ಎಂ.ಎಸ್.ಸುಂಕಾಪುರ : - ಕನ್ನಡ ಸಾಹಿತ್ಯಲೋಕದಲ್ಲಿ, ಪ್ರಮುಖವಾಗಿ ಹಾಸ್ಯಪ್ರಕಾರದಲ್ಲಿನ ಸಾಹಿತಿಗಳಲ್ಲೊಬ್ಬರು. ೧೯೨೧ರಲ್ಲಿ ಜನಿಸಿದ ಸುಂಕಾಪುರ ಅವರು, ಗದಗ ಜಿಲ್ಲೆಯ ಮುಳಗುಂದದವರು. ಎಂ.ಎ., ಪಿಹೆಚ್‍ಡಿ. ಪದವೀಧರರಾರದ ಇವರು, ಬೆಳಗಾವಿ, ಬಾಗಲಕೋಟೆಯಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿನ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಹಾಸ್ಯಸಾಹಿತಿಯಾದ ಎಂ.ಎಸ್.ಸುಂಕಾಪುರ ಅವರು ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಎಂಬ ಸಂಶೋಧನಾ ಪ್ರೌಢ ಪ್ರಬಂಧವನ್ನು ರಚಿಸಿ, ಅದಕ್ಕಾಗಿ ಡಾಕ್ಟರೇಟ್ ಪದವಿಯನ್ನು ಪಡೆದವರುಅ

ಕೃತಿಗಳು ಬದಲಾಯಿಸಿ

  • ನಗೆ-ಹೊಗೆ
  • ಗಪ್-ಚಿಪ್
  • ತಲೆಹರಟೆಗಳು
  • ನಗೆಗಾರ ನಯಸೇನ
  • ಜೀವನದಲ್ಲಿ ಹಾಸ್ಯ

ದೃಶ್ಯಕಾವ್ಯಗಳು ಬದಲಾಯಿಸಿ

  • ರೇಡಿಯೋ ನಾಟಕಗಳು
  • ನಮ್ಮ ನಾಟಕಗಳು

ಸಂಪಾದಿಸಿರುವ ಗ್ರಂಥಗಳು ಬದಲಾಯಿಸಿ

  • ಜೀವನ ಜೋಕಾಲಿ
  • ಗಿರಿಜಾ ಕಲ್ಯಾಣ
  • ಶಬರಶಂಕರವಿಳಾಸ
  • ಶ್ರೀಕೃಷ್ಣ ಪಾರಿಜಾತ
  • ಪ್ರಭುಲಿಂಗ ಲೀಲೆ

ಸಂಶೋಧನಾ ಗ್ರಂಥಗಳು ಬದಲಾಯಿಸಿ

  • ಕನ್ನಡ ಸಾಹಿತ್ಯದಲ್ಲಿ ಹಾಸ್ಯ.
  • ಛಂದಸ್ಸಿನ ಗ್ರಂಥ.