ಉನ್ನೈಪೋಲ್ ಒರುವನ್ (ಚಲನಚಿತ್ರ)

ಉನ್ನೈಪೋಲ್ ಒರುವನ್ (ಕನ್ನಡ:ನಿನ್ನಂತೆಯೇ ಮತ್ತೊಬ್ಬ) ೨೦೦೯ರಲ್ಲಿ ತೆರೆಕಂಡ ತಮಿಳು ಥ್ರಿಲ್ಲರ್ ಚಿತ್ರ.ಈ ಚಿತ್ರದಲ್ಲಿ ಕಮಲ್ ಹಾಸನ್ ಮತ್ತು ಮೋಹನ್ ಲಾಲ್‌ ಮುಖ್ಯ ಪಾತ್ರಧಾರಿಗಳು.ಈ ಚಿತ್ರವನ್ನು ತೆಲುಗಿನಲ್ಲಿ ಈನಾಡು ಎಂಬ ಹೆಸರಿನಡಿ ಚಿತ್ರಿಸಲಾಗಿತ್ತು, ಅದರಲ್ಲಿ ದಗ್ಗುಬಾಟಿ ವೆಂಕಟೇಶ್ ಮೋಹನ್ಲಾಲ್ ಪಾತ್ರವನ್ನು ಮಾಡಿದರು.[೧].ಇವೆರಡು ಚಿತ್ರಗಳು ಹಿಂದಿ ಚಿತ್ರ ಎ ವೆಡ್ನಸ್ಡೇ ಚಿತ್ರದ ರೀಮೇಕ್ ಆಗಿದೆ[೨].ಆ ಚಿತ್ರದ ನಾಸೀರುದ್ದಿನ್ ಶಾ ಪಾತ್ರವನ್ನು ಕಮಲ್ ಹಾಸನ್ ಹಾಗು ಅನುಪಮ್ ಖೇರ್ ಪಾತ್ರವನ್ನು ಮೋಹನ್ ಲಾಲ್ ನಿಭಾಯಿಸಿದ್ದಾರೆ.ಈ ಚಿತ್ರದಲ್ಲಿ ಪೊಲೀಸ್ ಆಯುಕ್ತರಿಗೆ ಸಾಮಾನ್ಯ ಮನುಷ್ಯನೊಬ್ಬ ದೂರವಾಣಿ ಕರೆ ಮಾಡಿ, ಅದರಲ್ಲಿ ಅವನು ಚೆನ್ನೈಯಲ್ಲಿ ಐದು ಬಾಂಬ್ಗಳನ್ನು ಸಿಡಿಸುವನೆಂದು ಹೇಳುವನು. ಈ ಚಿತ್ರ ಒಳ್ಳೆಯ ಪ್ರಶಂಸೆಯನ್ನು ಪಡೆದು ಉತ್ತಮ ಸಂಪಾದನೆಯೂ ಮಾಡಿತು.[೩]

ಉನ್ನೈಪೋಲ್ ಒರುವನ್
ನಿರ್ದೇಶನಚಕ್ರಿ ತೊಲೆಟಿ
ನಿರ್ಮಾಪಕಕಮಲ್ ಹಾಸನ್
ಚಂದ್ರಹಾಸನ್
ರೊನ್ನಿ ಸ್ಕ್ರೂವಾಲ
ಲೇಖಕನೀರಜ್ ಪಾಂಡೆ
ಕಮಲ್ ಹಾಸನ್
ಇ.ಆರ್.ಮುರುಗನ್
ಪಾತ್ರವರ್ಗಕಮಲ್ ಹಾಸನ್
ಮೋಹನ್ ಲಾಲ್
ಲಕ್ಷ್ಮಿ
ಸಂಗೀತಶೃತಿ ಹಾಸನ್
ಛಾಯಾಗ್ರಹಣಮನೋಜ್ ಸೋನಿ
ಸಂಕಲನರಾಮೇಶ್ವರ್.ಎಸ್.ಭಗವತ್
ಬಿಡುಗಡೆಯಾಗಿದ್ದು೧೮ ಸೆಪ್ಟೆಂಬರ್ ೨೦೦೯
ದೇಶಭಾರತ
ಭಾಷೆತಮಿಳು

ಕಥಾ ಸಾರಾಂಶಸಂಪಾದಿಸಿ

ಚೆನ್ನೈನ ಪೊಲೀಸ್ ಕಮೀಷನರ್ ಐ. ಜಿ. ರಾಘವನ್ ಮರಾರ್ (ಮೋಹನ್ ಲಾಲ್)ರಿಗೆ ಸಾಮಾನ್ಯ ಮನುಷ್ಯನೊಬ್ಬ (ಕಮಲ್ ಹಾಸನ್) ಕರೆಮಾಡಿ ನಗರದ ಆರು ಕಡೆ ಬಾಂಬ್ಗಳನ್ನು ಇರಿಸಲಾಗಿದೆ, ತನ್ನ ಮಾತಿನಂತೆ ನಡೆಯದಿದ್ದರೆ ಅವುಗಳನ್ನು ಸಂಜೆ 6 ಗಂಟೆಗೆ ಸ್ಫೋಟಿಸುವುದಾಗಿ ತಿಳಿಸುತ್ತಾನೆ.ಮೊದಲಿಗೆ ಇದು ಹುಸಿಕರೆ ಎಂದು ರಾಘವನ್ ತಳ್ಳಿಹಾಕುತ್ತಾರೆ.ಆ ಮನುಷ್ಯ ಮತ್ತೆ ಕರೆಮಾಡಿ ನನ್ನ ಬೇಡಿಕೆಗಳನ್ನು ಈಡೇರಿಸಲು ಯಾರಾದರೂ ಬಂದಿದ್ದಾರೆಯೇ ಎಂದು ಪ್ರಶ್ನಿಸಿದಾಗ ರಾಘವನ್ ವಿಧಿಯಿಲ್ಲದೇ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ (ಲಕ್ಷ್ಮೀ)ಯವರನ್ನು ಸಹಾಯಕ್ಕೆ ಕೇಳಿಕೊಳ್ಳುತ್ತಾರೆ.ಕಾರ್ಯದರ್ಶಿಗಳು ಬಂದ ಮೇಲೆ ಅಸಲಿ ಕಥೆ ಬಿಚ್ಚಿಕೊಳ್ಳುತ್ತದೆ.

ಪಾತ್ರಧಾರಿಗಳುಸಂಪಾದಿಸಿ

ಪೊಲೀಸ್ ಕಮೀಷನರ್ ಐ. ಜಿ. ರಾಘವನ್ ಮರಾರ್ ಆಗಿ ಮೋಹನ್ ಲಾಲ್ (ಮೇಲಿನ ಚಿತ್ರ) ಮತ್ತು ಸಾಮಾನ್ಯ ಮನುಷ್ಯನಾಗಿ ಕಮಲ್ ಹಾಸನ್ (ಕೆಳಗಿನ ಚಿತ್ರ) ನಿರ್ವಹಿಸಿದ ಪಾತ್ರಗಳು ಅಪಾರ ಜನಮೆಚ್ಚುಗೆಯ ಜೊತೆ ವಿಮರ್ಶಕರ ಪ್ರಶಂಸೆಗೂ ಪಾತ್ರವಾದವು.

• ಸಾಮಾನ್ಯ ಮನುಷ್ಯನಾಗಿ ಕಮಲ್ ಹಾಸನ್

• ಐ.ಜಿ.ರಾಘವನ್ ಮರಾರ್ ಆಗಿ ಮೋಹನ್ ಲಾಲ್‌

ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಲಕ್ಷ್ಮಿ

• ಅರಿಫ್ ಖಾನ್ ಆಗಿ ಗಣೇಶ್ ವೆಂಕಟರಾಮನ್

• ಸೇತುರಾಮನ್ ಆಗಿ ಡಾ.ಭರತ್ ರೆಡ್ಡಿ

• ಪತ್ರಕರ್ತೆ ನತಾಶಾ ರಾಜ್ ಕುಮಾರ್ ಆಗಿ ಅನುಜಾ ಅಯ್ಯರ್

• ಅನು ಸೇತುರಾಮನ್ ಆಗಿ ಪೂನಮ್ ಕೌರ್

• ಕರಮಚಂದ್ ಲಾಲಾ ಆಗಿ ಸಂತಾನ ಭಾರ್ತಿ

• ಅರವಿಂದ್ ಅಧವರ್ ಆಗಿ ಶ್ರೀಮಾನ್

ವಿಮರ್ಶೆಸಂಪಾದಿಸಿ

ಚಿತ್ರ ಎಲ್ಲಿಯೂ ಬೇಸರ ಮೂಡಿಸುವುದಿಲ್ಲ.ನಮ್ಮ ದೇಶದ ಸಾಮಾನ್ಯ ಮನುಷ್ಯನೊಬ್ಬ ಕೂಡ ಭಯೋತ್ಪಾದಕತೆಯ ವಿರುದ್ಧ ತಿರುಗಿಬೀಳಬಲ್ಲ ಎನ್ನುವುದನ್ನು ಚಿತ್ರ ಸಮರ್ಥವಾಗಿ ಬಿಂಬಿಸುತ್ತದೆ.ಪೊಲೀಸರು ವೀರಮರಣವನ್ನಪ್ಪಿದರೆ ಅವರ ಕುಟುಂಬಕ್ಕೆ ಪೆನ್ಶನ್ , ಪೊಲೀಸರಿಗೆ ಶೌರ್ಯ ಪ್ರಶಸ್ತಿಗಳು ಲಭಿಸುತ್ತವೆ. ಆದರೆ ಕಾಮನ್ ಮ್ಯಾನ್ ಎನ್ನುವವನ ಕಥೆಯೇನು....???? ಎಂದು ಕಮಲ್ ಮರಾರ್ ಅವರಿಗೆ ಪ್ರಶ್ನಿಸಿದ ಸನ್ನಿವೇಶ ನಮಗೂ ಅರೇ ಹೌದಲ್ವಾ, ಅವನು ನಮ್ಮ ಮನಸ್ಸಿನ ಪ್ರಶ್ನೆಯನ್ನೇ ಕೇಳಿಬಿಟ್ಟ ಎಂದೆನ್ನಿಸುವುದು ಸುಳ್ಳಲ್ಲ.

ಇನ್ನೊಂದು ಸನ್ನಿವೇಶದಲ್ಲಿ ಮರಾರ್ ಮತ್ತು ಕಾರ್ಯದರ್ಶಿಗಳ ನಡುವೆ ಜಟಾಪಟಿ ನಡೆಯುತ್ತಿರುವಾಗ ಸರ್ಕಾರ ಮಾಡುವುದು ಕಾನೂನು , ನಾವು ಮಾಡಿದರೆ ರಿಸೈನು (ರಾಜಿನಾಮೆ ಬಿಸಾಕಬೇಕು) ಎಂದು ಮರಾರ್ ಹೇಳಿದಾಗ ಕಾನೂನು ಮಾಡುವವರು (ಸರ್ಕಾರ) ಮತ್ತು ಜಾರಿಗೆ ತರುವವರು (ಪೊಲೀಸ್) ನಡುವಿನ ವರ್ಗಸಂಘರ್ಷ ಮುಖಕ್ಕೆ ಎದ್ದು ಕಾಣುತ್ತದೆ.

ಇಂಥ ಹಲವು ಸಂಭಾಷಣೆಗಳು ಚಿತ್ರದಲ್ಲಿ ಕಾಣುತ್ತದೆ.[ಇಲ್ಲಿ ಬರೆದದ್ದು ನನ್ನ ಸ್ವಂತ ವಿಮರ್ಶೆಯೇ ಹೊರತು ಎಲ್ಲರ ಅಭಿಪ್ರಾಯವಲ್ಲ. ಪ್ರಜ್ವಲ್ - ಒಬ್ಬ ಬಳಕೆದಾರ / User]

ಸಂಗೀತಸಂಪಾದಿಸಿ

ಈ ಚಿತ್ರಕ್ಕೆ ಶೃತಿ ಹಾಸನ್ ಸಂಗೀತ ನಿರ್ದೇಶನವನ್ನು ಮಾಡಿದರು.

ಕ್ರ.ಸಂ ಹಾಡು ಗಾಯಕರು ಸಮಯ ಸಾಹಿತ್ಯ
1 "ಉನ್ನೈಪೋಲ್ ಒರುವನ್" ಶೃತಿ ಹಾಸನ್, ಅಕ್ಷರಾ ಹಾಸನ್, ಸುಬ್ಬಲಕ್ಷ್ಮಿ, ಸತೀಶ್, ಲಿಯೋ, ಕೃಷ್ನನ್ ಸ್ವಾಮಿನಾಥನ್, ಬಾಲ, ಮೀರ, ತಾರ, ಐಡನ್ ೩:೪೩ ಕಮಲ್ ಹಾಸನ್
2 "ನಿಲೈ ವರುಮಾ" ಬಾಂಬೆ ಜಯಶ್ರೀ, ಕಮಲ್ ಹಾಸನ್ ೪:೪೪ ಕಮಲ್ ಹಾಸನ್
3 "ವಾನಮ್ ಎಲ್ಲೈ" ಶೃತಿ ಹಾಸನ್, ಬ್ಲೇಜ಼ ೩:೧೫ ಕಮಲ್ ಹಾಸನ್ , ಬ್ಲೇಜ಼
4 "ಅಲ್ಲಾ ಜಾನೆ" ಕಮಲ್ ಹಾಸನ್ ೫:೧೦ ಮನುಷ್ಯಪುಥಿರನ್
5 "ಅಲ್ಲಾ ಜಾನೆ(೨)" ಶೃತಿ ಹಾಸನ್ ೪:೩೪ (ರೀಮಿಕ್ಸ್)ವಿನಾಯಕ

ಉಲ್ಲೇಖಗಳುಸಂಪಾದಿಸಿ