ಡಾ. ಎಂ.ಜಿ. ಮಂಜುನಾಥ ಕರ್ನಾಟಕದ ಹೆಸರಾಂತ ಲಿಪಿ ಶಾಸ್ತ್ರಙ್ಜ್ನ ಮತ್ತು ಸಂಶೋಧಕರು. ಕನ್ನಡ ಲಿಪಿ ವಿಕಾಸ ಕೃತಿಯಿಂದ ಪ್ರಸಿದ್ಧರಾದ, ಡಾ. ಮಂಜುನಾಥ, ೨೦೧೫ರಿಂದ ಮೈಸೂರು_ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ[]ಸೇವೆ ಸಲ್ಲಿಸುತ್ತಿದ್ದಾರೆ.[]

ಓದು-ವೃತ್ತಿ

ಬದಲಾಯಿಸಿ

ಡಾ. ಮಂಜುನಾಥ ೧೯೭೩ರಲ್ಲಿ ಶ್ರೀ ಗಂಗಪ್ಪನವರ ಮಗನಾಗಿ ಹುಟ್ಟಿದರು. ಎಂ.ಎ ಮತ್ತು ಪಿ.ಹೆಚ್.ಡಿ ಪಡೆದು ೯೦ರ ದಶಕದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ವೃತ್ತಿ ಆರಂಭಿಸಿದ ಡಾ. ಮಂಜುನಾಥ, ತದ್ನಂತರ ಹೇಮಗಂಗೋತ್ರಿಯ ಪದವಿಯೋತ್ತರ ಕೇಂದ್ರ ಮತ್ತು ಮೈಸೂರು ವಿ.ವಿಯಲ್ಲಿ ಸೇವೆ ಗೈದರು.[]

ಆಸಕ್ತಿ

ಬದಲಾಯಿಸಿ
  • ಕರ್ನಾಟಕದ ಶಾಸನಕಲ್ಲುಗಳು
  • ಕರ್ನಾಟಕದ ನಾಣ್ಯ-ವ್ಯವಸ್ಥೆ
  • ಶತಮಾನಗಳ ಅವಧಿಯಲ್ಲಿ ಕನ್ನಡ ಲಿಪಿಯ ವಿಕಾಸ

ಅಜೀವ ಸದಸ್ಯತ್ವ

ಬದಲಾಯಿಸಿ
  • ಕನ್ನಡ ಸಾಹಿತ್ಯ್ಯ ಪರಿಷತ್
  • ಕರ್ನಾಟಕ ಇತಿಹಾಸ ಅಕಾಡೆಮಿ
  • ಕರ್ನಾಟಕ ಇತಿಹಾಸ ಕಾಂಗ್ರೆಸ್
  • ದಕ್ಷಿಣ ಭಾರತ ಇತಿಹಾಸ ಕಾಂಗ್ರೆಸ್
  • ಪ್ಲೇಸ್‍ನೇಮ್ ಸೊಸೈಟಿ ಆಫ್ ಇಂಡಿಯಾ
  • ನುಮಿಸ್ಮಾಟಿಕ್ಸ್ ಸೊಸೈಟಿ ಆಫ್ ಇಂಡಿಯಾ (ಪುರಾತನ ನಾಣ್ಯಗಳ ಅಧ್ಯಯನಕಾರರ ಸೊಸೈಟಿ)
  • ಭಾರತೀಯ ಎಪಿಗ್ರಾಫಿ ಕಾಂಗ್ರೆಸ್ (ಶಿಲಾಶಾಸನ ಕಲ್ಲುಗಳ ಅಧ್ಯಯನ)
  • ಭಾರತೀಯ ಕಲಾ ಚರಿತ್ರೆ ಕಾಂಗ್ರೆಸ್

ಪ್ರಕಟಣೆ

ಬದಲಾಯಿಸಿ

ಸಂಪಾದನೆ

ಬದಲಾಯಿಸಿ
  • ಕನ್ನಡ ಲಿಪಿ ವಿಕಾಸ [][] ಭಾಷೆಯ ಲಿಪಿಯಿಂದ ಜನಮಾನಸದಲ್ಲಿ ಬೇರುಬಿಟ್ಟ ರೂಢಿಗತ ಸಂಸ್ಕೃತಿಯನ್ನು ಅಧ್ಯಯನ ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟ ಹಿರಿಮೆ ಈ ಪುಸ್ತಕದ್ದು.[] ಕೇವಲ ಪಂಡಿತರ ಮಟ್ಟದಲ್ಲಿ ಅಲ್ಲದೇ, ಪುಸ್ತಕ ಮೇಳಗಳಲ್ಲಿ ಸಹ ಹೆಚ್ಚು ಮಾರಾಟವಾದದ್ದು ಈ ಪುಸ್ತಕದ ವಿಶೇಷ.[]

ಅಂಕಿ ಮತ್ತು ಅಕ್ಷರ ಎರಡನ್ನೂ ಕಂಪ್ಯೂಟರ್ ಗೆ ತಿಳಿಹೇಳಲು[]
ಮತ್ತು ಸ್ವಯಂ ಲಿಪಿತಿಳುವಳಿ []ಗಾಗಿ ಈ ಕೃತಿಯನ್ನು ಬಳಸಲಾಗುತ್ತಿದೆ.

  • ಕನ್ನಡ ಲಿಪಿಶಾಸ್ತ್ರ.[೧೦]
  • ಮಾಸ್ತಿಕಲ್ಲು, ವೀರಗಲ್ಲು ಮತ್ತು ನಿಸಿಡಿ ಶಾಸನಗಳು
  • ೧೨೦೦ರಿಂದ ೧೬೦೦ ರ ಅವಧಿಯಲ್ಲಿ ಕನ್ನಡ ಸಾಹಿತ್ಯದಲ್ಲಿನ ಪಲ್ಲಟಗಳನ್ನು ಶಿಲಾಶಾಸನಗಳನ್ನು ಬಳಸಿ ಅಧ್ಯಯನ ನಡೆಸುತ್ತಿರುವರು..[೧೧]

ಪ್ರಶಸ್ತಿಗಳು

ಬದಲಾಯಿಸಿ
  • ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ ಕೊಡಮಾಡುವ ಸುಜಯಶ್ರೀ ಪ್ರಶಸ್ತಿಯನ್ನು ಡಾ. ಮಂಜುನಾಥರಿಗೆ ಕನ್ನಡ ಲಿಪಿ ವಿಕಾಸ ಕೃತಿಗೆ ನೀಡಲಾಗಿದೆ.[೧೨]
  • ಡಾ. ಮಂಜುನಾಥರ ಸಂಶೋಧನೆಗೆ ಗೌತಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.


ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2019-09-28. Retrieved 2019-09-28.
  2. http://www.uni-mysore.ac.in/sites/default/files/content/public_information_officersrti2018.pdf
  3. http://uni-mysore.ac.in/sites/default/files/content/Manjunath.pdf
  4. https://www.srsmatha.org/publications.php#menu1
  5. "ಆರ್ಕೈವ್ ನಕಲು". Archived from the original on 2019-09-28. Retrieved 2019-09-28.
  6. https://www.ijarcs.info/index.php/Ijarcs/article/view/5437
  7. https://www.deccanherald.com/content/644981/bibliophiles-throng-litfest-sheer-love.html
  8. https://pdfs.semanticscholar.org/cddb/7aad4c458ed92badfd0b30ccb8cd7a9b62b7.pdf
  9. https://www.ijcaonline.org/proceedings/ncesco2015/number3/22310-5327
  10. https://mythicsociety.org/search-books/?book_name=lipi&book_author=manjunath&book_subject=&book_keywords=[permanent dead link]
  11. https://shodhganga.inflibnet.ac.in/browse?type=author&value=Manjunatha%2C+M.+G.&value_lang=
  12. https://www.indiadivine.org/content/topic/1366407-re-itpb_mf-maha-samaradhana-of-sri-sujayeendra-teertharu-madhvanavami/