ಎಚ್ಚರ ಒಂದು ದೈನಂದಿನ ಆವರ್ತಕ ಮಿದುಳು ಸ್ಥಿತಿ ಮತ್ತು ಪ್ರಜ್ಞೆಯ ಸ್ಥಿತಿ. ಇದರಲ್ಲಿ ವ್ಯಕ್ತಿಯು ಜಾಗೃತವಾಗಿದ್ದು ಬಾಹ್ಯ ಪ್ರಪಂಚಕ್ಕೆ ಸುಸಂಬದ್ಧ ಅರಿವು ಸಂಬಂಧಿ ಮತ್ತು ವರ್ತನ ಸಂಬಂಧಿ ಪ್ರತಿಕ್ರಿಯೆಯಲ್ಲಿ ತೊಡಗುತ್ತಾನೆ, ಉದಾಹರಣೆಗೆ ಸಂವಹನ, ನಡೆದಾಟ, ತಿನ್ನುವಿಕೆ, ಮತ್ತು ಸಂಭೋಗ. ಎಚ್ಚರವಾಗಿರುವುದು ಮಲಗಿರುವ ಸ್ಥಿತಿಗೆ ವಿರುದ್ಧವಾಗಿದೆ. ಮಲಗಿರುವ ಸ್ಥಿತಿಯಲ್ಲಿ ಮಿದುಳಿಗೆ ಹೋಗುವ ಬಹುತೇಕ ಆದಾನಗಳು ನರ ಸಂಸ್ಕರಣೆಯಿಂದ ಹೊರತುಪಡಿಸಲ್ಪಡುತ್ತವೆ.

ಮಿದುಳು ಎಚ್ಚರವಾಗಿರುವ ಕಾಲ ಹೆಚ್ಚಿದ್ದಷ್ಟು, ಮುಮ್ಮಿದುಳು ಕವಚದ ನರಕೋಶಗಳ ಸಮಕಾಲಿಕ ಕ್ರಿಯಾ ವಿಭವ ಉಂಟಾಗುವ ಪ್ರಮಾಣಗಳು ಹೆಚ್ಚಿರುತ್ತವೆ. ನಿರಂತರ ನಿದ್ರೆಯ ಅವಧಿಗಳ ನಂತರ, ನರಕೋಶಗಳ ಕ್ರಿಯಾ ವಿಭವ ಉಂಟಾಗುವಿಕೆಯ ವೇಗ ಮತ್ತು ಏಕಕಾಲಿಕತೆ ಎರಡೂ ಕಡಿಮೆಯಾಗುತ್ತವೆ ಎಂದು ತೋರಿಸಲಾಗಿದೆ.[]

ಎಚ್ಚರವಾಗಿರುವ ಮತ್ತೊಂದು ಪರಿಣಾಮವೆಂದರೆ ನರಕೋಶಗಳಿಗೆ ಶಕ್ತಿ ಒದಗಿಸುವ ಆ್ಯಸ್ಟ್ರೋಸೈಟ್‍ಗಳಲ್ಲಿ ಹಿಡಿದಿಟ್ಟಿರುವ ಗ್ಲೈಕೋಜನ್ ಕಡಿಮೆಯಾಗುವುದು. ಈ ಗ್ಲೈಕೋಜನ್ ಶಕ್ತಿ ಮೂಲವನ್ನು ಮತ್ತೆ ತುಂಬುವುದು ನಿದ್ದೆಯ ಅಂತರ್ನಿಹಿತ ಕ್ರಿಯೆಗಳಲ್ಲಿ ಒಂದು ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ.

ಮಿದುಳುಕಾಂಡದಲ್ಲಿ ಉದಯಿಸಿ ನಡುಮಿದುಳು, ಮಸ್ತಿಷ್ಕನಿಮ್ನಾಂಗ, ಥ್ಯಾಲಮಸ್ ಮತ್ತು ತಳ ಮುಮ್ಮಸ್ತಿಷ್ಕದ ಮೂಲಕ ಏರುವ ಅನೇಕ ನರಪ್ರೇಕ್ಷಕ ವ್ಯವಸ್ಥೆಗಳ ನಡುವಿನ ಸಂಕೀರ್ಣ ಪಾರಸ್ಪರಿಕ ಕ್ರಿಯೆಯಿಂದ ಎಚ್ಚರ ಉಂಟಾಗುತ್ತದೆ. ಮಸ್ತಿಷ್ಕನಿಮ್ನಾಂಗದ ಹಿಂಭಾಗವು ಎಚ್ಚರಕ್ಕೆ ಆಧಾರವಾಗಿರುವ ಕವಚದ ಸಕ್ರಿಯಗೊಳಿಸುವಿಕೆಯ ನಿರ್ವಹಣೆಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಮಿದುಳಿನ ಈ ಭಾಗದಲ್ಲಿ ಮೂಲ ಹೊಂದಿರುವ ಹಲವಾರು ವ್ಯವಸ್ಥೆಗಳು ಎಚ್ಚರದಿಂದ ನಿದ್ದೆಗೆ ಮತ್ತು ನಿದ್ದೆಯಿಂದ ಎಚ್ಚರದ ಸ್ಥಿತಿಗೆ ಆಗುವ ಬದಲಾವಣೆಯನ್ನು ನಿಯಂತ್ರಿಸುತ್ತವೆ. ಟ್ಯೂಬರೊಮ್ಯಾಮಿಲರಿ ಕೇಂದ್ರದಲ್ಲಿನ ಮತ್ತು ಪಕ್ಕದ ಮಸ್ತಿಷ್ಕನಿಮ್ನಾಂಗದ ಹಿಂಭಾಗದ ಹತ್ತಿರದ ಹಿಸ್ಟಮೀನ್ ನರಕೋಶಗಳು ಇಡೀ ಮಿದುಳಿಗೆ ಚಾಚಿಕೊಂಡಿರುತ್ತವೆ ಮತ್ತು ಈವರೆಗೆ ಮಿದುಳಿನಲ್ಲಿ ಗುರುತಿಸಲಾದ ಅತ್ಯಂತ ಎಚ್ಚರ ಆಯ್ಕೆ ಸಂಬಂಧಿ ವ್ಯವಸ್ಥೆಯಾಗಿವೆ. ಆರೆಕ್ಸಿನ್‍ ಚಾಚು ನರಕೋಶಗಳಿಂದ ಒದಗಿಸಲ್ಪಟ್ಟದ್ದು ಮತ್ತೊಂದು ಪ್ರಮುಖ ವ್ಯವಸ್ಥೆಯಾಗಿದೆ. ಇವು ಹಿಸ್ಟಮೀನ್ ನರಕೋಶಗಳ ಪಕ್ಕದ ಪ್ರದೇಶಗಳಲ್ಲಿ ಇರುತ್ತವೆ ಮತ್ತು ಅವುಗಳಂತೆ ಬಹುತೇಕ ಮಿದುಳು ಪ್ರದೇಶಗಳಿಗೆ ವ್ಯಾಪಕವಾಗಿ ಚಾಚಿಕೊಳ್ಳುತ್ತವೆ ಮತ್ತು ಜಾಗೃತಾವಸ್ಥೆಯೊಂದಿಗೆ ಸಂಬಂಧಿಸಿವೆ. ಆರೆಕ್ಸಿನ್‍ನ ಕೊರತೆಯು ವಿಚ್ಛಿದ್ರ ನಿದ್ದೆಗೆ ಹೊಣೆಯಾಗಿದೆ ಎಂದು ಗುರುತಿಸಲಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. Vyazovskiy, VV; Olcese, U; Lazimy, YM; Faraguna, U; Esser, SK; Williams, JC; Cirelli, C; Tononi, G (2009). "Cortical firing and sleep homeostasis". Neuron. 63 (6): 865–78. doi:10.1016/j.neuron.2009.08.024. PMC 2819325. PMID 19778514.
"https://kn.wikipedia.org/w/index.php?title=ಎಚ್ಚರ&oldid=848576" ಇಂದ ಪಡೆಯಲ್ಪಟ್ಟಿದೆ