ಉಪ್ಪಿನ ಹಲಸಿನ ತೊಳೆ ಖಾರದ ಕೂಟು

ಉಪ್ಪಿನ ಹಲಸಿನ ತೊಳೆ ಖಾರದ ಕೂಟು ಸಾಮಾನ್ಯವಾಗಿ ಆಟಿ ತಿಂಗಳಲ್ಲಿ ಮಾಡುವ ಪಲ್ಯ. ಇದನ್ನು ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ತೊಳೆಗಳಿಂದ ತಯಾರಿಸುತ್ತಾರೆ. ಹೆಚ್ಚಾಗಿ ಮಂಗಳೂರಿನಲ್ಲಿ ಆಟಿ ತಿಂಗಳಲ್ಲಿ ಈ ಪಲ್ಯ ಮಾಡುತ್ತಾರೆ.[]

ಬೇಕಾಗುವ ಸಾಮಾಗ್ರಿಗಳು

ಬದಲಾಯಿಸಿ
  • 1 ಕಪ್ ಉಪ್ಪಿನಲ್ಲಿ ಹಾಕಿದ ಹಲಸಿನ ತೊಳೆ
  • 1 ಕಪ್ ತೆಂಗಿನ ಗುರಿ
  • 1/2 ಚಮಚ ಕೊತ್ತಂಬರಿ
  • 1/4 ಚಮಚ ಜೀರಿಗೆ
  • 2-3 ಒಣಮೆಣಸು
  • 1/4 ಚಮಚ ಮೆಣಸಿನ ಪುಡಿ
  • 1 ಕರಿಬೇವಿನ ಎಸಳು
  • ಸಣ್ಣ ತುಂಡು ಅರಿಶಿನ
  • 1/2 ಚಮಚ ಸಾಸಿವೆ
  • 1 ಚಮಚ ಎಣ್ಣೆ.

ಮಾಡುವ ವಿಧಾನ

ಬದಲಾಯಿಸಿ

ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ತೊಳೆಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ತುಂಡು ಮಾಡಿ. ಉಪ್ಪು ಜಾಸ್ತಿ ಇದ್ದರೆ ಸ್ವಲ್ಪ ನೀರಿನಲ್ಲಿ ಹಾಕಿಟ್ಟು ಹಿಂಡಿ ತೆಗೆಯಬೇಕು. ನಂತರ, ಕೆಂಪು ಮೆಣಸಿನಪುಡಿ ಹಾಕಿ ಬೇಯಿಸಿ. ನಂತರ ತೆಂಗಿನ ತುರಿಗೆ ಒಣಮೆಣಸು, ಅರಿಶಿಣ, ಕೊತ್ತಂಬರಿ, ಜೀರಿಗೆ ಹಾಕಿ ರುಬ್ಬಿ ಬೇಯಿಸಿಟ್ಟ ಹಲಸಿನ ತೊಳೆಗೆ ಸೇರಿಸಿ ಕುದಿಸಿ. ಸಾಸಿವೆ ಒಗ್ಗರಣೆಗೆ ಕರಿಬೇವು ಹಾಕಿ ಬಗ್ಗರಣೆ ಕೊಡಿ. ಇದೇ ರೀತಿ ಸೌತೆಕಾಯಿ ಖಾರದ ಕೂಟು ಮಾಡಬಹುದು.

ಬೇರೆ ಭಾಷೆಗಳಲ್ಲಿ

ಬದಲಾಯಿಸಿ
  • ಉಪ್ಪಡ್ ಪಚ್ಚಿರ್ - ತುಳು[]

ಉಲ್ಲೇಖಗಳು

ಬದಲಾಯಿಸಿ
  1. "ಆಟಿ ತಿಂಗಳ ತಿನಿಸು". Vijay Karnataka. Retrieved 16 July 2024.
  2. "ಉಪ್ಪಡ್ ಪಚ್ಚಿರ್". Retrieved 16 July 2024.