ್ ಟೈಲ್ ಫಿಸಿಕ್ಸ್)',
- ೧೯೬೪ ರಲ್ಲಿ 'ಲೀಡ್ಸ್ ವಿಶ್ವವಿದ್ಯಾಲಯದಿಂದ ಪ್ರೊ.ಗ್ರಾಸ್ ಬರ್ಗ್ ಮಾರ್ಗದರ್ಶನದಲ್ಲಿ ಟೆಕ್ಸ್ ಟೈಲ್ ಟೆಕ್ನೊಲೊಜಿಯಲ್ಲಿ ಪಿ.ಎಚ್.ಡಿ.ಪದವಿ',
- 'ಮ್ಯಾಂಚೆಸ್ಟರ್ ಟೆಕ್ಸ್ ಟೈಲ್ ಇನ್ ಸ್ಟಿ ಟ್ಯೂಟ್ ನಿಂದ ಎ.ಟಿ.ಐ. ಪದವಿ',
- ೧೯೭೦ ರಲ್ಲಿ 'ಟೆಕ್ಸ್ ಟೈಲ್ ಇನ್ ಸ್ಟಿಟ್ಯೂಟ್ ಮ್ಯಾನ್ ಚೆಸ್ಟರ್ ನಿಂದ ಎಫ್.ಟಿ.ಐ. ಪದವಿ',
- ೨೦೦೦ ದಲ್ಲಿ 'ಟೆಕ್ಸ್ ಟೈಲ್ ಇನ್ ಸ್ಟಿಟ್ಯೂಟ್ ಮ್ಯಾನ್ ಚೆಸ್ಟರ್ ನಿಂದ ಗೌರವ ಫೆಲೊಶಿಪ್',
- 'ಮುಂಬಯಿ ಟೆಕ್ಸ್ ಟೈಲ್ ರಿಸರ್ಚ್ ಅಸೋಸಿಯೇಷನ್' ನಿಂದ ಜಂಟಿ ನಿರ್ದೇಶಕರ ಹುದ್ದೆಯಿಂದ ನಿವೃತ್ತರಾದರು.
- 'ರಿಸರ್ಚ್ ಮತ್ತು ಡೆವೆಲಪ್ಮೆಂಟ್ ವಲಯ'ದಲ್ಲಿ ೫೦ ವರ್ಷಗಳ ಅನುಭವಿ,
- 'ಹೆಸರಾಂತ ಟೆಕ್ಸ್ ಟೈಲ್ ಮಿಲ್' ಗಳಿಗೆ ಮತ್ತು 'ನಾನ್ ಓವೆನ್ ಘಟಕ'ಗಳಿಗೆ ಸಲಹಾಕಾರರು,
- 'ಮುಂಬಯಿ ವಿಶ್ವವಿದ್ಯಾಲಯದ ಎಮ್ಮೆಸ್ಸಿ ಮತ್ತು ಪಿ.ಎಚ್.ಡಿ.ವಿಶಯಗಳಿಗೆ 'ರಿಸರ್ಚ್ ಗೈಡ್' ಆಗಿದ್ದಾರೆ'.
ನಿಧನ
ಬದಲಾಯಿಸಿ೮೪ ವರ್ಷದ ಡಾ.ಬಾಲಸುಬ್ರಮಣಿಯನ್ ರವರು, ೨೪, ಫೆಬ್ರವರಿ, ೨೦೧೯ ರಂದು ನಿಧನರಾದರು. [೭]
ಉಲ್ಲೇಖಗಳು
ಬದಲಾಯಿಸಿ- ↑ "' Technical Consultancy in Textiles, Nonwovens, Technical Textiles and Geotextiles, Dr. N.Balasubramanian, Complete works of Dr. Balasubramanian)". Archived from the original on 2014-07-07. Retrieved 2015-01-16.
- ↑ Critical factors affecting the properties of thermal-bonded nonwovens with special reference to cellulosic fibres-A.N.Desai & N.Balasubramanian
- ↑ www.fibre2fashion.com N.Balasubramanian Profile
- ↑ N.Balasubramanian biodata
- ↑ '7th Death Annivarsary. Affectionately remembered by Dr. N. B
- ↑ "Artilces By : Dr. N.Balasubramanian-Spinning". Archived from the original on 2012-07-10. Retrieved 2015-01-19.
- ↑ ಡಾ.ಬಾಲಸುಬ್ರಮಣಿಯನ್ ರವರು, ೨೪, ಫೆಬ್ರವರಿ, ೨೦೧೯ ರಂದು ನಿಧನರಾದರು