ಭಾರತದ ಧೂಪದ್ರವ್ಯ

(ಊದಕಡ್ಡಿ ಇಂದ ಪುನರ್ನಿರ್ದೇಶಿತ)

ಭಾರತವು ನೆನಪಿನಾಚೆಯ ಕಾಲದಿಂದ ಅನೇಕ ಸಾಮಾಜಿಕ ಮತ್ತು ಧಾರ್ಮಿಕ ಸಂದರ್ಭಗಳಲ್ಲಿ ಧೂಪದ್ರವ್ಯವನ್ನು ಬಳಸುವ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅಗರಬತ್ತಿಗಳು (ಸಂಸ್ಕೃತ ಶಬ್ದ ಅಗರವರ್ತಿಯಿಂದ ಹುಟ್ಟಿಕೊಂಡಿದೆ, ಅಗರ = ಸುವಾಸನೆ, ವರ್ತಿ = ಸುತ್ತಿದ) ಮತ್ತು ಊದೂಕಡ್ಡಿಗಳು ಭಾರತದಲ್ಲಿ ಧೂಪದ್ರವ್ಯದ ಮುಖ್ಯ ರೂಪಗಳು. ಊದುಕಡ್ಡಿಯಲ್ಲಿ ಧೂಪದ್ರವ್ಯ ಲೇಪನವನ್ನು ಬಿದಿರಿನ ಕಡ್ಡಿಯ ಸುತ್ತ ಉರುಳಿಸಲಾಗುತ್ತದೆ. ಈ ಬಿದಿರು ವಿಧಾನ ಭಾರತದಲ್ಲಿ ಹುಟ್ಟಿಕೊಂಡಿತು. ಶಂಕುಗಳು ಮತ್ತು ತುಂಡುಗಳು ಮತ್ತು ಸಾಂಬ್ರಾಣಿಯು ಧೂಪದ್ರವ್ಯದ ಇತರ ಮೂಖ್ಯ ರೂಪಗಳು. ಸಾಂಬ್ರಾಣಿಯೆಂದರೆ ಪಿರಮಿಡ್ ಅಥವಾ ತುಂಡು ಆಕಾರಗಳಲ್ಲಿ ರೂಪಿಸಿ ಒಣಗಿಸಲಾದ ಧೂಪದ್ರವ್ಯದ ಜಲಪಿಷ್ಟ.

ಬೆಂಗಳೂರಿನ ಮಾರುಕಟ್ಟೆಯೊಂದರಲ್ಲಿ ಧೂಪದ್ರವ್ಯ
ಪರಿಮಳ ಧೂಪದ್ರವ್ಯದ ತುಂಡುಗಳು

ವೈದಿಕ ಪಠ್ಯಗಳು ದುರ್ವಾಸನೆಯನ್ನು ಮರೆಮಾಚಲು ಮತ್ತು ಸಂತೋಷಕರ ವಾಸನೆಯನ್ನು ನಿರ್ಮಿಸಲು ಧೂಪದ್ರವ್ಯದ ಬಳಕೆಯನ್ನು ಉಲ್ಲೇಖಿಸುತ್ತಾವಾದರೂ, ಸಂಘಟಿತ ಧೂಪದ್ರವ್ಯ ತಯಾರಿಕೆಯ ಆಧುನಿಕ ಪದ್ಧತಿಯನ್ನು ಬಹುಶಃ ಆ ಕಾಲದ ವೈದ್ಯಕೀಯ ಪಂಡಿತರು ಸೃಷ್ಟಿಸಿರಬಹುದು. ಹಾಗಾಗಿ, ಇಂದಿನ ಧೂಪದ್ರವ್ಯ ತಯಾರಿಕೆ ಅಯುರ್ವೈದಿಕ ವೈದ್ಯಕೀಯ ಪದ್ಧತಿಗೆ ನೈಜವಾಗಿ ಸಂಪರ್ಕ ಹೊಂದಿದೆ.

ಆಚರಣೆಗಳ ಸಮಯದಲ್ಲಿ, ಗಾಳಿಯಲ್ಲಿನ ಅಹಿತಕರ ವಾಸನೆಗಳನ್ನು ತೆಗೆಯಲು ಊದುಕಡ್ಡಿಯನ್ನು ಉರಿಸಲಾಗುತ್ತದೆ. ಅದು ಗಾಳಿಯನ್ನು ಹಿತಕರ ಗಂಧದಿಂದ ತುಂಬಿ ಒಂದು ಮಂಗಳಕರ ಆಚರಣೆಗೆ ಪರಿಪೂರ್ಣ ಹಿನ್ನೆಲೆಯನ್ನು ಸೃಷ್ಟಿಸುತ್ತದೆ. ಅವು ಹೊಗೆಯನ್ನು ಬಿಡುಗಡೆ ಮಾಡಿದಾಗ, ಅವು ಕೀಟಗಳನ್ನು ದೂರ ಓಡಿಸುವ ಸಾವಯವ ಸೋಂಕುನಿವಾರಕಗಳಾಗಿಯೂ ಕಾರ್ಯನಿರ್ವಹಿಸುತ್ತವೆ.[]

ಉಲ್ಲೇಖಗಳು

ಬದಲಾಯಿಸಿ