ಪ್ರೊ. ಎಚ್ ಟಿ ಪೋತೆಯವರು ಮೂಲತಃ ಜಾನಪದ ವಿದ್ವಾಂಸರು. ಆದರೂ ಕಥೆ, ಪ್ರಬಂಧ, ಕಾದಂಬರಿ, ವಚನ ಸಾಹಿತ್ಯ, ದಲಿತ ಸಾಹಿತ್ಯ, ವಿಚಾರ, ವಿಮರ್ಶೆ ,ಹಾಯ್ಕುಗಳು ಮೊದಲಾದ ಪ್ರಕಾರಗಳ ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ []. 'ಶರಣ ಸಾಹಿತ್ಯ ವಿಮರ್ಶಾ ಸಂಪುಟಗಳು' ಸು. ೧೫ ಸಂಪುಟಗಳನ್ನು, 'ದಲಿತ ಸಾಹಿತ್ಯ ಸಂಪುಟಗಳು' ಸು. ೬ ಸಂಪುಟಗಳು, 'ಕನ್ನಡ ಬೌದ್ಧ ಸಾಹಿತ್ಯ ಸಂಪುಟಗಳು' ಆರು ಸಂಪುಟಗಳು ಹೀಗೆ ಬೃಹತ್ ಸಂಪುಟಗಳ ಪ್ರಧಾನ ಸಂಪಾದನಕಾರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಬಹುಮುಖ್ಯವಾಗಿ ಇವರು ಕನ್ನಡ ದಲಿತ ಸಾಹಿತ್ಯದಲ್ಲಿ ಅಂಬೇಡ್ಕರವಾದಿ ಚಿಂತನೆಗಳನ್ನು ಗಂಭೀರ ನೆಲೆಯಲ್ಲಿ ತಾತ್ವಕವಾಗಿ ಮೈಗೂಡಿಸಿಕೊಂಡಿರುವ ವಿಶಿಷ್ಟ ಹಾಗೂ ಅಪರೂಪದ ಲೇಖಕರು ಮತ್ತು ಚಿಂತಕರು.


ಪ್ರೋ. ಎಚ್. ಟಿ. ಪೋತೆ ಅವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಂಜಗಿಯಲ್ಲಿ ೧೯೬೫ ಜೂನ್ ೧ರಂದು ಜನಿಸಿದರು []. ಪೋತೆಯವರ ತಂದೆ ತಮ್ಮಣ್ಣ ಪೋತೆ (ಕೃಷಿಕ ಮನೆತನ) ಹಾಗೂ ತಾಯಿ ಅಂಬವ್ವ. ಬಾಳಸಂಗಾತಿ ಲಲಿತಾ ಎಸ್ ಪೋತೆ ಹಾಗೂ ಮಕ್ಕಳಾದ ವರ್ಷಾ, ಪೋರ್ಣಿಮಾ ಮತ್ತು ಅಭಯಕುಮಾರ್‌ರೊಂದಿಗೆ ಜೀವಿಸುತ್ತಿದ್ದಾರೆ. ಇವರು ವಿಜಯಪುರ ಹಾಗೂ ಕಲಬುರ್ಗಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ವಿಜಯಪುರದ ಬಿ.ಎಲ್.ಡಿ ಶಿಕ್ಷಣಸಂಸ್ಶೆಯ ನೂತನ ಕಲಾ ಮಹಾವಿದ್ಯಾಲಯದಲ್ಲಿ ಬಿ.ಎ ಪದವಿ, ಗುಲ್ಬರ್ಗಾ ವಿಶ್ವವಿದ್ಯಾಲದಿಂದ ಎಂ.ಎ ಕನ್ನಡ ಮತ್ತು ಜಾನಪದ, ಎಂ.ಫಿಲ್,(ಹೈದ್ರಾಬಾದ್ ಕರ್ನಾಟಕದ ಜನಪದ ಪ್ರದೆರ್ಶನ ಕಲೆಗಳು), ನೀರ ನೆಳಲು (ಅಂಬೇಡ್ಕರ್ ಚಿಂತನೆಯ ಅಧ್ಯಯನಾತ್ಮಕ ಲೇಖನಗಳು) ಕೃತಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿಯನ್ನು ಪಡೆದಿದ್ದಾರೆ. ಆರಂಭದಲ್ಲಿ ಕಲಬುರ್ಗಿಯ ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟೆಯ ಖೇಡಗಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆಸಲ್ಲಿಸಿದ್ದಾರೆ.

ಕೆಲಸ ಕಾರ್ಯಗಳು

ಬದಲಾಯಿಸಿ

ಪ್ರಸ್ತುತ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸಾರಾಂಗದ ನಿದೇರ್ಶಕರಾಗಿ, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿದೇರ್ಶಕರಾಗಿಯೂ ಕಾರ್ಯಭಾರ ನಿರ್ವಹಿಸುತ್ತಿದ್ದಾರೆ. ಡಾ. ಬಿ.ಆರ್. ಅಂಬೇಡ್ಮರ್ ಅಧ್ಯಯನ ಸಂಸ್ಥೆಯ ನಿದೇರ್ಶಕರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ ಶಿಸ್ತುಗಳಲ್ಲಿ (ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾಗಿ, ಕಲಾನಿಕಾಯದ ಡೀನ್) ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಕನ್ನಡ, ಹಿಂದಿ, ಇಂಗ್ಲಿಷ್, ಮರಾಠಿ ಮತ್ತು ಉರ್ದು ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ಅಂಬೇಡ್ಕರ್ ವಾಚಿಕೆಯ ಪ್ರಧಾನ ಸಂಪಾದಕರಾಗಿಯೂ ದುಡಿಯುತ್ತಿದ್ದಾರೆ. ಪ್ರಸ್ತುತ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಬಾಸಾಹೇಬ ಅಂಬೇಡ್ಕರ್ ಅವರ ಚಿಂತನೆಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡ ಶ್ರೀಯುತರು ಜನಸಮುದಾಯದಲ್ಲಿಯೂ ಅಂಬೇಡ್ಕರ್ ಚಿಂತನೆಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ಹಗಲಿರುಳೆನ್ನದೆ ತಮ್ಮ ಬರಹ ಭಾಷಣಗಳ ಮೂಖಾಂತರ ಮಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿ ಅಸ್ತಿತ್ವಕ್ಕೆ ತರುವಲ್ಲಿ ಇವರ ಪಾತ್ರ ಪ್ರಥಮ ಪ್ರಮುಖವಾಗಿದೆ. ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನಡೆದ ಜಿಲ್ಲಾ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದ ಗೌರವಕ್ಕೂ ಪಾತ್ರರಾಗಿದ್ದಾರೆ []. ಹೀಗೆ, ಡಾ. ಎಚ್. ಟಿ. ಪೋತೆಯವರು ಸಾಹಿತ್ಯ ಸಂಘಟನೆ ಹಾಗೂ ಹೋರಾಟಗಳಲ್ಲಿ ತಮ್ಮನ್ನು ಕ್ರಿಯಾಶೀಲವಾಗಿ ಗುರ್ತಿಸಿಕೊಂಡಿದ್ದಾರೆ.

ಕೊಡುಗೆಗಳು

ಬದಲಾಯಿಸಿ

'ಬುದ್ಧ-ಬಸವಣ್ಣನವರ ಸಾಮಾಜಿಕ ಚಿಂತನೆ' ಕುರಿತು ೧೬ ಮತ್ತು ೧೭ ಮೇ, ೨೦೧೭ ರಂದು ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನಲ್ಲಿ ನಡೆದ ಅಂತರರಾಷ್ಟ್ರೀಯ ಸಮಾರಂಭದಲ್ಲಿ ಪ್ರಬಂಧ ಮಂಡಿಸಿದ್ದಾರೆ. ದಲಿತ ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಅಂಬೇಡ್ಕರ್ ವಿಷಯ ಕುರಿತು ೨೧-೨೨-೨೩ ಜುಲೈ ೨೦೧೭ರಂದು ಜಿಕೆವಿಕೆ ಆವರಣ ಬೆಂಗಳೂರಲ್ಲಿ ಹಮ್ಮಿಕೊಂಡಿದ್ದ ಬಿ.ಆರ್. ಅಂಬೇಡ್ಕರ್ ಅಂತರರಾಷ್ಟ್ರೀಯ ಸಮಾವೇಶ ಸಮಾನತೆಯ ಅನ್ವೇಷಣೆ ಮೂರು ಸಮಾರಂಭದಲ್ಲಿ ೨೨ ಜುಲೈರಂದು ಪ್ರಬಂಧ ಮಂಡಿಸಿದ್ದಾರೆ [].

ಪ್ರೋ. ಪೋತೆಯವರ 'ಸಮಾಜೋ ಜಾನಪದ' ಕೃತಿಗೆ (೨೦೦೭ರ ಅತ್ಯುತ್ತಮ ಕೃತಿ) ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಆಕಾಡೆಮಿಯ ಪುಸ್ತಕ ಬಹುಮಾನ ದೊರೆತರೆ 'ಅಂಬೇಡ್ಕರ್ ಭಾಷಾ ಭಾರತ' ಕೃತಿಗೆ (೨೦೧೭ರ ಅತ್ಯುತ್ತಮ ಪುಸ್ತಕ) ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ದೊರೆತಿದೆ. 'ಬಾಬಾ ಸಾಹೇಬರೆಡೆಗೆ ಖರ್ಗೆ ಜೀವನ ಕಥನ' ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ೨೦೧೯ರ ಸಾಲಿನ ಪುಸ್ತಕ ಸೊಗಸು ಬಹುಮಾನ ಸಂದಿದೆ. 'ದಲಿತಾಂತರಂಗ' ಕೃತಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜೋತ್ಸವ ಪ್ರಶಸ್ತಿ, 'ಚಮ್ಮಾವುಗೆ' ಕಥಾ ಸಂಕಲನಕ್ಕೆ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಶಸ್ತಿ, ಅಕ್ಷರಲೋಕದ ನಕ್ಷತ್ರ ಪ್ರಶಸ್ತಿ ಲಭಿಸಿದೆ. ಇವರ ಕೃತಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪುರಸ್ಕಾರಗಳು ದೊರೆತಿವೆ [].

ಸಾಹಿತ್ಯ ಕೃತಿಗಳು

ಬದಲಾಯಿಸಿ

ಜಾನಪದ ಕೃತಿಗಳು

ಬದಲಾಯಿಸಿ

( ಜಾನಪದ ಕ್ಷೇತ್ರಕ್ಕೆ ಒಟ್ಟು ೧೨ ಕೃತಿಗಳ ಕೊಡುಗೆ ನೀಡಿದ್ದಾರೆ)

೧.ಹೈದ್ರಾಬಾದ ಕರ್ನಾಟಕ ಜನಪದ ಪ್ರದರ್ಶನ ಕಲೆಗಳು

೨. ರಾಯಚೂರು ಜಿಲ್ಲೆಯ ಜನಪದ ಕಲೆಗಳು

೩. ಜಾನಪದ ಸಿಂಗಾರ

೪. ಜನಪದ ಕಲೆ ಸಂಸ್ಕೃತಿ

೫. ಹೈದ್ರಾಬಾದ ಕರ್ನಾಟಕದ ಜನಪದ ವಾದ್ಯಗಳು

೬. ಜಾನಪದ ಆಯಾಮಗಳು

೭. ಜಾನಪದ ಕಥನ

೮. ಜನಪದ ಹಾಡುಗಳ ಸಂಗ್ರಹ

೯. ಜನಪದ ವೈವಿಧ್ಯಾ ಸಾಹಿತ್ಯ

೧೦. ಜನಪದ ಗೀತೆಗಳು

೧೧. ಜನಪದ ಕಲೆ ಸಮಸ್ಯೆ-ಸವಾಲುಗಳು

೧೨. ದಲಿತ ಜಾನಪದ ಸಂಪುಟ

ದಲಿತ ಸಾಹಿತ್ಯ

ಬದಲಾಯಿಸಿ

( ದಲಿತ ಸಾಹಿತ್ಯ ಕ್ರೇತ್ರಕ್ಕೆ ಒಟ್ಟು ೧೨ ಕೃತಿಗಳ ಕೊಡುಗೆ)

೧೩. ಅಂಬೇಡ್ಕರ್ : ದಲಿತ ಚಳುವಳಿ

೧೪. ದಲಿತಾಂತರಂಗ

೧೫. ಅಂಬೇಡ್ಕರ್ ಸಂವೇದನೆ

೧೬. ದಲಿತ ಸಾಹಿತ್ಯ : ಸಂಸ್ಕೃತಿ

೧೭. ದಲಿತಲೋಕ

೧೮. ಸ್ವಾತಂತ್ರ ಪೂರ್ವದ ದಲಿತ ಚಳುವಳಿ

೧೯. ಅಂಬೇಡ್ಕರ್ ಕಥನ

೨೦. ಅಂಬೇಡ್ಕರ್ ಭಾರತ

೨೧. ದಲಿತ ಕಥನ

೨೨. ದಲಿತ ಚಳುವಳಿ ಕಥನ

೨೩. ಜೀವನ ಕಥನ

೨೪. ಅಂಬೇಡ್ಕರ್ ಪುಸ್ತಕ ಪೀತಿ


ಕಥಾ ಸಂಕಲನಗಳು :

ಬದಲಾಯಿಸಿ

( ೪ ಕೃತಿಗಳು)

೨೫. ಚಮ್ಮಾವುಗೆ

೨೬. ಬೆತ್ತಲಾದ ಚಂದ್ರ

೨೭. ಕರುಳರಿಯುವ ಹೊತ್ತು

೨೮. ಮಾದನ ಕರೆಂಟ ಕತಂತ್ರ


ಪ್ರಬಂಧ

ಬದಲಾಯಿಸಿ

೨೯. ಗಾಂಧಿ ಪ್ರತಿಮೆ


ಅನುಸೃಜನ

ಬದಲಾಯಿಸಿ

೩೦. ಬೆಂದವರು

೩೧. ಬಿ. ಶ್ಯಮಸುಂದರ್

೩೨. ದಲಿತ ಸಾಹಿತಿ ಕುಮಾರ ಕಕ್ಕಯ್ಯ ಪೋಳ

೩೩. ಡಾ. ಬಿ. ಆರ್. ಅಂಬೇಡ್ಕರ್

೩೪. ದ್ರಾವಿಡ ಸಂಸ್ಕೃತಿ ಚಿಂತಕ ಪೆರಿಯಾರ್

೩೫. ಎಸ್. ಎಂ. ಹಿರೇಮಠ

೩೬. ವ್ಹಿ.ಜೆ. ಪೂಜಾರ

೩೭. ಛತ್ರಪತಿ ಶಾವೂ ಮಹಾರಾಜ

೩೮. ಬಾಬಾಸಾಹೇಬರೆಡೆಗೆ...ಖರ್ಗೆ ಜೀವನ ಕಥನ


ವಚನ ಸಾಹಿತ್ಯ ಕೃತಿಗಳು

ಬದಲಾಯಿಸಿ

೩೯. ಶರಣ ಸಂಸ್ಕೃತಿ ಸಂವಾದ

೪೦. ಶರಣ ಸಂಸ್ಕೃತಿ ಮತ್ತು...

೪೧. ಶರಣ ಸಂಸ್ಕೃತಿ ಕಥನ

೪೨. ಜಾಗತಿಕ ಚಿಂತಕ ; ಬಸವಣ್ಣ


ವಿಚಾರ / ವಿಮರ್ಶೆ ಕೃತಿಗಳು

ಬದಲಾಯಿಸಿ

೪೩. ಬುದ್ಧನೆಡೆಗೆ

೪೪. ಫುಲೆ ಶಾಹೂ ಅಂಬೇಡ್ಕರ್

೪೫. ಅವೈದಿಕ ಚಿಂತನೆ

೪೬. ಜೀವಪರ ಚಿಂತನೆ

೪೭. ಭೀಮಸೇನೆ ಬಿ. ಶ್ಯಾಮಸುಂದರ್

೪೮. ಸಂಸ್ಕೃತಿ ಸಂಕ್ರಮಣ

೪೯. ನೀರನೆರಳು

೫೦. ಕಂಗಳೊಳಗಣ ಕತ್ತಲೆ

೫೧. ಅನುವಾದ ಕಥನ

೫೨. ವಿಮರ್ಶಾ ಕಥನ


ಸಂಪಾದನೆ

ಬದಲಾಯಿಸಿ

೫೪. ಅಂಬೇಡ್ಕರ್ ; ವಿಚಾರ ತರಂಗ

೫೫. ಅನ್ವೇಷಣೆ

೫೬. ಮೀಸಲಾತಿ ; ಸಮಸ್ಯೆ - ಸವಾಲುಗಳು

೫೭. ಲೋಕಮಿತ್ರರ ನಡುವೆ

೫೮. ಅಂಬೇಡ್ಕರ್ ವಾಚಿಕೆ

೫೯. ಬಯಲು ಹೊನ್ನು

೬೦. ನಾಲ್ವರು ಹೋರಾಟಗಾರರು

೬೧. ಬಿ. ಶ್ಯಾಮಸುಂದರ್ ವಾಚಿಕೆ

೬೨. ಅಂಬೇಡ್ಕರ್ ರೀಡರ್ (ಇಂಗ್ಲಿಷ್)


ಗೌರವ ಪುರಸ್ಕಾರಗಳು

ಬದಲಾಯಿಸಿ
  • ರುಕ್ಮಿಣಿಬಾಯಿ ಸ್ಮಾರಕ ದತ್ತಿ ಪ್ರಶಸ್ತಿ (೨೦೦೪)

ದಲಿತಾಂತರಂಗ ಕೃತಿಗೆ ಬೆಂಗಳೂರಿನ ಪತ್ರಕರ್ತರ ವೇದಿಕೆ ಹಾಗೂ ರುಕ್ಮಿಣಿಬಾಯಿ ಸ್ಮಾರಕ ಟ್ರಸ್ಟ್ ಜಂಟಿಯಾಗಿ ಕೊಡಮಾಡುವ "ರುಕ್ಮಿಣಿಬಾಯಿ ಸ್ಮಾರಕ ದತ್ತಿ ಪ್ರಶಸ್ತಿ" ದೊರೆತಿದೆ.

  • ಕನ್ನಡ ರಾಜೋತ್ಸವ ಪ್ರಶಸ್ತಿ (೨೦೦೫)

ದಲಿತಾಂತರಂಗ ಕೃತಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ರಾಜೋತ್ಸವ ಪ್ರಶಸ್ತಿ ದೊರೆತಿದೆ.

  • ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಆಕಾಡೆಮಿ ರಾಜ್ಯ ಪ್ರಶಸ್ತಿ (೨೦೦೭)

ಸಮಾಜೋ ಜಾನಪದ ಕೃತಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಆಕಾಡೆಮಿಯಿಂದ ಸಂಶೋಧನೆ, ವಿಮರ್ಶೆ ಕ್ಷೇತ್ರದಲ್ಲಿ ೨೦೦೬ ರ ಸಾಲಿನ ರಾಜ್ಯ ಪ್ರಶಸ್ತಿ ದೊರೆತಿದೆ.

  • ಸಂಕ್ರಮಣ ಪ್ರಶಸ್ತಿ (೨೦೦೮)

ಅಂಬೇಡ್ಕರ್ ಸಂವೇದನೆ ಕೃತಿಗೆ ೨೦೦೭ ನೇ ಸಾಲಿನ ಸಂಕ್ರಮಣ ಪ್ರಶಸ್ತಿ ದೊರೆತಿದೆ.

  • ರಾಷ್ಟ್ರಮಟ್ಟದ ಕಥಾ ಸ್ಪರ್ಧೆಯಲ್ಲಿ ಚಿನ್ನದ ಪದಕ (೨೦೦೯)

ಭಂಗ ಕಥೆಗೆ ಜಯತೀರ್ಥರಾಜ ಪುರೋಹಿತ ರಾಷ್ಟ್ರಮಟ್ಟದ ಕಥಾ ಸ್ಪರ್ಧೆಯಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ದೊರೆತಿದೆ.

  • ಕನ್ನಡ ರಾಜ್ಯೋತ್ಸವ ಪ್ರಶಸ್ತಿ (೨೦೧೦)

ನೀರನೆರಳು ಕೃತಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

  • ಗೋರಖನಾಥ ಪುರಸ್ಕಾರ (೨೦೧೧)

ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಮಗ್ರಸೇವೆಗೆ, ಗೋರಖನಾಥ ತಪೋವನ, ಬೆಂಗಳೂರು ಇವರ ಗೋರಖನಾಥ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.

  • ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಪುರಸ್ಕಾರ (೨೦೧೨)

ಚಿಮ್ಮಾವುಗೆ ಕಥಾಸಂಕಲನಕ್ಕೆ ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಪುರಸ್ಕಾರ ದೊರೆತಿದೆ.

  • ಪುಟ್ಟರಾಜು ಗವಾಯಿಗಳ ಸ್ಮಾರಣಾರ್ಥ ಪುಸ್ತಕ ಪುರಸ್ಕಾರ (೨೦೧೨)

ಚಿಮ್ಮಾವುಗೆ ಕಥಾಸಂಕಲನಕ್ಕೆ ಪುಟ್ಟರಾಜು ಗವಾಯಿಗಳ ಸ್ಮಾರಣಾರ್ಥ ಪುಸ್ತಕ ಪುರಸ್ಕಾರ ದೊರೆತಿದೆ.

  • ಎಲ್. ಬಸವರಾಜು ಅವರ ಅಮೃತ ಸಮ್ಮೇಳನದ ಸವಿನೆನಪಿನ ದತ್ತಿ ಪ್ರಶಸ್ತಿ (೨೦೧೩)

ದಲಿತಲೋಕ ಕೃತಿಗೆ ಎಲ್. ಬಸವರಾಜು ಅವರ ಅಮೃತ ಸಮ್ಮೇಳನದ ಸವಿನೆನಪಿನ ದತ್ತಿ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇವರಿಂದ ದೊರೆತಿದೆ.

  • ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ (೨೦೧೪-೧೫)

ಚಿಮ್ಮಾವುಗೆ ಕಥಾಸಂಕಲನಕ್ಕೆ ಸಿರಿಗನ್ನಡ ಪ್ರತಿಷ್ಠಾನ ಕೇಂದ್ರ ಸಂಘ (ರಿ), ಗುರುವಠಕಲ್, ತಾ.ಜಿ. ಯಾದಗಿರಿ ಇವರಿಂದ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ ದೊರೆತಿದೆ .

  • ಅಮ್ಮ ಗೌರವ ಪುರಸ್ಕಾರ (೨೦೧೬)

ಅಮ್ಮ ಗೌರವ ಪುರಸ್ಕಾರ, ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ದೊರೆತಿದೆ. (ಸೇಡಂ)

  • ಬಸವಶ್ರೀ ಪ್ರಶಸ್ತಿ (೨೦೧೭)

ಬಸವಶ್ರೀ, ಕನ್ನಡ ಸಾಹಿತ್ಯ ಪರಿಷತ್ತು ಸಿಂದಗಿ ಇವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

  • ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ (೨೦೧೭)

ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಪ.ಜಾ/ಪ.ಪಂ. ನೌಕರರ ಸಂಘ (ರಿ) ಅಂಗಸಂಸ್ಥೆಗಳು ಬೆಂ.ಮ.ಸಾ ಸಂಸ್ಥೆ ವಾ.ಕರಸಾನಿ ಮತ್ತು ಈ.ಕರ.ಸಾ.ನಿ ಸಹಯೋಗದೊಂದಿಗೆ ಡಾ. ಬಿ. ಆರ್. ಅಂಬೇಡ್ಕರ್ ಅವರ ೧೨೬ನೇ ಜಯಂತೋತ್ಸವ ಸಮಿತಿಯವರು ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (೨೦೧೯)

ಅಂಬೇಡ್ಕರ್ ಭಾರತ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರಿಂದ ಕೊಡಮಾಡುವ ೨೦೧೭ ರ ಪುಸ್ತಕ ಬಹುಮಾನ ನಗದು ಪುರಸ್ಕಾರ ದೊರೆತಿದೆ.

  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಸೊಗಸು ಬಹುಮಾನ (೨೦೧೯)

ಬಾಬಾಸಾಹೇಬರೆಡೆಗೆ ಖರ್ಗೆ ಜೀವನ ಕಥನ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರಿಂದ ಕೊಡಮಾಡುವ ಪುಸ್ತಕ ಸೊಗಸು ಬಹುಮಾನ ಪುರಸ್ಕಾರ ದೊರೆತಿದೆ.

  • ಸಾಹಿತ್ಯ ಸಾರಥಿ ಪ್ರಶಸ್ತಿ (೨೦೧೯)

ಸಾಹಿತ್ಯ ಸಾರಥಿ ಪ್ರಶಸ್ತಿ, ಸಾಹಿತ್ಯ ಸಾರಥಿ ಪತ್ರಿಕೆಯ ಎರಡನೇ ವರ್ಷದ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಕಲಬುರ್ಗಿ ಇವರು ಸಾಹಿತ್ಯ ಸಾರಥಿ ಪ್ರಶಸ್ತಿನೀಡಿ ಗೌರವಿಸಿದ್ದಾರೆ.

ಆಡಳಿತಾತ್ಮಕ ಹುದ್ದೆಗಳ ನಿರ್ವಹಣೆ

ಬದಲಾಯಿಸಿ
  • ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ಸಲಹಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. (೨೦೦೬-೨೦೧೦)
  • ಕರ್ನಾಟಕ ಸರ್ಕಾರದ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ ರಾಜ್ಯ ಪ್ರಶಸ್ತಿ ಆಯ್ಕೆ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. (೨೦೧೦-೨೦೧೧)
  • ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಜಾನಪದ ಶ್ರೀ ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. (೨೦೧೨)
  • ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. (೨೦೧೦-೨೦೧೩)
  • ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾಗಿ (ಮೌಲ್ಯಮಾಪನ) ಕಾರ್ಯನಿರ್ವಹಿಸಿದ್ದಾರೆ. (೨೦೧೩-೨೦೧೪)
  • ಬೆಂಗಳೂರು ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.(೨೦೧೨-೨೦೧೩)
  • ಗುಲ್ಬರ್ಗಾ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. (೨೦೧೬ ರಿಂದ)
  • ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. (೨೦೧೭-೨೦೧೯)
  • ಗುಲ್ಬರ್ಗಾ ವಿಶ್ವವಿದ್ಯಾಲಯದ ಕಲಾನಿಕಾಯದ ಡೀನ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. (೨೦೧೯ ರಿಂದ)

ಉಲ್ಲೇಖಗಳು

ಬದಲಾಯಿಸಿ