ಡಾ. ಎಂ. ಮೋಹನ್ ಆಳ್ವ ಅವರು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು. ಅವರು ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿದ್ದಾರೆ. []

ಡಾ. ಎಂ ಮೋಹನ್ ಆಳ್ವ
Bornಮೇ 31, 1952
Nationalityಭಾರತೀಯ।
Occupation(s)ವೈದ್ಯ, ಕಲಾವಿದ ।
Known forಸಮಾಜಸೇವೆ ।

ಡಾ. ಎಂ.ಮೋಹನ್ ಆಳ್ವ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಮಿಜಾರು ಎಂಬಲ್ಲಿ ಮೇ 31, 1952 ರಂದು ಕೃಷಿಕ ಕುಟುಂಬದಲ್ಲಿ ಜನಿಸಿದರು. ಇವರು ತಮ್ಮ ಸ್ಥಳೀಯ ಹಳ್ಳಿಯಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದು, ನಂತರ ಉನ್ನತ ಶಿಕ್ಷಣವನ್ನು ಉಡುಪಿಯ ಎಸ್ ಡಿ ಎಂ ಆಯುರ್ವೇದ ಕಾಲೇಜಿನಲ್ಲಿ ಪಡೆದರು. ೧೯೯೫ರಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್ (ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ)ವನ್ನು ಸ್ಥಾಪಿಸಿದರು. [] ೧೫,೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಕಲ್ಪಿಸಿಕೊಟ್ಟಿದ್ದಾರೆ. ವೈದ್ಯರಾಗಿ ಬಡವರಿಗೆ, ಎಚ್ಐವಿ ಸೋಂಕಿತರಿಗೆ ಸಹಾಯ ಮಾಡಿದ್ದಾರೆ. ಭಾರತೀಯ ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ಸಂಗೀತ, ನೃತ್ಯ, ನಾಟಕ ಹಾಗೂ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.[]

 

ಆಳ್ವಾಸ್ ಶಿಕ್ಷಣ ವ್ಯವಸ್ಥೆ

ಬದಲಾಯಿಸಿ

ಡಾ ಎಂ. ಮೋಹನ್ ಆಳ್ವರ ನಾಯಕತ್ವದಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಡಿಯಲ್ಲಿ ವಿವಿಧ ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಬೋಧನಾ ವಿಧಾನ ಪಠ್ಯಕ್ರಮದ ಮಿತಿ ಇಲ್ಲದೆ, ವ್ಯಕ್ತಿತ್ವ ಬೆಳವಣಿಗೆ, ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆಗಳು, ಫೈನ್ ಆರ್ಟ್ಸ್ ಮತ್ತು ತರಬೇತಿ ಪಡೆದ ಶಿಕ್ಷಕರ ಅಡಿಯಲ್ಲಿ ರಾಷ್ಟ್ರೀಯ ಏಕೀಕರಣ ಕಡೆಗೆ ಇತರ ಸಾಮಾಜಿಕ ತರಬೇತಿಯನ್ನು ನೀಡುತ್ತಿದೆ.[]

ಆಳ್ವಾಸ್ ವಿದ್ಯಾ ಸಂಸ್ಥೆಗಳು

ಬದಲಾಯಿಸಿ
  • ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ
  • ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ
  • ಆಳ್ವಾಸ್ ಕೇಂದ್ರೀಯ ವಿದ್ಯಾಲಯ
  • ಆಳ್ವಾಸ್ ವಿಶೇಷ ಮಕ್ಕಳ ಶಾಲೆ
  • ಆಳ್ವಾಸ್ ಪದವಿ ಪೂರ್ವ ಕಾಲೇಜು
  • ಆಳ್ವಾಸ್ ಕಾಲೇಜು(ಸ್ನಾತಕ, ಸ್ನಾತಕೋತ್ತರ)
  • ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು
  • ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜು
  • ಆಳ್ವಾಸ್ ಕಾಲೇಜ್ ಆಫ್ ಫಿಸಿಯೋಥೆರಪಿ
  • ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್
  • ಆಳ್ವಾಸ್ ನರ್ಸಿಂಗ್ ಕಾಲೇಜು
  • ಆಳ್ವಾಸ್ ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸ್
  • ಆಳ್ವಾಸ್ ಕಾಲೇಜ್ ಆಫ್ ಮೆಡಿಕಲ್ ಲ್ಯಾಬ್ ಟಕ್ನಿಷಿಯನ್
  • ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ
  • ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ
  • ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು
  • ಆಳ್ವಾಸ್ ನೀಟ್ ದೀರ್ಘಾವಧಿ ತರಬೇತಿ

ಆಳ್ವಾಸ್ ಸಂಸ್ಥೆಯ ಸೇವೆಗಳು

ಬದಲಾಯಿಸಿ

ಮಾನಸಿಕ ಸವಾಲು ಎದರಿಸುವ ಮಕ್ಕಳಿಗೆ ಗುಣಮಟ್ಟದ ಜೀವನ ಮತ್ತು ಶಿಕ್ಷಣ ಒದಗಿಸುವ ದೃಷ್ಠಿಯಿಂದ ಮೋಹಿನಿಯ ಅಪಾಜಿ ನಾಯಕ್ ಸ್ಮಾರಕ ವಿಶೇಷ ಶಾಲೆಯನ್ನು ದತ್ತು ಪಡೆದಿದ್ದಾರೆ. ಶ್ರೀಮತಿ ಲೇಟ್ ಮೋಹಿನಿಯ ಅಪಾಜಿ ನಾಯಕ್‍ರವರು ವಿಶೇಷ ಅಗತ್ಯವುಳ್ಳ ಮಕ್ಕಳ ಸೇವೆಗಾಗಿ ತನ್ನ ಸಂಪೂರ್ಣ ಜೀವನವನ್ನು ಕಳೆದರು.ಡಾ ಆಳ್ವ ರವರು ಪವಿತ್ರ ಮದರ್ ತೆರೇಸಾ ಸ್ಮರಣಾರ್ಥವಾಗಿ ಮೂಡಬಿದಿರೆಯ ಸುಮಾರು 700 ವಿಕಲಾಂಗ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುತ್ತಾ ಬಂದಿದ್ದಾರೆ. 2008 ರಲ್ಲಿ ಆಳ್ವ ರವರ ಬೆಳವಣಿಗೆಯ ಅಸಾಮರ್ಥ್ಯ ಮಕ್ಕಳಿಗೆ ಗುಣಮಟ್ಟದ ಜೀವನ ಮತ್ತು ಶಿಕ್ಷಣ ಒದಗಿಸುವ ಸಲುವಾಗಿ ಒಂದು ಶಾಲೆಯ ಆರಂಭಿಸಲು ನಿರ್ಧರಿಸಿದ್ದರು. ಪ್ರಸ್ತುತ 25 ಮಕ್ಕಳು,ವಿಶೇಷವಾಗಿ ತರಬೇತಿ ಪಡೆದ ಶಿಕ್ಷಕರು ಮತ್ತು ಸಾಮಾಜಿಕ ಕೆಲಸಗಾರರ ಮೂಲಕ.ತರಬೇತಿ ಪಡೆಯುತ್ತಿದ್ದಾರೆ. ಯಾವುದೆ ಹಣಕಾಸಿನ ನೆರವು ಅಥವಾ ಬೆಂಬಲವಿಲ್ಲದೆ ಇವರು ಈ ಶಾಲೆಯನ್ನು ನಡೆಸುತ್ತಿದ್ದರೆ. ಮೂಡಬಿದ್ರೆ ಮತ್ತು ಸುಮಾರು ಬಡ ಗ್ರಾಮೀಣ ಶಾಲೆಗಳಿಗೆ ಶಿಕ್ಷಕರ ತುರ್ತು ಅವಶ್ಯಕತೆ ಅರಿತ 25-30 ಶಿಕ್ಷಕರನು ಒದಗಿಸಿ, ಶಿಕ್ಷಕರ ಮಾಸಿಕ ವೇತನವನ್ನು ನೋಡಿಕೊಳ್ಳುತ್ತಿದ್ದಾರೆ. ಈ ವರ್ಷವು 30 ಶಿಕ್ಷಕರನ್ನು ಡಾ ಆಳ್ವರವರು ಹಿಂದುಳಿದ ಗ್ರಾಮೀಣ ಶಾಲೆಗಳಿಗೆ ಉಚಿತವಾಗಿ ನೀಡಿದ್ದಾರೆ.

ದತ್ತು ಸ್ವೀಕಾರ ಯೋಜನೆ

ಬದಲಾಯಿಸಿ

ಡಾ ಮೋಹನ್ ಆಳ್ವರವರು ವಿದ್ಯಾರ್ಥಿ ದತ್ತು ಯೋಜನೆಯಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಆಹಾರ ಮತ್ತು ವಸತಿ ಜೊತೆ 'ಉಚಿತ ಶಿಕ್ಷಣ', ಮತ್ತು ಒಟ್ಟು ಶುಲ್ಕ ವಿನಾಯಿತಿ ನೀಡುತ್ತಿದ್ದಾರೆ. ಈ ಯೋಜನೆ ಯಾವುದೆ ಜಾತಿ, ಮತ, ಧರ್ಮ, ಸಮುದಾಯ ತಾರತಮ್ಯವಿಲ್ಲದೇ ಅರ್ಹ ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿದೆ. ಕ್ರೀಡೆ, ಶೈಕ್ಷಣಿಕ, ಸಾಂಸ್ಕೃತಿಕ, ಹಿಂದುಳಿದ ವರ್ಗ, ಬುಡಕಟ್ಟು ಜನಾಂಗ, ಜಾನಪದ ಕ್ರೀಡೆ ಹೀಗೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸಲಾಗುತ್ತಿದೆ.

ಕ್ರೀಡೆ ಪ್ರೋತ್ಸಾಹ

ಬದಲಾಯಿಸಿ

ಡಾ ಮೋಹನ್ ಆಳ್ವರವರು ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರೋತ್ಸಾಹ ಉಪಕ್ರಮಗಳಿಗೆ ಹೆಸರುವಾಸಿಯಾಗಿದೆ.ಅವರ ಕಾಲೇಜು ದಿನಗಳಲ್ಲಿ ಉತ್ತಮ ಕ್ರೀಡಾಪಟು, ಅವರ ಉತ್ಸಾಹ ಮತ್ತು ಪ್ರಬಲ ದೃಷ್ಟಿಯಿಂದ ಯುವಕ ಯುವತಿಯರನ್ನು ಪ್ರೋತ್ಸಾಹಿಸಲು 'ಏಕಲವ್ಯ ಸ್ಪೋರ್ಟ್ಸ್ ಕ್ಲಬ್.1984 ರಲ್ಲಿ ಸ್ಥಾಪಿಸಿದರು. ನಂತರ ಸುಮಾರು 600 ಗೆ 650 ವಿದ್ಯಾರ್ಥಿಗಳು ಈ ಯೋಜನೆಯಡಿಯಲ್ಲಿ ಸರಿಯಾಗಿ ತರಬೇತಿ ನೀಡಿ ಉಚಿತ ಆಹಾರ ಮತ್ತು ವಸತಿಯನ್ನು ಕಲ್ಪಿಸಲಾಗಿದೆ.ಈಗ ಸುಮಾರು 100 ಕ್ರೀಡಾ ಪುರುಷರು ಮತ್ತು ಮಹಿಳೆಯರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಳ್ವಸ್ ಶಿಕ್ಷಣ ಸಂಸ್ಥೆಗೆ ಉತ್ತಮ ಹೆಸರು ತಂದುಕೊಟ್ಟಿದಾರೆ ಮತ್ತು ಈಗ ಅವರು ಚೆನ್ನಾಗಿ ಜೀವನದಲ್ಲಿ ಮುಂದುವರಿಯುತ್ತಿದಾರೆ, 2008 ರಲ್ಲಿ ಸುಮಾರು 200 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಆಹಾರ ಮತ್ತು ಸೌಕರ್ಯಗಳನ್ನು ಕ್ರೀಡಾ ವಿಭಾಗದಲ್ಲಿ ಕಲ್ಪಿಸಿಕೋಟ್ಟಿದ್ದಾರೆ.

ಆರೋಗ್ಯ ಸೇವೆ

ಬದಲಾಯಿಸಿ

ಡಾ ಆಳ್ವರು ಅನುಭವಿಸಿದ ಅಪಾಯಗಳು ಮತ್ತು ಅನಿಶ್ಚಿತತೆ ಹೊರತಾಗಿಯೂ ದಿಟ್ಟ ನಡೆಯಿಂದ ವಿಶೇಷ ವೈದ್ಯಕೀಯ ಸೇವೆಗಳನ್ನು, ಸುಸಜ್ಜಿತ 300 ಹಾಸಿಗೆಯ 'ಆಲ್ವಾಸ್ ಆರೋಗ್ಯ ಕೇಂದ್ರ 'ದಲ್ಲಿ ಅನುಭವಿ ವೈದ್ಯರು ಮತ್ತು ಬಹು ವಿಶೇಷ ವೈದ್ಯಕೀಯ ಸೇವೆಯನ್ನು ಕಲ್ಪಿಸಿದ್ದಾರೆ. ಇಲ್ಲಿನ ಜನರು ವೈದ್ಯಕೀಯ ಸೇವೆಗಾಗಿ 35-40 ಕಿ ದೂರ ದಣಿದು ಮಂಗಳೂರು ತೆರಳಬೇಕಿತ್ತು, ಇಲ್ಲಿನ ಜನರ ಸೇವೆ ಮಾಡಲು ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದ್ದರು. ಅವರು ಮೂಡಬಿದ್ರೆ ಜಿಲ್ಲೆಯಲ್ಲಿ ಮೊದಲ ಹಾವು ಕಡಿತದ ಚಿಕಿತ್ಸ ಕೇಂದ್ರವನ್ನು ಸ್ಥಾಪಿಸಿದರು. ಅನನ್ಯ ಪ್ರಕರಣಗಳಲ್ಲಿ ಇದುವರೆಗೂ 2 ಅಥವಾ 3 ಸಾವಿನ ಪ್ರಕರಣಗಳು ಹೊರತುಪಡಿಸಿ ಹಾವು ಕಡಿತದಿಂದ ಸುಮಾರು 6000 ಪ್ರಕರಣಗಳಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. 1990 ರಲ್ಲಿ ಅವರು ಸ್ಥಾಪಿಸಿದ ಉಚಿತ ಬರ್ತ್ ಕಂಟ್ರೋಲ್ ಸೆಂಟರ್ ಅಲ್ಲಿ, ಸಾವಿರಾರು ಜನರು ಆಳ್ವಾಸ್ಆ ರೋಗ್ಯ ಕೇಂದ್ರದಲ್ಲಿ ಉಚಿತ ಬರ್ತ್ ಕಂಟ್ರೋಲ್ ಟ್ರೀಟ್ಮೆಂಟ್ ಪಡೆದ್ದಿದ್ದಾರೆ. 2003 ರಲ್ಲಿ ಸುಮಾರು 450ಮಾತ್ರ ಅಂತಹ ಚಿಕಿತ್ಸೆಯನ್ನು ಪಡೆದ್ದಿದ್ದಾರೆ. ಈ ಸೆಂಟರ್ ಮತ್ತಷ್ಟು ವಿನ್ಯಾಸಗೋಳಿಸಿ ಸಮಾಜದಲ್ಲಿ ಒಂದು ಶೋಚನೀಯ ಜೀವನವನ್ನು, HIV ಪಾಸಿಟಿವ್ ರೋಗಿಗಳು ಎದುರಿಸುವ ತೊಂದರೆಗಳನ್ನು ಅರಿತ ಎಚ್ಐವಿ ಉಚಿತ ಚಿಕಿತ್ಸೆ ಕೇಂದ್ರವಾಗಿ ಉನ್ನತೀಕರಿಸಲಾಯಿತು. ಡಾ ಆಳ್ವರವರು ಸುಮಾರು 300 AIDS ರೋಗಿಗಳು ಕೌನ್ಸೆಲಿಂಗ್ ಕೆಲಸವನ್ನು ಪ್ರಾರಂಭಿಸಿ, ಔಷಧಿಗಳ ವೆಚ್ಚ ಹೊರತುಪಡಿಸಿ ನೈತಿಕ ಬೆಂಬಲವನ್ನು ನೀಡುತ್ತಿದ್ದಾರೆ. ಹೀಗೆ ಅವರು ಅನೆಕ ಸಂಸ್ತೆಗಳನ್ನು ಸ್ಥಾಪಿಸಿ ಹೆಸರುವಾಸಿಯಾಗಿದ್ದಾರೆ. ಮೂಡುಬಿದರೆಯ ಜನರು ಇವರನ್ನು ದೇವರೆಂದು ಪೂಜಿಸುತ್ತಾರೆ. ಪ್ರಾಮಾಣಿಕತೆಯಿಂದ ದುಡಿಯುವುದು, ಇವರ ನಿತ್ಯ ಜೀವನದ ಗುಟ್ಟಾಗಿ ಉಳಿದಿದೆ.

ಉಲ್ಲೇಖಗಳು

ಬದಲಾಯಿಸಿ
  1. https://www.alvasayurveda.com/dr-mohan-alva/
  2. https://alvas.org/
  3. "ಆರ್ಕೈವ್ ನಕಲು". Archived from the original on 2019-06-21. Retrieved 2019-06-10.
  4. http://alvascollege.com/