(೩, ನವೆಂಬರ್ ೧೯೩೫-)

ಡಾ.ಎಮ್. ಎ. ಜಯರಾಮ್ ರಾವ್
Born
ಜಯರಾಮ. ಮೂಡಿಬಿದರೆ. ತಂದೆ : ಕೀರ್ತಿ ಶೇಷ, ಅನಂತ ಪದ್ಮರಾಭ ರಾವ್ ಒಬ್ಬ ಕನ್ನಡದ ಲೇಖಕರು, ಕವಿ, ಮತ್ತು ಗಮಕಿಯೆಂದು ಗುರುತಿಸಲ್ಪಟ್ಟಿದ್ದರು. ಮಹಾಭಾರತ ಕುಮಾರವ್ಯಾಸರು ಸಂಸ್ಕೃತದಲ್ಲಿ ಬರೆದು ಮುಗಿಸಲಾರದೆ ಬಿಟ್ಟಿದ್ದ, ಕರ್ನಾಟ ಭಾರತ ಕಥಾಮಂಜರಿ ಯ ೮ ಪರ್ವಗಳನ್ನು ಕನ್ನಡದಲ್ಲಿ ಅನುವಾದಿಸಿ, ಬರೆದರು
Nationalityಭಾರತೀಯ
Other names.
Educationಮೈಸೂರಿನ್ ಬಾಸೆಲ್ ಮಿಷನ್ ಶಾಲೆಯಲ್ಲಿ ಒಂದು ವರ್ಷ ಓದಿ, ಮೂರನೆಯ ತರಗತಿಗೆ ಪಾಸಾದರು.ಸೇಂಟ್ ಮೈಖೇಲ್ ಶಾಲೆ, ೬ ನೆ ತರಗತಿವರೆಗೆ, ೧೯೪೬ ರಲ್ಲಿ ಸೆಂಟ್ರೆಲ್ ಹೈ ಸ್ಕೂಲ್ ನಲ್ಲಿ ಸಂಗೀತ ಸಾಹಿತ್ಯ ಪ್ರಕಾರಗಳಲ್ಲಿ ಅವರ ವ್ಯುತ್ಪತ್ತಿ ಹಾಗೂ ಸಾಧನೆ ಹಿರಿಯದು.
Alma materಸೆಂಟ್ರೆಲ್ ಹೈ ಸ್ಕೂಲ್,
Occupation(s)ಮೂಲದಲ್ಲಿ ಪತ್ರಿಕೋದ್ಯಮಿ. ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಯಿಂದ ವೃತ್ತಿಜೀವನ ಆರಂಭ, ದೇಶದ ಹಲವು ಭಾಗಗಳಲ್ಲಿ ತಮ್ಮ ವೃತ್ತಿಜೀವನದ ವತಿಯಿಂದ ಕೆಲಸ ನಿರ್ವಹಿಸಿದರು.
Known forಒಬ್ಬ ಕನ್ನಡದ ಲೇಖಕರು, ಕವಿ, ಮತ್ತು ಗಮಕಿಯೆಂದು ಗುರುತಿಸಲ್ಪಟ್ಟಿದ್ದಾರೆ.
Spouseಕರ್ನಾಟಕದ ಶಿರಾಳ ಕೊಪ್ಪದ ಚೌತಾಯಿ ಮನೆತನ ರುಕ್ಮಿಣಿಯವರ ಜೊತೆಯಲ್ಲಿ ಮದುವೆಮಾಡಿಕೊಂಡರು.
Children೩ ಮಕ್ಕಳು. ೧.. ಕೃಷ್ಣಸ್ವಾಮಿ (ಶಾಮು), ೨. ಕುಮುದವಲ್ಲಿ, ೩. ಭಾರತಿ ಪ್ರಸಾದ್.

ಡಾ. ಎಂ. ಎ. ಜಯರಾಮ್ ರಾವ್, ಎಂದು ವಿಖ್ಯಾತರಾದ ಗಮಕ ವಾಚಕ,[] ಹಾಗೂ ವ್ಯಾಖ್ಯಾನಕಾರರ ತೊಳ್ಳಿಲ ಹೆಸರು,ಮೂಡಿಬಿದರೆ ಅನಂತ ಪದ್ಮನಾಭರಾವ್ ಜಯರಾಮ್ ರಾವ್, ಎಂದು. [] ಗಮಕ ಕಲೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಆರಿಸಿಕೊಂಡು, ಅದರಲ್ಲಿ ಸತತವಾಗಿ ಸಂಶೋಧನೆ ಮಾಡುತ್ತಿರುವ ವಿದ್ವಾಂಸರಲ್ಲೊಬ್ಬರು. ಅವರು ಸದಾ ತಮ್ಮನ್ನು ಗಮಕ ಕಲೆಯ ಪ್ರಸಾರದಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿದ್ದಾರೆ. [] ಮೃದುವಾದ ಮಾತು ಸದಾ ಹಸನ್ಮುಖಿ, ಆರ್ಭಟವಿಲ್ಲ ಪುನರುಕ್ತಿ, ಅನವಶ್ಯಕ ಎಳೆತಗಳಿಲ್ಲ ಅರ್ಥ ಸ್ಪಷ್ಠತೆ, ಮಾರ್ದವತೆ,ಸಂಗೀತ ಶುದ್ಧತೆಗೆ ಹೆಸರಾದವರು. ತಮ್ಮ ಮನೆತನದ ಪರಂಪೆರೆಯಲ್ಲಿ ಗಮಕ ಕಲೆಗೆ ವಿಶೇಷ ಪ್ರೋತ್ಸಾಹವಿತ್ತು. ತಮ್ಮ ಎಳೆಯ ವಯಸ್ಸಿನಿಂದ ಈಗಿನವರೆಗೆ ಸತತವಾಗಿ ಗಮಕ ಕಲೆಯನ್ನು ಅಭ್ಯಾಸಮಾಡುತ್ತಾ ಅದರಲ್ಲಿ ಮಹತ್ವದ ಸನ್ನಿವೇಶಗಳನ್ನು ಅರಸುತ್ತಾ, ಕಲಿಯುತ್ತಾ, ಕಲಿಸುತ್ತಾ ಮುಂದುವರೆಯುತ್ತಿರುವ ಜಯರಾಮ್ ರಾವ್ ಆ ಕಲೆಯಲ್ಲಿ ಸಿದ್ಧಿಯನ್ನು ಪಡೆದಿದ್ದಾರೆ. ಹಲವಾರು ಗ್ರಂಥಗಳನ್ನು ಬರೆದು ಪ್ರಕಟಿಸಿದ್ದಾರೆ. ಎಲೆಕ್ಟ್ರಾನಿಕ್ ಮಾಧ್ಯಮಗಳಾದ ಇಂಟರ್ನೆಟ್, ಯೂ ಟ್ಯೂಬ್ ಬಳಸಿಕೊಂಡು, ತಮ್ಮ ಭಾಷಣಗಳಲ್ಲಿ ಪ್ರಾತ್ಯಕ್ಷಿಕೆಗಳ ಜೊತೆಗೆ ಅತ್ಯುತ್ತಮವಾಗಿ ನಿರೂಪಣೆಯನ್ನು ಮಾಡುತ್ತಿದ್ದಾರೆ. ಆರಿಸಿಕೊಂಡ ಕಾವ್ಯಗಳಲ್ಲಿನ ಪಾತ್ರಗಳ, ರಸಕ್ಕೆ ತಕ್ಕಹಾಗೆ, ರಾಗಗಳ ಬಳಕೆ, ದನಿಯಲ್ಲಿ ಏರಿಳಿತ, ಮೊದಲಾದುವುಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ.

ಹೆಸರಾಂತ ಗಮಕಿ, ಸಾಹಿತಿ, ಕೀರ್ತಿ ಶೇಷ, ಅನಂತ ಪದ್ಮರಾಭ ರಾವ್ [] ಇವರ ತಂದೆ. ಹೊಸಗನ್ನಡ ನವೋದಯ ಯುಗದ ಪ್ರಸಿದ್ಧ ಕವಿ, ವಿದ್ವಾಂಸ ಗಮಕಿ ಕೊಡಗಿನಲ್ಲಿ ಮಹಾನ್ ಕಾವ್ಯಗಳನ್ನು ಅಭ್ಯಾಸಮಾಡಿ ಪ್ರಸಾರ ಮಾಡಿದರು. ತುಳಸಿ ಶ್ರೀಕೃಷ್ಣಾಮೃತ, ಮೊದಲಾದ ಉದ್ಗ್ರಂಥಗಳ ಕರ್ತೃ. ಪಂಪ, ರಾಘವಾಂಕ, ಕುಮಾರವ್ಯಾಸ ಲಕ್ಷ್ಮೀಶ, ಚಾಮರಸ, ನರಹರಿ, ಮೊದಲದ ಪ್ರಾಚೀನ ಕವಿ ಶ್ರೇಷ್ಠರನ್ನು ಗಮಕಕಲೆಯಿಂದ ಜನತೆಗೆ ಪರಿಚಯಿಸಿದ್ದಾರೆ. ಸುಗಮ ಸಂಗೀತ, ಹಾಗೂ ಸಂಗೀತ ಕ್ಷೇತ್ರದಲ್ಲಿ ಆಸಕ್ತರು. ಗಾಯನ ಸಮಾಜ, ಗಾನಕಲಾ ಪರಿಷದ್, ಮೊದಲಾದ ಸಾರ್ವಜನಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ, ವಿಮರ್ಶೆ, ಪರಿಚರ್ಯಾತ್ಮಕ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಗಾನಕಲಾ ಪರಿಷದ್ ಸಂಸ್ಥೆ ಹುಟ್ಟಿದಾಗಿನಿಂದಲೂ ನಿಕಟ ಸಂಬಂಧವನ್ನು ಹೊಂದಿದ್ದಾರೆ. ೯ ವರ್ಷಗಳ ಕಾಲ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ, ಜಿ ನಾರಾಯಣರ ಜೊತೆ ಒಡನಾಟವಿತ್ತು.

ತಂದೆ-ತಾಯಿಗಳು,ಪರಿವಾರ

ಬದಲಾಯಿಸಿ

ಗಮಕ ವಿದ್ವಾನ್,ಎಮ್.ಎಸ್.ಅನಂತಪದ್ಮನಾಭ ರಾವ್, [] (6 September 1903–29 November 1987) ಒಬ್ಬ ಕನ್ನಡದ ಲೇಖಕರು, ಕವಿ, ಮತ್ತು ಗಮಕಿಯೆಂದು ಗುರುತಿಸಲ್ಪಟ್ಟಿದ್ದರು. ಮಹಾಭಾರತ ಕುಮಾರವ್ಯಾಸರು ಸಂಸ್ಕೃತದಲ್ಲಿ ಬರೆದು ಮುಗಿಸಲಾರದೆ ಬಿಟ್ಟಿದ್ದ, ಕರ್ನಾಟ ಭಾರತ ಕಥಾಮಂಜರಿ ಯ ೮ ಪರ್ವಗಳನ್ನು ಕನ್ನಡದಲ್ಲಿ ಅನುವಾದಿಸಿ, ಬರೆದರು. ಪಂಜೆ ಮಂಗೇಶರಾಯರ ಹತ್ತಿರ ವ್ಯಾಸಂಗ ಮಾಡಿದರು. ಅನಂತ ಪದ್ಮನಾಭ ದಂಪತಿಗಳಿಗೆ ಕವಿಗಳು, ಗಾಯಕರನ್ನು ಕಂಡರೆ ಗೌರವ ಹಾಗೂ ಪ್ರೀತಿ.

ಮಕ್ಕಳು

ಬದಲಾಯಿಸಿ

೧. ಎಮ್.ಎ.ಶೇಷಗಿರಿರಾವ್ (ಶೇಷಗಿರಿ ಹಾಸನದಲ್ಲಿ ೧೯೩೩, ಜೂನ್ ೧೯ ರಂದು ಜನಿಸಿದರು) ನಿವೃತ್ತ ಫಾರೆಸ್ಟ್ ಆಫಿಸರ್, ೨. ಕರ್ನಾಟಕ ಕಲಾಶ್ರೀ ಎಂ.ಎ.ಜಯರಾಮ್ ರಾವ್, ಗಮಕಿ, ವಿಮರ್ಶಕ, ೩. ಪದ್ಮಿನಿ ಶ್ರೀನಿವಾಸರಾವ್; (೧೯೩೮ ರಲ್ಲಿ ತಂಗಿ,ಪದ್ಮಿನಿಯ ಜನನ) ಗಮಕಿ ಹಾಗೂ ಮಡಿಕೇರಿ ನಾಗೇಂದ್ರ ಮ್ಯೂಸಿಕ್ ಡೈರೆಕ್ಟರ್, ಮತ್ತು ಲಘು ಸಂಗೀತ ಕಲಾವಿದೆ. ೪. ನಾಗೇಂದ್ರ.

ಜಯರಾಮರ ವಿದ್ಯಾಭ್ಯಾಸ

ಬದಲಾಯಿಸಿ

ಮೈಸೂರಿನ್ ಬಾಸೆಲ್ ಮಿಷನ್ ಶಾಲೆಯಲ್ಲಿ ಒಂದು ವರ್ಷ ಓದಿ, ಮೂರನೆಯ ತರಗತಿಗೆ ಪಾಸಾದರು.ಸೇಂಟ್ ಮೈಖೇಲ್ ಶಾಲೆ, ೬ ನೆ ತರಗತಿವರೆಗೆ, ೧೯೪೬ ರಲ್ಲಿ ಸೆಂಟ್ರೆಲ್ ಹೈ ಸ್ಕೂಲ್ ನಲ್ಲಿ ಸಂಗೀತ ಸಾಹಿತ್ಯ ಪ್ರಕಾರಗಳಲ್ಲಿ ಅವರ ವ್ಯುತ್ಪತ್ತಿ ಹಾಗೂ ಸಾಧನೆ ಹಿರಿಯದು. ಸಹಸ್ರಾರು ಕಾವ್ಯ ಗಮಕ ಕಾರ್ಯಕ್ರಮಗಳನ್ನು ನೀಡಿ ರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾಸ್ತ್ರೀಯ ಸಂಗೀತವನ್ನು ದಿ.ಚಕ್ರಕೋಡಿ ನಾರಾಯಣ ಶಾಸ್ತ್ರೀ, ಹಾಗೂ ದಿ.ವೈ ಏನ್. ಶ್ರೀನಿವಾಸಮೂರ್ತಿಯವರಿಂದ ಕಲಿತರು. ಸುಗಮ ಸಂಗೀತದಲ್ಲಿ ಸಾಕಷ್ಟು ಪರಿಶ್ರಮ, ದಾಸ ಸಾಹಿತ್ಯವನ್ನೂ ಚೆನ್ನಾಗಿ ಲೇಖಕ, ಗ್ರಂಥಕರ್ತ, ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸೌಜನ್ಯ, ಗುರುಹಿರಿಯರಲ್ಲಿ ಭಕ್ತ್ಯಾದರಗಳನ್ನು ತೋರಿಸುತ್ತಾ ಬಂದಿದ್ದಾರೆ.

ವಿವಾಹ, ಮಕ್ಕಳು

ಬದಲಾಯಿಸಿ

ಜಯರಾಮರಾಯರು ಅಹಮದಾಬಾದ್ ನಗರದಲ್ಲಿ ಕೆಲಸಮಾಡುತ್ತಿದ್ದಾಗ, ಕರ್ನಾಟಕದ ಶಿರಾಳ ಕೊಪ್ಪದ ಚೌತಾಯಿ ಮನೆತನ ರುಕ್ಮಿಣಿಯವರ ಜೊತೆಯಲ್ಲಿ ಮದುವೆಮಾಡಿಕೊಂಡರು. ಈ ದಂಪತಿಗಳಿಗೆ ೩ ಮಕ್ಕಳು. ೧.. ಕೃಷ್ಣಸ್ವಾಮಿ (ಶಾಮು), ೨. ಕುಮುದವಲ್ಲಿ, ೩. ಭಾರತಿ ಪ್ರಸಾದ್.

ಅಮೃತೋತ್ಸವ (೨೦೦೯)

ಬದಲಾಯಿಸಿ

ಅಮೃತೋತ್ಸವದ ಸಂದರ್ಭದಲ್ಲಿ 'ಅಮೃತಧಾರ', ಅಭಿನಂದನಾ ಗ್ರಂಥದ ಬಿಡುಗಡೆಯಾಯಿತು.

ಕನ್ನಡ ಸಂಘ ಹಾಂಕಾಗ್(೨೦೧೩)

ಬದಲಾಯಿಸಿ

ಹಾಂಕಾಂಗ್ ನಗರದಲ್ಲಿ ಕೆಲವು ಗಮಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅವುಗಳಲ್ಲಿ ಪ್ರಮುಖವಾದದ್ದು : ಕುಮಾರವ್ಯಾಸಭಾರತದ 'ವಿದುರಾತಿಥ್ಯದ ಭಾಗ'. ಇದರ ವಾಚನ ಮತ್ತು ವ್ಯಾಖ್ಯಾನವನ್ನು 'ಮೆಟ್ರೋ ಟೌನ್ ಕ್ಲಬ್ ಹೌಸ್ ಸಭಾಂಗಣ'ದಲ್ಲಿ ಶ್ರೀ ಪುರುಂದರದಾಸರ ಆರಾಧನೋತ್ಸವದವನ್ನು ಆಯೋಜಿಸಿದ ಕನ್ನಡ ಸಂಘವೊಂದರಲ್ಲಿ ಮಾಡಿದರು.

ಆತ್ಮ ಕಥೆ

ಬದಲಾಯಿಸಿ
  • ಗಮಕ ಕಲಾರತ್ನ ಜಯರಾಮರಾವ್ ಆತ್ಮಕಥನ ಲೋಕಾರ್ಪಣೆ []

ಷ್ರೇಷ್ಠ ವ್ಯಕ್ತಿಗಳ ಜೊತೆ ಸಂಪರ್ಕ

ಬದಲಾಯಿಸಿ

ಸಂಗೀತದ ಗುರುಗಳಾದ ಚಕ್ರಕೋಡಿನಾರಾಯಣ ಶಾಸ್ತ್ರಿಗಳಿಂದ ಆರಂಭವಾಗಿ, ರಾಷ್ಟ್ರಕವಿ ಗೋವಿಂದ ಪೈ,ಪಂಜೆ ಮಂಗೇಶರಾವ್, ಡಿ.ವಿ.ಜಿ, ಕುವೆಂಪು, ತೀನಂಶ್ರೀ,ಪುತಿನ, ಡಿ.ಎಲ್.ಎನ್, ಮುಗುಳಿ, ರಾಜರತ್ನಂ, ವಿ.ಸೀ. ಮೊದಲಾದವರೊಡನೆ ನೇರಸಂಪರ್ಕವಿಟ್ಟುಕೊಂಡಿದ್ದರು.

ಪ್ರಶಸ್ತಿಗಳು

ಬದಲಾಯಿಸಿ
  1. ನಾಡ ಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರಕಟ. ೧೫೦ ಗಣ್ಯರ ಆಯ್ಕೆ, []
  2. ಹಲವಾರು ಪ್ರಶಸ್ತಿಗಳು.[]

ಉಲ್ಲೇಖನಗಳು

ಬದಲಾಯಿಸಿ
  1. [www.sobagu.in/ಗಮಕ/ ಸೊಬಗು ಇ-ಪತ್ರಿಕೆ]
  2. ಡಾ.ಎಂ.ಎ.ಜಯರಾಮ್ ರಾವ್ ರವರ ಬಯೋಡೇಟಾ
  3. ಮುಂಬಯಿನ ಮೈಸೂರ್ ಅಸೋಸಿಯೇಷನ್ ಸಭಾಗಾರದಲ್ಲಿ ೨೦೧೮ ರ, ಫೆಬ್ರವರಿ ೨೪ ಮತ್ತು ೨೫ ರಂದು, "ಮಹಾಭಾರತದಲ್ಲಿ ಕರ್ಣ" ಎಂಬ ವಿಷಯವಾಗಿ ಗಮಕವಾಚನ ಹಾಗೂ ವ್ಯಾಖ್ಯಾನ-ವಿದ್ವಾನ್,ಡಾ.ಎಮ್.ಎ.ಜಯರಾಮ್ ರಾವ್ ರವರಿಂದ
  4. ಕೊಡಗಿನ-ಅನಂತಪದ್ಮನಾಭರಾವ್
  5. [https://en.wikipedia.org/wiki/M._S._Ananthapadmanabha_Rao M._S._Ananthapadmanabha_Rao]
  6. ಗಮಕ ಕಲಾರತ್ನ ಜಯರಾಮರಾವ್ ಆತ್ಮಕಥನ ಲೋಕಾರ್ಪಣೆ, ಒನ್ ಇಂಡಿಯ, Wednesday, December 30, 2015
  7. kannadiga world, 22-04-2016, ಪ್ರಸಕ್ತ ಸಾಲಿನ ನಾಡ ಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರಕಟ.೧೫೦ ಗಣ್ಯರ ಆಯ್ಕೆ
  8. ಡಾ.ಎಂ.ಎ.ಜಯರಾಮ್ ರಾವ್ ರವರ ಬಯೋಡೇಟಾ

ಹೆಚ್ಚಿನ ಓದಿಗೆ

ಬದಲಾಯಿಸಿ

ಸಾರ್ಥ-ಕತೆ-ಎಂ. ಎ. ಜಯರಾಮ್ ರಾವ್, ಹಿರಿಯ ಗಮಕ ವಿದ್ವಾನ್, ಪ್ರಕಾಶಕರು, ಜ್ಞಾನ ದೀಪಿಕಾ ಎಜುಕೇಷನ್ ಟ್ರಸ್ಟ್ (ರಿ), ನಂ.೪೩, ಸಂಸ್ಕ್ರುತಿ, ೩ನೇ ಅಡ್ಡ ರಸ್ತೆ, ಕುರುಬರ ಹಳ್ಳಿ, ಬೆಂಗಳೂರು-೫೬೦೦೮೬, ದೂರವಾಣಿ ಸಂಖ್ಯೆ : ೯೯೮೬೩೬೫೩೯೩ ನೀಲತ್ತ ಹಳ್ಳಿ ಕಸ್ತೂರಿ, 'ತಂದೆಯಂತೆ ಮಗ' ಸಾರ್ಥ-ಕತೆ ಪುಸ್ತಕದಲ್ಲಿನ ಲೇಖನ.

ಹೊರ ಸಂಪರ್ಕಗಳು

ಬದಲಾಯಿಸಿ
  1. ಎಂ.ಎ.ಜಯರಾಮ ರಾವ್,'ಕನ್ನಡ ಸಂಪದ' Kannada Sampada
  2. ಗಮಕ ಕಲಾರತ್ನ ಜಯರಾಮರಾವ್ ಆತ್ಮಕಥನ ಲೋಕಾರ್ಪಣೆ oneindia.com, December 30, 2015
  3. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಮಕ ಕಲೆ
  4. www.sobagu.in/ಗಮಕ/ ಸೊಬಗು ಇ-ಪತ್ರಿಕೆ
  5. 'ಯೂ ಟ್ಯೂಬ್ ನಲ್ಲಿ ಲಭ್ಯ.'. 'ಕರ್ಣ ರಸಾಯನ ಮಲ್ತೆ,ಭಾರತಮ್'
  6. 'ಯೂ ಟ್ಯೂಬ್ ನಲ್ಲಿ ಲಭ್ಯ.Introductory verse
  7. 'Origins of Gamaka'
  8. ಗಮಕ