ಉದಂತ ಮಾರ್ತಂಡ
ಉದಂತ ಮಾರ್ತಂಡ: ಹಿಂದಿ ಭಾಷೆಯಲ್ಲಿ ಪ್ರಕಟವಾದ (1826) ಪ್ರಥಮ ವಾರಪತ್ರಿಕೆ. ಯುಗಲಕಿಶೋರ್ ಶುಕ್ಲ ಇದರ ಸಂಪಾದಕ ಮತ್ತು ಪ್ರಕಾಶಕ[೧][೨][೩]. ಪತ್ರಿಕೆಯ ಕಛೇರಿ ಕಲ್ಕತ್ತೆಯಲ್ಲಿತ್ತು. ಹಣದ ಅಭಾವವಿದ್ದುದರಿಂದಲೂ ಸರ್ಕಾರ ಮತ್ತು ಜನತೆಯ ಪ್ರೋತ್ಸಾಹ ಸಾಕಷ್ಟು ಸಿಕ್ಕದುದರಿಂದಲೂ ಎರಡು ವರ್ಷಗಳಲ್ಲಿ ಪತ್ರಿಕೆ ನಿಂತು ಹೋಯಿತು[೧][೩]. ಮುಂದೆ ಶುಕ್ಲರೇ 1850-51ರಲ್ಲಿ ಸಾಮ್ಯದಂತ ಮಾರ್ತಾಂಡ ಎಂಬ ಪತ್ರಿಕೆ ಹೊರಡಿಸಿದರು. ಆದರೆ ಅದೂ ಬಲು ಬೇಗ ನಿಂತುಹೋಯಿತು.
ವರ್ಗ | ವಾರಪತ್ರಿಕೆ newspaper |
---|---|
ಪ್ರಕಾಶಕ | ಯುಗಲಕಿಶೋರ್ ಶುಕ್ಲ |
ಸ್ಥಾಪನೆ | ಮೇ 30, 1826 |
ಭಾಷೆ | ಹಿಂದಿ |
Ceased publication | ಡಿಸೆಂಬರ್ 4, 1827 |
ಕೇಂದ್ರ ಕಾರ್ಯಾಲಯ | 37, Amartalla Lane, Kolutolla, near Barabazar Market, Kolkata |
ಚಲಾವಣೆ | 500 (1st issue) |
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Hena Naqvi (2007). Journalism And Mass Communication. Upkar Prakashan. pp. 42–. ISBN 978-81-7482-108-9.
- ↑ "ಆರ್ಕೈವ್ ನಕಲು". Archived from the original on 2016-03-05. Retrieved 2016-03-25.
- ↑ ೩.೦ ೩.೧ S. B. Bhattacherjee (2009). Encyclopaedia of Indian Events & Dates. Sterling Publishers Pvt. Ltd. pp. A119. ISBN 978-81-207-4074-7.