ಉತ್ತರ ಪ್ರದೇಶದ ಪ್ರಾಗಿತಿಹಾಸ

ಉತ್ತರ ಪ್ರದೇಶದ ಪ್ರಾಗಿತಿಹಾಸ ಬಲು ಸೋಜಿಗ ಮತ್ತು ಮಹತ್ವವಾದುದು.


ನಿಮ್ನಪುರಾ ಶಿಲಾಯುಗ

ಬದಲಾಯಿಸಿ

ಉತ್ತರ_ಪ್ರದೇಶ ರಾಜ್ಯದ ದಕ್ಷಿಣ ಭಾಗದಲ್ಲಿ ವಿಶಾಲ ಬಯಲೂ ಅದರ ಅಂಚಿನಲ್ಲಿ ಪುರಾತನ ಯುಗಕ್ಕೆ ಸೇರಿದ ಶಿಲಾಪದರಗಳನ್ನೊಳಗೊಂಡ ಬೆಟ್ಟಗಳ ಸಾಲೂ ಇರುವ ಪ್ರದೇಶದಲ್ಲಿ ಪೂರ್ವ ಶಿಲಾಯುಗಕ್ಕೆ ಸೇರಿದ ಕೆಲವು ಆಯುಧಗಳನ್ನು ಮೊಟ್ಟಮೊದಲಿಗೆ (1883) ಸಂಗ್ರಹಿಸಿದವ ಕಾಕ್ ಬರ್ನ್. 1949ರಲ್ಲಿ eóÁಯಿನರ್ ಮತ್ತು ಕೃಷ್ಣಸ್ವಾಮಿ ಈ ಪ್ರದೇಶದ ಸಿಂಗ್ರಾಲಿ ನದೀಕಣಿವೆಯನ್ನು ಶೋಧಿಸಿದಾಗ ಅತ್ಯಂತ ನೂತನ (ಪ್ಲಿಸ್ಟೋಸೀನ್) ಯುಗಕ್ಕೆ ಸೇರಿದ ಅವಶೇಷಗಳನ್ನೊಳಗೊಂಡ ಎರಡು ಪದರಗಳು ರಿಹಾಂಡ್ ಮತ್ತು ಬೀಚಿನಾಲ ನದೀತೀರಗಳಲ್ಲಿ ಕಂಡುಬಂದುವು. ಕಂಕರ್ ಇಲ್ಲವೆ ಸುಣ್ಣ ಕಲ್ಲು ಪದರಗಳಿರುವ ಈ ಪ್ರದೇಶಗಳ ಪೈಕಿ ಮೊದಲನೆಯದರಲ್ಲಿ ಸಿಕ್ಕಿರುವ ವಸ್ತುಗಳಲ್ಲಿ ಒರಟು ಉಂಡೆಕಲ್ಲು ಕೈಕೊಡಲಿಗಳೂ ಚಕ್ಕೆಕಲ್ಲುಗಳ ಸುಧಾರಿತ ಕೈಕೊಡಲಿಗಳೂ ಮೊಂಡು ಹಿಡಿಯ ಉದ್ದಲಗಿನ ಚೂರಿಗಳೂ (ಕ್ಲೀವರ್) ಕೈಕೊಡಲಿಗಳೂ ಮಚ್ಚುಗತ್ತಿಗಳೂ ಚಕ್ಕೆ ಕಲ್ಲಿನಾಯುಧಗಳೂ ಇವೆ. ವಿವಿಧ ಕಾಲ ಪದ್ಧತಿಗಳ ಆಯುಧಗಳು ಒಟ್ಟಾಗಿ ಇಲ್ಲಿ ದೊರಕಿರುವುದರಿಂದ ಇಲ್ಲಿನದನ್ನು ಮಿಶ್ರಸಂಸ್ಕøತಿಯೆಂದು ಪರಿಗಣಿಸಬಹುದು. ಪೂರ್ವಶಿಲಾಯುಗಕ್ಕೆ ಸೇರಿದ ಅವಶೇಷಗಳು ಈಚೆಗೆ ಬಂಡ, ಝಾನ್ಸಿ, ಡೆಹರಾಡೂನ್, ಅಲಹಾಬಾದ್, ಮಿeóರ್Áಪುರ, ಮತ್ತು ವಾರಾಣಸಿ ಜಿಲ್ಲೆಗಳ ಹಲವೆಡೆಗಳಲ್ಲಿ ದೊರಕಿವೆ. ಝಾನ್ಸಿ ಜಿಲ್ಲೆಯ ಲಲಿತಪುರ ಮತ್ತು ದೇವಗಢ ನೆಲೆಗಳಲ್ಲಿ ಈ ಆಯುಧಗಳ ತಯಾರಿಕಾ ಕೇಂದ್ರಗಳ ಪತ್ತೆಯಾಗಿರುವುದರಿಂದ ಇವುಗಳ ತಯಾರಿಕೆಯ ವಿಧಾನಗಳನ್ನು ಅಭ್ಯಾಸ ಮಾಡಲು ಅಗತ್ಯವಾದ ಮಾಹಿತಿಗಳು ದೊರಕಿದಂತಾಗಿದೆ. ಯಮುನಾ ತೀರದ ಬಂಡ ಜಿಲ್ಲೆಯ ಬರಿಯಾರಿಯಲ್ಲೂ ಆ ಕಾಲಕ್ಕೆ ಸೇರಿದ ಕೈಕೊಡಲಿಗಳೂ ಮೊಂಡು ಹಿಡಿಯ ಉದ್ದಲಗಿನ ಚೂರಿಗಳೂ ನಿಮ್ನಪುರಾ ಶಿಲಾಯುಗದಲ್ಲಿದ್ದ (ಕ್ಲಾಕ್ಟೋನಿಯನ್) ರೀತಿಯ ಕಲ್ಲುಚಕ್ಕೆಗಳೂ ಹೇರಳವಾಗಿ ದೊರಕಿರುವುದರಿಂದ ಈ ಪ್ರದೇಶಪೂರ್ವ ಶಿಲಾಯುಗದ ಸಂಸ್ಕøತಿಯ ಮುಖ್ಯ ಕೇಂದ್ರಗಳಲ್ಲೊಂದಾಗಿತ್ತೆಂಬುದು ಖಚಿತವಾಗಿದೆಯಷ್ಟೇ ಅಲ್ಲ; ಇಲ್ಲಿನ ವಿವಿಧ ನದೀಪದರಗಳಲ್ಲಿ ದೊರಕಿರುವ ಮಧ್ಯ ಶಿಲಾಯುಗದ ಕೊನೆಯ ಹಾಗೂ ಅಂತ್ಯ ಶಿಲಾಯುಗಕ್ಕೆ ಸೇರಿದ ಆಯುಧಗಳು ನಾನಾ ಶಿಲಾಯುಗ ಸಂಸ್ಕøತಿಗಳ ಪರಸ್ಪರ ಸಂಬಂಧಗಳನ್ನರಿಯಲು ಸಹಾಯಕ. ಡೆಹರಾಡೂನ್, ಸೇರಿದಂತೆ ಕೆಲವು ಜಿಲ್ಲೆಗಳು ಉತ್ತರಾಂಚಲ ರಾಜ್ಯಕ್ಕೆ ಸೇರಿವೆ.[]

ಮಧ್ಯಶಿಲಾಯುಗದ ಅವಶೇಷಗಳು ಬರಿಯಾರಿಯ ಬಳಿಯಲ್ಲೂ ಬಂಡಜಿಲ್ಲೆಯ ಇತರೆಡೆಗಳಲ್ಲೂ ಅಲಹಾಬಾದ್, ಝಾನ್ಸಿ, ಮಿರ್ಜಾಪುರ ಮತ್ತು ವಾರಾಣಸಿ ಜಿಲ್ಲೆಗಳ ಹಲವೆಡೆಗಳಲ್ಲೂ ದೊರಕಿವೆ. ಆದರೂ ಈ ನೆಲೆಗಳಲ್ಲಿ ದೊರಕಿರುವ ಅವಶೇಷಗಳನ್ನು ಪರೀಕ್ಷಿಸಿ ಹೆಚ್ಚಿನ ಮಾಹಿತಿಗಳನ್ನು ಇನ್ನೂ ಪಡೆಯಬೇಕಾಗಿದೆ.

ಗುಹೆಗಳು

ಬದಲಾಯಿಸಿ

19ನೆಯ ಶತಮಾನದ ಅಂತ್ಯಭಾಗದಿಂದ ಅನೇಕ ಪ್ರಾಚೀನ ಸಂಶೋಧಕರು ಸೂಕ್ಷ್ಮಶಿಲಾಯುಧಗಳನ್ನು ಸಂಗ್ರಹಿಸಿದ್ದರಾದರೂ ಇವುಗಳಿಗೆ ಸಂಬಂಧಿಸಿದ ಸಾಂಸ್ಕøತಿಕ ವಿಷಯಗಳೇನೂ ತಿಳಿದುಬಂದಿರಲಿಲ್ಲ. ಇಪ್ಪತ್ತನೆಯ ಶತಮಾನದ ಆರು ಏಳನೆಯ ದಶಕಗಳಲ್ಲಿ ಇತರ ಕೆಲವು ಪ್ರದೇಶಗಳಲ್ಲೂ ಬೆಟ್ಟಗಳ ಗುಹೆಗಳು ಮುಂತಾದ ಎಡೆಗಳಲ್ಲೂ ಹೆಚ್ಚು ಸಂಖ್ಯೆಯಲ್ಲಿ ಸೂಕ್ಷ್ಮ ಶಿಲಾಯುಧಗಳನ್ನು ಸಂಗ್ರಹಿಸಲಾಗಿದೆ. ಕೆಲವು ನೆಲೆಗಳಲ್ಲಿ ಅವು ಇತಿಹಾಸ ಕಾಲದ ಅವಶೇಷಗಳೊಡನೆ ಮಿಳಿತವಾಗಿರುವುದು ಗಮನಾರ್ಹ. ಆದರೆ ಕೆಲವೆಡೆಗಳಲ್ಲಿನ ಸೂಕ್ಷ್ಮ ಶಿಲಾಯುಧ ಸಂಸ್ಕøತಿ ಬಹಳ ಪ್ರಾಚೀನವಾದ್ದೆಂಬುದೂ ಕ್ರಿ.ಪೂ. 5,000ದ ಸಮಯಕ್ಕೆ ಸೇರಿದ್ದೆಂಬುದೂ ನಿಸ್ಸಂದೇಹ. ಈ ಸಂಸ್ಕøತಿಯ ಕಾಲದಲ್ಲಿ ಗುಹೆಗಳ ಗೋಡೆಗಳ ಮೇಲೆ ವರ್ಣಚಿತ್ರಗಳನ್ನು ರೂಪಿಸುತ್ತಿದ್ದದ್ದು ಲೇಖಾನಿಯ ಹಾಗೂ ಬಸೌಲಿಯಲ್ಲಿನ ಗುಹೆಗಳಲ್ಲಿ ವ್ಯಕ್ತವಾಗಿದೆ. ಮಿರ್ಜಾಪುರ ಜಿಲ್ಲೆಯ ನೆಲೆಗಳಲ್ಲಿ ವಾಸಿಸುತ್ತಿದ್ದ ಆ ಕಾಲದ ಜನಕ್ಕೆ ಬೇಟೆಯೆ ಜೀವನೋಪಾಯ. ಅವರ ಕಾಲಕ್ಕೆ ಸಂಬಂಧಿಸಿದಂತೆ ಮಾನವನ ಮತ್ತು ಹಂದಿಯ ಚಿತ್ರಗಳು ಸಿಕ್ಕಿವೆ. ಮಿರ್ಜಾಪುರ ಜಿಲ್ಲೆಯ ರಾಬಟ್ರ್ಸ್‍ಗಂಜ್ ಮತ್ತು ದಘೋಬಿಗಳಲ್ಲೂ ಬಂಡ ಜಿಲ್ಲೆಯ ಸಿದ್ಧಾಪುರದಲ್ಲೂ ಗಾಜಿಪುರ, ಬಸ್ತಿ, ಅಲಹಾಬಾದ್ ಮತ್ತು ವಾರಾಣಸಿ ಜಿಲ್ಲೆಗಳ ಹಲವೆಡೆಗಳಲ್ಲೂ ಈ ಸಂಸ್ಕøತಿಯ ಅವಶೇಷಗಳನ್ನು ಕಾಣಬಹುದು. ಬಂಡ ಜಿಲ್ಲೆಯ ಬರಿಯಾರಿಯಲ್ಲಿ ಈ ಸಂಸ್ಕøತಿಗೆ ಸೇರಿದ ಚಕ್ಕೆಕಲ್ಲಿನ ಚಾಕುಗಳೂ ಒರೆಯುವ ಕೊರೆಯುವ ಆಯುಧಗಳೂ ದೊರಕಿವೆ.[]

ಹರಪ್ಪಾ ಸಂಸ್ಕೃತಿ

ಬದಲಾಯಿಸಿ

ಬಂಡ ಜಿಲ್ಲೆಯ ಖೋ, ಅಗರ್ಹುಂಡ ಮತ್ತು ಚಕೊಂಡ್‍ಗಳಲ್ಲೂ ಕಾನ್‍ಪುರ ಜಿಲ್ಲೆಯ ಮೂನ ನಗರದಲ್ಲೂ ಝಾನ್ಸಿ ಜಿಲ್ಲೆಯ ಹಲವೆಡೆಗಳಲ್ಲು ನವಶಿಲಾಯುಗ ಸಂಸ್ಕøತಿಯ ಅವಶೇಷಗಳಿವೆ. ಇದೇ ಕಾಲದ್ದೋ ಇನ್ನೂ ಸ್ವಲ್ಪ ಮುಂಚಿನದೋ ಎನ್ನಬಹುದಾದ ಹರಪ್ಪ ಸಂಸ್ಕøತಿಯ ಅವಶೇಷಗಳೂ ಹಲವಾರೆಡೆಗಳಲ್ಲಿ ಕಂಡುಬಂದಿವೆ. ಅಲಹಾಬಾದ್ ಬಳಿಯ ಕೌಶಾಂಬಿ, ಮುeóÁಫರ್ ನಗರ ಮತ್ತು ಸಹಾರನ್‍ಪುರ ಜಿಲ್ಲೆಯ ಅಂಬಾಖೇರಿ, ಬುಲಂದಶಹರ್ ಜಿಲ್ಲೆಯ ಗುಲಿಸ್ತಾನ್‍ಪುರ ಮುಂತಾದೆಡೆಗಳ ಈ ಸಂಸ್ಕøತಿಯ ಅಂತ್ಯಕಾಲದ್ದೆಂದು ಹೇಳಬಹುದಾದ ಮಾಹಿತಿಗಳು ದೊರಕಿದ್ದರೂ ಈ ಪ್ರದೇಶದಲ್ಲೂ ಹರಪ್ಪ ಸಂಸ್ಕøತಿ ನೆಲೆಸಿತ್ತೆಂಬ ಅಂಶ ಖಚಿತವಾದದ್ದು ಮೀರತ್ ಜಿಲ್ಲೆಯ ಅಲಂಗೀರ್‍ಪುರದ ಬಳಿ ಯಮುನಾ ದಂಡೆಯಲ್ಲಿ ನಡೆಸಿದ ಉತ್ಖನನಗಳಿಂದ. ಪ್ರಾಯಶಃ ಆರ್ಯಭಾಷೆಗಳನ್ನು ಬಳಸುತ್ತಿದ್ದ ಜನರ ಸಂಸ್ಕøತಿಯ ಅವಶೇಷಗಳೆಂದು ಹೇಳಲಾಗಿರುವ, ವರ್ಣಚಿತ್ರಿತವಾದ ಬೂದುಬಣ್ಣದ ಮಡಕೆಬಳಕೆಯ ಸಂಸ್ಕøತಿಯೊಂದರ ಮಾಹಿತಿಗಳು ಅನಂತರ ಅನೇಕ ಕಡೆಗಳಲ್ಲಿ ಕಂಡುಬಂದುವು. ಈ ಸಂಸ್ಕøತಿಯ ಅವಶೇಷಗಳು ಉತ್ತರ ಪ್ರದೇಶದಲ್ಲಿ ವ್ಯಾಪಕವಾಗಿವೆಯೆನ್ನಬಹುದು. ಮಹಾಭಾರತದ ಕಾಲದ ನಗರಗಳಾಗಿದ್ದ ಅಹಿಚ್ಛತ್ರ, ಹಸ್ತಿನಾಪುರ, ಶ್ರಾವಸ್ತಿ, ಕನೂಜ್, ಕೌಶಾಂಬಿ, ಮಥುರಾಗಳಲ್ಲೂ ಅಲಂಗೀರ್‍ಪುರ, ಸೊಹಗೌರ, ರಾಜಘಾಟ್ ಮುಂತಾದ ಇತರ ನೆಲೆಗಳಲ್ಲೂ ಈ ಅವಶೇಷಗಳು ಧಾರಾಳವಾಗಿವೆ. ಹರಪ್ಪ ಸಂಸ್ಕøತಿ ಅಳಿದ ಕೆಲಕಾಲಾನಂತರ ರೂಢಿಗೆ ಬಂದಿರಬಹುದಾದ ಈ ಸಂಸ್ಕøತಿಯ ಕಾಲದಲ್ಲಿ ತಾಮ್ರದ ಆಯುಧೋಪಕರಣಗಳನ್ನೂ ಬೂದು ಮತ್ತು ಕಂದುಬಣ್ಣದ ವರ್ಣ ಚಿತ್ರಿತ ಮಡಕೆಗಳನ್ನೂ ಬಳಸುತ್ತಿದ್ದರು. ಆಗ ವ್ಯವಸಾಯ ಜನರ ಮುಖ್ಯ ಕಸಬು. ಮಣ್ಣಿನ ಅಥವಾ ತಡಿಕೆಯ ಗೋಡೆಗಳ ಮನೆಗಳಲ್ಲಿ ಇವರ ವಾಸ. ಅಕ್ಕಿಯೂ ದನ ಹಂದಿ ಜಿಂಕೆಗಳ ಮಾಂಸವೂ ಇವರ ಆಹಾರ. ಇವರು ಕುದುರೆ ಪಳಗಿಸಿಕೊಂಡಿದ್ದರು. ಈ ಸಂಸ್ಕøತಿಯ ಕೊನೆಯ ಘಟ್ಟದಲ್ಲಿ ಕಬ್ಬಿಣವೂ ಬಳಕೆಗೆ ಬಂದಿತ್ತು.[]

ಇದರ ಅನಂತರ ಕಬ್ಬಿಣ ಯುಗ ಸಂಸ್ಕøತಿಯ ಪ್ರಾರಂಭ. ಕಬ್ಬಿಣದ ಬಳಕೆ ಶೀಘ್ರವಾಗಿ ಪ್ರಚಾರಕ್ಕೆ ಬಂದದ್ದರಿಂದ ಜನರ ಆರ್ಥಿಕ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಿ ಸಂಪತ್ತು ಬೆಳೆಯಿತು: ನಗರೀಕರಣವೂ ಸಂಭವಿಸಿತು. ಗಂಗಾನದಿಯ ಬಯಲಿನಲ್ಲಿ ಪ್ರಪ್ರಥಮ ರಾಜ್ಯಗಳು ಉದಯಿಸಿದ್ದೂ ಅಕ್ಷರಜ್ಞಾನ ಸಂಪನ್ನವಾದ ನಾಗರಿಕತೆ ಬೆಳೆದು ಮಹಾ ಜನಪದಗಳ ಕಾಲವೆಂದು ಪ್ರಸಿದ್ಧವಾಗಿರುವ ಚಾರಿತ್ರಿಕ ಯುಗದ ಮೊದಲ ಅಧ್ಯಾಯ ಪ್ರಾರಂಭವಾದದ್ದೂ ಆಗಲೇ.

ಉಲ್ಲೇಖಗಳು

ಬದಲಾಯಿಸಿ