ಎಂ. ಜಿ. ಗಂಗನ್ ಪಳ್ಳಿ
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. (ಏಪ್ರಿಲ್ ೨೭,೨೦೧೫) |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ (ಏಪ್ರಿಲ್ ೨೭,೨೦೧೫) ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಬೀದರ್ ಜಿಲ್ಲೆಯ ಹಿರಿಯ ಕವಿ ಎಂ.ಜಿ. ಗಂಗನ್ ಪಳ್ಳಿಯವರು ಕಳೆದ ನಾಲ್ಕು ದಶಕಗಳಿಂದ ಕನ್ನಡ ಸಾಹಿತ್ಯ ಕೃಷಿ ಆರಂಭಿಸಿದ್ದಾರೆ. ಕಾವ್ಯ, ಜನಪದ, ಚಿಂತನೆ, ಆಧುನಿಕ ವಚನ, ಅನುವಾದ, ಗದ್ಯ ಬರಹ, ಸಂಪಾದನೆಗಳು ಸೇರಿ ಇಪ್ಪತ್ತಕ್ಕೂ ಹೆಚ್ಚು ಕೃತಿ ಪ್ರಕಟಿಸಿದ್ದಾರೆ. ಕಾವ್ಯದ ಮೂಲಕ ರಮ್ಯ, ನವ್ಯ ದಲಿತ ಬಂಡಾಯದ ಆಶಯದ ಜೊತೆಗೆ ಪ್ರಗತಿಪರ ವೈಚಾರಿಕ ಚಿಂತನೆ ಹೊರ ಹಾಕಿದ್ದಾರೆ. ಸಾನೆಟ್ಗಳ ಕವಿಯೆಂದೇ ಪ್ರಸಿದ್ಧರಾದವರು. ಶಿಕ್ಷಣ ಸಿರಿ, ಗುಲ್ಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲ-ರಾಜ್ಯ ಶಿಕ್ಷಕ ಪ್ರಶಸ್ತಿ, ಧರಿನದ ಸಿರಿ ಪ್ರಶಸ್ತಿ ಗುರವಗಳು ಹೊಂದಿ ಇವರ ಸಾಹಿತ್ಯ ಸಾಧನೆಗೆ ಬೀದರ್ ಜಿಲ್ಲಾ ಪ್ರಥಮ ಗಡಿನಾಡು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಮಾಡಿದ ಭಾಷಣ ಮನನೀಯವಾಗಿದೆ.
ಎಂ. ಜಿ. ಗಂಗನ್ ಪಳ್ಳಿ | |
---|---|
ಜನನ | ೦೨-೦೮-೧೯೪೬ ತಾಲ್ಲುಕಾ ಸಿಕಿನ್ದ್ರಪೂರ್, ಜಿಲ್ಲೆ ಬೀದರ್ |
ವೃತ್ತಿ | ೩೯ ವರ್ಷ ಶೈಕ್ಷಣಿಕ ಸೇವೆ, ನಿವ್ರತ್ತ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರು |
ರಾಷ್ಟ್ರೀಯತೆ | ಭಾರತೀಯ |
ವಿಷಯ | ಕಾವ್ಯ, ಜನಪದ, ಚಿಂತನೆ, ಆಧುನಿಕ ವಚನ, ಅನುವಾದ, ಗದ್ಯ ಬರಹ, ಸಂಪಾದನೆಗಳು |
ಪ್ರಭಾವಗಳು
|
ಜೀವನ
ಬದಲಾಯಿಸಿವಿವೇಕಾನಂದರ ನುಡಿ ಕರೆಯಿತು ಮರ ಮರಳಿ: ಮಿಂಚಿನ ಹೂವಾಯಿತು ಎದೆಯಲಿ ಅರಳಿ: ಗಮಗಮಿಸಿತು ಸುತ್ತ ತುಂಬಿತು ಚಿತ್ತ: ಸಂಶಯವನು ಹುಡಿಗೈದು ತಬ್ಬಿತು ನನ್ನನ್ನು: ಕೈಹಿಡಿದು ಮೇಲೆತ್ತಿ ಜೊತೆಯಾಯಿತು ಇನ್ನೂ: ಸಿರಿಯಾಯಿತು ಗುರಿಯಾಯಿತು ಬಾಳನು ಆವರಿಸಿ: ಶಕ್ತಿಯ ಕಿಡಿ ಹೊತ್ತಿಸಿತು ಜ್ವಾಲೆಯನೆ ಎಬ್ಬಿಸಿತು ತಂದಿತು ಹೊಸಬೆಳಗು ಮೂಡಿಸಿತು ಬೆರಗು: ನಾನ್ನೆದ್ದೆ ಎದ್ದೆ ಇನ್ನೆಲ್ಲಿ ನಿದ್ದೆ. [ಕಾವ್ಯ ಚಂದ್ರಿಕೆ : ೨೪-೦೨-೨೦೦೮]
ಕೃತಿಗಳು
ಬದಲಾಯಿಸಿ- ಬಾಳ ಹಂದರ (ಕವನ ಸಂಕಲನ) ೧೯೭೮, ಸವಿಗನ್ನಡ ಪ್ರಕಾಶನ ಸಿಕಿನ್ದ್ರಪೂರ್
- ವಿಚಾರೋಧ್ಯಾನ (ಪ್ರಬಂಧ ಸಂಕಲನ) ೧೯೮೭, ಸವಿಗನ್ನಡ ಪ್ರಕಾಶನ ಸಿಕಿನ್ದ್ರಪೂರ್
- ನೀರು... ನೀರು... ನೀರು... (ಹಿಂದಿಯಿಂದ ಕನ್ನಡಕ್ಕೆ ಭಾಷಾಂತರ) ೨೦೦೨, ಭಾರತೀಯ ಜನನ ವಿಜ್ಞಾನ ಸಮಿತಿ, ಬೆಂಗಳೂರು
- ಕಾವ್ಯ ಚಂದ್ರಿಕೆ, ೨೦೦೯
- ಕನಕ ದರ್ಶನ (ಸಂಕ್ಷಿಪ್ತ ಜೀವನ ಚರಿತ್ರೆ) - ೨೦೧೦
ಪ್ರಶಸ್ತಿ ಪುರಸ್ಕಾರಗಳು
ಬದಲಾಯಿಸಿ- ಬೀದರ್ ಜಿಲ್ಲಾ ಪ್ರಥಮ ಗಡಿನಾಡು ಸಾಹಿತ್ಯ ಸಮ್ಮೇಳನ ಅಧ್ಯಕ್ಷರು, ಫೆಬ್ರುವರಿ ೧೬ -೧೭, ೨೦೦೯
- ಬೀದರ್ ಜಿಲ್ಲಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು, ಜನೇವರಿ ೧೯-೨೦, ೨೦೧೦