ಎಂ.ಬಿ.ಕುಕ್ಯಾನ್,[೧] ಪುತ್ತೂರಿನ ಮೂಲದವರು. ಉದ್ಯಮಿ, ಮತ್ತು ಉತ್ತಮ ಸಮಾಜಸೇವಕರು. ಮುಂಬಯಿನ ಹಿರಿಯಕವಿಗಳಲ್ಲೊಬ್ಬರು.

ಜೀವನ ಬದಲಾಯಿಸಿ

'ಕುಕ್ಯಾನ್,' ಕಾಲೇಜಿನ ದಿನಗಳಿಂದಲೂ ಒಳ್ಳೆಯ ಪ್ರತಿಭಾವಂತ ವಿದ್ಯಾರ್ಥಿಯೆಂದು ಹೆಸರಾಗಿದ್ದರು. ಮೈಸೂರುವಿಶ್ವ ವಿದ್ಯಾಲಯದಿಂದ 'ಎಮ್.ಎ;ಪದವಿಗಳಿಸಿದ್ದಾರೆ. 'ಮುಂಬಯಿನ ಬಿಲ್ಲವರ ಅಸೋಸಿಯೇಷನ್' ಸಂಚಾಲಿತ 'ಅಕ್ಷಯ ಮಾಸ ಪತ್ರಿಕೆ'ಯ ಸಂಪಾದಕರಾಗಿ ೧೬ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 'ಕನ್ನಡ ಸಾಹಿತ್ಯ ಪರಿಷತ್ತಿನ (ಮಹಾರಾಷ್ಟ್ರ ಘಟಕ) ದ ಉಪಾಧ್ಯಕ್ಷ'ರಾಗಿರುತ್ತಾರೆ. ಬಿಲ್ಲವರ ಅಸೋಸಿಯೇಷನ್ ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಉಪ-ಕಾರ್ಯಾಧ್ಯಕ್ಷರಾಗಿ ಕೆಲಸಮಾಡಿದ್ದಾರೆ. 'ಭಾರತ್ ಬ್ಯಾಂಕ್'ನ ಉಪಾಧ್ಯಕ್ಷರಾಗಿ, ಪ್ರಸ್ತುತದಲ್ಲಿ 'ಬ್ಯಾಂಕಿನ ನಿರ್ದೇಶಕ'ರಾಗಿ ದುಡಿಯುತ್ತಿದ್ದಾರೆ. ಬಿಲ್ಲವರ ಆಸೋಸಿಯೇಷನ್ ನ, ಇವರ ಪ್ರಾಯೋಜಕತೆಯಲ್ಲಿ ಮಹಾರಾಷ್ಟ್ರದ ಕನ್ನಡ ಸಾಹಿತಿಗಳಿಗೆ 'ಗುರುನಾರಾಯಣ ಸಾಹಿತ್ಯ ಪ್ರಶಸ್ತಿ'ಯನ್ನು ನೀಡಲಾಗುತ್ತಿದೆ.

ಕೃತಿರಚನೆಗಳು ಬದಲಾಯಿಸಿ

  • ಸೌಗಂಧಿಕ,
  • ಸೌರಭಾ,
  • ಸೌಪರ್ಣಿಕಾ,
  • ಸಾಂಪ್ರತ (ಸಂಪಾದಕೀಯ ಬರಹಗಳ ಸಂಗ್ರಹಗಳು)
  • ಪಾವಾಣೆ,
  • ಮೋಸದ ಬೀದಿಗಳು
  • ಮೋಸದ ತಿರುವುಗಳು,
  • ಮೋಸದ ಮುಖಗಳು(ಕಥಾ ಸಂಕಲಗಳು)
  • ಪೂವಕ್ಕನ ತೂಟೆ(ಕವನ ಸಂಕಲನ) ಪ್ರಕಟಿಸಿರುತ್ತಾರೆ.

ಪ್ರಶಸ್ತಿಗಳು ಬದಲಾಯಿಸಿ

  • ವರ್ಷ ೨೦೧೫ ರ, ಮುಂಬಯಿಯ ಕರ್ನಾಟಕ ಸಂಘದ, 'ಸಾಧನ ಶಿಖರ ಗೌರವ ಪ್ರಶಸ್ತಿ' ಗಳಿಸಿದ್ದಾರೆ.[೨] [೩]

ಉಲ್ಲೇಖಗಳು ಬದಲಾಯಿಸಿ

  1. ಕೆಮ್ಮಣ್ಣು.ಕಾಂ,'ಎಂ.ಬಿ.ಕುಕ್ಯಾನ್,'
  2. "ಉದಯವಾಣಿ,Mar 11, 2015, 'ಹತ್ತನೆಯ ಸಾಹಿತ್ಯ-ಸಂಸ್ಕೃತಿ ಸಮಾವೇಶ ಸಮಾರೋಪ'". Archived from the original on ಮಾರ್ಚ್ 12, 2015. Retrieved ಮಾರ್ಚ್ 18, 2015.
  3. 'ಉದಯವಾಣಿ',೩,ಮಾರ್ಚ್,೨೦೧೫, ಮಹಾರಾಷ್ಟ್ರ ವಾರ್ತೆಗಳು:ಪುಟ :೧೨,'ಎಂ.ಬಿ.ಕುಕ್ಯಾನ್,ದಿವಾಕರ ಶೆಟ್ಟಿಗೆ ಮುಂಬಯಿ ಕರ್ನಾಟಕ ಸಂಘದ ಸಾಧನ ಶಿಖರ ಗೌರವ'