ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಡ್ಲುಕುಡಿಕೆಯಲ್ಲಿ ಜನಿಸಿದರು.

ಶಿಕ್ಷಣ

ಬದಲಾಯಿಸಿ

ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸವನ್ನು ಕೊಪ್ಪ, ಉಡುಪಿಯಲ್ಲಿ ಪೂರೈಸಿದರು.ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿ, ೧೯೭೫ ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದರು.

"ಶಬ್ದಮಾಲಿನ್ಯ- ಪರಿಹಾರ ಹೇಗೆ ? " :ಇದು ಇವರ ಒಂದು ವಿಶಿಷ್ಟ ಪರಿಸರವಾದಿ ಲೇಖನ.ಪರಿಸರ ಮಾಲಿನ್ಯಕ್ಕೆ ಪರಿಹಾರವನ್ನು ಸೂಚಿಸುವುದು ಇದರ ತಿರುಳು. ಗಾಳಿ,ನೀರು,ಬೆಳಕು ಹಾಗೂ ಶಬ್ದ ಮಾಲಿನ್ಯಗಳಿಂದ ಇಂದು ಪರಿಸರ ಹೇಗೆ ಮಲಿನಗೊಂಡಿದೆ? ಅದರಿಂದಾಗುವ ದುಷ್ಪರಿಣಾಮಗಳೇನು? ಅವುಗಳ ಪರಿಹಾರವೇನು? ಎಂಬುದನ್ನು ಈ ಲೇಖನ ತಿಳಿಸುತ್ತದೆ. ಹೀಗಾಗಿ ಇದು ಪರಿಸರದ ಬಗೆಗೆ ಕಾಳಜಿಯನ್ನಿಟ್ಟುಕೊಡಿರುವ ಲೇಖನ.

ಭಾಷೆಯ ಬಗ್ಗೆ

ಬದಲಾಯಿಸಿ

ಎಚ್.ಸುಂದರ ರಾವ್‍ರ ಭಾಷೆ ಸರಳ ಮತ್ತು ಭಾವಪೂರ್ಣ. ಅವರ ಭಾಷೆ ಹೇಳಬೇಕಾದುದನ್ನು ಸರಳವಾಗಿ ಮನಕ್ಕೆ ಮುಟ್ಟುವಂತೆ ಹೇಳುತ್ತದೆ.

ವ್ರತ್ತಿ

ಬದಲಾಯಿಸಿ

೨೦೦೯ರ ವರೆಗೆ ಬಿ.ಸಿ.ರೋಡ್‍ನಲ್ಲಿ 'ನೇರ ಮುದ್ರಣಾಲಯ'ವನ್ನು ನಡೆಸಿದ ರಾವ್ ಅವರು ಡಾ.ರವೀಂದ್ರನಾಥ ಶಾನುಭೋಗರಿಂದಿಗೆ ಬಳಕೆದಾರರ ಚಳವಳಿಯ ಕಾರ್ಯಕರ್ತರಾಗಿದ್ದರು.