ಎಕಿನೊಮಾಸ್ಟಸ್ ಯುಫೊರ್ಬಿಯೇಸಿ ಕುಟುಂಬದ ಸುಂದರವಾದ ಕಳ್ಳಿಗಳ ಶ್ರೇಣಿಗೆ ಸೇರಿದ ಕುರುಚಲ ಸಸ್ಯಜಾತಿ. ಕಾಂಡ ಕೊಳವೆಯಾಕಾರ. ಇದರ ಮೇಲೆ ಮೊನೆಚಾಗಿ ಆಕರ್ಷಕವಾಗಿರುವ ಮುಳ್ಳುಗಳು ನಿಬಿಡವಾಗಿ ಜೋಡಣೆಗೊಂಡಿವೆ. ಸುಳಿಯಾಕಾರದ ಉಬ್ಬುಗಳ ಮೇಲೆ ಇರುವ ಗಂಟುಗಳ ತುದಿಯ ರಂಧ್ರಗಳಿರುವ ಮುಳ್ಳು ಮತ್ತು ದಾರಗಳು ಹೊರಬಂದು ಇಡೀ ಸಸ್ಯವನ್ನು ಆವರಿಸಿರುತ್ತವೆ. ಒಂದು ಸಸ್ಯದಲ್ಲಿ ಸುಮಾರು 30 ಸುರುಳಿ ಉಬ್ಬುಗಳು ಇರುತ್ತವೆ. ಬಿರುಸಾದ ಮುಳ್ಳುಗಳ ಮಧ್ಯೆ ಕೆಂಪು ಅಥವಾ ಕಂದುಬಣ್ಣದ ಹೂಗೊಂಚಲುಗಳು ರಮ್ಯವಾಗಿ ಮೂಡಿರುತ್ತವೆ. ಹೂ ಬಿಡುವುದು ಸಾಮಾನ್ಯವಾಗಿ ಬೇಸಗೆಕಾಲದಲ್ಲಿ ಹಣ್ಣು ಬಿಲ್ಲೆಯಂತೆ ಗಾತ್ರದಲ್ಲಿ ಚಿಕ್ಕದಾಗಿದ್ದು, ಬಿಟ್ಟ ಅನಂತರ ಹೆಚ್ಚುಕಾಲ ಉಳಿಯದೆ ಒಣಗಿಹೋಗುತ್ತದೆ; ಅನಂತರ ಸೀಳಿ ಕಪ್ಪಾದ ಬೀಜಗಳನ್ನು ಹೊರತಳ್ಳುತ್ತದೆ.[]

ಎಕಿನೊಮಾಸ್ಟಸ್

ಪ್ರಭೇದಗಳು

ಬದಲಾಯಿಸಿ

ಎ.ಮ್ಯಾಕ್‍ಡೊವೆಲ್ಲಿ ಎಂಬ ಪ್ರಭೇದ ಈ ಜಾತಿಯ ಕಳ್ಳಿಗಳ ಪೈಕಿ ಅತ್ಯಂತ ಸುಂದರವಾದದ್ದು. ಇದರ ನುಸಿಹಸಿರು ಬಣ್ಣದ ಕಾಂಡ 4" ದಪ್ಪವಾಗಿ 6" ಎತ್ತರವಾಗಿದ್ದು, ಮೇಲುಭಾಗದಲ್ಲಿ 20 ಅಥವಾ ಹೆಚ್ಚು ಸುರಳಿಯಾಕಾರದಲ್ಲಿ ರಂಧ್ರಗಳು ಇದ್ದು ನಾರು ಹೊರಬಂದಿರುತ್ತದೆ. ರಂಧ್ರಗಳಲ್ಲಿ ಬಿರುಸಾದ ಮತ್ತು ಪ್ರಧಾನವಾಗಿರುವ ಮುಳ್ಳು ನಿಬಿಡವಾಗಿದೆ. ಸಸ್ಯದ ಮೇಲುಭಾಗದ ಮಧ್ಯೆಬಿಡುವ ನಸುಗೆಂಪು ಬಣ್ಣದ ಹೂ ಗೊಂಚಲು ಭವ್ಯವಾಗಿ ಕಾಣುತ್ತದೆ.

ಕಂಡುಬರುವ ಸ್ಥಳಗಳು

ಬದಲಾಯಿಸಿ

ಈ ಸಸ್ಯ ಉತ್ತರ ಅಮೆರಿಕದ ಮೆಕ್ಸಿಕೊ, ಟೆಕ್ಸಾಸ್ ಮತ್ತು ಅರಿಜೋನ ದೇಶಗಳ ಮೂಲವಾಸಿ. ಇದು ತನ್ನ ಉಗಮ ಸ್ಥಾನದಲ್ಲಿ ಒರಟಾಗಿ ಮತ್ತು ದೃಢಕಾಯವಾಗಿ ಬೆಳೆಯುತ್ತದಾದ್ದರಿಂದ ಇತರ ದೇಶಗಳಿಗೆ ಒಯ್ದು ಬೇಸಾಯ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಅನ್ಯ ಭೂಮಿಯಲ್ಲಿ ಇದನ್ನು ಬೆಳೆಯುವುದು ಕಷ್ಟ. ಆದರೆ ಒಮ್ಮೆ ನೆಲಕ್ಕೆ ಅಂಟಿತೆಂದರೆ ಯಾವ ಆತಂಕವೂ ಇಲ್ಲದೆ ಗಿಡ ಚಿಗುರಿ ಬೆಳೆಯುತ್ತದೆ. ಹವಾಗುಣಗಳ ವೈಪರೀತ್ಯವನ್ನು ಸಹಿಸುವುದಿಲ್ಲ. ಬೇಸಾಯ ಮರಳಿನಿಂದ ಕೂಡಿ ಸಡಿಲವಾಗಿರುವ ಮತ್ತು ಫಲವತ್ತಾಗಿರುವ ಮಣ್ಣಿನಲ್ಲಿ ಯಶಸ್ವಿಯಾಗುತ್ತದೆ. ಬೇಸಗೆಯಲ್ಲಿ ಧಾರಾಳವಾಗಿ ತೇವಾಂಶವಿರುವಂತೆಯೂ ಚಳಿಗಾಲದಲ್ಲಿ ಒಣವಾತಾವರಣವಿರುವಂತೆ ನೋಡಿಕೊಳ್ಳುವುದು ಅಗತ್ಯ.

ಉಲ್ಲೇಖ

ಬದಲಾಯಿಸಿ
  1. [೧]Online guide