ಎಡ್ಮಂಡ್ ಗಾಸ್

ಆಂಗ್ಲ ಸಾಹಿತಿ

1849-1928. ಇಂಗ್ಲಿಷ್ ಸಾಹಿತಿ. ಯುರೋಪಿನ ಬೇರೆ ಬೇರೆ ದೇಶಭಾಷೆಗಳ ಉತ್ಕ್ರಷ್ಟ ಸಾಹಿತ್ಯ ಕೃತಿಗಳನ್ನು ಇಂಗ್ಲೆಂಡಿನ ಓದುಗರಿಗೆ ಪರಿಚಯ ಮಾಡಿಕೊಟ್ಟ ವಿದ್ವಾಂಸ ವಿಮರ್ಶಕ.

Edmund Gosse, by John Singer Sargent, 1886

ತಂದೆ ಪಿ. ಎಚ್. ಗಾಸ್ ಧರ್ಮ ನಿಷ್ಠನಾದ ಒಬ್ಬ ಪ್ರಾಣಿವಿe್ಞÁನಿ. ಮನೆಯ ಕಠಿಣ ನೀತಿನಿಯಮಗಳ ವಾತಾವರಣ ಯುವಕ ಎಡ್ಮಂಡನಿಗೆ ಹಿಡಿಸಲಿಲ್ಲ. ಆದುದರಿಂದ ತಾನು ವಿಪರೀತ ಒತ್ತಡಕ್ಕೆ ಒಳಗಾಗಬೇಕಾಯಿತೆಂದು ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾನೆ. ಈ ವಿರಸವನ್ನು ಮರೆಯಲು ಎಡ್ಮಂಡ್ ಸಾಹಿತ್ಯಾಭ್ಯಾಸದಲ್ಲಿ ನಿರತನಾದ. ಅನೇಕ ವರ್ಷ ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂ, ಬೋರ್ಡ್ ಆಫ್ ಟ್ರೇಡ್ ಸಂಸ್ಥೆಗಳಲ್ಲಿ ದುಡಿದು ಬಿಡುವಿನ ಕಾಲವನ್ನೆಲ್ಲ ಸಾಹಿತ್ಯ ಅಧ್ಯಯನಕ್ಕೆ ವಿನಿಯೋಗಿಸಿದ.

ಕೃತಿಗಳು

ಬದಲಾಯಿಸಿ

ಈತ ಬರೆದ ಕೆಲವು ಸಾಧಾರಣ ಕವನಗಳು, ಭಾಷಾಂತರಗಳು, ಸಾಹಿತ್ಯ ಚರಿತ್ರೆಗಳು, ವಿಮರ್ಶಾತ್ಮಕ ಬರೆಹಗಳು ಇವನಿಗೆ ಆ ಕಾಲದಲ್ಲಿ ಖ್ಯಾತಿ ತಂದವು. ಆಧುನಿಕ ಸಾಹಿತ್ಯ ಯುಗದ ಕ್ರಾಂತಿಕಾರಕ ಬದಲಾವಣೆಗಳು ಅಸ್ತಿತ್ವಕ್ಕೆ ಬರುವ ಮುನ್ನ ರಚಿತವಾದುವಾದ್ದರಿಂದ ಈತನ ಕೃತಿಗಳು ಈಗ ತೀರಾ ಅಪಕ್ವವೆನಿಸುತ್ತವೆ. ಈತನ ಮುಖ್ಯಕೃತಿಗಳಲ್ಲಿ ಇಬ್ಸೆನ್ ನಾಟಕಗಳ ಭಾಷಾಂತರಗಳು, ಈತ ಸಂಪಾದಿಸಿದ ಥಾಮಸ್ ಗ್ರೇ, ಜಾನ್ ಡನ್, ಥಾಮಸ್ ಬ್ರೌನ್ ಮುಂತಾದವರ ಕೃತಿಗಳು, 18ನೆಯ ಶತಮಾನದ ಇಂಗ್ಲಿಷ್ ಸಾಹಿತ್ಯದ ಚರಿತ್ರೆ, ಕ್ರಿಟಿಕಲ್ ಕಿಟ್ಕ್ಯಾಟ್ಸ, ಫ್ರೆಂಚ್ ಪ್ರೊಫೈಲ್ಸ ಮುಂತಾದವು ಸೇರಿವೆ. ಎಡ್ಮಂಡನ ಬರೆವಣಿಗೆಯಲ್ಲಿ ವಿಪುಲವಾದ ಉತ್ಸಾಹ, ರಮಣೀಯತೆಗಳಿದ್ದರೂ ಸಾರ್ವಕಾಲಿಕವಾದ ಸಾಹಿತ್ಯ ಮೌಲ್ಯಗಳು ವಿರಳ. ಆದರೆ ಸ್ಕಾಂಡಿನೇವಿಯನ್ ಹಾಗೂ ಫ್ರೆಂಚ್ ಸಾಹಿತ್ಯ, ಮತ್ತು 17-18ನೆಯ ಶತಮಾನದ ಇಂಗ್ಲಿಷ್ ಸಾಹಿತ್ಯ- ಇವುಗಳಲ್ಲಿ ಅಪಾರ ಕೃಷಿ ನಡೆಸಿದ ಅಗ್ರಗಣ್ಯರಲ್ಲಿ ಈತ ಒಬ್ಬ.

ಫಾದರ್ ಅಂಡ್ ಸನ್ ಎನ್ನುವ ಗಾಸ್ ನ ಆತ್ಮಕಥೆ, ಇಂಗ್ಲಿಷ್ ಭಾಷೆಯಲ್ಲಿನ ಒಂದು ಅಪೂರ್ವ ಗ್ರಂಥ. ಇವನ ನವುರಾದ ವ್ಯಂಗ್ಯ, ಬುದ್ಧಿಶಕ್ತಿ, ತಾಳ್ಮೆ ಎಲ್ಲವೂ ಇಲ್ಲಿ ಆಕರ್ಷಕ ಶೈಲಿಯಲ್ಲಿ ಅಭಿವ್ಯಕ್ತಿಗೊಂಡಿವೆ.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: