ಎಂಟಾಡ ಬಳ್ಳಿ
ಲೆಗ್ಯೂಮಿನೋಸಿ ಕುಟುಂಬಕ್ಕೆ ಸೇರಿದ ಬೃಹತ್ ಅಡರು ಸಸ್ಯಗಳ ಒಂದು ಜಾತಿ. [೧]
ಸ್ಥಳಗಳು
ಬದಲಾಯಿಸಿಏಷ್ಯ, ಆಫ್ರಿಕ ಮತ್ತು ಅಮೆರಿಕದ ಉಷ್ಣವಲಯ ಭಾಗದ ವನ್ಯಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಭಾರತದಲ್ಲಿರುವ ಈ ಜಾತಿಯ ಒಂದೇ ಪ್ರಭೇದವೆಂದರೆ ಎಂಟಾಡ ಫ್ಯಾಸಿಯೊಲಾಯ್ಡಿಸ್. ಹಿಮಾಲಯದ ಗಿರಿಕಂದರಗಳ ಅರಣ್ಯಗಳಲ್ಲಿ ಪೂರ್ವ ಮತ್ತು ಪಶ್ಚಿಮಘಟ್ಟಗಳ ಭಾಗಶಃ ನಿತ್ಯಹರಿದ್ವರ್ಣದ ಅರಣ್ಯಗಳಲ್ಲಿ ಬೆಳೆಯುವ ಈ ರಾಕ್ಷಸಬಳ್ಳಿ ಆರ್ಥಿಕ ಪ್ರಾಮುಖ್ಯವುಳ್ಳ ಅನೇಕ ಉತ್ತಮ ವೃಕ್ಷಗಳ ಬೆಳೆವಣಿಗೆಗೆ ಮಾರಕವಾದದ್ದೆಂದು ಅನೇಕ ಸಂರಕ್ಷಣಾಧಿಕಾರಿಗಳು ಹೇಳುತ್ತಾರೆ. ಇತ್ತೀಚೆಗಂತೂ ಪಶ್ಚಿಮಘಟ್ಟಗಳಿಂದ ಇವುಗಳ ಮೂಲೋತ್ಪಾದನೆ ಮಾಡಲು ಅನೇಕ ಪ್ರಯತ್ನಗಳು ನಡೆದಿವೆ.
ಎಂಟಾಡ ಬಳ್ಳಿಯ
ಬದಲಾಯಿಸಿಹೂವು
ಬದಲಾಯಿಸಿಎಂಟಾಡ ಸಸ್ಯಕ್ಕೆ ಸಂಯುಕ್ತಪತ್ರಗಳಿವೆ. ಹೂಗಳು ಸ್ಪೈಕ್ ಮಾದರಿಯವು. ಬಣ್ಣ ಹಳದಿ. ಪರಾಗಸ್ಪರ್ಶಕ್ರಿಯೆ ಕೀಟಗಳಿಂದ.
ಕಾಯಿ ಮತ್ತು ಬೀಜ
ಬದಲಾಯಿಸಿಕಾಯಿ 3' ರಿಂದ 5' ಉದ್ದವಿದ್ದು 3" ರಿಂದ 4" ಅಗಲವಾಗಿರುತ್ತದೆ. ಕಾಯಲ್ಲಿ 5 ರಿಂದ 30 ಬೀಜಗಳಿರುತ್ತವೆ. ಕಂದು ಇಲ್ಲವೆ ನೇರಳೆ ಬಣ್ಣದ ಹೊರಕವಚವುಳ್ಳ ಈ ಬೀಜಗಳು ದುಂಡಗೆ ಸ್ವಲ್ಪ ಚಪ್ಪಟೆಯಾಗಿ ನೋಡಲು ಆಕರ್ಷಕವಾಗಿರುತ್ತವೆ.
ಉಪಯೋಗಗಳು
ಬದಲಾಯಿಸಿಬೀಜಗಳಿಗೆ ಜಂತುನಾಶಕಗುಣವಿದೆ. ಎರಡು ಬಗೆಯ ಸಪೊನಿನ್‍ಗಳನ್ನು ಬೀಜಗಳಿಂದ ಹೊರತೆಗೆಯಲಾಗಿದೆ. ಇವಕ್ಕೆ ರಕ್ತದ ಒತ್ತಡವನ್ನು ಕಡಿಮೆಮಾಡುವ ಗುಣವಿದೆ. ಬೀಜಗಳಲ್ಲಿರುವ ಎಣ್ಣೆಯನ್ನು (ಸೇ 7-12) ದೀಪಗಳನ್ನುರಿಸಲು ಉಪಯೋಗಿಸುತ್ತಾರೆ. ಬಿಳಿಯ ತಿರುಳಿನ ಅಂಶವನ್ನು (ತೂಕದಲ್ಲಿ ಶೇಕಡ 43 ಭಾಗ) ನೆನೆಸಿ, ಹುರಿದು ತಿನ್ನುತ್ತಾರೆ. ಮಲಯ ಮತ್ತು ಫಿಲಿಪೀನ್ಸ್‍ಗಳಲ್ಲಿ ಬೀಜ, ಕಾಂಡ ಮತ್ತು ತೊಗಟೆಗಳ ಪುಡಿಯನ್ನು ಬಟ್ಟೆ ಶುಭ್ರಗೊಳಿಸಲು ಸಾಬೂನಿಗೆ ಬದಲಾಗಿ ಉಪಯೋಗಿಸುತ್ತಾರೆ. ಬೀಜಗಳು, ಕಾಂಡ ಮತ್ತು ತೊಗಟೆಗಳು ಸ್ವಲ್ಪಮಟ್ಟಿಗೆ ವಿಷಪೂರಿತವಾಗಿರುತ್ತವೆ. ಭಾರತ, ದಕ್ಷಿಣ ಆಫ್ರಿಕ ಮತ್ತು ಫಿಲಿಪೀನ್ಸ್‍ಗಳಲ್ಲಿ ಇವನ್ನು ಮತ್ಸ್ಯವಿಷಗಳಾಗಿ ಬಳಸಲಾಗುತ್ತಿದೆ. ಈ ಸಸ್ಯದ ಎಲೆಗಳೆಂದರೆ ಆನೆಗಳಿಗೆ ಬಹುಪ್ರೀತಿ. ಒಮ್ಮೊಮ್ಮೆ ಅವು ಈ ಸಸ್ಯವನ್ನು ಹುಡುಕಿಕೊಂಡು ಕಾಡಲ್ಲೆಲ್ಲ ಅಲೆಯುವುದುಂಟು. ತೋಡರು ಮತ್ತು ಸೋಲಿಗರು ಕಾಂಡದಿಂದ ಒಸರುವ ರಸವನ್ನು ಗಾಯಗಳಿಗೆ ಔಷಧವಾಗಿ ಬಳಸುತ್ತಾರೆ. ಒಮ್ಮೊಮ್ಮೆ ಬೀಜಗಳ ಒಳ ತಿರುಳನ್ನೆಲ್ಲ ತೆಗೆದು ಅವುಗಳ ಹೊರಸಂಪುಟವನ್ನು ನಶ್ಯದ ಡಬ್ಬಗಳಾಗಿ ಉಪಯೋಗಿಸುವುದುಂಟು.
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2020-07-27. Retrieved 2016-10-19.