ಹಟ್ಟಿಯಂಗಡಿ ವೆಂಕಟ್ರಾಯ ಕಾಮತ್’ ಅವರ ಗೆಳೆಯರಿಗೆಲ್ಲ, ’ಎಚ್.ವಿ.ಕಾಮತ್’ ಯೆಂದೇ ಪ್ರಸಿದ್ಧರು. ಬಿಎಸ್ಸಿ ಶಿಕ್ಷಣಗಳಿಸಿದ ಬಳಿಕ,’ಸಿಂಡಿಕೇಟ್ ಬ್ಯಾಂಕ್’ಸೇರಿ ಸುಮಾರು ೩೦ ವರ್ಶಗಳ ಕಾಲ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದರು. ಅವರು ಸೇವಾನಿವೃತ್ತರಾದಾಗ 'ಹೆಚ್ಚುವರಿ ಪ್ರಬಂಧಕ'ರ ಹುದ್ದೆಯಲ್ಲಿದ್ದರು. ಕಾಮತ್ ರವರು 'ಡಾ. ಟಿ.ಎಂ.ಎ.ಪೈ', 'ಟ್.ಎ.ಪೈ', 'ಕೆ.ಕೆ.ಪೈ', ಈ ಮೂವರೂ ಅಧ್ಯಕ್ಷರಾಗಿದ್ದಾಗ ಅವರೊಡನೆ ನಿಕಟ ಸಂಬಂಧವಿರಿಸಿಕೊಂಡಿದ್ದ ಅಪರೂಪದ ವ್ಯಕ್ತಿಯಾಗಿದ್ದರು.ಕಾಮತ್ ವಿವಿಧ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

  • 'ಡಾ.ಟಿ.ಎಂ.ಎ.ಪೈ ಪ್ರತಿಷ್ಠಾನ',
  • 'ಕೊಂಕಣಿ ಭಾಷೋದ್ಧಾರ ಟ್ರಸ್ಟ್',
  • 'ಮಣಿಪಾಲ್ ವಿಶ್ವವಿದ್ಯಾಲಯ',
  • 'ಕೆ.ಎಂ.ಸಿ',
  • 'ಎಂ.ಐ.ಟಿ',
  • 'ಬಸ್ರೂರು ಶಾರದಾ ಕಾಲೇಜ್ ಟ್ರಸ್ಟ್',
'ಎಚ್.ವಿ.ಕಾಮತ್'

'ಎಚ್.ವಿ.ಕಾಮತ್', 'ಮಣಿಪಾಲ್ ಆಸ್ಪತ್ರೆ'ಯಲ್ಲಿ, ಸನ್, ೨೦೧೦ ರ, ಸೋಮವಾರ, ಜೂನ್, ೨೮ ರಂದು ಮರಣಿಸಿದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಮರಣೋತ್ತರ ಪ್ರಶಸ್ತಿ

ಬದಲಾಯಿಸಿ

ಕೊಂಕಣಿ ಅಲ್ಪ ಸಂಖ್ಯಕ ಭಾಷಾ ಸಂಸ್ಥೆ,ಮಣಿಪಾಲದ ಡಾ.ಟಿ.ಎಂ.ಎ, ಪೈ ಫೌಂಡೇಶನ್, 'ಶ್ರೇಷ್ಠ ಕೊಂಕಣಿಗ ಪ್ರಶಸ್ತಿ'ಯನ್ನು ಮಾರ್ಚ್, ೨೬, 2011ರ ಸಂಜೆ, ೫-೩೦ ಕ್ಕೆ, ’ಹೋಟೆಲ್ ವ್ಯಾಲಿ ವ್ಯೂ’ ಸಭಾಂಗಣದಲ್ಲಿ ಕೊಡಲು ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದೆ.