ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ


ಎಡೆಮಠದ ನಾಗಿದೇವಯ್ಯ ಎಂಬುವರ ಧರ್ಮಪತ್ನಿ ಮಸಣಮ್ಮ. ತಮಿಳುನಾಡಿನ 'ಕಂಚಿಪಟ್ಟಣ'ದಿಂದ ಬಂದು ಬಸವಣ್ಣನ ಒಡನಾಡಿಯಾಗಿ 'ಚಿಮ್ಮಲಿಗೆ'ಯಲ್ಲಿ ನೆಲೆಸಿ ಅಲ್ಲಿನ ಸ್ವಾಮೀಜಿಗಳಾದ ನಿಜಗುಣರಿಂದ ನಿಜೋಪದೇಶ ಪಡೆದು ಪತಿಯೊಂದಿಗೆ ಧರ್ಮ ಪ್ರಚಾರದ ಕಾರ್ಯದಲ್ಲಿ ತೊಡಗಿ ಕೊಂಡಿದ್ದವಳು. ವ್ರತಹೀನರಿಗೆ ಶಿವಬೋಧೆ ಲಭಿಸದು, ವ್ರತಾಚರಣೆ ಎಲ್ಲರಿಗೂ ದಕ್ಕದೆಂಬ ನಿಲುವು ಆಕೆಯದು. ಈಕೆಯ ವಚನಗಳ ಅಂಕಿತ "ನಿಜಗುಣೇಶ್ವರಲಿಂಗ".

ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ
ಜನನ೧೧೬೦
ಅಂಕಿತನಾಮನಿಜಗುಣೇಶ್ವರಲಿಂಗ
ಸಂಗಾತಿ(ಗಳು)ಚೋಳಮಂಡಲದ ಕಾಂಚಿ ನಗರದ ಎಡೆಮಠದ ನಾಗಿದೇವ

ವಚನ ವೈಶಿಷ್ಟ್ಯಸಂಪಾದಿಸಿ

ತನ್ನ ವಚನದಲ್ಲಿ ಮಸಣಮ್ಮ ವ್ರತನಿಷ್ಠೆ ಮತ್ತು ದಿನನಿತ್ಯದ ಪ್ರತಿಮೆಗಳ ಮೂಲಕ ಭೂಲೋಕದ ಜನರಿಗೂ, ಶಿವಭಕ್ತರಿಗೂ ಇರುವ ವ್ಯತ್ಯಾಸಗಳನ್ನು ಶೃತ ಪಡಿಸಿದ್ದಾಳೆ. ನಾಯಿಗೂ-ನಾರಂಗಕ್ಕೂ ನಡುವೆ ಇರುವ ಅಗಾಧ ಅಂತರವನ್ನು ತಿಳಿಸಿದ್ದಾಳೆ. ಈಕೆಯ ಒಂದೇ ಒಂದು ವಚನ ಮಾತ್ರ ದೊರಕಿದೆ.

ಕಾಗೆಯ ನಾಯ ತಿಂದವರಿಲ್ಲ
ವ್ರತಭ್ರಷ್ಟರ ಕೂಡಿದವರಿಲ್ಲ
ನಾಯಿಗೆ ನಾರುಂಗನವ ಇಕ್ಕುವುದೇ?
ಲೋಕದ ನರಂಗೆ ವ್ರತವ ಇಕ್ಕುವುದೇ?
ಶಿವ ಬೀಜಕ್ಕಲ್ಲದೆ ನೀವೇ ಸಾಕ್ಷಿ
ನಿಜಗುಣೇಶ್ವರಲಿಂಗದಲ್ಲಿ