ಉಮೊಜ
ಉಮೊಜ ಎಂದರೆ ಕೀನ್ಯದಲ್ಲಿರುವ ಬುಡಕಟ್ಟು ಜನಾಂಗದವರ ಒಂದು ಸಣ್ಣ ಹಳ್ಳಿ.ಇದು ೧೯೯೦ರಲ್ಲಿ ನಿರ್ಮಾಣವಾದ ಹೊಸ ಊರು. ಈ ಊರಲ್ಲಿ ಗಂಡಸರಿಗೆ ನಿಷೇಧ ಇಲ್ಲಿ ಹೆಂಗಸರು ಮಾತ್ರ ಇರುತ್ತಾರೆ .ಉಮೊಜಕ್ಕೆ ಈಗ ೨೫ನೆ ವರ್ಷದ ಸಂಭ್ರಮ.ಈ ಊರಿಗೆ ಗಂಡಸರಿಗೆ ಪ್ರವೇಶ ಇಲ್ಲ. ಇಲ್ಲಿ ಸಣ್ಣ ಮಕ್ಕಳು ಹಾಗುಮಾತ್ರ ಹೆಂಗಸರು ಮಾತ್ರ ಇರುತ್ತಾರೆ .ಈ ಊರಲ್ಲಿ ಪ್ರಾಥಮಿಕ ಶಾಲೆ ,ಸಾಂಸ್ಕೃತಿಕ ಕೇಂದ್ರ ಹಾಗು ತರಬೇತಿ ಶಿಬಿರಗಳೆಲ್ಲ ಇದೆ .ಈ ಊರನ್ನು ಸಂಭೂರಿನ ರೆಬೆಕಾ ಲೊಲೊಸೊಲಿ ಎನ್ನುವ ಮಹಿಳೆ ನಿರ್ಮಾಣ ಮಾಡಿರುತ್ತಾರೆ [೧]
ರೆಬೆಕಾ ಲೊಲೊಸೊಲಿ
ಬದಲಾಯಿಸಿರೆಬೆಕಾ ಲೊಲೊಸೊಲಿ ೧೯೬೨ ವಂಭ ಎನ್ನುವ ಊರಲ್ಲಿ ಹುಟ್ಟಿ ಬೆಳೆದಿರುತ್ತಾರೆ.ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ತನ್ನ ೧೮ನೆ ವರ್ಷದಲ್ಲಿ ಫೆಬಿಯನೊ ಡೆವಿಡ್ ಲೊಲೊಸೊಲಿ ಎಂಬವರೊಂದಿಗೆ ವಿವಾಹ ಆಗಿರುತ್ತಾರೆ. ಇಬ್ಬರು ವ್ಯಾಪಾರ ನಡೆಸುತ್ತ ನೆಮ್ಮದಿದ ಜೀವನ ನಡೆಸುತ್ತಾರೆ .ರಾಜಕೀಯದಲ್ಲಿ ಸ್ವಲ್ಪ ಪ್ರಭಾವಿ ವ್ಯಕ್ತಿಯಾದಂತಹ ರೆಬೆಕಾ ೧೯೯೦ನೆ ಇಸವಿಯಲ್ಲಿ ಬ್ರಿಟೀಷ್ ಸೈನಿಕರಿಂದ ಅತ್ಯಾಚಾರ ಆದಂತಹ ಮಹಿಳೆಯರ ರಕ್ಷಣೆಗೆ ಸಹಾಯ ಮಾಡಲು ಸುರು ಮಾಡುತ್ತಾರೆ ಈ ವಿಚಾರದಿಂದಾಗಿ ರೆಬೆಕರನ್ನು ಅವರ ಗಂಡ ದೂರ ಮಾಡಿರುತ್ತಾರೆ .ಅದನ್ನು ಲೆಕ್ಕಿಸದೆ ರೆಬೆಕರು ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಮುಂದುವರಿಯುತ್ತಾರೆ. ಆ ಊರಿನ ಜನರಿಗೆ ರೆಬೆಕಾರ ಈ ಏಳಿಗೆಯನ್ನು ಸಹಿಸಲು ಸಾದ್ಯವಾಗದೆ ಅವರ ಮೇಲೆ ಹಲ್ಲೆ ನಡೆಸುತ್ತಾರೆ ಆದರೆ ಗಂಡನಾದ ಫೆಬಿಯನೊ ಅವರ ರಕ್ಷಣೆಗೆ ಬರುವುದಿಲ್ಲ ಅದಕ್ಕೋಸ್ಕರ ಪತಿಯನ್ನು ತ್ಯಜಿಸುತ್ತಾರೆ . ಸಂಭೂರು ಬಿಟ್ಟು ಬಂದು ಉಮೊಜ ಎನ್ನುವ ಹೆಂಗಸರು ಮಾತ್ರ ಇರುವ ಸಣ್ಣ ಊರುನ್ನು ನಿರ್ಮಾಣ ಮಾಡುತ್ತಾರೆ.ಗಂಡಸರಿಗೆ ಪ್ರವೇಶ ನಿಷೇಧ ಮಾಡುತ್ತಾರೆ .[೨]
ಕಾರಣ
ಬದಲಾಯಿಸಿಪುರುಷ ಪ್ರಧಾನವಾದ ಸಂಭೂರುಲ್ಲಿ ಹೆಂಗಸರ ಮೇಲೆ ಭಾರಿ ದೌರ್ಜನ್ಯ ನಡೆಯುತ್ತಿತ್ತು.ಸಣ್ಣ ಪ್ರಾಯದ ಹೆಣ್ಣು ಮಕ್ಕಳನ್ನು ತುಂಬಾ ಪ್ರಾಯದ ಮುದುಕರಿಗೆ ಬಲವಂತದಿಂದ ಮದುವೆ ಮಾಡಲಾಗುತ್ತಿತ್ತು. ಅತ್ಯಾಚಾರ , ಹೆಣ್ಣು ಮಕ್ಕಳ ಜನನಾಂಗ ಕತ್ತರಿಸುವುದು,ಹಲ್ಲೆ ನಡೆಸುವುವಂತಹ ದೌರ್ಜನ್ಯಗಳು ದಿನೆ ದಿನೆ ಹೆಚ್ಚಾಗುತ್ತಿತ್ತು..ಉಮೊಜದ ಹತ್ತಿರದ ಊರಲ್ಲಿ ಬ್ರಿಟೀಷ್ ಸೈನಿಕರ ತರಬೇತಿ ಕೇಂದ್ರ ಇರುತ್ತಿತ್ತು. ಹೆಂಗಸರು ಕುರಿ ಮೇಯಿಸುವ ಹಾಗು ಕಟ್ಟಿಗೆ ತರುವ ಸಲುವಾಗಿ ಹೋದಾಗ ಬ್ರಿಟೀಷ್ ಸೈನಿಕರಿಂದ ಅವರು ಬಲವಂತವಾಗಿ ಅತ್ಯಾಚಾರಕ್ಕೆ ಒಳಗಾಗುತ್ತಿದ್ದರು . ಬ್ರಿಟೀಷ್ ಸೈನಿಕರಿಂದ ಅತ್ಯಾಚಾರಕ್ಕೆ ಒಳಗಾದ ಹೆಂಗಸರನ್ನು ಅವರ ಗಂಡಂದಿರು ನಿಂದಿಸುವುದು ಅಲ್ಲದೆ ಕೊಲ್ಲುವ ಪ್ರಯತ್ನವನ್ನು ಮಾಡುತ್ತಿದ್ದರು .ಈ ಎಲ್ಲಾ ಕಷ್ಟಗಳನ್ನು ಎದುರಿಸಲೆಂದು ಬ್ರಿಟೀಷ್ ಸೈನಿಕರಿಂದ ಅತ್ಯಾಚಾರಕ್ಕೊಳಗಾದ ೧೪ ಹೆಂಗಸರು ಹಾಗು ರೆಬೆಕಾ ಲೊಲೊಸೊಲಿ ಎಲ್ಲಾ ಒಟ್ಟಾಗಿ ಉಮೊಜ ಎನ್ನುವ ಸಣ್ಣ ಊರುನ್ನು ನಿರ್ಮಾಣ ಮಾಡುತ್ತಾರೆ ಸಂಭೂರಿನ ಪುರುಷ ಪ್ರಧಾನವಾದ ಪದ್ಧತಿಯನ್ನು ವಿರೋಧಿಸಲು ಸುರು ಮಾಡುತ್ತಾರೆ.
ಜನ ಜೀವನ
ಬದಲಾಯಿಸಿಅಲ್ಲಿಯ ಹೆಂಗಸರು ಸಣ್ಣ ಗುಡಿಸಲಲ್ಲಿ ಜೀವನ ನಡೆಸುತ್ತಾರೆ. ಆ ಗುಡಿಸಲನ್ನು ಮಣ್ಣುಹಾಗು ಸೆಗಣಿಯನ್ನು ಬೆರಸಿ ಕಟ್ಟಿರುತ್ತಾರೆ.ಅವರ ಗುಡಿಸಲಿನ ಸುತ್ತು ಮುಳ್ಳಿನ ಬೇಲಿ ಮಾಡಿರುತ್ತಾರೆ .ಗಂಡಸರಿಗೆ ಇಲ್ಲಿ ನಿಷೇಧ ಆದರೆ ಹೆಂಗಸರು ಅವರ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಹೋಗುವಂತಹ ಅವಕಾಶ ಇದೆ .
ಜನ ಸಂಖ್ಯೆ
ಬದಲಾಯಿಸಿಅಲ್ಲಿಯ ಜನ ಸಂಖ್ಯೆ ತುಂಬಾ ಕಡಿಮೆ ಸುಮಾರ್ ೪೫-೫೦ ಹೆಂಗಸರು ಹಾಗು ೨೦೦-೨೨೦ ಮಕ್ಕಳು ಇದ್ದಾರೆ.
ಆರ್ಥಿಕ ಸ್ಥಿತಿ ಗತಿ
ಬದಲಾಯಿಸಿಅಲ್ಲಿಯ ಹೆಂಗಸರು ಜೀವನ ಆಧಾರಕ್ಕೆ ಬೇಕಾಗಿ ಸಂಬೂರಿನ ಸಾಂಪ್ರದಾಯಿಕ ಕರ ಕುಶಲ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಮಣಿ ಸರಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಬೀಯರ್ ತರಹ ಇರುವಂತಹಾವರ ಮನೆಯಲ್ಲೆ ತಯಾರಿಸಿದ ಕಡಿಮೆ ಅಮಲಿನ ಪಾನೀಯನ್ನು ತಯಾರಿಸಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಾರೆ .ಇಲ್ಲಿಗೆ ಪ್ರವಾಸಿಗರು ಜಾಸ್ತಿ ಬರುತ್ತಾರೆ ಇಲ್ಲಿ ಸಂಬೂರಿನ ಸಾಂಪ್ರದಾಯಿಕ ಕರ ಕುಶಲ ವಸ್ತುಗಳಿಗೆ ಜಾಸ್ತಿ ಬೇಡಿಕೆ ಇದೆ.
ವಿದ್ಯಾಭ್ಯಾಸ
ಬದಲಾಯಿಸಿಈಗ ಉಮೊಜದ ಮಕ್ಕಳಿಗೆ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಅವಕಾಶ ಇದೆ.ಹಿಂದೆ ಸಂಬೂರಲ್ಲಿ ಮಕ್ಕಳಿಗೆ ೫-೬ ವರ್ಷ ಪ್ರಾಯ ಆಗುವಾಗ ಕುರಿ ಮೇಯಿಸುವ,ಹಸು ಮೇಯಿಸುವ ಕೆಲಸ ಕೊಡುತ್ತಿದ್ದರು.ಈಗ ಉಮೊಜದಲ್ಲಿ ಸಾಂಸ್ಕೃತಿಕ ಕೇಂದ್ರ,ತರಬೇತಿ ಶಿಬಿರಗಳೆಲ್ಲ ನಿರ್ಮಾಣ ಆಗಿ ಮಕ್ಕಳು ಓದುವುದರಲ್ಲಿ,ಬರೆಯುವುದರಲ್ಲಿ,ಕಲೆ,ಕ್ರೀಡೆ ಎಲ್ಲದರಲ್ಲಿಯೂ ಪ್ರತಿಭಾವಂತರಾಗಿದ್ದಾರೆ..
ಉಲ್ಲೇಖ
ಬದಲಾಯಿಸಿ- ↑ http://www.odditycentral.com/news/no-mans-land-kenyas-women-only-village.html
- ↑ "ಆರ್ಕೈವ್ ನಕಲು". Archived from the original on 2017-05-05. Retrieved 2017-06-15.